Ulysses and the Cyclops – Charles Lamb – Kannada Summary

ಯುಲಿಸೆಸ್ ಮತ್ತು ಸೈಕ್ಲೋಪ್ಸ್ ಕತೆ

ಒಂದಾನೊಂದು ಕಾಲದಲ್ಲಿ ಯುಲಿಸೆಸ್ ಅಂತ ಒಬ್ಬ ರಾಜ ಇದ್ದ. ಅವನು ಗ್ರೀಸಿನಲ್ಲಿರುವ ಇಥಾಕಾ ಎಂಬ ಒಂದು ದ್ವೀಪದ ರಾಜನಾಗಿದ್ದನು. ಟ್ರೋಜನ್ ಯುದ್ಧದ ನಂತರ ಯುಲಿಸೆಸ್ ಮತ್ತು ಅವನ ಸಂಗಡಿಗರು ತಮ್ಮ ರಾಜ್ಯಕ್ಕೆ ಮರಳಲು ಪ್ರಯಾಣವನ್ನು ಆರಂಭಿಸಿದರು. ದಾರಿಯಲ್ಲಿ ಅನೇಕ ಅದ್ಭುತ ಸಾಹಸಗಳ ಸರಣಿಯನ್ನೇ ಎದುರಿಸಬೇಕಾಯಿತು. ಅಂತಹ ಒಂದು ಸಾಹಸದ ಕತೆ ಈ ಯುಲಿಸೆಸ್ ಮತ್ತು ಸೈಕ್ಲೋಪ್ಸ್. 

ಅಪರಿಚಿತ ತೀರಪ್ರದೇಶದಲ್ಲಿ ರಾತ್ರಿಯಿಡಿ ಯಾನ ಮಾಡುತಿದ್ದ ಅವರು ಮುಂಜಾನೆಯ ಹೊತ್ತಿಗೆ ಸೈಕ್ಲೋಪ್ಸ್  ಗಳು ವಾ ಸ ಮಾಡುತಿದ್ದ ಭೂಪ್ರದೇಶಕ್ಕೆ ಬಂದರು. ಸೈಕ್ಲೋಪ್ಸ್  ಗಳು ಒಂದು ಬಗೆಯ ದೈತ್ಯ ಬಗೆಯ ಕುರುಬರು. ಅವರು ಯಾರೂ ಭೂಮಿಯನ್ನು ಉಳುಮೆ ಮಾಡುತ್ತಿರಲಿಲ್ಲ, ಕಾಳನ್ನು ಬಿತ್ತುತಿರಲೂ ಇಲ್ಲ, ಆದರೂ ಅಲ್ಲಿ ಗೋಧಿ, ಬಾರ್ಲಿ ಮತ್ತು ದ್ರಾಕ್ಷಿಯು ಸಮೃದ್ಧವಾಗಿ ಬೆಳೆಯುತಿತ್ತು. ಅವರು ಅದರಿಂದ ಬ್ರೆಡ್ಡು ಅಥವಾ ದ್ರಾಕ್ಷಾರಸವನ್ನೂ ಸಹ ಮಾಡುತ್ತಿರಲಿಲ್ಲ. ಅವರಿಗೆ ಕೃಷಿಯ ಕಲೆಯು  ಗೊತ್ತಿರಲಿಲ್ಲ. ತಿಳಿಯುವ ಆಸಕ್ತಿಯೂ  ಅವರಿಗೆ ಇರಲಿಲ್ಲ. ಅವರು ಅಲ್ಲಿನ ಬೆಟ್ಟಗಳ ಕಡಿದಾದ ತುದಿಗಳಲ್ಲಿ ಇರುವ ಗುಹೆಗಳಲ್ಲಿ ಒಂಟಿಯಾಗಿ ವಾಸ ಮಾಡುತ್ತಿದ್ದರು. ಅವರಿಗೆ ಯಾವ ಕಾನೂನಾಗಲಿ, ರೀತಿ ನೀತಿಗಳಾಗಲಿ ಇರಲಿಲ್ಲ. ಅವರಿಗೆ ಆವಾ ರಾಜ್ಯ, ಸರ್ಕಾರ ಅಥವಾ ರಾಜನೂ  ಇರಲಿಲ್ಲ. ತಮ್ಮ ತಮ್ಮ ಮನೆಗಳಲ್ಲಿ ತಮಗೆ ತೋಚಿದಂತೆ ಇರುತ್ತಿದ್ದರು. ಅವರ ಬಳಿ ದೋಣಿಯಾಗಲೀ ಹಡಗಾಗಲಿ ಇರಲಿಲ್ಲ, ವ್ಯಾಪಾರ ವ್ಯವಹಾರಗಳು ಗೊತ್ತಿಲ್ಲ, ಇತರ ಅವರ ಪ್ರದೇಶಗಳಿಂದಾಚೆಗೆ ಏನಿದೆ ಎಂದು ಹೋಗಿ ನೋಡುವ ಕುತೂಹಲ ಸಹ ಅವರಿಗೆ ಇರಲಿಲ್ಲ.  ಆದರೂ ಅಲ್ಲಿ ಹಡಗುನಲ್ಲಿ ಸಾಮಾನು ಸರಂಜಾಮು  ಸಾಗಾಣಿಕೆಗೆ ಅವಕಾಶವಾಗುವಂತೆ ಬಂದರುಗಳನ್ನು ಮಾಡಲು ಅನುಕೂಲಕರವಾಗಿತ್ತು. ಅಲ್ಲಿ ಯುಲಿಸೆಸ್  ತನ್ನ ಆಯ್ದ ಹನ್ನೆರೆಡು ಬೆಂಬಲಿಗರ ಜೊತೆ ಕೆಳಗಿಳಿದು, ಆ ಪ್ರದೇಶದಲ್ಲಿ ಎಂತಹ ಜನರು ಇರಬಹುದು, ಸ್ನೇಹದಿಂದ ಸತ್ಕಾರ ಮಾಡುವರೇ ಅಥವಾ ಅನಾಗರೀಕ ಕ್ರೂರಿಗಳಿರಬಹುದೇ ಎಂದು  ಅನ್ವೇಷಿಸಲು ಹೊರಟನು. 

ಅಲ್ಲಿನ ವಾಸಸ್ಥಳದ ಗುರುತಾಗಿ ಮೊದಲು ಅವ್ರು ಬಂದಿದ್ದು ಒರಟಾಗಿ ನಿರ್ಮಿಸಲಾಗಿದ್ದ ಒಬ್ಬ ದೈತ್ಯನ ಗುಹೆ. ಆ ಗುಹೆಯು ತನ್ನ ಮಾಲೀಕನ ಅಗಾಧ ಗಾತ್ರದ ಪ್ರಮಾಣವನ್ನು ಸೂಚಿಸುವಂತೆಯೇ ಇತ್ತು. ಓಕ್  ಅಥವಾ ಪೈನ್ ಮರಗಳ ಇಡೀ ಕಂಡವನ್ನೇ ಅವು ಹೇಗಿತ್ತೋ ಹಾಗೆಯೆ ಕಂಬಗಳನ್ನಾಗಿ ಮಾಡಿದ್ದ ರೀತಿಯು ಅವುಗಳಾನು ನಿರ್ಮಿಸಿದ್ದವನ ಕುಶಲತೆಯ ಬದಲಿಗೆ ಅವನ ಶಕ್ತಿ ಸಾಮರ್ಥ್ಯವನ್ನೇ ಹೆಚ್ಚು ಬಿಂಬಿಸುತ್ತಿದ್ದವು.  ಗುಹೆಯನ್ನು ಪ್ರವೇಶಿಸಿದ ಯುಲಿಸೆಸ್, ಆ ಒರಟು ತಂತ್ರ ಮತ್ತು ಕಳಾಹೀನ ನಿರ್ಮಾಣವನ್ನು ಗಮನಿಸುತ್ತಾ, ಆ ಮಹಲಿನ ನಿವಾಸಿಯನ್ನು  ನೋಡಲು ಬಯಸಿದ.  ಆದ್ರೆ ತಾನು ನಿರೀಕ್ಷಿಸುತ್ತಿರುವ ನಿವಾಸಿಯನ್ನು ಶಕ್ತಿಯಿಂದ ಗೆಲ್ಲುವ ಬದಲು ಒಳ್ಳೆಯ ಉಡುಗೊರೆಯೊಂದಿಗೆ ಎದುರುಗೊಳ್ಳುವುದೇ ಒಳ್ಳೆಯದೆಂದು ಯೋಚಿಸಿ, ಆ ದೈತ್ಯನನ್ನು ತನ್ನಲ್ಲಿದ್ದ ಅತ್ಯುತ್ತಮವಾದ ಗ್ರೀಕ್  ವೈನ್ ಕೊಟ್ಟು ಪ್ರಸನ್ನಗೊಳಿಸಲು ನಿರ್ಧರಿಸಿದ. ಯುಲಿಸೆಸ್ ಹನ್ನೆರಡು ಕೊಳಾಯಿಗಳ ತುಂಬಾ ಆ ವೈನ್ (ದ್ರಾಕ್ಷಾರಸವನ್ನು) ಸಂಗ್ರಹಿಸಿ ಇಟ್ಟಿದ್ದ. ಆ ದ್ರಾಕ್ಷಾರಸವು ಅದೆಷ್ಟು ತೀಕ್ಷ್ಣವಾಗಿತ್ತೆಂದರೆ ಒಂದಕ್ಕೆ ಹನ್ನೆರಡು ಪಟ್ಟು ಸೇರಿಸದೆ ಯಾರೂ ಅದನ್ನು ಕುಡಿಯುತ್ತಿರಲಿಲ್ಲ. ಹಾಗೆ ನೀರು ಸೇರಿಸಿದರು ಅದರ ಪರಮಳ ಮತ್ತು ಸ್ವಾದವು ಎಷ್ಟಿರುತ್ತಿತ್ತೆಂದರೆ ಅದರ ಸುವಾಸನೆಗೆ ಯಾರಿಗೂ ಅದರ ರುಚಿ ನೋಡದೆ ಇರಲು ಬಹಳ ಕಷ್ಟವಾಗುತ್ತಿತ್ತು.  ಆದರೆ ಯಾರಾದರೂ ಅದರ ರುಚಿ ನೋಡಿದರೆ ಸಾಕು, ಅವರ ಧೈರ್ಯ ಶೌರ್ಯಗಳು ಉತ್ತುಂಗಕ್ಕೆ ಏರಿಬಿಡುತ್ತಿದ್ದವು, ಅದರ ಮತ್ತಿನಿಂದ. ಆ ಅಮೂಲ್ಯ ಮದ್ಯವನ್ನು ತುಂಬಿಸಿದ್ದ, ಮೇಕೆಯ ಚರ್ಮದ ಜಾಡಿಯನ್ನು ತಮ್ಮೊಂದಿಗೆ  ಎತ್ತಿಕೊಂಡು ಅವರು ಗುಹೆಯ ಒಳಭಾಗಕ್ಕೆ ಹೋದರು. ಇಲ್ಲಿ ಕುರಿ ಮತ್ತು ಮೇಕೆಗಳ ಮಾಂಸವು ಹರಡಿಕೊಂಡಿದ್ದ ದೈತ್ಯನ ಅಡುಗೆಮನೆ, ಮೇಕೆ  ಹಾಲನ್ನು ಸಂಗ್ರಹಿಸಿ ಇಟ್ಟಿದ್ದ ತೊಟ್ಟಿಗಳು ಮತ್ತು ಬಾಂಡಲಿಗಳು, ಆ  ಬೆಳಗ್ಗೆ  ಅವನೊಂದಿಗೆ ಮೇವು ಮೇಯಲು ಹೋಗಿರುವ ತನ್ನ ಪ್ರಾಣಿಗಳನ್ನು ಕೂಡಿಹಾಕುವ  ಕೊಟ್ಟಿಗೆ ಜಾಗಗಳನ್ನೂ ನೋಡುತ್ತಾ ಇಡೀ ದಿನವನ್ನು ಸಂತಸದಿಂದ ಕಳೆದರು. ಕಣ್ಣಿಗೆ ಹಬ್ಬದಂತಿದ್ದ ಆ ಕುತೂಹಲಕಾರಿ ದೃಶ್ಯಗಳನ್ನು ನೋಡುತ್ತಿದ್ದಾಗ, ಕಿವುಡುಗಚ್ಚುವಂತಾ ಮನೆಯೇ ಬಿದ್ದು ಹೋಗುತ್ತಿದೆಯೇನೋ ಎಂಬಂತಹ ಏನೋ ಒಂದು ದೊಡ್ಡ ಶಬ್ದ ಕೇಳಿಸಿತು. ನೋಡಿದರೆ, ತನ್ನ ಎಂದಿನ ದಿನಚರಿಯಂತೆ ಹೊರಗೆ ಬೆಟ್ಟಕ್ಕೆ ತನ್ನ ಪ್ರಾಣಿಗಳನ್ನು ಕರೆದುಕೊಂಡು ಹೋಗಿ ಅದೇ ಸಂಜೆ ಮನೆಗೆ ವಾಪಸಾದ ಆ ಮನೆಯ ಒಡೆಯನಾಗಿದ್ದ ಅವನು. ಸಂಜೆಯ ಊಟದ ತಯಾರಿಗೆ ಸಂಗ್ರಹಿಸಿದ್ದ ಸೌದೆಗಳ ರಾಶಿಯನ್ನು ಆತ ಗುಹೆ ಬಾಗಿಲ ಬಳಿ ಬಿಸುಟಿದ, ಅದೇ ಅವರು ಈ ಮುಂಚೆ ಕೇಳಿದ ಆ ದೊಡ್ಡ ಶಬ್ದವಾಗಿತ್ತು. ಆ ಭಯಂಕರ ದೈತ್ಯನನ್ನು ನೋಡಿದ್ದೇ, ಗ್ರೀಸಿಯನ್ನರು ಗುಹೆಯ ಮೂಲೆಗಳಲ್ಲಿ ಅವಿತುಕೊಂಡರು. ಅವನು, ತಾನು ನೆಪ್ಟ್ಯೂನಿನ ಮಗನೆಂದು ಕೊಚ್ಚಿಕೊಳ್ಳುವ, ಸೈಕ್ಲೋಪ್ಸ್ ಗಳಲ್ಲೇ ಅತಿ ದೈತ್ಯ ಹಾಗು ಒರಟನಾದ ಪಾಲಿಫೆಮಸ್ ಆಗಿದ್ದ. ಅವನು ಮನುಷ್ಯನಿಗಿಂತ ಹೆಚ್ಚಾಗಿ ಪರ್ವತದ ಬಂಡೆಯಂತೆ ಕಾಣುತ್ತಿದ್ದನು ಮತ್ತು ಅವನ ಕ್ರೂರ ದೇಹಕ್ಕೆ ಅವನು ತಕ್ಕಂತೆ ಕ್ರೂರ ಮನಸ್ಸನ್ನು ಹೊಂದಿದ್ದನು. ಅವನು ತನ್ನ ಮಂದೆಯಲ್ಲಿನ  ಹಾಲು ಕೊಡುವ ಎಲ್ಲವನ್ನೂ ಗುಹೆಯ ಒಳಭಾಗಕ್ಕೆ ಓಡಿಸಿದನು, ಆದರೆ ಗಂಡು ಕುರಿ ಮತ್ತು ಮೇಕೆಗಳನ್ನು ಹೊರಗೆಯೇ  ಬಿಟ್ಟನು.

ನಂತರ, ಇಪ್ಪತ್ತು ಎತ್ತುಗಳು ಕೂಡ  ಎಳೆಯಲು ಸಾಧ್ಯವಾಗದಷ್ಟು ಬೃಹತ್ ಕಲ್ಲನ್ನು ತೆಗೆದುಕೊಂಡು, ಪ್ರವೇಶದ್ವಾರವನ್ನು ರಕ್ಷಿಸಲು ಗುಹೆಯ ಬಾಯಿಯಲ್ಲಿ ಇರಿಸಿದನು. ಮತ್ತು ಹೆಣ್ಣು ಕುರಿಗಳ ಮತ್ತು ಆಡುಗಳ ಹಾಲು ಕರೆಯಲು ಕುಳಿತನು; ಅದು ಆಗುತ್ತಿದ್ದಂತೆಯೇ ಅವನು ಆತುರದಿಂದ ಬೆಂಕಿಯನ್ನು ಹೊತ್ತಿಸಿದನು ಮತ್ತು ತನ್ನ ದೊಡ್ಡ ಕಣ್ಣನ್ನು ಗುಹೆಯ ಸುತ್ತಲೂ ಹಾಯಿಸಿದನು (ಸೈಕ್ಲೋಪ್ಸ್‌ಗೆ ಒಂದೇ ಕಣ್ಣು, ಮತ್ತು ಅದು ಅವರ ಹಣೆಯ ಮಧ್ಯದಲ್ಲಿದೆ), ಮಿನುಗುವ ಬೆಳಕಿನಿಂದ ಅವನು ಯುಲಿಸೆಸ್‌ನ ಕೆಲವು ಪುರುಷರನ್ನು ಗುರುತಿಸಿದನು. 

“ಹೋ, ಅತಿಥಿಗಳು! ಯಾರು ನೀವು? ವ್ಯಾಪಾರಿಗಳೋ  ಅಥವಾ ಅಲೆದಾಡುವ ಕಳ್ಳರೋ?” ಅವರು ಉತ್ತರದ ಎಲ್ಲಾ ಶಕ್ತಿಯನ್ನು ಅವರಿಂದ ತೆಗೆದುಕೊಂಡ ಧ್ವನಿಯಲ್ಲಿ ಕೂಗಿದರು, ಅದು ತುಂಬಾ ಬೆರಗುಗೊಳಿಸುತ್ತದೆ.

ಯುಲಿಸೆಸ್ ಒಬ್ಬನೇ  ಉತ್ತರಿಸಲು ಮುಂದಾಗಿ, ತಾವು ಲೂಟಿ ಅಥವಾ ವ್ಯಾಪಾರಕ್ಕಾಗಿ ಬಂದವರಲ್ಲ, ದಾರಿ ತಪ್ಪಿಸಿಕೊಂಡ  ಗ್ರೀಸಿಯನ್ನರು, ಟ್ರಾಯ್‌ನಿಂದ ಹಿಂತಿರುಗಿದವರು. ಅನಂತರ  ಅವರು ಅವನ  ಪಾದಗಳಿಗೆ ನಮ್ರವಾಗಿ ನಮಸ್ಕರಿಸಿ, ಅವನು  ತಮಗಿಂತ ಬಲಶಾಲಿ ಎಂದು ಒಪ್ಪಿಕೊಂಡರು ಮತ್ತು ಅವನಿಗೆ ಅತಿಥಿ ಸತ್ಕಾರಮಾಡಲು ಅವರಿಗೆ ಅವಕಾಶ ಮಾಡಿಕೊಡುವಂತೆ ಬೇಡಿಕೊಂಡರು.

ಅವನು ಏನು ಮಾತಾಡಲಿಲ್ಲ, ಆದರೆ ಅವನ ಸನಿಹದಲ್ಲೇ ಇದ್ದ ಇಬ್ಬರನ್ನು ಅವರು ಸಣ್ಣ ಮಕ್ಕಳೇನೋ ಅಂಬಂತೆ ಗಟ್ಟಿಯಾಗಿ ಹಿಡಿದುಕೊಂಡು ಅವರಿಬ್ಬರ ತಲೆಯನ್ನು ನೆಲಕ್ಕೆ ಚಚ್ಚಿ, ಅವರ ಬಿಸಿ ರಕ್ತ ಇನ್ನು ಹರಡುತ್ತಿರುವಂತೆಯೇ ಸಿಂಹದ ಊಟವೇನೋ ಎಂಬಂತೆ ಅವರನ್ನು ತಿನ್ನಲಾರಂಭಿಸಿದ. ಸೈಕ್ಲೋಪ್ಸ್ ಗಳು ನರಭಕ್ಷಕರು, ಮನುಷ್ಯ ಮಾಂಸವು ಅವರಿಗೆ ಮೇಕೆ ಅಥವಾ ಮಕ್ಕಳ ಮಾಂಸಕ್ಕಿಂತ, ಬಹಳ  ಇಷ್ಟವಾದ ಸವಿಯಾದ ಭಕ್ಶ್ಯ. ಅವರ ಈ ಮೈ ನಡುಗಿಸುವಂತಹ ಅಭ್ಯಾಸದಿಂದಲೇ ಯಾರೋ ಅಡ್ಡ ದಾರಿ ಹಿಡಿದವರೋ, ಅಥವಾ ಮುರಿದ ಹಡಗಿನ ನಾವಿಕರ ಹೊರತು ಬೇರೆ ಯಾವ ಮನುಷ್ಯರು ಆ ಕರಾವಳಿಯತ್ತ ಬರುತ್ತಿರಲಿಲ್ಲ.  ಆ ಭಯಾನಕ ದೃಶ್ಯವನ್ನು ಕಂಡ ಯುಲಿಸೆಸ್ ಮತ್ತು ಅವನ ಸಂಗಡಿಗರು ತಬ್ಬಿಬ್ಬಾದರು. ತನ್ನ ಭೀಕರ ಊಟವನ್ನು ಮುಗಿಸಿದ ಆತ ಕೊನೆಯಲ್ಲಿ ಮೇಕೆಯ ಹಾಲನ್ನು ತನ್ನ ಅಗಾಧ ಗಂಟಲೊಳಗೆ ಸುರಿದುಕೊಂಡು ಕುಡಿದು, ಹಾಗೆಯೆ ಅಡ್ಡಾಗಿ ತನ್ನ ಮೇಕೆಗಳೊಂದಿಗೆ ಮಲಗಿ ನಿದ್ದೆ ಹೋದ. ಆಗ ಯುಲಿಸೆಸ್ ತನ್ನ ಕತ್ತಿಯನ್ನು ಸೆಳೆದು ಮಲಗಿದ್ದ ಆ ದುಷ್ಟ ದೈತ್ಯನ ಎದೆಗೆ ಇರಿಯಲು ಸಜ್ಜಾದ. ಆದರೆ ಅವನ ವಿವೇಕವು ಅವನನ್ನು ಹಾಗೆ ಮಾಡಲು ಬಿಡಲಿಲ್ಲ. ಒಂದು ವೇಳೆ ಹಾಗೆ ಆ ರಾಕ್ಷಸನನ್ನು ಅಲ್ಲಿಯೇ ಕೊಂದಿದ್ದರೆ, ಉಳಿದ ಅವರೆಲ್ಲರೂ ಅಲ್ಲಿಯೇ ಸಿಕ್ಕಿ ಸಾಯಬೇಕಾಗಿತ್ತು. ಯಾಕೆಂದರೆ ಗುಹೆಯ ಬಾಗಿಲಗೆ ಅಡ್ಡವಿದ್ದ ದೊಡ್ಡ ಕಲ್ಲನ್ನು ಅಲ್ಲಿಂದ ಸರಿಸಲು ಪಾಲಿಫೆಮಸ್ ಗಷ್ಟೇ ಸಾಧ್ಯವಿತ್ತು. ಹೀಗಾಗಿ ಅವರೆಲ್ಲರೂ ಇಡೀ ರಾತ್ರಿ ಅಲ್ಲಿಯೇ ಸಿಕ್ಕಿಹಾಕಿಕೊಂಡು ಕಳೆಯಬೇಕಾಯಿತು. 

ಮುಂಜಾನೆಯಾದಾಗ, ಸೈಕ್ಲೋಪ್  ಎಚ್ಚರಾಗಿ  ಬೆಂಕಿಯನ್ನು ಹೊತ್ತಿಸಿದ , ತನ್ನ ಇತರ ಇಬ್ಬರು ದುರದೃಷ್ಟಕರ ಕೈದಿಗಳನ್ನು ಉಪಹಾರವನ್ನಾಗಿ  ತಿಂದು, ನಂತರ ತನ್ನ ಎಂದಿನ ಅಭ್ಯಾಸದಂತೆ ಮೇಕೆಗಳ ಹಾಲು ಕರೆದ. ನಂತರ  ಮನುಷ್ಯ ಬತ್ತಳಿಕೆಯ ಮುಚ್ಚಳವನ್ನು ತೆರೆದು ಮುಚ್ಚುವಷ್ಟು ಸುಲಭವಾಗಿ,

ವಿಶಾಲವಾದ ಕಲ್ಲನ್ನು ಪಕ್ಕಕ್ಕೆ ತಳ್ಳಿ ತನ್ನ ಪ್ರಾಣಿಗಳ ಹಿಂಡನ್ನು ಹೊರಗೆ ಬಿಟ್ಟು, ಕೈದಿಗಳನ್ನು ಒಳಗೆಯೇ ಕೂಡಿಹಾಕಿ ಮತ್ತೆ ಗುಹೆಯ ಕಲ್ಲಿನಿಂದ ಮುಚ್ಚಿಬಿಟ್ಟ.  ಶಿಳ್ಳೆ ಹಾಕುತ್ತಾ  (ಬಿರುಗಾಳಿಯಲ್ಲಿ ಗಾಳಿಯಂತೆ ತೀಕ್ಷ್ಣವಾದ) ಪರ್ವತಗಳ ಕಡೆಗೆ  ಮಂದೆಯನ್ನು ಓದಿಸಿಕೊಂಡು ಅಲ್ಲಿಂದ ಹೊರಟು ಹೋದನು. 

ಯುಲಿಸೆಸ್ ಗೆ ತನ್ನ  ಶಕ್ತಿ ಅಥವಾ ಸೈಕ್ಲೋಪ್ ನನ್ನು ಒಲಿಸಿಕೊಳ್ಳುವ ಬಗೆ ಮಕ್ಕಳಾಟವೇನೋ ಎಂಬಂತೆ ತೋರಿತು. ಆದರೆ ಸೈಕ್ಲೋಪ್  ತಿಂದು ಉಳಿಸಿದ್ದ ತನ್ನ ಸಂಗಡಿಗರ ಅವಶೇಷಗಳ ಜೊತೆ ಇದ್ದ ಯುಲಿಸೆಸ್ ಗೆ ಮನುಷ್ಯರ ಯುಕ್ತಿ , ವಿವೇಕದಿಂದ  ಎಂತಹ ರಾಕ್ಷಸ  ಶಕ್ತಿಯನ್ನು ಮೀರಿಸಬಹುದೆಂಬ ಸ್ಪಷ್ಟತೆಯೂ  ಸಿಕ್ಕಿತು. ಸೈಕ್ಲೋಪ್ ಬೆಂಕಿ ಹತ್ತಿಸಲು ಇಟ್ಟಿದ್ದ ತುಂಡುಗಳಿಂದ ಹಡಗಿನ ಸ್ತಂಭದಷ್ಟು ದಪ್ಪವಾಗಿ ಗಟ್ಟಿಯಾಗಿ ಇದ್ದ ಮರದ ತುಂಡೊಂದನ್ನು ಯುಲಿಸೆಸ್ ಎತ್ತಿಕೊಂಡನು. ಅವನು ಅದನ್ನು ಹರಿತಗೊಳಿಸಿ ಬೆಂಕಿಯಲ್ಲಿ ಗಟ್ಟಿಗೊಳಿಸಿದನು.  ನಾಲ್ಕು ಪುರುಷರನ್ನು ಆಯ್ಕೆ ಮಾಡಿ, ಅವರು ಈ ಕಂಬವನ್ನು ಏನು ಮಾಡಬೇಕೆಂದು ಅವರಿಗೆ ಸೂಚಿಸಿದನು.  ನಂತರ ಅವರು ಅವರ ಪಾತ್ರವನ್ನು ಸರಿಯಾಗಿ ನಿಭಾಯಿಸಲು ಆಗುವಂತೆ ಅವರನ್ನು ತಯಾರಿಗೊಳಿಸಿದನು. 

ಸಂಜೆಯಾದಾಗ ಸೈಕ್ಲೋಪ್ ತನ್ನ ಕುರಿಗಳನ್ನು ಮನೆಗೆ ಓಡಿಸಿಕೊಂಡು ಬಂದ.  ವಿಧಿಯೇ ಉದ್ದೇಶಪೂರ್ವಕವಾಗಿ ನಿರ್ದೇಶಿಸಿದಂತೆ, ಅಥವಾ ಅವನ ದುಷ್ಟೆಯಿಂದ ದೇವರೇ ಅವನಿಗೆ ಮರೆವು ಕೊಟ್ಟರೋ ಏನೋ, ಅವನು ತನ್ನ ಪದ್ಧತಿಗೆ ವಿರುದ್ಧವಾಗಿ ತನ್ನ ಹಿಂಡಿನ ಗಂಡು ಮೇಕೆ ಕುರಿಗಳನ್ನು ಸಹ ಹೆಣ್ಣು ಮರಿಗಳೊಂದಿಗೆ  ಮನೆಯೊಳಗೇ ಬಿಟ್ಟು ಕೊಟ್ಟಿಗೆಯಲ್ಲಿ ಕೂಡಿಹಾಕಿದನು. ನಂತರ ಗುಹೆಯ ಬಾಗಿಲಿಗೆ  ಕಲ್ಲನ್ನು ಮುಚ್ಚಿ, ಅವನು ತನ್ನ ಭಯಾನಕ ಭೋಜನಕ್ಕೆ ಕುಳಿತು ಇನ್ನೂ ಇಬ್ಬರು ಗ್ರೀಸಿಯನ್ನರನ್ನು ತಿಂದು ಮುಗಿಸಿದ. ಯುಲಿಸೆಸ್ ತನ್ನ ಯೋಜನೆಯನ್ನು ಕಾರ್ಯಗತಗೊಳಲು ತನ್ನ ಧೈರ್ಯವನ್ನೆಲ್ಲ ಒಟ್ಟುಗೂಡಿಸಿಕೊಂಡು ಉತ್ಸಹದಿಂದ  ಗ್ರೀಕ್ ದ್ರಾಕ್ಷಾರಸದ ಬಟ್ಟಲನ್ನು ಮುಂದೆ ಮಾಡಿ ಸೈಕ್ಲೋಪ್ ನಿಗೆ ಅದನ್ನು ಕುಡಿಯುವಂತೆ ಸವಾಲು ಒಡ್ಡಿದನು. 

“ಸೈಕ್ಲೋಪ್,” ಅವರು ಹೇಳಿದ, “ನಿನ್ನ ಅತಿಥಿಯ ಕೈಯಿಂದ ವೈನ್ ತುಂಬಿದ  ಬಟ್ಟಲನ್ನು ತೆಗೆದುಕೊ; ಇದು ನೀನು ತಿಂದ ಮನುಷ್ಯನ ಮಾಂಸವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.  ಮುಳುಗಿ ಹೋಗಿರುವ ನಮ್ಮ ಹಡಗಿನಲ್ಲಿ ಏನು ಇತ್ತೆಂದು ನಿನಗೇ ಗೊತ್ತಾಗುತ್ತದೆ. ನಿನಗೆ ಈ ಪಾನೀಯ ಇಷ್ಟವಾದರೆ ಪ್ರತಿಫಲವಾಗಿ ನಾನು ಕೇಳುವುದು ಇಷ್ಟೇ , ನನ್ನನ್ನು ಜೀವಂತವಾಗಿ ಬಿಟ್ಟುಬಿಡಬೇಕು. ಅತಿಥಿಗಳನ್ನೇ ತಿಂದುಬಿಡುವ ನಿನ್ನ ಈ ಅಭ್ಯಾಸವನ್ನು ನೋಡಿದರೆ ನಿಜವಾಗಿಯೂ ಇಲ್ಲಿ ಬಹಳ ಕಡಿಮೆ ಜನರು ಬರುತ್ತಾರೆಂದು ಅನಿಸುತ್ತದೆ. 

ಆ ಕ್ರೂರಿಯು ಹಿಂದ್ ಮುಂದೆ ನೋಡದೆ ಪಾನೀಯವನ್ನು ತೆಗೆದುಕೊಂಡು ಕುಡಿದನು ಮತ್ತು ತನಗೆ ಹೊಸದಾದ ವೈನ್ ರುಚಿಯನ್ನು ತೀವ್ರವಾಗಿ ಆನಂದಿಸಿದನು. ಮತ್ತೆ ಮದ್ಯದ ಜಡಿಯ ಬಳಿ ಬಂದು ಇನ್ನಷ್ಟು ಬೇಕೆಂದು ಕೇಳಿದನು; ಮತ್ತು ಅಂತಹ ತೀಕ್ಷ್ಣ ಮದ್ಯವನ್ನು ನೀಡಿದ ಮನುಷ್ಯನಿಗೆ ತಾನು ಉಡುಗೊರೆ ಕೊಟ್ಟು ಸತ್ಕರಿಸಬೇಕೆಂದೂ , ತನ್ನ ಹೆಸರು ಏನೆಂದು ಹೇಳಬೇಕೆಂದೂ  ಅವನು  ಯುಲಿಸೆಸ್ ನನ್ನ ಕೇಳಿಕೊಂಡನು.  ಸೈಕ್ಲೋಪ್ಸ್ ಇನ್ನು ಮುಂದುವರೆಸುತ್ತ  ತಾನು ದ್ರಾಕ್ಷಿಯನ್ನು ತಿಂದಿದ್ದೇನೆಂದೂ ಆದ್ರೆ ಇಷ್ಟು ಉತ್ತಮವಾದ ದೈವೇಕವಾದ ಪಾನೀಯವನ್ನು ತಾನು ಎಂದೂ  ಕುಡಿದಿಲ್ಲವೆಂದು ಪ್ರಮಾಣ ಮಾಡಿದನು. ಯುಲಿಸೆಸ್ ಮತ್ತೆ ಅವನಿಗೆ ಇನ್ನಷ್ಟು  ವೈನ್ ಅನ್ನು ಕೊಟ್ಟನು, ಆ ಮೂರ್ಖನು ಅದನ್ನು ಸುರಿದಷ್ಟೇ ವೇಗವಾಗಿ ಕುಡಿದನು, ಮತ್ತು ಮತ್ತೆ ಅವನು ಈ ಒಳ್ಳೆಯ ಪಾನೀಯದ  ದಾನಿಯ  ಹೆಸರನ್ನು ಕೇಳಿದನು, ಅದಕ್ಕೆ ಕುತಂತ್ರದಿಂದ ಯುಲಿಸೆಸ್ “ನನ್ನ ಹೆಸರು ನೋಮನ್( Noman – ಯಾರೂ  ಇಲ್ಲ )” ನನ್ನ ಸಂಬಂಧಿಕರು ಮತ್ತು ಸ್ನೇಹಿತರು ನನ್ನ ಸ್ವಂತ ದೇಶದವರು  ನನ್ನನ್ನು ನೋಮನ್ ಎಂದು ಕರೆಯುತ್ತಾರೆ ” ಎಂದು ಹೇಳಿದ. 

“ಹಾಗಾದರೆ,” ಸೈಕ್ಲೋಪ್ ಹೇಳಿದ, “ಇದು ನಾನು ನಿನಗೆ ತೋರಿಸುವ ದಯೆ, ನೋಮನ್: ನಿನ್ನೊಬ್ಬನನ್ನು ಬಿಟ್ಟು ನಾನು ಉಳಿದ ನಿನ್ನ ಎಲ್ಲ ಸ್ನೇಹಿತರನ್ನು ತಿಂದು ಬಿಡುವೆ. 

ಸ್ವತಃ ಅವನಿಗೆ ಅಪರೂಪವಾದ ದಯೆಯ  ಭಾವವನ್ನು ತೋರಿಸಿ ಹೀಗೆ ಹೇಳಿದ ಸೈಕ್ಲೋಪ್ ತೀಕ್ಷ್ಣವಾದ ವೈನಿನ ಪ್ರಭಾವ ಹಾಗು ಅದರ ಮತ್ತನ್ನು ತಾಳಲಾಗದೆ ಹಾಗೆಯೆ ನೆಲದ ಮೇಲೆ ಉರುಳಿಕೊಂಡು ಆಳವಾದ ನಿದ್ರೆಗೆ ಜಾರಿಹೋದನು. 

ದೈತ್ಯಾಕಾರದ ಪ್ರಜ್ಞಾಹೀನವಾಗಿ ಮಲಗಿರುವಾಗ ಯುಲಿಸೆಸ್ ಸರಿಯಾದ ಸಮಯಕ್ಕಾಗಿ  ಕಾಯುತ್ತಿದ್ದನು.   ಅವನ ಜನರನ್ನು ಹುರಿದುಂಬಿಸುತ್ತಾ, ಅವರು ಮರದ ತುಂಡಿನ ಚೂಪಾದ ತುದಿಯನ್ನು ಬೆಂಕಿಯಲ್ಲಿ ಕೆಂಪಗೆ ಬಿಸಿಯಾಗುವವರೆಗೆ ಇರಿಸಿದರು. ಕಾಣದ ಯಾವುದೊ ದೇವರು ಅವರಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಧೈರ್ಯವನ್ನು ಕೊಟ್ಟನು.  ನಾಲ್ಕು ಜನರು ಸೇರಿ ಕಷ್ಟಪಟ್ಟು ಬೆಂಕಿಯಲ್ಲಿ ಕಾಯಿಸಿ ಬಿಸಿಮಾಡಿದ ಬೃಹತ್ ಕೋಲಿನ ಚೂಪಾದ ತುದಿಯನ್ನು ಆ ಕುಡುಕ ನರಭಕ್ಷಕನ ಕಣ್ಣಿಗೆ  ಚುಚ್ಚಿಬಿಟ್ಟರು.

ಅವನು ಎಚ್ಚರಗೊಂಡು, ನೋವಿನಿಂದ ಗರ್ಜಿಸಿದನು. ಆ ಆರ್ಭಟದ ಸದ್ದಿಗೆ  ಗುಹೆಯೆಲ್ಲ ಸಿಡಿಲಿನಂತೆ ಗುಡುಗಿತು.  ಅವರು ಓಡಿಹೋಗಿ ಮೂಲೆಗಳಲ್ಲಿ ಅವಿತುಕೊಂಡರು. ಅವನು ತನ್ನ ಕಣ್ಣಿನಿಂದ ಉರಿಯುತ್ತಿರುವ ಕಂಬವನ್ನು ಕಿತ್ತು ಗುಹೆಯ ಅತ್ತಿತ್ತ   ಮರವನ್ನು ಹುಚ್ಚುಚ್ಚಾಗಿ  ಎಸೆದನು. ನಂತರ ಅವನು ತನ್ನ ಸಹೋದರರಾದ ಸೈಕ್ಲೋಪ್ಸ್‌ಗಾಗಿ ಪ್ರಬಲವಾದ ಧ್ವನಿಯಿಂದ ಕೂಗಿದನು.  ಅವರು ಬೆಟ್ಟಗಳ ಮೇಲಿನ ಗುಹೆಗಳಲ್ಲಿ ವಾಸಿಸುತ್ತಿದ್ದರು. ಅವರು ಭೀಕರವಾದ ಕೂಗನ್ನು ಕೇಳಿ, ಪಾಲಿಫಿಮಸ್‌ಗೆ ಯಾವ ಕಾಯಿಲೆ ಬಂದಿತು, ರಾತ್ರಿಯಲ್ಲಿ ಅವರ ನಿದ್ರೆಯನ್ನು ಹಾಳುಮಾಡಿದ  ಅಂತಹ ಭಯಾನಕ ಕೂಗುಗಳನ್ನು ಮಾಡಲು ಅವನಿಗೆ ಕಾರಣವೇನು ಎಂದು ಕೇಳಲು ಎಲ್ಲಾ ಭಾಗಗಳಿಂದ ಹಿಂಡು ಹಿಂಡಾಗಿ ಓಡಿ  ಬಂದರು. “Noman ( ಯಾರೂ  ಇಲ್ಲ ) ತನ್ನನ್ನು ಗಾಯಗೊಳಿಸಿದ್ದಾನೆ,  ನೋಮನ್ ತನ್ನನ್ನು ಕೊಳ್ಳುತ್ತಿದ್ದಾನೆ, ನೋಮನ್ ತನ್ನೊಂದಿಗೆ  ಗುಹೆಯಲ್ಲಿದ್ದಾನೆ” ಎಂದು ಅವನು ಒಳಗಿನಿಂದ ಉತ್ತರಿಸಿದ.

ಅವರು ಪ್ರತ್ಯುತ್ತರವಾಗಿ, “ಯಾವುದೇ ಮನುಷ್ಯನು ನಿನ್ನನ್ನು ನೋಯಿಸದಿದ್ದರೆ ಮತ್ತು ಯಾವ ಮನುಷ್ಯನೂ ನಿನ್ನೊಂದಿಗಿಲ್ಲದಿದ್ದರೆ ನೀನು ಒಬ್ಬಂಟಿ; ಮತ್ತು ನಿನ್ನನ್ನು ಬಾಧಿಸುವ ದೆವ್ವವು ಸ್ವರ್ಗದ ಕೈಯಿಂದ ಬಂದಿದೆ, ಅದನ್ನು ಯಾರೂ ವಿರೋಧಿಸಲು ಅಥವಾ ನಿನಗೆ ಸಹಾಯ ಮಾಡಲು ಸಾಧ್ಯವಿಲ್ಲ.” ಎಂದು ಹೇಳಿ ಅವರು ಅವನನ್ನು ಬಿಟ್ಟು ಹೊರಟರು. ದಾರಿಯಲ್ಲಿ ಅವರು ಅವನಿಗೆ ಯಾವುದೊ ಕಾಯಿಲೆ ಬಂದಿರಬೇಕೆಂದು ಯೋಚಿಸುತ್ತ ಹೋದರು. 

ಕಣ್ಣು ಕುರುಡಾದ ಅವನು ನೋವಿನಿಂದ ನರಳುತ್ತಾ ತನ್ನ ಕೋಪವನ್ನು ಉಗುಳಲು ತಯಾರಾಗಿ ಕತ್ತಲಲ್ಲಿ ಅತ್ತಿಂದಿತ್ತ ಓಡಾಡಿ ಗುಹೆಯ ಬಾಗಿಲನ್ನು ಹುಡುಕಿದನು. ಬಾಗಿಲು ಸಿಕ್ಕ ಕೂಡಲೇ ಕಲ್ಲನ್ನು ಬಾಗಿಲಿನಿಂದ ಆಚೆ  ಸರಿಸಿ ಹೊಸ್ತಿಲಲ್ಲಿ  ಕುಳಿತುಕೊಂಡನು.  ಆಗಲೇ ಬೆಳಗಾಗುತ್ತಿದೆ, ಎಂದಿನಂತೆ ಹುಲ್ಲು ಮೇಯಲು ಆಚೆ ಹೋಗುವ ಕುರಿಗಳೊಂದಿಗೆ ಯಾವುದೇ ವ್ಯಕ್ತಿ ಹೊರಗೆ ಬಂದರೆ, ಅವರನ್ನು ಹಿಡಿಯಬಹುದೇ ಎಂದು ಅವನು ಯೋಚಿಸಿದನು.

ಆದರೆ  ಯುಲಿಸೆಸ್,  ಸೈಕ್ಲೋಪ್ ಸಾಮಾನ್ಯವಾಗಿ ಮಲಗುವ ಓಸಿಯರ್ ಕೊಂಬೆಗಳನ್ನು  ( ವಿಲ್ಲೋ ಮರದ ಮೃದು ಕಡ್ಡಿಗಳು) ಬಳಸಿ ದಷ್ಟಪುಷ್ಟವಾಗಿದ್ದ ಮೂರೂ ಮೂರೂ ಟಗರುಗಳನ್ನು ಒಟ್ಟಿಗೆ ಕಟ್ಟಿದನು. ಮಧ್ಯದ ಕುರಿಯ ಹೊಟ್ಟೆಗೆ ಒಬ್ಬೊಬ್ಬ ಮನುಷ್ಯನನ್ನು ಕಟ್ಟಿದ. ಕೊನೆಗೆ ತಾನು ಕೂಡ ಬೆಳ್ಳಗೆ ದಟ್ಟವಾಗಿದ್ದ ಕುರಿಯ ಉಣ್ಣೆಯನ್ನು ತನ್ನ ಹಾಗು ಇನ್ನೊಂದು ಟಗರಿನ ಜೊತೆ ಸುತ್ತಲೂ ತಾನೇ ಸುತ್ತಿಕೊಂಡ. ಅಷ್ಟರಲ್ಲಿ ಕುರಿಗಳು ಆತುರದಿಂದ ಮುಂದೆ ಮುಂದೆ ನುಗ್ಗಲು ಶುರು ಮಾಡಿದವು. ಅವು ನುಗ್ಗಿ ಹೋಗುವಾಗ ಸೈಕ್ಲೋಪ್ ಅವುಗಳ ಬೆನ್ನು ತಡವಿ ಕುರಿಗಳನ್ನು  ಪರೀಕ್ಷಿಸಲು ಶುರುಮಾಡಿದ. ಕುರಿಗಳು ತಮ್ಮ  ಹೊಟ್ಟೆಯ ಕೆಳಗೆ ತನ್ನ ಶತ್ರುಗಳನ್ನು ಅಡಗಿಸಿಕೊಂಡು ಹೋಗುತ್ತಿವೆ  ಎಂಬುದು ಅವನಿಗೆ ಹೊಳೆಯಲಿಲ್ಲ. ಹೀಗೆಯೇ ಕೊಟ್ಟ ಕೊನೆಯ ಟಗರು ಉಣ್ಣೆ ಸುತ್ತಿಕೊಂಡ  ಯುಲಿಸೆಸ್ ನೊಂದಿಗೆ ಆಚೆ  ಬಂದವು. ಸೈಕ್ಲೋಪ್ ಆ ಕೊನೆಯ ಟಗರನ್ನು ನಿಲ್ಲಿಸಿ ತಡವಿದ, ಒಮ್ಮೆ ಅವನ ಕೈ  ಯುಲಿಸೆಸ್  ನ ತಲೆಕೂದಲನ್ನೂ ಸೋಕಿತು. ಆದರೂ ಅವನಿಗೆ ಗೊತ್ತಾಗಲೇ ಇಲ್ಲ . 

ತನ್ನನು ತಾನು ಬಿಡಿಸಿಕೊಂಡ ನಂತರ ಯುಲಿಸೆಸ್ ನು ತನ್ನ ಗೆಳೆಯರನ್ನು ಕಟ್ಟಿನಿಂದ ಬಿಚ್ಚಿ ಆಚೆ ಬರಲು ನೇರವಾದ. ಅಷ್ಟರಲ್ಲಿಯೇ ತಮ್ಮೊಂದಿಗೆ ಒಗ್ಗಿಕೊಂಡ ಟಗರುಗಳನ್ನು ಅವರು ತಮ್ಮೊಂದಿಗೆ ತಮ್ಮ ಹಡಗಿಗೆ ಎತ್ತಿಕೊಂಡು ಹೋದರು. ಸಾವಿನಿಂದ ಪಾರಾಗಿ ಬಂಡ ಇವರನ್ನು ಹಡಗಿನಲ್ಲಿದ್ದ ಅವರ ಇತರ ಸಂಗತಿಗಳು ಕಣ್ಣೀರಿಟ್ಟು ಬರಮಾಡಿಕೊಂಡರು. ತಮ್ಮ ಹುಟ್ಟುಗಳನ್ನು ಹಾಕುತ್ತ ಮುಂದಕ್ಕೆ ತೇಲುತ್ತ, ತೀರದಿಂದ ಸ್ವಲ್ಪ ದೂರ ಹೋದ ನಂತರ ಧ್ವನಿ ಕೇಳಿಸುವ ಅಂತರದಲ್ಲಿ ನಿಂತು ಯುಲಿಸೆಸ್ ನು ಜೋರಾಗಿ ಕೂಗುತ್ತ ಹೇಳಿದ, “ಸೈಕ್ಲೋಪ್, ನೀನು ನಿನ್ನ  ಅಗಾಧ ಶಕ್ತಿಯನ್ನು ಅತಿಥಿಗಳನ್ನು ತಿನ್ನಲು ದುರುಪಯೋಗ ಮಾಡಬಾರದಿತ್ತು.”

ಆ ದ್ವನಿಯನ್ನು ಕೇಳಿ ಕೆರಳಿದ ಸೈಕ್ಲೋಪ್  ದೊಡ್ಡದೊಂದು ಬಂಡೆಯ ಚೂರನ್ನು ಎತ್ತಿಕೊಂಡು ಕುರುಡು ಕೋಪದಿಂದ ಹಡಗಿನತ್ತ ಎಸೆದ. ಸ್ವಲ್ಪದರಲ್ಲಿಯೇ ಅದು ಯುಲಿಸೆಸ್  ಕುಳಿತಿದ್ದ ಹಲಗೆಯ ಗುರಿಯನ್ನು  ತಪ್ಪಿತು. ಆದರೆ ಅದು ನೀರಿಗೆ ಬಿದ್ದ ರಭಸಕ್ಕೆ ಹಡಗು ತೊಯ್ದಾಡುತ್ತ ತೀರದ ಅಂಚಿಗೆ ಬಂದುಬಿಟ್ಟಿತು. ಯುಲಿಸೆಸ್ ಮತ್ತೆ ಹೇಳಿದ, “ ಸೈಕ್ಲೋಪ್ , ನಿನ್ನ ಕಣ್ಣಿನ ಗಯಾ ಯಾರು ಮಾಡಿದ್ದೆಂದು ಯಾರಾದರೂ ನಿನ್ನನ್ನು ಕೇಳಿದರೆ, ಅವನು ಯುಲಿಸೆಸ್  ಅಂತ, ಲಾರ್ಟೆಸ್ನ ಮಗ, ಇಥಾಕಾಡಾ ರಾಜ, ನಗರಗಳ ವಿದ್ವಾಂಸಕ, ಎಂದು ಹೇಳು”. 

ನಂತರ ಅವರು ನೌಕಾಯಾನವನ್ನು ಶುರುಮಾಡಿದರು,  ಹಳೆಯ ಸಮುದ್ರವನ್ನು ಸೋಲಿಸಿದರು ಮತ್ತು ಮುಂದಕ್ಕೆ ಬಿರುಗಾಳಿಯಂತೆ  ಹೊರಟರು.

Spread the Knowledge

You may also like...

Leave a Reply

Your email address will not be published. Required fields are marked *