ತತ್ಸಮ – ತದ್ಭವಗಳು

ತತ್ಸಮ - ತದ್ಭವಗಳು
ತತ್ಸಮ – ತದ್ಭವಗಳು

ಪದಗಳು

ಅಕ್ಷರಗಳನ್ನು ಅರ್ಥವತ್ತಾಗಿ ಜೋಡಿಸಿದಾಗ ಪದರಚನೆಯಾಗುತ್ತದೆ. ಕೆಲವೊಮ್ಮೆ ಒಂದೇ ಅಕ್ಷರವೂ ಪದವೆಂದು ಕರೆಯಲ್ಪಡುತ್ತದೆ. ಉದಾ : ಆ ಮನೆ, ಈ ತೋಟ ಇಲ್ಲಿರುವ ಆ, ಈ ಎಂಬ ಅಕ್ಷರಗಳು ಪದಗಳೇ ಆಗಿರುತ್ತವೆ.

ಭಾಷೆಯೆಂಬುದು ನಿಂತ ನೀರಲ್ಲ. ಅದು ತನ್ನ ಸಂಪರ್ಕಕ್ಕೆ ಸಿಕ್ಕುವ ಬೇರೆ ಭಾಷೆಗಳಿಂದಲೂ ಪದಗಳನ್ನು ಸ್ವೀಕರಿಸಿ ಬಳಸುತ್ತದೆ. ಹಾಗಾಗಿ ಪ್ರತಿಯೊಂದು ಭಾಷೆಯಲ್ಲೂ ಅದರದೇ ಆದ ಮೂಲ ಪದಗಳು ಹಾಗೂ ಬೇರೆ ಭಾಷೆಯಿಂದ ಬಂದ ಪದಗಳು ಇರುತ್ತವೆ.

ಒಂದು ಭಾಷೆಯ ಮೂಲ ಪದಗಳನ್ನು ‘ದೇಶ್ಯಪದ’ ಎಂತಲೂ ಬೇರೆ ಭಾಷೆಯಿಂದ ಬಂದಿರುವ ಪದಗಳನ್ನು ‘ಅನ್ಯದೇಶ್ಯ’ ಪದ ಎಂತಲೂ ಕರೆಯುತ್ತಾರೆ.

ಕನ್ನಡದಲ್ಲಿರುವ ಮೂಲ ಪದಗಳು ದೇಶ್ಯಪದಗಳೆನಿಸಿವೆ.

ಕನ್ನಡದಲ್ಲಿ ಸಂಸ್ಕೃತ, ಪಾರ್ಸಿ, ಪೋರ್ಚುಗೀಸ್, ಇಂಗ್ಲಿಷ್, ಉರ್ದು – ಇತ್ಯಾದಿ ಭಾಷೆಗಳಿಂದಲೂ ಸಾಕಷ್ಟು ಪದಗಳು ಬಂದಿವೆ. ಇವುಗಳಲ್ಲಿ ಸಂಸ್ಕೃತದಿಂದ ಬಂದಿರುವ ಪದಗಳನ್ನು ಹೊರತು ಪಡಿಸಿ ಉಳಿದ ಭಾಷೆಗಳಿಂದ ಬಂದಿರುವ ಪದಗಳನ್ನು ಅನ್ಯದೇಶ್ಯ ಪದಗಳೆಂದೂ ಸಂಸ್ಕೃತದಿಂದ ಬಂದಿರುವ ಪದಗಳನ್ನು ತದ್ಭವ ಎಂತಲೂ ಕರೆಯಲಾಗಿದೆ. ಅವುಗಳ ಬಗ್ಗೆ
ತಿಳಿಯೋಣ.

ಮೋಟಾರುಗಳಲ್ಲಿ ಜಬರ್ದಸ್ತಿನಿಂದ ಓಡಾಡುವುದೇ ಜೀವನದ ಮುಖ್ಯ ಗುರಿಯಲ್ಲವೆಂದು ನಾವು ತಿಳಿಯಬೇಕು.

ಈ ವಾಕ್ಯ ಕನ್ನಡ ವಾಕ್ಯವಾದರೂ ಇಲ್ಲಿರುವ ಎಲ್ಲಾ ಪದಗಳು ಕನ್ನಡದವುಗಳಲ್ಲ.

ಮೋಟಾರು ಪದ ಆಂಗ್ಲ ಭಾಷೆಯಿಂದಲೂ, ಜಬರ್ದಸ್ತ್ ಪದ ಹಿಂದಿ ಭಾಷೆಯಿಂದಲೂ ಜೀವನ, ಮುಖ್ಯ ಪದಗಳು ಸಂಸ್ಕೃತದಿಂದಲೂ ಬಂದ ಪದಗಳಾಗಿದ್ದು ಉಳಿದವು ಕನ್ನಡ ಪದಗಳು.

ಹೀಗಾಗಿ ಕನ್ನಡ ಭಾಷೆಯಲ್ಲಿ ಕನ್ನಡದ ಪದಗಳಲ್ಲದೆ ಬೇರೆ ಭಾಷೆಗಳಿಂದ ಬಂದ ಪದಗಳೂ ಇವೆ.

ದೇಶ್ಯ ಪದ: ಆಯಾ ಭಾಷೆಯ ಮೂಲ (ಸ್ವಂತ) ಪದಗಳೇ ದೇಶ್ಯ ಪದಗಳು.

ದೇಶ್ಯ ಪದಗಳು :

ಪ್ರತಿಯೊಂದು ಭಾಷೆಯಲ್ಲೂ ಅದರದೇ ಆದ ಮೂಲ ಪದಗಳು ಇರುತ್ತವೆ ಎಂಬುದನ್ನು ಈಗಾಗಲೇ ತಿಳಿದುಕೊಂಡಿದ್ದೇವೆ. ಆ ಪದಗಳೇ ದೇಶ್ಯಪದಗಳು ಎಂದು ಕರೆಯಲ್ಪಡುತ್ತವೆ. ಸಾಮಾನ್ಯವಾಗಿ ಪ್ರತಿಭಾಷೆಯಲ್ಲೂ ದೇಹದ ಅಂಗಾಂಗಗಳಿಗೆ, ಸಂಬಂಧವಾಚಕಗಳಿಗೆ, ಪ್ರಾಣಿಗಳ ಹೆಸರಿಗೆ, ಪದಾರ್ಥಗಳಿಗೆ, ಸರ್ವನಾಮಗಳಿಗೆ, ಸಂಖ್ಯಾವಾಚಕಗಳಿಗೆ, ಧಾತುಗಳಿಗೆ ಆಯಾ ಭಾಷೆಯ ಸ್ವಂತ ಪದಗಳು ಇರುತ್ತವೆ.

ಕನ್ನಡದ ದೇಶ್ಯಪದಗಳು

ಅಂಗಾಂಗಗಳು
: ಕೈ, ತಲೆ, ಹೊಟ್ಟೆ, ಕಾಲು, ಬೆನ್ನು ಇತ್ಯಾದಿ.
ಸಂಬಂಧವಾಚಕಗಳು : ಅಪ್ಪ, ಅಮ್ಮ, ಅಜ್ಜ, ಅಜ್ಜಿ, ಚಿಕ್ಕಪ್ಪ, ಮಾವ, ಬಾವ, ಅಣ್ಣ, ತಂಗಿ, ತಮ್ಮ ಇತ್ಯಾದಿ.
ಪ್ರಾಣಿಗಳು : ಇಲಿ, ಹಾವು, ಎತ್ತು, ಎಮ್ಮೆ, ದನ, ಕೋಳಿ ಇತ್ಯಾದಿ.
ಪದಾರ್ಥಗಳು : ಬಾಗಿಲು, ಉಪ್ಪು, ಹಾಲು, ಚಿಲಕ ಇತ್ಯಾದಿ.
ಸರ್ವನಾಮಗಳು : ನಾನು, ಅವನು, ನೀನು, ಅವಳು, ಅದು, ಅವು, ಅವರು ಇತ್ಯಾದಿ.
ಸಂಖ್ಯಾವಾಚಕಗಳು : ಒಂದರಿಂದ ಒಂಬೈನೂರ ತೊಂಬತ್ತೊಂಬತ್ತರವರೆಗೆ ಸಂಖ್ಯೆಗಳು.
ಧಾತುಗಳು : ತಿನ್ನು, ಹೋಗು, ಕೇಳು, ಬಿಡು ಇತ್ಯಾದಿ.

ಸಂಖ್ಯಾಪದಗಳು (ಒಂದರಿಂದ ಒಂಬೈನೂರ ತೊಂಬತ್ತೊಂಬತ್ತರವರೆಗೆ), ದೇಹದ ಅಂಗಗಳ ಹೆಸರು(ಕೈ, ಕಾಲು, ಬಾಯಿ ಇತ್ಯಾದಿ), ವಿಭಕ್ತಿ ಪ್ರತ್ಯಯಗಳು, ಬಂಧುವಾಚಕ
ಪದಗಳು
(ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಚಿಕ್ಕಪ್ಪ, ಅಣ್ಣ ಇತ್ಯಾದಿ), ಮುಂತಾದ ನಿರ್ದಿಷ್ಟ ಪದಗಳು, ಪ್ರತಿಯೊಂದು ಭಾಷೆಯಲ್ಲೂ ಆಯಾ ಭಾಷೆಗಳ ಸ್ವಂತ ಪದಗಳಾಗಿರುತ್ತವೆ.


ಅನ್ಯದೇಶ್ಯ ಪದಗಳು :

ಸಂಸ್ಕೃತವನ್ನು ಹೊರತುಪಡಿಸಿ ಇತರ ಭಾಷೆಗಳಿಂದ ಕನ್ನಡ ಭಾಷೆಗೆ ಬಂದಿರುವ ಪದಗಳನ್ನು ಅನ್ಯದೇಶ್ಯ ಪದಗಳು ಎಂದು ಕರೆಯಲಾಗಿದೆ.

ವಿವಿಧ ಭಾಷೆಗಳಿಂದ ಬಂದಿರುವ ಅನ್ಯದೇಶ್ಯಪದಗಳ ಬಗ್ಗೆ ತಿಳಿಯೋಣ.

ಗ್ರೀಕ್ ಮತ್ತು ರೋಮನ್ ಭಾಷೆಗಳಿಂದ
– ದಮ್ಮಡಿ, ದಮಡಿ, ದಮ್ಮು, ದೀನಾರ ಗದ್ಯಾಣ-ಇತ್ಯಾದಿ.
ಫಾರ್ಸಿಯಿಂದ – ಅಬಕಾರಿ, ರಸ್ತೆ, ದವಾಖಾನೆ, ಚೌಕಾಷಿ, ಅಜಮಾಯಿಸಿ, ಆಮದು, ದಲ್ಲಾಳಿ – ಇತ್ಯಾದಿ
ಅರಬ್ಬೀಯಿಂದ – ಅಮಾನತು, ಅಸಲು, ಇನಾಮು, ಕಾಯ್ದೆ, ಗಲೀಜು, ತಕರಾರು, ತರಬೇತು, ನಕಲಿ ಇತ್ಯಾದಿ
ಪೋರ್ಚ್ಗೀಸ್‌ನಿಂದ – ಮೇಜು, ತಂಬಾಕು, ಅನಾನಸು, ಸಾಬೂನು, ಚೊಂಬು, ಇಸ್ತಿç, ರಸೀದಿ – ಇತ್ಯಾದಿ.
ಉರ್ದುವಿನಿಂದ – ಕಿಮ್ಮತ್ತು, ತಾರೀಕು, ತಾಲೂಕು, ಅಹವಾಲು, ಇಲಾಖೆ, ದರ್ಜೆ, ಬಂದೂಕು, ರುಜು, ಶುರು, ಶಾಮೀಲು – ಇತ್ಯಾದಿ.
ಹಿಂದೂಸ್ಥಾನಿ – ಅರ್ಜಿ, ಕಚೇರಿ,ಕಾರ್ಖಾನೆ, ಸಲಾಮು, ದರ್ಬಾರು, ಕುರ್ಚಿ, ,ಕಾಗದ, ಹುಕುಂ – ಇತ್ಯಾದಿ.
ಇಂಗ್ಲಿಷ್‌ನಿಂದ – ಬಸ್ಸು, ಕಾರು, ಕಾಲೇಜು, ಲೈಟು, ಪೆನ್ನು – ಇತ್ಯಾದಿ.

ಹೀಗೆ ಕನ್ನಡ ಭಾಷೆಗೆ ಅನ್ಯಭಾಷಾ ಪದಗಳು ಬಂದಾಗ ಅವು ಕನ್ನಡದ ಜಾಯಮಾನಕ್ಕೆ ತಕ್ಕಂತೆ ಬದಲಾವಣೆಗೊಂಡು ಬಳಕೆಯಾಗುತ್ತವೆ.

ತತ್ಸಮ- ತದ್ಭವ

ಸಂಸ್ಕೃತದಿಂದ ಕನ್ನಡಕ್ಕೆ ಸಾಕಷ್ಟು ಪದಗಳು ಬಂದಿವೆ. ಹೀಗೆ ಸಂಸ್ಕೃತದಿಂದ ಬಂದ ಪದಗಳಲ್ಲಿ ಕೆಲವು ಅಲ್ಪಸ್ವಲ್ಪ ಬದಲಾವಣೆಗೊಂಡು ಬಂದರೆ ಇನ್ನು ಕೆಲವು ಪೂರ್ತಿ ಬದಲಾವಣೆಗೊಂಡು ಬಂದಿವೆ. ಹೀಗೆ ಸಂಸ್ಕೃತದಿಂದ ಬಂದಿರುವ ಪದಗಳನ್ನು ತತ್ಸಮ-ತದ್ಭವಗಳೆಂದು ಕರೆಯುವ ರೂಢಿಯಿದೆ.


1. ತತ್ಸಮಗಳು :

ಸಂಸ್ಕೃತದಿಂದ ಬದಲಾವಣೆ ಹೊಂದದೆ ಕನ್ನಡದಲ್ಲಿ ಬಳಸಲ್ಪಡುವ ಶಬ್ದಗಳು ತತ್ಸಮಗಳು.

ತತ್ ಎಂದರೆ ಅದಕ್ಕೆ, ಸಮ ಎಂದರೆ ಸಮಾನ ಎಂದರ್ಥ. ಹಾಗಾಗಿ ತತ್ಸಮ ಎಂದರೆ ಸಂಸ್ಕೃತಕ್ಕೆ ಸಮಾನವಾದುದು ಎಂದರ್ಥ. ಇವುಗಳನ್ನು ಸಮಸಂಸ್ಕೃತಗಳೆಂದೂ ಕರೆಯುವುದುಂಟು.

ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಯಾವುದೇ ಬದಲಾವಣೆ ಹೊಂದದೆ ಹಾಗೆಯೆ ಬಂದು ಸೇರಿದ ಪದಗಳೂ ಇವೆ.

ಉದಾ : ರಾಮ, ಭೀಮ, ವಸಂತ, ಚಂದ್ರ, ಶ್ರೀ, ಕರ್ತೃ, ಸ್ತ್ರೀ – ಇತ್ಯಾದಿ ಪದಗಳು.

ಮಳೆ, ಶಾಲೆ, ಆಶೆ, ನಿದ್ರೆ ಇತ್ಯಾದಿ ‘ಆ’ ಕಾರಂತ ಪದಗಳು ‘ಎ’ ಕಾರಂತವಾಗಿ ಬದಲಾವಣೆಗೊಂಡ ಪದಗಳೂ ಇವೆ.

ಇಂತಹ ಪದಗಳನ್ನು ‘ತತ್ಸಮ’ಗಳೆಂದು ಕರೆಯಲಾಗುತ್ತದೆ.


2. ತದ್ಭವಗಳು :

ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಅಲ್ಪಸ್ವಲ್ಪ ಇಲ್ಲವೇ ಪೂರ್ಣ ಬದಲಾವಣೆ ಹೊಂದಿರುವ ಪದಗಳೇ ತದ್ಭವಗಳು.

ತತ್’ ಎಂದರೆ ಅದರಿಂದ ಅಂದರೆ, ಸಂಸ್ಕೃತದಿಂದ, ‘ಭವ’ ಎಂದರೆ ಹುಟ್ಟಿದ ಅಂದರೆ ‘ಸಂಸ್ಕೃತದಿಂದಹುಟ್ಟಿದ್ದು‘, ಎಂದರ್ಥ.

ಅಲ್ಪಸ್ವಲ್ಪ ಬದಲಾವಣೆಗೊಂಡ ತದ್ಭವರೂಪಗಳು : ಶಶಿ-ಸಸಿ, ಶಿರ-ಸಿರ, ಕಲಶ-ಕಳಸ, ಅಂಕುಶ- ಅಂಕುಸ, ವರ್ಷ-ವರುಸ ಇತ್ಯಾದಿ

ಪೂರ್ಣ ವ್ಯತ್ಯಾಸ ಹೊಂದಿದ ತದ್ಭವರೂಪಗಳು : ದ್ಯೂತ-ಜೂಜು, ವಂಧ್ಯಾ-ಬAಜೆ, ವಿದ್ಯಾಧರ-ಬಿಜ್ಜೋದರ, ವೈಶಾಖ-ಬೇಸಗೆ, ಕುಠಾರ-ಕೊಡಲಿ, ಪಾದುಕಾ-ಹಾವುಗೆ, ಅರ್ಕ-ಎಕ್ಕ ಇತ್ಯಾದಿ.

ಸಂಸ್ಕೃತ ರೂಪವ್ಯತ್ಯಾಸ ರೂಪ
ಯಾತ್ರೆ ಜಾತ್ರೆ
ಉದ್ಯೋಗ ಉಜ್ಜುಗ
ಘಂಟಾ ಗಂಟೆ
ವಸತಿ ಬಸದಿ
ಶರ್ಕರಾ ಸಕ್ಕರೆ
ಯೋಧ ಜೋದ
ಛಂದ ಚಂದ
ಆಕಾಶ ಆಗಸ
ತ್ರಿಪದಿ ತಿವದಿ
ರಾಕ್ಷಸ ರಕ್ಕಸ

Spread the Knowledge

You may also like...

Leave a Reply

Your email address will not be published. Required fields are marked *