The Concert – Shanta Rameshwar Rao – Kannada Summary

Pandit Ravi Shankar and Ustad Allah Rakha
Pandit Ravi Shankar and Ustad Allah Rakha

Notes /Solved exercises

Summary in Kannada

1 One morning, in a small apartment in Bombay, a girl of about sixteen looked up from the newspaper and said excitedly, ‘Pandit Ravi Shankar’s playing tomorrow at the Shanmukhananda Auditorium.’ ‘Sh-sh,’ said her mother pointing to the figure sleeping on the bed. ‘You’ll wake him up. You know he needs all the sleep and rest he can get.’

1 ಒಂದು ದಿನ ಬೆಳಿಗ್ಗೆ, ಬಾಂಬೆಯ ಒಂದು ಸಣ್ಣ ಅಪಾರ್ಟ್‌ಮೆಂಟ್‌ನಲ್ಲಿ, ಸುಮಾರು ಹದಿನಾರು ವರ್ಷದ ಹುಡುಗಿ ವೃತ್ತಪತ್ರಿಕೆಯಿಂದ ನೋಡುತ್ತಾ, ‘ನಾಳೆ ಷಣ್ಮುಖಾನಂದ ಸಭಾಂಗಣದಲ್ಲಿ ಪಂಡಿತ್ ರವಿಶಂಕರ್ ಅವರು ಕಚೇರಿ ನಡೆಸುತ್ತಿದ್ದಾರೆ.’ ಎಂದು ಉತ್ಸಾಹದಿಂದ ಹೇಳಿದಳು.
‘ಶ್ ಶ್,’ ಎಂದಳು ಅವಳ ತಾಯಿ, ಹಾಸಿಗೆಯಲ್ಲಿ ಮಲಗಿದ್ದ ಆಕೃತಿಯನ್ನು ತೋರಿಸುತ್ತಾ . “ನೀನು ಅವನನ್ನು ಎಚ್ಚರಗೊಳಿಸಿ ಬಿಡುತ್ತೀಯ. ಅವನಿಗೆ ಎಷ್ಟು ಸಾಧ್ಯವೋ ಅಷ್ಟೂ ನಿದ್ರೆ ವಿಶ್ರಾಂತಿ ಬೇಕು ಅಂತ ನಿನಗೆ ಗೊತ್ತಿದೆ ಅಲ್ಲವಾ .’

Pandit Ravishankar : An Indian musician, composer and a sitar player

ಪಂಡಿತ್ ರವಿಶಂಕರ್: ಒಬ್ಬ ಭಾರತೀಯ ಸಂಗೀತಗಾರ, ಸಂಯೋಜಕ ಮತ್ತು ಸಿತಾರ್ ವಾದಕ

2 But the boy on the bed was not asleep. ‘Pandit Ravi Shankar!’ he said. ‘Pandit Ravi Shankar, the sitar maestro?’ He raised himself up on his elbows for one second, then fell back. But his eyes were shining. ‘We mustn’t miss the chance,’ he said. ‘I’ve –I’ve –always wanted to hear him and see him…..’

2 ಆದರೆ ಹಾಸಿಗೆಯ ಮೇಲಿದ್ದ ಹುಡುಗ ನಿದ್ದೆ ಮಾಡುತ್ತಿರಲಿಲ್ಲ. ‘ಪಂಡಿತ್ ರವಿಶಂಕರ್!’ ಎಂದು ಕೇಳಿದ . ‘ಪಂಡಿತ್ರವಿಶಂಕರ್, ಸಿತಾರ್ ವಾದಕರು?’ ಒಂದು ಕ್ಷಣಕ್ಕೆ ತನ್ನ ಮೊಣಕೈಗಳ ಮೇಲೆ ಭಾರ ಹಾಕಿ ಎದ್ದವನು, ಮತ್ತೆ ಹಾಸಿಗೆ ಮೇಲೆ ಉರುಳಿಕೊಂಡ. ಆದರೆ ಅವನ ಕಣ್ಣುಗಳು ಹೊಳೆಯುತ್ತಿದ್ದವು. ‘ನಾವು ಈ ಅವಕಾಶವನ್ನು ಕಳೆದುಕೊಳ್ಳಬಾರದು’ ಎಂದವನು ‘ನಾನು… ನಾನು ಯವಾಗಿನಿಂದಲೂ ಅವರ ವಾದನವನ್ನು ಕೇಳಬೇಕು, ಅವರನ್ನು ನೋಡಬೇಕು ಎಂದು ಬಯಸಿದ್ದೇನೆ…’ ಅಂದ.

3 ‘Lie down son, lie down.’ His mother sprang to his side. ‘He actually raised himself up without help,’ she murmured with a catch in her throat and her eyes turned to the idols on a corner shelf. The prayer which she uttered endlessly came unbidden to her lips.

3 ‘ಮಲಗಿಕೊ ಮಗು, ಮಲಗು.’ ಎನ್ನುತ ಅವನ ತಾಯಿ ಅವನ ಕಡೆಗೆ ದೌಡಾಯಿಸಿದಳು. ‘ಯಾರ ಸಹಾಯವಿಲ್ಲದೆ ತಂತಾನೆ ನಿಜವಾಗಿಯೂ ಮೇಲೆದ್ದನೇ ಇವನ,’ ಎಂದು ತನ್ನಲ್ಲಿಯೇ ಹೇಳಿಕೊಳ್ಳುತ್ತಿರುವಾಗಲೇ ದುಃಖದಿಂದ ಅವಳ ಗಂಟಲು ಕಟ್ಟಿದಂತಾಗಿ ಮೂಲೆಯ ಕಪಾಟಿನಲ್ಲಿದ್ದ ದೇವರ ಮೂರ್ತಿಗಳ ಕಡೆಗೆ ದೃಷ್ಟಿ ಹಾಯಿಸಿದಳು. ನಿರಂತರವಾಗಿ ಅವಳು ಮಾಡುತ್ತಿದ್ದ ಪ್ರಾರ್ಥನೆಯು ಇಂದು ಅವಳ ತುಟಿ ಮೀರಿ ಬರದೇ ಮೌನವಾಗಿತ್ತು.

4 ‘I must hear him and see him,’ the boy repeated. ‘It’s the chance of a lifetime.’ Then he began to cough and gasp for breath and had to be given oxygen from the cylinder that stood under the bed. But his large eyes were fixed on his sister.

4 ‘ನಾನು ಅವರ ಸಂಗೀತ ವಾದನವನ್ನು ಕೇಳಲೇಬೇಕು ಮತ್ತವರನ್ನು ನೋಡಲೇಬೇಕು,’ ಎಂದು ಹುಡುಗ ಪುನಃ ಹೇಳಿದನು. ‘ಇದು ಜೇವನದಲ್ಲಿ ಒಮ್ಮೆ ಮಾತ್ರ ಸಿಗುವ ಅವಕಾಶ.’ ಅಷ್ಟರಲಿ ಅವನು ಕೆಮ್ಮಲು ಶುರುವಾಗಿ ಉಸಿರಿಗಾಗಿ ಏದುಸಿರು ಮಾಡಿದನು ಹಾಗಾಗಿ ಹಾಸಿಗೆ ಕೆಳಗೆ ಇಟ್ಟಿದ್ದ ಸಿಲಿಂಡರಿನಿಂದ ಅವನಿಗೆ ಆಮ್ಲಜನಕವನ್ನು ನೀಡಬೇಕಾಯಿತು. ಆದರೆ ಅವನ ಬಟ್ಟಲು ಕಣ್ಣುಗಳು ತನ್ನ ತಂಗಿಯ ಕಡೆಗೇ ನೆಟ್ಟಿದ್ದವು.

5 Smita bit her lip in self-reproach. She had been so excited at seeing the announcement that she had not remembered that her brother was very ill. She had seen how the doctors had shaken their heads gravely and spoken words that neither she nor her parents could understand. But somewhere deep inside, Smita had known the frightening truth that Anant was going to die. The word cancer had hung in the air- her brother was dying of cancer even though she pretended that all would be well and they would return together, a small family of four, to their home in Gaganpur. And he was only fifteen, and the best table-tennis player in the school and the fastest runner. He was learning to play the sitar; they were both taking sitar lessons, but Anant was better than her as in many other things. He was already able to compose his own tunes to the astonishment of their guru. Then cancer had struck and they had come to Bombay, so that he could be treated at the cancer hospital in the city.

5 ಸ್ಮಿತಾ ತನ್ನನ್ನು ತಾನೇ ಬಯ್ದುಕೊಳ್ಳತ್ತಾ ತನ್ನ ತುಟಿಯನ್ನು ಕಚ್ಚಿ ಹಿಡಿದಳು. ಪತ್ರಿಕೆಯ ಪ್ರಕಟಣೆಯನ್ನು ನೋಡಿದ ಉತ್ಸಾಹದಲ್ಲಿ ತನ್ನ ಸಹೋದರ ಅನಾರೋಗ್ಯದಿಂದ ಬಳಲುತ್ತಿದ್ದನೆಂಬುದೇ ಅವಳ ನೆನಪಿನಲ್ಲಿ ಉಳಿಯಲಿಲ್ಲ. ವೈದ್ಯ ಎಷ್ಟು ಗಂಭೀರರಾಗಿ ತಮ್ಮ ತಲೆಯನ್ನು ಅಲುಗಿಸಿದ್ದರು ಎಂಬುದನ್ನು ಅವಳು ನೋಡಿದ್ದಳು ಮತ್ತು ಅವರು ತನಗಾಗಲಿ ತನ್ನ ತಂದೆ ತಾಯಿಗಾಗಲಿ ಅರ್ಥವೇ ಆಗದ ಏನನ್ನೋ ಹೇಳಿದ್ದರು. ಅನಂತನು ಸಾಯಲಿದ್ದಾನೆ ಎಂಬ ಭಯಾನಕ ಸತ್ಯವ ತನ್ನ ಮನಸ್ಸಿನಾಳದಲ್ಲಿ ಎಲ್ಲೋ ಸ್ಮಿತಾಳು ಅರಿತಿದ್ದಳು. ಕ್ಯಾನ್ಸರ್ ಎಂಬ ಪದವು ಗಾಳಿಯಲ್ಲಿ ತೂಗಾಡುತ್ತಿತ್ತು – ಅವಳ ಸಹೋದರನು ಕ್ಯಾನ್ಸರಿನಿಂದ ಸಾಯುತ್ತಿದಾನೆ ಸಾಯುತ್ತಿದ್ದಾನೆ, ಎಂದು ಗೊತ್ತಿದ್ದರೂ ಸಹ ಅವಳು ಎಲ್ಲವೂ ಮತ್ತು ಅವರೆಲ್ಲರೂ, ಸಣ್ಣ ಕುಟುಂಬದ ಆ ನಾಲ್ಕು ಜನರೂ ಒಟ್ಟಿಗೆ, ತಮ್ಮ ಗಗನಪ್ರದಲ್ಲಿ ಇರುವ ಮನೆಗೆ ಹಿಂತಿರುಗಿ ಹೋಗುತ್ತೇವೆ ಎಂದೇ ಭಾವಿಸಿಕೊಳ್ಳುತ್ತಿದ್ದಳು. ಮತ್ತು ಅವನಿಗೆ ಬರೇ ಹದಿನೈದು ವರ್ಷವಷ್ಟೇ, ಅಲ್ಲದೆ ಅವನು ಅತ್ಯುತ್ತಮ ಟೇಬಲ್-ಟೆನಿಸ್ ಆಟಗಾರ ಮತ್ತು ವೇಗದ ಓಡುಗಾರನಾಗಿದ್ದನು. ಅವನು ಸಿತಾರ್ ನುಡಿಸಲು ಕಲಿಯುತ್ತಿದ್ದನು; ಅವರಿಬ್ಬರೂ ಸಿತಾರ್ ಪಾಠಗಳನ್ನು ತೆಗೆದುಕೊಳ್ಳುತ್ತಿದ್ದರು, ಆದರೆ ಅನಂತ್ ಬೇರೆ ಎಲ್ಲದರಲ್ಲಿ ಇರುವಂತೆ ಇಲ್ಲಿಯೂ ಅವಳಿಗಿಂತ ಉತ್ತಮನಾಗಿದ್ದನು. ಅವರ ಗುರುಗಳಿಗೇ ಅಚ್ಚರಿಯಾಗುವಂತೆ ಅವನು ಆಗಲೇ ತನ್ನದೇ ರಾಗ ಸಂಯೋಜನೆಗಳನ್ನು ಸಮರ್ಥವಾಗಿ ಮಾಡುತ್ತಿದ್ದನು. ಅಷ್ಟರಲ್ಲಿಯೇ ಕ್ಯಾನ್ಸರ್ ಒಕ್ಕರಿಸಿತು ಮತ್ತು ಅವರು ಬಾಂಬೆಗೆ ಬರಬೇಕಾಯಿತು, ಅವನಿಗೆ ನಗರದ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಲೆಂದು.

6 Whenever they came to Bombay the family stayed with Aunt Sushila. Her apartment was not big but there was always room for them. They had come with high hopes in the miracles of modern science. They told themselves that Anant would be cured at the hospital, and he would again walk and run and even take part in the forthcoming table-tennis tournament. And, he would play the sitar and perhaps would be a great sitarist one day. But his condition grew worse with each passing day and the doctors at the cancer hospital said, ‘Take him home. Give him the things he likes, indulge him,’ and they knew then that the boy had not many days to live. But they did not voice their fears. They laughed and smiled and talked and surrounded Anant with whatever made him happy. They fulfilled his every need and gave whatever he asked for. And now he was asking to go to the concert. ‘The chance of a lifetime,’ he was saying. ‘When you are better,’ his mother said. ‘This is not the last time they are going to play’.

6 ಬಾಂಬೆಗೆ ಬಂದಾಗಲೆಲ್ಲಾ ಆ ಕುಟುಂಬವು ಚಿಕ್ಕಮ್ಮ ಸುಶೀಲಾ ಅವರೊಂದಿಗೆಉಳಿದುಕೊಳ್ಳುತ್ತಿದ್ದರು. ಅವಳ ಅಪಾರ್ಟ್ಮೆಂಟ್ ಏನೂ ಬಹಳ ದೊಡ್ಡದಾಗಿರಲಿಲ್ಲ ಆದರೆ ಅವರಿಗೆ ಯಾವಾಗಲೂ ಅಲ್ಲಿ ಉಳಿಯಲುಅವಕಾಶವಿತ್ತು.. ಆಧುನಿಕ ವಿಜ್ಞಾನದ ಪವಾಡಗಳಲ್ಲಿ ಅವರು ಬಹಳ ಭರವಸೆಗಳನ್ನು ಇಟ್ಟುಕೊಂಡು ಬಂದಿದ್ದರು. ಅನಂತನನ್ನ ಆ ಆಸ್ಪತ್ರೆಯಲ್ಲಿ ಗುಣಪಡಿಸಬಹುದು ಅಂದು ಅವರುಗಳು ತಮ್ಮೊಳಗೆ ಹೇಳಿಕೊಳ್ಳುತ್ತಿದ್ದರು, ತಿರುಗಿ ಅವನು ನಡೆದಾಡುವಂತೆ ಆಗುತ್ತಾನೆ ಮತ್ತು ಓಡುತ್ತಾನೆ ಅಷ್ಟೇ ಅಲ್ಲದೆ ಮುಂಬರುವ ಟೇಬಲ್-ಟೆನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಾನೇ ಅಂತ ಅಂದುಕೊಳ್ಳುತ್ತಿದ್ದರು. ಜೊತೆಗೆ, ಅವನು ಸಿತಾರ್ ನುಡಿಸುತ್ತಾನೆ ಮತ್ತು ಬಹುಶಃ ಒಂದು ದಿನ ದೊಡ್ಡ ಸಿತಾರ್ವಾದಕರಾಗಬಹುದು ಎಂದೂ ಸಹ ಭಾವಿಸಿದ್ದರು. ಆದರೆ ದಿನ ಕಳೆದಂತೆ ಅವನ ಸ್ಥಿತಿ ಹದಗೆಟ್ಟಿತು ಮತ್ತು ಕ್ಯಾನ್ಸರ್ ಆಸ್ಪತ್ರೆಯ ವೈದ್ಯರು, ‘ಅವನನ್ನು ಮನೆಗೆ ಕರೆದುಕೊಂಡು ಹೋಗಿ. ಅವನಿಗೆ ಇಷ್ಟವಾದ ಎಲ್ಲವನ್ನು ಕೊಟ್ಟು, ಪ್ರೀತಿಯಿಂದ ನೋಡಿಕೊಳ್ಳಿ,’ ಎಂದು ಹೇಳುತ್ತಿದ್ದರು ಮತ್ತು ಆ ಹುಡುಗನಿಗೆ ಬದುಕಲು ಹೆಚ್ಚು ದಿನಗಳಿಲ್ಲ ಎಂದು ಅವರಿಗೆ ತಿಳಿದಿತ್ತು. ಆದರೆ ಅವರುಗಳು ತಮ್ಮ ಆತಂಕದ ಬಗ್ಗೆ ಏನು ಮಾತನಾಡಲಿಲ್ಲ. ಅವರು ಸಂತಸ ಮತ್ತು ಮುಗುಳ್ನಗೆಯಿಂದ ಮಾತನಾಡುತ್ತ ಅನಂತನಿಗೆ ಏನು ಸೊಂತೋಷವನ್ನು ಉಂಟು ಮಾಡುವುದೊ ಅಂತೆಯೇ ಅವನ ಸುತ್ತಮುತ್ತ ಇರತೊಡಗಿದರು. ಅವರು ಅವನ ಪ್ರತಿಯೊಂದು ಅಗತ್ಯವನ್ನು ಪೂರೈಸಿದರು ಮತ್ತು ಅವನು ಕೇಳಿದ್ದನ್ನು ನೀಡಿದರು. ಮತ್ತು ಅವನು ಈಗ ಸಂಗೀತ ಕಚೇರಿಗೆ ಹೋಗಬೇಕು ಎಂದು ಹೇಳುತ್ತಿದ್ದಾನೆ. ‘ಜೀವಮಾನದ ಅವಕಾಶ’ ಎಂದು ಹೇಳುತ್ತಿದ್ದಾನೆ. ‘ನೀನು ಹುಶಾರದ ಮೇಲೆ,’ ‘ಇದೇನು ಅವರ ಕೊನೆಯ ಕಚೇರಿಯಲ್ಲ.’ ಎಂದು ಅವನ ತಾಯಿ ಹೇಳಿದಳು.

7 Smita stood at the window looking at the traffic, her eyes filled with tears. Her mother whispered, ‘But you Smita, you must go. Your father will take you.’ When she was alone with Aunt Sushila, Smita cried out in a choked voice, ‘No, how can I? We’ve always done things together, Anant and I.’ ‘A walk in the park might make you feel better,’ said Aunt Sushila and Smita was grateful for her suggestion.

7 ಸ್ಮಿತಾ ಕಿಟಕಿಯ ಬಳಿ ಟ್ರಾಫಿಕ್ ನೋಡುತ್ತಾ ನಿಂತಳು, ಅವಳ ಕಣ್ಣುಗಳು ಕಣ್ಣೀರು ತುಂಬಿದವು. ತಾಯಿ ಪಿಸುಗುಟ್ಟುತ್ತಾಹೇಳಿದಳು, ‘ಆದರೆ ಸ್ಮಿತಾ, ನೀನು ಹೋಗಬೇಕು. ನಿಮ್ಮ ತಂದೆ ನಿನ್ನನ್ನು ಕರೆದುಕೊಂಡು ಹೋಗುತ್ತಾರೆ.’ ಚಿಕ್ಕಮ್ಮ ಸುಶೀಲಾಳೊಂದಿಗೆ ಏಕಾಂಗಿಯಾಗಿರುವಾಗ, ಸ್ಮಿತಾ ಉಸಿರುಗಟ್ಟಿದ ಧ್ವನಿಯಲ್ಲಿ,‘ ಇಲ್ಲ, ನಾನು ಹೇಗೆ ಹೋಗಲಿ? ಅನಂತ್ ಮತ್ತು ನಾನು ಯಾವಾಗಲೂ ಒಟ್ಟಿಗೆ ಕೆಲಸಗಳನ್ನುಮಾಡುತ್ತಿದ್ದೆವು, ’‘. ಚಿಕ್ಕಮ್ಮ ಸುಶೀಲಾ ‘ಉದ್ಯಾನದಲ್ಲಿ ನಡೆದಾಡಿದರೆ ನಿನ್ನ ಮನಸಿಗೆ ಸ್ವಲ್ಪ ಹಿತವೆನಿಸಬಹುದು ’ಎಂದಾಗ ಅವರ ಸಲಹೆಗೆ ಸ್ಮಿತಾ ಕೃತಜ್ಞಳಾದಳು.

8 In the park, people were walking, running; playing ball, doing yogic exercises, feeding the ducks and eating roasted gram and peanuts. Smita felt alone in their midst. She was lost in her thoughts.

8 ಉದ್ಯಾನದಲ್ಲಿ ಜನರು ಓಡಾಡುತ್ತಿದ್ದರು; ಚೆಂಡನ್ನು ಆಡುವುದು, ಯೋಗ ವ್ಯಾಯಾಮ ಮಾಡುವುದು, ಬಾತುಕೋಳಿಗಳಿಗೆ ಆಹಾರ ನೀಡುವುದು ಮತ್ತು ಹುರಿದ ಬೇಳೆ ಮತ್ತು ಕಡಲೆಕಾಯಿಯನ್ನು ತಿನ್ನುವುದು ಮಾಡುತ್ತಿದ್ದರು. ಸ್ಮಿತಾಳಿಗೆ ಅವರ ಮಧ್ಯೆ ಏಕಾಂಗಿ ಎನಿಸಿತು. ಅವಳ ತನ್ನದೇ ಆಲೋಚನೆಗಳಲ್ಲಿ ಕಳೆದುಹೋದಳು.

9 Suddenly a daring thought came to her and as she hurried home she said to herself, ‘Why not? There’s no harm in trying it.’ ‘It would be nice to go to the concert. I don’t know when we’ll get another opportunity to hear Pandit Ravi Shankar,’ she said to her mother later. And her father agreed to get the tickets.

9 ಇದ್ದಕ್ಕಿದ್ದಂತೆ ಧೈರ್ಯಶಾಲಿ ಆಲೋಚನೆ ಅವಳಿಗೆ ಬಂದಿತು ಮತ್ತು ಅವಳು ಮನೆಗೆ ಹೋಗುವಾಗ ಅವಳು ತನ್ನಷ್ಟಕ್ಕಷ್ಟೇ ತಾನೇ, ‘ಯಾಕೆ ಮಾಡಬಾರದು? ಪ್ರಯತ್ನಿಸುವುದರಲ್ಲಿ ಯಾವುದೇ ಹಾನಿ ಇಲ್ಲವಲ್ಲ.’‘ ಸಂಗೀತ ಕಚೇರಿಗೆ ಹೋಗುವುದೇ ಒಳ್ಳೆಯದು. ಪಂಡಿತ್ ರವಿಶಂಕರ್ ಅವರ ಸಂಗೀತ ಕೇಳಲು ನಮಗೆ ಮತ್ತೊಂದು ಅವಕಾಶ ಯಾವಾಗ ಸಿಗುತ್ತದೆ ಎಂದು ನನಗೆ ಗೊತ್ತಿಲ್ಲ, ’ಎಂದು ಅವರು ನಂತರ ತಾಯಿಗೆ ಹೇಳಿದಳು . ಹಾಗು ಆಕೆಯ ತಂದೆ ಟಿಕೆಟ್ ಪಡೆಯಲು ಒಪ್ಪಿದರು.

10 The next day as Smita and her father were leaving for the concert, her brother smiled and said, ‘Enjoy yourself,’ though the words came out in painful gasps. ‘Lucky you!’

10 ಮರುದಿನ ಸ್ಮಿತಾ ಮತ್ತು ಅವಳ ತಂದೆ ಸಂಗೀತ ಕಚೇರಿಗೆ ತೆರಳುತ್ತಿದ್ದಾಗ, ಅವಳ ಸಹೋದರ ಮುಗುಳ್ನಕ್ಕು, ‘ನೀನೇ ಆನಂದಿಸು’ ‘ನೀನೆ ಅದೃಷ್ಟವಂತೆ !’ ಎಂದು ಹೇಳಿದರೂ, ಈ ಮಾತುಗಳು ನೋವಿನಿಂದ ಕೂಡಿದವು.

11 Sitting beside her father in the gallery, Smita heard as in a dream the thundering welcome the audience gave the great master. Then the first notes came over the air, and Smita felt as if the gates of enchantment and wonder were opening. Spellbound, she listened to the unfolding ragas, the slow plaintive notes, the fast twinkling ones, but all the while the plan she had decided on the evening before remained firmly in her mind. ‘The chance of a life time’. she heard Anant’s voice in every beat of the tabla. The concert came to an end and the audience gave the artists a standing ovation. A large moustachioed man made a long boring speech. Then followed the presentation of bouquets. Then more applause and the curtain came down. The people began to move towards the exits.

11 ಗ್ಯಾಲರಿಯಲ್ಲಿ ತನ್ನ ತಂದೆಯ ಪಕ್ಕದಲ್ಲಿ ಕುಳಿತಿದ್ದ ಸ್ಮಿತಾಳಿಗೆ ಜನರು ಗದ್ದಲ ಮಾಡುತ್ತಾ ಆ ಮಹಾನ್ ಸಂಗೀತಕಾರನಿಗೆ ನೀಡಿದ ಅದ್ಭುತವಾದ ಸ್ವಾಗತ ಕನಸಿನಲ್ಲಿ ಏನೋ ಎಂಬಂತೆ ಕೇಳಿಸಿತು. ಅನಂತರ ಸಂಗೀತದ ಮೊದಲ ಸ್ವರಗಳು ಗಾಳಿಯಲ್ಲಿ ತೇಲಿ ಬಂದವು. ಸ್ಮಿತಾಳಿಗೆ ಅದು ಅಚ್ಚರಿಯಾಗುವಂತಹ ಯಾವುದೊ ಮಾಯಾಲೋಕದ ಬಾಗಿಲು ತೆರೆದಂತೆ ಅನಿಸಿತು. ಮೈಮರೆತು ಅವಳು ಒಂದೊಂದಾಗಿ ತೆರೆದುಕೊಳ್ಳುತ್ತಿದ್ದ ರಾಗಗಳನ್ನೂ, ಮಂದಗತಿಯ ಸ್ವರಗಳನ್ನು , ಮಿಂಚಿನಂತೆ ವೇಗವಾದ ಗತಿಗಳನ್ನು ಕೇಳಿಸಿಕೊಳ್ಳುತ್ತಿದ್ದಳು. ಆದರೆ ಆ ಮುಂಚಿನ ಸಂಜೆಯಲ್ಲಿ ತಾನು ನಿರ್ಧರಿಸಿದ ಯೋಜನೆ ಅವಳ ಮನದಲ್ಲಿ ದೃಢವಾಗಿ ಉಳಿದಿತ್ತು. ತಾಬಲದ ಪ್ರತಿ ಬಡಿತದಲ್ಲೂ ಅನಂತನು ಹೇಳಿದ ‘ಜೀವಮಾನದ ಅವಕಾಶ’ ಎಂಬ ದ್ವನಿಯೇ ಅವಳಿಗೆ ಕೇಳಿಸಹತ್ತಿತ್ತು. ಗೋಷ್ಠಿಯು ಮುಕ್ತಾಯದ ಹಂತಕ್ಕೆ ಬಂದತ್ತೆ ಪ್ರೇಕ್ಷಕರು ಎದ್ದು ನಿಂತು ಕಲಾವಿದರಿಗೆ ಗೌರವ ನೀಡಿದರು. ದೊಡ್ಡ ಮೀಸೆಯ ವ್ಯಕ್ತಿಯೊಬ್ಬರು ದೀರ್ಘ ಹಾಗು ನೀರಸವಾದ ಭಾಷಣ ಮಾಡಿದರು. ಅನಂತರ ಹೂಗುಚ್ಛಗಳ ಸನ್ಮಾನ ನಡೆಯಿತು. ಇನ್ನಷ್ಟು ಚಪ್ಪಾಳೆಗಳೊಂದಿಗೆ ಪರದೆಯು ಕೆಳಗಿಳಿಯಿತು. ಜನರು ನಿರ್ಗಮನದ ಬಾಗಿಲ ಕಡೆಗೆ ಚಲಿಸಲು ಪ್ರಾರಂಭಿಸಿದರು.

12 Now was the time. Smita wriggled her way through the crowds towards the stage. Then she went up the steps that led to the wings, her heart beating loudly. In the wings a small crowd had gathered to talk about the evening concert, to help carry bouquets and teacups and instruments.

12 ಇದೇ ಸರಿಯಾದ ಸಮಯ ಎಂದುಕೊಳ್ಳುತ್ತ ಸ್ಮಿತಾ ಜನಸಂದಣಿಯ ಮಧ್ಯೆ ನುಸುಳಿ ವೇದಿಕೆಯ ದಾರಿ ಹಿಡಿದಳು. ನಂತರ ಅವಳು ಮೆಟ್ಟಲುಗಳನ್ನು ಹತ್ತಿ ವೇದಿಕೆಯ ಪಕ್ಕದ ಭಾಗಕ್ಕೆ ಹೋದಳು, ಅವಳ ಹೃದಯ ಜೋರಾಗಿಹೊಡೆದುಕೊಳ್ಳುತ್ತಿತ್ತು . ಆ ಪಕ್ಕದಲ್ಲಿ ಒಂದು ಸಣ್ಣ ಜನಸಮೂಹವು ಆ ಸಂಜೆಯ ಕಚೇರಿಯ ಬಗ್ಗೆ ಮಾತನಾಡುತ್ತ , ಹೂಗುಚ್ಛಗಳು, ಟೀ ಕಪ್ಪುಗಳು ಮತ್ತು ವಾದ್ಯಗಳನ್ನು ಸಾಗಿಸಲು ಸಹಾಯಮಾಡುತ್ತಿತ್ತು.

13 He was there, standing with the man who played the tabla for him, the great wizard of music, Ustad Allah Rakha. Her knees felt weak, her tongue dry. But she went up, and standing before them, her hands folded, ‘Oh Sir,’ she burst out. ‘Yes?’ he asked questioningly but kindly. And her story came pouring out, the story of her brother who lay sick at home, and of how he longed to hear him and the Ustad play.

13 ಅಲ್ಲಿಯೇ ಇದ್ದರು ಅವರು, ತಮ್ಮ ಸಂಗೀತಕ್ಕೆ ತಬಲಾದ ಜೊತೆ ಕೊಟ್ಟ ಸಂಗೀತದ ಮಹಾನ್ ಮಾಂತ್ರಿಕ ಉಸ್ತಾದ್ ಅಲ್ಲಾ ರಾಖಾರೊಂದಿಗೆ ನಿಂತಿದ್ದರು. ಅವಳ ಮೊಣಕಾಲುಗಳುಶಕ್ತಿ ಕಳೆದುಕೊಂಡಂತೆ ಆಗಿ, ಅವಳ ನಾಲಿಗೆ ಒಣಗಿತು. ಆದರೂ ಅವಳು ಮೇಲಕ್ಕೆ ಹೋಗಿ, ಅವರ ಮುಂದೆ ನಿಂತು, ಕೈಮುಗಿದು, ‘ಓ ಸರ್,’ ಎಂದಳು ಉದ್ವೇಗದಿಂದ. ‘ಹೇಳಿ?’ ಎಂದು ಅವರು ಪ್ರಶ್ನಾರ್ಹವಾಗಿ ಆದರೆ ಮಮತೆಯಿಂದ ಕೇಳಿದರು. ಆಗ ಅವಳು ಮನೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಅವಳ ಸಹೋದರನ ಕಥೆ, ಮತ್ತು ಅವನು ಉಸ್ತಾದ್ರರ ಕಚೇರಿ ಕೇಳಲು ಹೇಗೆ ಹಾತೊರೆಯುತ್ತಿದ್ದಾನೆ ಎಂಬುದನ್ನೆಲ್ಲ ಅವರ ಮುಂದೆ ಬಿಚ್ಚಿಟ್ಟಳು.

‘Little girl,’ said the mustachioed man who had made the long speech. ‘Panditji is a busy man. You must not bother him with such requests.’

‘ಪುಟ್ಟ ಹುಡುಗಿ,’ ಸುದೀರ್ಘ ಭಾಷಣ ಮಾಡಿದ ದೊಡ್ಡ ಮೀಸೆಯ ವ್ಯಕ್ತಿ ಹೇಳಿದರು. ‘ಪಂಡಿತ್‌ಜಿ ಕಾರ್ಯನಿರತರಾದ ಬಿಡುವಿಲ್ಲದ ವ್ಯಕ್ತಿ. ಇಂತಹ ವಿನಂತಿಗಳಿಂದ ನೀನು ಅವರನ್ನು ತೊಂದರೆಗೊಳಿಸಬಾರದು. ’

But Pandit Ravi Shankar smiled and motioned him to be quiet. He turned to Ustad Sahib and said, ‘What shall we do, Ustad Sahib?’

ಆದರೆ ಪಂಡಿತ್ ರವಿಶಂಕರ್ ಅವರು ಮುಗುಳ್ನಕ್ಕು ಆತನಿಗೆ ಸುಮ್ಮನಿರಲು ಸನ್ನೆ ಮಾಡಿದರು. ಉಸ್ತಾದ್ ಸಾಹಿಬ್ ರವರ ಕಡೆಗೆ ತಿರುಗಿ, ‘ಏನು ಮಾಡುವುದು ನಾವು ಈಗ, ಉಸ್ತಾದ್ ಸಾಹಿಬ್?’ ಎಂದರು.

The Ustad moved the wad of paan from one cheek to another. ‘Tomorrow morning we perform for the boy-Yes?’ he said.

ಉಸ್ತಾದ್ ಅವರು ಪಾನ್ ಅನ್ನು ಒಂದು ಕೆನ್ನೆಯಿಂದ ಇನ್ನೊಂದು ಬದಿಗೆ ಸರಿಸಿ, ‘ನಾಳೆ ಬೆಳಿಗ್ಗೆ ನಾವು ಹುಡುಗನಿಗಾಗಿ ಕಚೇರಿ ನೀಡುತ್ತೇವೆ – ಆಯ್ತಾ ?’ ಎಂದು ಹೇಳಿದರು.

‘Yes’, Panditji replied. ‘It’s settled then.’

‘ಆಯಿತು’, ಪಂಡಿತ್‌ಜಿ ಉತ್ತರಿಸಿದರು. ‘ಅಂದರೆ ಈ ವಿಷಯ ಇತ್ಯರ್ಥವಾದಂತೆ.’

14 It was a very excited Smita who came home late that night. Anant was awake, breathing the oxygen from the cylinder.

‘Did you-did you hear him?’ he whispered.

‘I did,’ she replied, ‘and I spoke to him, and he’ll come tomorrow morning with the tabla Ustad, and they’ll play for you.’

14 ಆ ರಾತ್ರಿ ತಡವಾಗಿ ಮನೆಗೆ ಬಂದ ಸ್ಮಿತಾ ಬಹಳ ಉತ್ಸುಕಳಾಗಿದ್ದಳು. ಅನಂತ್ ಎಚ್ಚರವಾಗಿ, ಸಿಲಿಂಡರ್‌ನಿಂದ ಆಮ್ಲಜನಕವನ್ನು ಉಸಿರಾಡುತ್ತಿದ್ದ.

‘ನೀವು-ನೀವು ಅವರ ಕಚೇರಿ ಕೇಳಿದಿರಾ?’ ಅವನು ಪಿಸುಗುಟ್ಟಿದ.

‘ಹೌದು ಕೇಳಿದೆ , ನಾನು ಅವರೊಂದಿಗೆ ಮಾತನಾಡಿದೆ ಕೂಡ, ಅವರು ನಾಳೆ ಬೆಳಿಗ್ಗೆ ತಬಲಾ ಉಸ್ತಾದ್‌ನೊಂದಿಗೆ ಬರುತ್ತಾರೆ , ಮತ್ತು ನಿನಗಾಗಿ ಕಚೇರಿ ಕೊಡುತ್ತಾರೆ.’ ಎಂದು ಉತ್ತರಿಸಿದಳು.

15 And the following morning, Aunt Sushila’s neighbours saw two men getting out of a taxi which pulled up outside their block…They could not believe their eyes. ‘It is…It’s not possible?’ they said.

15 ಮತ್ತು ಮರುದಿನ ಬೆಳಿಗ್ಗೆ, ಸುಶೀಲಾ ಚಿಕ್ಕಮ್ಮ ಅವರ ನೆರೆಹೊರೆಯವರು ತಮ್ಮ ಅಪಾರ್ಟ್ಮೆಂಟ್ ಬ್ಲಾಕ್‌ನ ಹೊರಗೆ ನಿಂತ ಟ್ಯಾಕ್ಸಿಯಿಂದ ಇಬ್ಬರು ಹೊರಬರುವುದನ್ನು ನೋಡಿದರು… ಅವರಿಗೆ ಅವರ ಕಣ್ಣುಗಳನ್ನು ನಂಬಲಾಗಲಿಲ್ಲ. ‘ಅದು… ಅದು ಅಸಾಧ್ಯ ?’ ಅವರು ತಮ್ಮೊಳಗೆ ಹೇಳಿಕೊಂಡರು.

16 Pandit Ravi Shankar and Ustad Allah Rakha went up the wooden staircase and knocked softly on the door of Aunt Sushila’s apartment. They went in, sat down on the divan by the window and played for the boy, surrounding him with a great and beautiful happinಭಾವವು ess as life went out of him, gently, very gently.

16 ಪಂಡಿತ್ ರವಿಶಂಕರ್ ಮತ್ತು ಉಸ್ತಾದ್ ಅಲ್ಲಾ ರಾಖಾ ಮರದ ಮೆಟ್ಟಿಲುಗಳನ್ನು ಹತ್ತಿ ಹೋಗಿ ಸುಶೀಲಾ ಚಿಕ್ಕಮ್ಮ ಅವರ ಅಪಾರ್ಟ್ಮೆಂಟ್ನ ಬಾಗಿಲನ್ನು ಮೃದುವಾಗಿ ತಟ್ಟಿದರು. ಅವರು ಒಳಗೆ ಹೋದರು, ಕಿಟಕಿಯ ಪಕ್ಕದ ದಿವಾನ್ ಮೇಲೆ ಕುಳಿತು ಹುಡುಗನಿಗಾಗಿ ಸುತ್ತ ಸಂಗೀತ ನುಡಿಸಿದರು. ಸಂಗೀತದಿಂದ ಮಹೋನ್ನತವಾದ ಮತ್ತು ಸುಂದರವಾದ ಸಂತಸದ ಭಾವವು ಅವನನ್ನು ಆವರಿಸಿದಂತೆ ಅವನ ಪ್ರಾಣಪಕ್ಷಿಯು ಮೆಲ್ಲಗೆ ಅವನಿಂದ ದೂರವಾಯಿತು.

This is a true story, but all the names except Pandit Ravi Shankar’s and Ustad Allah Rakha’s have been changed.

ಇದು ನಿಜವಾದ ಕಥೆ, ಆದರೆ ಪಂಡಿತ್ ರವಿಶಂಕರ್ ಮತ್ತು ಉಸ್ತಾದ್ ಅಲ್ಲಾ ರಾಖಾ ಅವರನ್ನು ಹೊರತುಪಡಿಸಿ ಬೇರೆ ಎಲ್ಲಾ ಹೆಸರುಗಳನ್ನು ಬದಲಾಯಿಸಲಾಗಿದೆ.

Spread the Knowledge

You may also like...

Leave a Reply

Your email address will not be published. Required fields are marked *