ಸಂಸ್ಕೃತ ಕವಿಗಳು ಮತ್ತು ಅವರ ಪ್ರಸಿದ್ಧ ಕೃತಿಗಳು /ಗ್ರಂಥಗಳು

ಸಂಸ್ಕೃತ ಕವಿಗಳು


ಪ್ರಾಚೀನ ಸಂಸ್ಕೃತ ಸಾಹಿತ್ಯವು ವಿಶ್ವದ ಅತ್ಯಂತ ಶ್ರೀಮಂತ ಮತ್ತು ವೈವಿಧ್ಯಮಯ ಸಾಹಿತ್ಯಗಳಲ್ಲಿ ಒಂದಾಗಿದೆ. ಇದು ಅನೇಕ ಪ್ರತಿಭಾವಂತ ಕವಿಗಳನ್ನು ಉತ್ಪಾದಿಸಿದೆ, ಅವರ ಕೃತಿಗಳು ಶತಮಾನಗಳಿಂದಲೂ ಜನಪ್ರಿಯವಾಗಿವೆ ಮತ್ತು ಅವು ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಒಂದು ಮಹತ್ವದ ಸ್ಥಾನವನ್ನು ಹೊಂದಿವೆ.

ಕವಿ ಗ್ರಂಥಗಳು
ವಾಲ್ಮೀಕಿ ರಾಮಾಯಣ
ವ್ಯಾಸ ಭಾರತ (ಮಹಾಭಾರತ)
ಪಾಣಿನಿ ಅಷ್ಟಾಧ್ಯಾಯೀ, ಜಾಂಬವತೀಜಯಮ್, ಪಾತಾಳವಿಜಯ
ಭಾಸ ಸ್ವಪ್ನವಾಸವದತ್ತಾ
ರಾಮಿಲ, ಸೌಮಿಲಶೂದ್ರಕ ಕಥೆ
ಕಾಳಿದಾಸ (೧)ಶಾಕುಂತಲ, ವಿಕ್ರಮೋರ್ವಶೀಯ, ಮಾಲವಿಕಾಗ್ನಿ ಮಿತ್ರ
ಕಾಳಿದಾಸ (೨)ರಘುವಂಶ, ಕುಮಾರಸಂಭವ, ಮೇಘದೂತ
ಶಾತವಾಹನ /ಸಾತವಾಹನ ಗಾಥಾಸಪ್ತಸತಿ / ಗಾಥಾಸಪ್ತಶತಿ
ಗುಣಾಢ್ಯ ಬೃಹತ್ಕಥೆ
ಅಶ್ವಘೋಷ ಬುದ್ಧಚರಿತೆ, ಸೌಂದರಾನಂದಕಾವ್ಯ, ಸೂತ್ರಾಲಂಕಾರಶಾಸ್ತ್ರ, ವಜ್ರಸೂಚೀ
ಶೂದ್ರಕ ಮೃಚ್ಛಕಟಿಕ, ಪದ್ಮಪ್ರಾಭೃತಕ
ಚಂದ್ರಕವಿ ನಾಟ್ಯಪ್ರಬಂಧ
ಅಮರಸಿಂಹ ನಾಮಲಿಂಗಾನುಶಾಸನ
ಭಾಮಹ ಕಾವ್ಯಾಲಂಕಾರ
ಭತೃಹರಿ ಶತಕತ್ರಯ
ಬುದ್ಧಘೋಷ ಪದ್ಯಚೂಡಾಮಣಿ
ವಿಷ್ಣುಶರ್ಮ ಪಂಚತಂತ್ರ
ಕಾಳಿದಾಸ (೩)ಋತುಸಂಹಾರ, ಶೃಂಗಾರತಿಲಕ,
ದಿಗ್ನಾಗ ಕುಂಡಮಾಲಾ
ದಂಡಿ ಕಾವ್ಯಾದರ್ಶ, ಛಂದೋವಿಚಿತಿ, ಕಲಾ ಪರಿಚ್ಛೇದ
ಸುಬಂಧು ವಾಸವದತ್ತಾ
ಭಾರವಿ ಕಿರಾತಾರ್ಜುನೀಯ
ಘಟಕರ್ಪರ ಘಟಕರ್ಪರಕಾವ್ಯ (ನೀತಿಸಾರ)
ಶಾಶ್ವತ ಅನೇಕಾರ್ಥಸಮುಚ್ಚಯ
ಶ್ರೀಹರ್ಷ ರತ್ನಾವಳೀ , ಪ್ರಿಯದರ್ಶಿಕಾ, ನಾಗಾನಂದ
ಬಾಣಭಟ್ಟ ಹರ್ಷಚರಿತ, ಕಾದಂಬರೀ (ಪೂರ್ವಭಾಗ), ಚಂಡೀಶತಕ
ಭೂಷಣಭಟ್ಟ ಕಾದಂಬರೀ (ಉತ್ತರಭಾಗ)
ಮಯೂರ ಮಯೂರಶತಕ,ಸೂರ್ಯಶತಕ
ಕುಮಾರದಾಸ ಜಾನಕೀಹರಣ
ಭಟ್ಟಿ ಭಟ್ಟಿಕಾವ್ಯ (ರಾವಣವಧೆ)
ಮಹೇಂದ್ರ ವಿಕ್ರಮವರ್ಮ ಮತ್ತವಿಲಾಸ ಪ್ರಹಸನ
ಭಟ್ಟ ಭವಭೂತಿ ಮಾಲತೀಮಾಧವ, ಮಹಾವೀರಚರಿತೆ, ಉತ್ತರರಾಮಚರಿತೆ
ವಾಕ್ಪತಿ ಗೌಢವಧ
ಭಟ್ಟ ನಾರಾಯಣ ವೇಣೀಸಂಹಾರ
ವಿಶಾಖದತ್ತ ಮುದ್ರಾರಾಕ್ಷಸ
ಮುರಾರಿ ಅನರ್ಘರಾಘವ
ದಾಮೋದರಗುಪ್ತ ಕುಟ್ಟನೀಮತ
ಮಾಘ ಶಿಶುಪಾಲವಧ
ಅಮರುಕ ಅಮರುಶತಕ
ಆರ್ಯಸೂರಿ ವಿಜಯವಿಕ್ರಮವ್ಯಾಯೋಗ
ತ್ರಿವಿಕ್ರಮ ಭಟ್ಟ ನಳಚಂಪು (ದಮಯಂತೀ ಕಥಾ)
ಶಕ್ತಿಭದ್ರ ಅಶ್ಚರ್ಯಚೂಡಾಮಣಿ
ಕವಿರಾಜ ರಾಘವಪಾಂಡವೀಯ
ವಾಮನ ಕಾವ್ಯಾಲಂಕಾರಸೂತ್ರವೃತ್ತಿ
ಪ್ರವರಸೇನ ಸೇತುಬಂಧ

ಶ್ರೀಯುತ ಎಮ್ . ಎನ್ . ಶ್ರೀನಿವಾಸ ಅಯ್ಯಂಗಾರ್ ಅವರ ಕೃತಿ “ಸಂಸ್ಕೃತ ಕವಿಚರಿತೆ” ಪುಸ್ತಕದಿಂದ ಆರಿಸಿ ಲೇಖನ


Spread the Knowledge

You may also like...

Leave a Reply

Your email address will not be published. Required fields are marked *