Monthly Archive: August 2021

ಕೃದಂತಗಳು

ಕನ್ನಡ ವ್ಯಾಕರಣ – ಕೃದಂತಗಳು

ಕೃದಂತಗಳು ನಮ್ಮ ಮಾತುಗಳಲ್ಲಿ ಮಾಡಿದ, ಹೋಗುವ, ಬರೆಯುವ ಮುಂತಾದ ಪದಗಳನ್ನು ಬಳಸುತ್ತೇವೆ. ಇಲ್ಲಿ ಮಾಡಿದ ಎಂಬ ಪದವನ್ನು ಬಿಡಿಸಿದಾಗ ಮಾಡು+ದ+ಅ ಹಾಗೆಯೇ ‘ಹೋಗುವ’ ಪದದಲ್ಲಿ ಹೋಗು+ವ+ಅ,‘ಬರೆಯುವ’ ಪದದಲ್ಲಿ ಬರೆ+ಉವ+ಅ, ಎಂಬ ಭಾಗಗಳನ್ನು ನೋಡಬಹುದು. ಇಲ್ಲಿ ಮೊದಲನೆಯದು ‘ಧಾತು’ ಎಂತಲೂ ಎರಡನೆಯದು ಮೂರನೆಯದು ಪ್ರತ್ಯಯಗಳೆಂತಲೂ ಕರೆಯಲ್ಪಡುತ್ತವೆ. ಧಾತುಗಳಿಗೆ ಈ...

ಱಳ, ಕುಳ, ಮತ್ತು ಕ್ಷಳ

ಕನ್ನಡ ವ್ಯಾಕರಣ – ಹಳಗನ್ನಡ

ಕನ್ನಡ ವರ್ಣಮಾಲೆಯಲ್ಲಿ ಹಿಂದೆ ಮೂರು ರೀತಿಯ ‘ಳ’ ಕಾರಗಳಿದ್ದುವು. ೞ ’ ಈ ‘ಳ’ ಕಾರವೇ ಱಳ. ಸೂೞ್ ಪದಕ್ಕೆ ಸರದಿ, ಪಾಳಿ ಎಂಬರ್ಥವಿದೆ. ‘ಳ’ ಅಕ್ಷರವೇ ಕುಳ. ಎಳ- ಚಿಕ್ಕ, ಸಣ್ಣ; ಕಳಿ- ಪಕ್ವವಾಗು, ಮಾಗು ಎಂಬ ಅರ್ಥವುಳ್ಳ ಪದಗಳಿವು. ಸಂಸ್ಕೃತದ ‘ಲ’ ಕಾರ ಕನ್ನಡಕ್ಕೆ ಬರುವಾಗ ‘ಳ ‘ ಕಾರ ರೂಪವನ್ನು ಹೊಂದುತ್ತದೆ. ಇದೇ ಕ್ಷಳ,

ತದ್ಧಿತಾಂತಗಳು

ಕನ್ನಡ ವ್ಯಾಕರಣ – ತದ್ಧಿತಾಂತಗಳು

ತದ್ಧಿತಾಂತಗಳು ಈ ವಾಕ್ಯಗಳನ್ನು ಗಮನಿಸಿ. — ಮೋಸವನ್ನು ಮಾಡುವವನು ಇದ್ದಾನೆ. — ಕನ್ನಡವನ್ನು ಬಲ್ಲವನು ಬಂದನು. ಮೊದಲ ವಾಕ್ಯದಲ್ಲಿ ಇರುವ ಮೋಸವನ್ನು ಎಂಬ ಪದದ ಮುಂದೆ ಮಾಡುವವನು ಎಂಬ ಅರ್ಥದಲ್ಲಿ ‘ಗಾರ’ ಎಂಬ ಪ್ರತ್ಯಯವನ್ನು ಸೇರಿಸಿ ಮೋಸಗಾರ ಎಂಬ ಪದವನ್ನು ಮಾಡಬಹುದು. ಅಂದರೆ ಮೋಸವನ್ನು + (ಮಾಡುವವನು)...

ಭಾಮಿನಿ ಷಟ್ಪದಿ

ಕನ್ನಡ ವ್ಯಾಕರಣ – ಷಟ್ಪದಿ

ಷಟ್ಪದಿ 13ನೇ ಶತಮಾನದಲ್ಲಿ ಕಾವ್ಯ ಮಾಧ್ಯಮದ ಯುವರಾಣಿಯಾಗಿ ವಿಜೃಂಭಿಸಿದ ಷಟ್ಪದಿಯು, ಜನಪದ ಸಾಹಿತ್ಯದಲ್ಲಿ ತ್ರಿಪದಿಗೆ ದೊರೆತ ಸ್ಥಾನವನ್ನು ನಡುಗನ್ನಡದಲ್ಲಿ ಪಡೆಯಿತು. ಷಟ್ಪದಿಯ ಮೊದಲ ಕುರುಹು ದೊರೆಯುವುದು ನಾಗವರ್ಮನ ಛಂದೋಬುಧಿಯಲ್ಲಿ. ಅಂಶಗಣಾನ್ವಿತವಾಗಿದ್ದ ಷಟ್ಪದಿಯ ಲಕ್ಷಣವನ್ನು ಅಲ್ಲಿ ಹೀಗೆ ಹೇಳಲಾಗಿದೆ : ಮಂದರ ಧರಗಣ೦ ಬಂದಿರ್ಕಾರಂತ್ಯದೊಳ್‌ ಕುಂದದೆ ನೆಲಸುಗೆ ಮದನಹರಂ...

ಕನ್ನಡ ವ್ಯಾಕರಣ – ರಗಳೆ

ಕನ್ನಡ ವ್ಯಾಕರಣ – ರಗಳೆ

‘ರಗಳೆ’ ಎಂಬುದು ‘ರಘಟಾ’ ಎಂಬ ಸಂಸ್ಕೃತ ಪದದ ತದ್ಭವರೂಪ. ಕನ್ನಡದಲ್ಲಿ ಸಾಮಾನ್ಯವಾಗಿ ಮೂರು ವಿಧದ ರಗಳೆಗಳು ಪ್ರಸಿದ್ಧವಾಗಿವೆ.
ಉತ್ಸಾಹ ರಗಳೆ, ಮಂದಾನಿಲ ರಗಳೆ ಮತ್ತು, ಲಲಿತ ರಗಳೆ

ವರ್ತಮಾನಕಾಲ

ಕನ್ನಡ ವ್ಯಾಕರಣ – ಕಾಲಗಳು

ಕಾಲಗಳು : ನಮೂದಿತ ವಾಕ್ಯಗಳನ್ನು ಗಮನಿಸಿ: ಅವನು ಶಾಲೆಗೆ ಹೋಗುತ್ತಾನೆ. ಅವನು ಶಾಲೆಗೆ ಹೋದನು. ಅವನು ಶಾಲೆಗೆ ಹೋಗುವನು. ಮೂರೂ ವಾಕ್ಯಗಳಲ್ಲಿ ಹೋಗು ಎಂಬ ಪದ ಧಾತುವಾಗಿದ್ದು ಇದರ ಜತೆಗೆ ಮೊದಲ ವಾಕ್ಯದಲ್ಲಿ -ಉತ್ತ ಎರಡನೆಯ ವಾಕ್ಯದಲ್ಲಿ -ದ ಹಾಗೂ ಮೂರನೆಯ ವಾಕ್ಯದಲ್ಲಿ -ವ ಎಂಬ ಪ್ರತ್ಯಯ...

ಕ್ರಿಯಾಪದ

ಕನ್ನಡ ವ್ಯಾಕರಣ – ಕ್ರಿಯಾಪದ

—ತಾಯಿಯು ಅಡುಗೆಯನ್ನು ಮಾಡುತ್ತಾಳೆ.
—ತಂದೆಯು ಕೆಲಸವನ್ನು ಮಾಡಿದನು.
—ಅವನು ಊಟವನ್ನು ಮಾಡುವನು.
—ದೇವರು ಒಳ್ಳೆಯದನ್ನು ಮಾಡಲಿ.
ಈ ವಾಕ್ಯಗಳಲ್ಲಿ ಅಡಿಗೆರೆ ಎಳೆದಿರುವ ಪದಗಳು ಕ್ರಿಯೆ ಪೂರ್ಣಗೊಂಡಿರುವುದನ್ನು ಸೂಚಿಸುತ್ತವೆ.
ಹೀಗೆ ಕ್ರಿಯೆ ಪೂರ್ಣಗೊಂಡಿದೆ ಎಂಬ ಅರ್ಥವನ್ನು ಸೂಚಿಸಬಲ್ಲ ಪದವೇ ಕ್ರಿಯಾಪದ.

The Story of Dharmavyadha

The story of Dharmavyadha – Kannada Summary

ಒಂದಾನೊಂದು ಕಾಲದಲ್ಲಿ, ಒಂದು ಊರಲ್ಲಿ ಕೌಶಿಕ ಅಂತ ಒಬ್ಬ ಇದ್ದ . ಅವನು ವೇದ ಮತ್ತು ಶಾಸ್ತ್ರಗಳಲ್ಲಿ ವಿದ್ವಾಂಸನಾಗಿದ್ದ . ಎಲ್ಲರಿಗಿಂತ ತಾನೇ ಹೆಚ್ಚು ಕಲಿಯಬೇಕೆಂದು ಅವನ ಇಷ್ಟ . ಆದ್ದರಿಂದ ಅವರು ತಮ್ಮ ಮನೆ, ಪರಿವಾರ ಎಲ್ಲವನ್ನು ಬಿಟ್ಟು ಹಿಚ್ಚಿನ ಅಧ್ಯಯನದತ್ತ ಗಮನಹರಿಸಲು ಕಾಡಿಗೆ ಹೋದನು .

boat

The Stolen Boat, a poem by William Wordsworth – Kannada Translation

ವಿಲೋ ಮರಕ್ಕೆ(ನೀರುಹಬ್ಬೆಗಿಡ) ಕಟ್ಟಿದ ಆ ಪುಟ್ಟ ದೋಣಿಯನು
ಅದರ ಮಾಮೂಲಿನ ಸ್ಥಳವಾದ ಆ ಬಂಡೆಯ ಗುಹೆಯೊಳಗೆ
ಸೀದಾ ಅದರ ಸರಪಳಿಯನ್ನು ಬಿಚ್ಚಿದ ನಾನು ಕಾಲಿಟ್ಟೆ ಅದರೊಳಗೆ
ತೀರದಿಂದ ತಳ್ಳಿದೆ. ಅದೊಂದು ರಹಸ್ಯದ ಕೃತ್ಯವಾಗಿತ್ತು

The elixir of life by C V Raman – Kannada Summary

ಯುಗಯುಗಗಳಿಂದ ಮನುಷ್ಯನು ಮರಣವನ್ನು ಜಯಿಸಿ, ಅಮರತ್ವವ ಕಾಲ್ಪನಿಕ ಅಮೃತಕ್ಕಾಗಿ, ವ್ಯರ್ಥ ಪ್ರಯತ್ನಗಳನ್ನು ಮಾಡುತ್ತಿದ್ದಾನೆ. ಆದರೆ ನಿಜವಾದ ಜೀವನಾಮೃತವು ನಮ್ಮ ಕೈಗಳಿಗೆ ಎಟಕುವಂತೆಯೇ ಇದೆ, ಅದು ಅತಿ ಸಾಮಾನ್ಯವಾಗಿ ಸಿಗುವ ದ್ರವ, ನೀರು !