ಕನ್ನಡ ವ್ಯಾಕರಣ – ಕೃದಂತಗಳು

ಕೃದಂತಗಳು

ನಮ್ಮ ಮಾತುಗಳಲ್ಲಿ ಮಾಡಿದ, ಹೋಗುವ, ಬರೆಯುವ ಮುಂತಾದ ಪದಗಳನ್ನು ಬಳಸುತ್ತೇವೆ.

ಇಲ್ಲಿ ಮಾಡಿದ ಎಂಬ ಪದವನ್ನು ಬಿಡಿಸಿದಾಗ ಮಾಡು+ದ+ಅ
ಹಾಗೆಯೇ ‘ಹೋಗುವ’ ಪದದಲ್ಲಿ ಹೋಗು+ವ+ಅ,
ಬರೆಯುವ’ ಪದದಲ್ಲಿ ಬರೆ+ಉವ+ಅ,
ಎಂಬ ಭಾಗಗಳನ್ನು ನೋಡಬಹುದು.

ಇಲ್ಲಿ ಮೊದಲನೆಯದು ‘ಧಾತು’ ಎಂತಲೂ ಎರಡನೆಯದು ಮೂರನೆಯದು ಪ್ರತ್ಯಯಗಳೆಂತಲೂ ಕರೆಯಲ್ಪಡುತ್ತವೆ.

ಧಾತುಗಳಿಗೆ ಈ ಪ್ರತ್ಯಯಗಳು ಸೇರದ ರೂಪವನ್ನು ನಾಮಪ್ರಕೃತಿಗಳೆಂದು ಕರೆಯುತ್ತಾರೆ.
ಇವುಗಳನ್ನು ಕೃದಂತನಾಮಪ್ರಕೃತಿಗಳೆಂದು ಕರೆಯಲಾಗುವುದು.

ಕೃದಂತ ನಾಮಪ್ರಕೃತಿಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿದಾಗ ಅವುಗಳು ಕೃದಂತನಾಮಪದಗಳೆನಿಸುತ್ತವೆ.

ಈ ಉದಾಹರಣೆಗಳ ಕೊನೆಯಲ್ಲಿರುವ ‘’ ಎಂಬುದೇ ಕೃತ್‌ಪ್ರತ್ಯಯ.

ಸೂತ್ರ : ಧಾತುಗಳಿಗೆ ಕೃತ್‌ಪ್ರತ್ಯಯಗಳು ಸೇರಿ ಕೃದಂತಗಳೆನಿಸುತ್ತವೆ. ಇದಕ್ಕೆ ಕೃನ್ನಾಮಗಳೆಂಬ ಹೆಸರೂ ಇದೆ.

ಕೃದಂತಗಳಲ್ಲಿ ಮೂರು ವಿಧಗಳಿವೆ.

1. ಕೃದಂತನಾಮ,
2. ಕೃದಂತಭಾವನಾಮ,
3. ಕೃದಂತಾವ್ಯಯಗಳೆಂದು

ಕೃದಂತಗಳು
ಕೃದಂತಗಳು


ಕೃದಂತನಾಮಗಳು :-

ಧಾತುಗಳಿಗೆ ಕರ್ತೃ ಮೊದಲಾದ ಅರ್ಥದಲ್ಲಿ ಸಾಮಾನ್ಯವಾಗಿ ‘ಅ’ ಎಂಬ ಕೃತ್‌ಪ್ರತ್ಯಯ ಬರುವುದು. ಧಾತುವಿಗೂ ಕೃತ್ ಪ್ರತ್ಯಯಕ್ಕೂ ಮಧ್ಯದಲ್ಲಿ ಕಾಲಸೂಚಕ ಪ್ರತ್ಯಯಗಳು ಸೇರಿಕೊಳ್ಳುತ್ತವೆ. ಇವುಗಳನ್ನೇ ಕೃದಂತನಾಮಗಳೆನ್ನುವರು.

ಉದಾ :

ವರ್ತಮಾನಕೃದಂತಕ್ಕೆ :
ಓಡು+ವ+ಅ = ಓಡುವ
ಬಾಳು+ವ+ಅ = ಬಾಳುವ
ಬರೆ+ಉವ+ಅ = ಬರೆಯುವ

ಭೂತಕಾಲಕ್ಕೆ :
ಓಡು+ದ+ಅ = ಓಡಿದ
ಬಾಳು+ದ+ಅ = ಬಾಳಿದ
ಬರೆ+ದ+ಅ = ಬರೆದ

ನಿಷೇಧ ಕೃದಂತಕ್ಕೆ:
ಓಡು+ಅದ+ಅ = ಓಡದ
ಬಾಳು+ಅದ+ಅ = ಬಾಳದ
ಬರೆ+ಅದ+ಅ = ಬರೆಯದ

ಇವುಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿದಾಗ ಲಿಂಗಗಳಿಗನುಗುಣವಾಗಿ ಆಗುವ ಬದಲಾವಣೆಗಳನ್ನು ಗಮನಿಸಿ.

ಓಡುವ+ಅವನು+ಉ = ಓಡುವವನು
ಓಡುವ+ಅವನು+ಇಂದ = ಓಡುವವನಿಂದ
ಓಡುವ+ಅವಳು+ಅಲ್ಲಿ = ಓಡುವವಳಲ್ಲಿ
ಓಡುವ+ಉದು+ಅನ್ನು = ಓಡುವುದನ್ನು


ಕೃದಂತಭಾವನಾಮ :

ಈ ವಾಕ್ಯಗಳನ್ನು ಗಮನಿಸಿ.

ಆತನ ಓಟ ಚೆನ್ನಾಗಿತ್ತು
ಗಡಿಗೆಯ ಮಾಟ ಸೊಗಸಾಗಿದೆ
ಅದರ ನೆನಪು ಇಲ್ಲ
ಇದರ ಕೊರೆತ ಹಸನಾಗಿದೆ.

ಈ ವಾಕ್ಯಗಳಲ್ಲಿ ಗೆರೆ ಎಳೆದಿರುವ ಪದಗಳು ವಿಶೇಷ ರೀತಿಯ ಅರ್ಥಗಳನ್ನು ನೀಡುತ್ತವೆ.

ಓಡುವ ರೀತಿಯೇ – ಓಟ – ಓಡು + ಟ
ಮಾಡಿರುವ ರೀತಿಯೇ – ಮಾಟ – ಮಾಡು + ಟ
ನೆನೆಯುವ ರೀತಿಯೇ – ನೆನಪು – ನೆನೆ + ಪು
ಕೊರೆದಿರುವಿಕೆಯೇ – ಕೊರೆತ – ಕೊರೆ + ತ

ಇವೆಲ್ಲವೂ ಕ್ರಿಯೆಯ ಭಾವವನ್ನು ತಿಳಿಸುವುದರಿಂದ ಇವುಗಳನ್ನು ಕೃದಂತ ಭಾವನಾಮ ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾವಕೃದಂತಗಳೆಂದೂ ಕರೆಯುವ ರೂಢಿ ಇದೆ.

ಸೂತ್ರ :- ಧಾತುಗಳ ಮೇಲೆ ಭಾವಾರ್ಥದಲ್ಲಿ ಕೃತ್ ಪ್ರತ್ಯಯಗಳು ಸೇರಿದಾಗ ಕೃದಂತ ಭಾವನಾಮಗಳಾಗುತ್ತವೆ.

ಉದಾ :-

ಕೃದಂತ ಭಾವನಾಮ
ಕೃದಂತ ಭಾವನಾಮ

ಹೀಗೆ… ಉದು, ವಿಕೆ, ಇಕೆ, ಇಗೆ, ಅವು, ವು, ತ, ಟ, ವಳಿ, ಪು, ಅಲು, ಎ, ಅಕೆ, ವಳಿಕೆ, ವಣಿಗೆ ಎಂಬ ಕೃತ್‌ಪ್ರತ್ಯಯಗಳು ಭಾವಾರ್ಥದಲ್ಲಿ ಧಾತುಗಳಿಗೆ ಸೇರುವ ಮೂಲಕ ಕೃದಂತ ಭಾವನಾಮಗಳಾಗುತ್ತವೆ.


ಕೃದಂತಾವ್ಯಯಗಳು

ಧಾತುಗಳಿಂದ ಹುಟ್ಟಿ ಅವ್ಯಯದ ಗುಣವನ್ನು ಪಡೆದಂತಹ ಪದಗಳನ್ನು ಕೃದಂತಾವ್ಯಯಗಳು ಅಥವಾ ಅವ್ಯಯಕೃದಂತಗಳೆಂದು ಕರೆಯಲಾಗುತ್ತದೆ.

ಉದಾ :-
ಉಣ್ಣದೆ, ಬರುತ್ತ, ಬರೆದು, ಹೋಗಲಿಕ್ಕೆ.


ಸೂತ್ರ :- ಧಾತುಗಳ ಮೇಲೆ ಉತ್ತ, ಅದೆ, ದರೆ, ಅಲು, ಅಲಿಕೆ, ಅ, ಇ, ದು ಇತ್ಯಾದಿ ಪ್ರತ್ಯಯಗಳು ಸೇರಿ ಕೃದಂತಾವ್ಯಯಗಳಾಗುತ್ತವೆ.


ಉದಾ :-

ಮಾಡು + ಉತ್ತ = ಮಾಡುತ್ತ
ಮಾಡು + ಅದೆ = ಮಾಡದೆ
ಮಾಡು + ಅಲು = ಮಾಡಲು
ಮಾಡು + ಅಲಿಕ್ಕೆ = ಮಾಡಲಿಕ್ಕೆ
ಮಾಡು + ಅ = ಮಾಡ
ಮಾಡು + ಇ = ಮಾಡಿ
ಬರೆ + ದು = ಬರೆದು


Spread the Knowledge

You may also like...

2 Responses

  1. Shreekanth says:

    Super and helpfull

Leave a Reply

Your email address will not be published. Required fields are marked *