ಕರ್ನಾಟಕ ಸಂಪೂರ್ಣ ಇತಿಹಾಸ -ಸಂಕ್ಷಿಪ್ತ ರೂಪ

ಕರ್ನಾಟಕದ ಮೇರೆ 

ಒಂದು ಸಾವಿರ ವರ್ಷಗಳ ಹಿಂದೆ ಆಳಿ ಹೋದ ರಾಷ್ಟ್ರಕೂಟರ ನೃಪತುಂಗನು “ಕಾವೇರಿಯಿಂದ ಗೋದಾವರಿ ನದಿಯವರೆಗೆ ಕನ್ನಡ ನಾಡಿನ ಮೇರೆ” ಎಂದು ತನ್ನ ಗ್ರಂಥದಲ್ಲಿ ಬರೆದಿರುವನು; ಆದರೆ ಅದು “ಕಾವೇರಿಯಿಂದ ಕೃಷ್ಣಾನದಿಯ ವರೆಗೆ ಬಂದು ನಿಂತಿದೆ. ಇಂದು ದಕ್ಷಿಣ ಭಾರತದ ಉಳಿದೆಲ್ಲ ರಾಜ್ಯಗಳ ಜೊತೆ ತನ್ನ ಮೇರೆಗಳನ್ನು ಹೊಂಚಿಕೊಳ್ಳುವ ರಾಜ್ಯವೆಂದರೆ ಕರ್ನಾಟಕ ಒಂದೇ. 

ವಿಜಯನಗರ ಸಾಮ್ರಾಜ್ಯ , ಕ್ರಿ. ಶ . 1446, 1520

ಪ್ರಾಚೀನ ಕರ್ನಾಟಕ 

ಮೌರ್ಯರು  

ಮೌರ್ಯ ಕುಲದ ಚಕ್ರವರ್ತಿಯಾದ ಚಂದ್ರಗುಪ್ತನ ( ಕ್ರಿ. ಶ.ಪೂ.  184) ಕಾಲದಿಂದ ಕರ್ನಾಟಕದ ಇತಿಹಾಸವು ದೊರೆಯುತ್ತದೆ. ಆಗ ಕರ್ನಾಟಕವು ಮೌರ್ಯರ ರಾಜ್ಯಕ್ಕೆ ಸೇರಿತ್ತು. ಚಂದ್ರಗುಪ್ತನು ತನ್ನ ಗುರುಗಳಾದ ಭದ್ರಬಾಹು ಎಂಬ ಜೈನ ಮುನಿಗಳೊಡನೆ, ಶ್ರವಣಬೆಳಗೊಳಕ್ಕೆ ಬಂದು ಇದ್ದು ಅಲ್ಲಿಯೇ ದೇಹವಿತ್ತನು. ಮುಂದೆ. ಚಂದ್ರಗುಪ್ತನ ಮೊಮ್ಮಗನಾದ ಅಶೋಕನು ಕ್ರಿ.ಶ್.ಪೂ. ೨೭೨ ರಿಂದ ೨೩೨ರ ವರೆಗೆ ಆಳಿದನು. ಅವನಳಿಕೆಯಲ್ಲಿಯೂ ಕರ್ನಾಟಕವು ಮೌರ್ಯರಿಗೆ ಸೇರಿತ್ತು. ಇವನ ಅಳಿಕೆ ಗುರುತುಗಳಾದ ಕಲ್ಲುಬಂಡೆಗಳ ಮೇಲೆ ಬರೆದ ಧರ್ಮಶಾಸನಗಳು ಈಗಲೂ ಚಿತ್ರದುರ್ಗ, ಮೊಳಕಾಲ್ಮುರು, (ಮೈಸೂರು ಸಂಸ್ಥಾನ) ನಿಜಾಮ ಸಂಸ್ಥಾನದ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಸಿಕ್ಕುತ್ತವೆ.  ಅಶೋಕನು ತನ್ನ ಅಹಿಂಸೆಯ ಧರ್ಮೋಪದೇಶಕರನ್ನು ದೇಶಾಂತರಗಳಿಗೆ ಕಳಿಸಿದಂತೆ, ಕರ್ನಾಟಕಕ್ಕೆ ಕ್ರಿ.ಶ.ಪೂ. ೨೩೧ರಲ್ಲಿ ರಕ್ಷಿತನೆಂಬುವನನ್ನು ಬನವಾಸಿಗೂ ಮಹಾದೇವ ಎಂಬುವನನ್ನು ಮೈಸೂರು ಪ್ರಾಂತಕ್ಕೂ ಕಳಿಸಿದ್ದನು.   

ಶಾತವಾಹನ ಅರಸರು 

ತರುವಾಯ ಕ್ರಿ.ಶ.ಪೂ.೩ನೆಯ ಶತಮಾನದಿಂದ ೨೨೬ರವರೆಗೆ ಶಾತವಾಹನರು ಕರ್ನಾಟಕವನ್ನಾಳಿದರು. ಬಳ್ಳಾರಿ ಜಿಲ್ಲೆ, ಮೈಸೂರು ಪ್ರಾಂತ ಇವು ಅವರ ಆಳ್ವಿಕೆಗೆ ಸೇರಿದ್ದವು. ಶಾತವಾಹನರಲ್ಲಿ ಸಿಮುಕ, ಪುಲಿಮೇ, ಹಲ, ಸಾತಕರ್ಣಿ ಮೊದಲಾದ ಅರಸರಾದರು. ಸಾತಕರ್ಣಿಯು ಪಶ್ಚಿಮದಿಂದ  ಬಂದ ಶಕರನ್ನು ಹೊಡೆದಟ್ಟಿ ಕರ್ನಾಟಕವನ್ನು ಕಾಯ್ದನು. ಶಾತವಾಹನರು ವೈದಿಕ ಪದ್ಧತಿಯವರಾದರೂ ಎಲ್ಲ ಮತದವರನ್ನು ಸರಿಯಾಗಿ ನೋಡಿದರು. ಅವರ ಕಾಲದಲ್ಲಿ ಕನ್ನಡಿಗರಾದ ವರ್ತಕರು ರೋಮನ್ ಜನರೊಂದಿಗೆ ವ್ಯಾಪಾರ ಮಾಡುತ್ತಿದ್ದರು. ಬನವಾಸಿ, ಪೈಠಣಗಳು ಅವರ ರಾಜಧಾನಿಗಳು. 

ಕದಂಬರಸರು 

(ಕ್ರಿ.ಶ.೩೩೨ ರಿಂದ ೫೭೦ರವರೆಗೆ) ಶಾತವಾಹನರಾದಮೇಲೆ ಕರ್ನಾಟಕದ ಭಾಗವು ಪಲ್ಲವರ ಕೈಸೇರಿತ್ತು; ಮುಂದೆ, ಕದಂಬರ ಮೂಲ ಪುರುಷನಾದ ಮಯೂರಶರ್ಮನು ಅದನ್ನು ಅವರಿಂದ ಕಿತ್ತುಕೊಂಡು ಶಿವಮೊಗ್ಗ, ಕಾರವಾರ ಜಿಲ್ಲೆ, ಬೆಳಗಾವಿ ಜಿಲ್ಲೆಗಳ ಕೆಲಭಾಗಗಳನ್ನು ಗೆದ್ದುಕೊಂಡು, ತನ್ನದೊಂದು ಚಿಕ್ಕ ರಾಜ್ಯವನ್ನು ಸ್ಥಾಪಿಸಿದನು. ಇವನ ವಂಶದಲ್ಲಿ ಕಾಕುಸ್ಥವರ್ಮ, ಶಾಂತಿವರ್ಮ, ಕೃಷ್ಣವರ್ಮರು ಬಹು ಪ್ರಬಲರು. ಇವರ ರಾಜಧಾನಿ ಬನವಾಸಿ. ಮುಂದೆ ಇವರ ವಂಶದವರು ಹಲಸಿಗೆ – ಹಣಗಲ್ಲುಗಳಲ್ಲಿ ಆಳಿದರು. ಕಾದರೊಳ್ಳಿ , ದೇಗಾಂವಿ (ಕಿತ್ತೂರ ಹತ್ತಿರ) ಬನವಾಸಿ, ಹಲಸಿಗೆ ಹಣಗಲ್ಲುಗಳಲ್ಲಿ ಇವರು ಕಟ್ಟಿದ ದೇವಾಲಯಗಳಿವೆ. ಕದಂಬರ ಆಳ್ವಿಕೆಯಲ್ಲಿ ಭೂತಪಾಲಶೆಟ್ಟಿ ಎಂಬ ಕನ್ನಡ ವರ್ತಕನು ಕಾರ್ಲೆಯಲ್ಲಿ ಈಗಲೂ ಇರುವ ಭವ್ಯ ಮತ್ತು ದಿವ್ಯವಾದ ಚೈತ್ಯಾಲಯವನ್ನು ಕಟ್ಟಿಸಿದನು. ಬೆಳಗಾಂವಿ-ಧಾರವಾಡ ಜಿಲ್ಲೆಗಳು ಇವರ ಆಳ್ವಿಕೆಯಲ್ಲಿದ್ದವು. 

ತಲಕಾಡಿನ ಗಂಗರಸರು 

(೪ನೆಯ ಶತಮಾನದಿಂದ ೧೦ರವರೆಗೆ) ಸಿಂಹನಂದಿ ಎಂಬ ಜೈನಗುರುಗಳ ಕೃಪೆಯಿಂದ ಮಾಧವ ಎಂಬುವನು ರಾಜ್ಯವನ್ನು ಸ್ಥಾಪಿಸಿದನು. ಇವರಲ್ಲಿ ದುರ್ವಿನೀತ, ಶ್ರೀಪುರುಷ, ಶಿವಮಾರ ,ನೀತಿಮಾರ್ಗ,ಬೂತುಗ,೨ನೆಯ ಮಾರಸಿಂಹ ಮೊದಲಾದವರು ಆಳಿದರು. ಕರ್ನಾಟಕದಲ್ಲಿರುವ ಚಾಲುಕ್ಯ,ರಾಷ್ಟ್ರಕೂಟರಿಗೂ ಇವರಿಗೂ ಬೀಗತನವಿತ್ತು. ಗಂಗರಸರೆಲ್ಲರೂ ಪರನಾರೀ ಸೋದರರೂ ವಿದ್ವಾಂಸರೂ ಇದ್ದರು.ಸದ್ಯದ ಮೈಸೂರಿನ ಬಹು ಭಾಗವು ಗಂಗರ ರಾಜ್ಯಕ್ಕೆ ಸೇರಿತ್ತು. ದುರ್ವಿನೀತನಲ್ಲಿ ಕೆಲದಿನ ಭಾರವೀ ಕವಿಯು ಬಂದು ಇದ್ದನಂತೆ. ಶಿವಮಾರನು ಆನೆಗಳನ್ನು ಅಂಕೆಯಲ್ಲಿ ತರುವ ಬಗ್ಗೆ ಗಜಶಾತಕ ಎಂಬ ಗ್ರಂಥವನ್ನು ಕನ್ನಡದಲ್ಲಿ ಬರೆದಿರುವನು. ಕನ್ನಡದಲ್ಲಿ ಗಂಗರ ಹಲವು ಶಿಲಾಲೇಖಗಳಿರುವವು.

ಬಾದಾಮಿಯ ಚಾಲುಕ್ಯರು 

(ಕ್ರಿ.ಶ. ೫೫೦ – ೭೫೦ ರವರೆಗೆ)ಚಾಲುಕ್ಯರ ಜಯಸಿಂಹನೆಂಬುವನು ಉತ್ತರದಿಂದ ಬಂದು ಚಿಕ್ಕ ರಾಜ್ಯ ಕಟ್ಟಿಕೊಂಡನು. ಇವನ ಮಗ ರಾಜಸಿಂಹ. ಇವನ ಮಗನೇ ಮೊದಲನೆಯ ಪುಲಕೇಶಿ. ಇವನೇ ಇಂದುಕಾಂತ. ಅಜಂತೆಯಲ್ಲಿದ ರಾಜಧಾನಿಯನ್ನು ಬಾದಾಮಿಗೆ ತಂದನು. ಪಲ್ಲವರನ್ನು ಕರ್ನಾಟಕದಿಂದ ಹೊಡೆದಟ್ಟಿದನು. ಅಶ್ವಮೇಧಯಜ್ಞ ಮಾಡಿದನು. ಇವರಲ್ಲಿ ಮಂಗಳೀಶ, ೨ನೆಯ ಪುಲಕೇಶಿ, ೮ನೆಯ ವಿಕ್ರಮಾದಿತ್ಯ, ಇವರು ಮುಖ್ಯರು. ಮಂಗಳೀಶನು ೧ನೆಯ ಪುಲಕೇಶಿಯ ಮಗ, ಬಾದಾಮಿಯಲ್ಲಿರುವ ಗುಡ್ಡದಲ್ಲಿಯ ಗವಿಗಳನ್ನು ಕಟ್ಟಿಸಿದನು. ಮಂಗಳೀಶನ ತರುವಾಯ ಮಂಗಳೀಶನ ಅಣ್ಣ ೧ನೆಯ ಕೀರ್ತಿವರ್ಮನ ಮಗನಾದ ೨ನೆಯ ಪುಲಕೇಶಿಯು ಮಂಗಳೀಶನಿಂದ ತನ್ನ ತಂದೆಯ ಪಟ್ಟವನ್ನು ಕಸಿದುಕೊಂಡು ತಾನು ಆಳಲಾರಂಭಿಸಿದನು  ( ಕ್ರಿ. ಶ . ೬೦೯ – ೬೪೩). ಇವನು ಕರ್ನಾಟಕದ ಬಲವನ್ನು ಕಟ್ಟಿದನು. ಉತ್ತರದ ಹರ್ಷವರ್ಧನನು ದಕ್ಷಿಣವನ್ನು ಗೆಲ್ಲಲು ಬಂದಾಗ, ಅವನನ್ನು ನರ್ಮದಾ ದಂಡೆಯಲ್ಲಿ ಎದುರಿಸಿ, ಅತ್ತಿಂದತ್ತಲೇ ಅಟ್ಟಿದನು. ‘ದಕ್ಷಿಣ ಪಥೇಶ್ವರ’ ‘ ಸತ್ಯಾಶ್ರಯ ಪೃಥ್ವಿವಲ್ಲಭ ‘ ಎಂಬ ಬಿರುದುಗಳನ್ನು ಧರಿಸಿದನು. ಚೀನಾ ದೇಶದಿಂದ ಹ್ಯುಯೆನ್ ತ್ಸಂಗ್ ಎಂಬ ಪ್ರವಾಸಿಯೂ ಇವನಾಳಿಕೆಯಲ್ಲಿ ಬಾದಾಮಿಗೆ ಬಂದಿದ್ದನು. ಇವನು ಕಂಚಿಯ ಪಲ್ಲವರೊಡನೆ ಹೋರಾಡಿದನು. ಇರಾಣದ ಬಾದಷಹನು ಇವನ ಕಡೆಗೆ ತನ್ನ ರಾಯಭಾರಿಯನ್ನು ಕಳಿಸಿದ್ದನು . ಇವರಾಳಿಕೆಯಲ್ಲಿ ಮಹಾರಾಷ್ಟ್ರವು ಕರ್ನಾಟಕಕ್ಕೆ ಒಳಪಟ್ಟಿತ್ತು. ಇವನ ಹಿರಿಯ ಸೊಸೆ ವಿಜಯಭಟ್ಟಾರಿಕೆಯು ಸಾವಂತವಾಡಿಯ ಪ್ರಾಂತವನ್ನು ಆಳಿದಳು . ಇವರಾಳಿಕೆಯಲ್ಲಿನ ಶಿಲಾಲೇಖಗಳು ಬಹುತರವಾಗಿ ಸಂಸ್ಕೃತದಲ್ಲಿದೆ. ಚಾಲುಕ್ಯರ ಆಳ್ವಿಕೆಯಲ್ಲಿ ವೈದಿಕ ಮಟ್ಟಕೆ ಕಳೆಕಟ್ಟಿತು. ಪಟ್ಟದಕಲ್ಲು, ಬಾದಾಮಿ, ಐಹೊಳೆಗಳಲ್ಲಿ ಚಾಲುಕ್ಯವಂಶದ ಅರಸು-ಅರಸಿಯರು, ಶಿಲ್ಪಿ ಕಲೆಯಿಂದ ಬೆಳಗುವ ದಿವ್ಯವಾದ ದೇವಾಲಯಗಳನ್ನು ಕಟ್ಟಿದರು. ೨ನೆಯ ವಿಕ್ರಮಾದಿತ್ಯನು ಪಲ್ಲವರನ್ನು ಗೆದ್ದು ಬಂದ ಗುರುತಿಗಾಗಿ ಅವನ ಹೆಂಡತಿಯಾದ ಲೋಕಮಹಾದೇವಿಯು ಪಟ್ಟದಕಲ್ಲಿನಲ್ಲಿ ಶ್ರೀ ವಿರೂಪಾಕ್ಷನ ವಿಶಾಲವಾದ ದೇವಾಲಯ ಕಟ್ಟಿಸಿದಳು. (ಕ್ರಿ. ಶ . ೬೫೬) ಚಾಲುಕ್ಯ ಅರಸರಲ್ಲಿ ಕೆಲವರು ಶೈವರು, ಕೆಲವರು ವೈಷ್ಣವರಿದ್ದರು. 

ರಾಷ್ಟ್ರಕೂಟ ಅರಸರು 

(ಕ್ರಿ. ಶ . ೭೫೭ರಿಂದ ೯೭೩ ರವರೆಗೆ ) ದಂತಿದುರ್ಗನು ಚಾಲುಕ್ಯರ ಕೊನೆಯ ಅರಸನಾದ ೨ನೆಯ ಕೀರ್ತಿವರ್ಮನ ಆಳಿಕೆಯಲ್ಲಿ ಸಿಂಹಾಸನವನ್ನು ಕಸಿದುಕೊಂಡನು. ನೃಪತುಂಗನ ಕಾಲದಲ್ಲಿ ಮಳಖೇಡವು ರಾಜಧಾನಿಯಾಯಿತು. ರಾಷ್ಟ್ರಕೂಟರು ಕನ್ನಡಿಗರು. ಇವರಲ್ಲಿ ಗೋವಿಂದ, ನೃಪತುಂಗ (ಕ್ರಿ. ಶ . ೮೧೫ – ೫೭೭ ) ಕೃಷ್ಣಾ, ಮುಮ್ಮಡಿ ಕೃಷ್ಣಾ ( ಕ್ರಿ. ಶ . ೯೩೯ – ೯೬೮ ) ಇವರು ಶ್ರೇಷ್ಠರು. ಮೊದಲನೆಯ ಕೃಷ್ಣನು ವೇರೂಳದಲ್ಲಿ ಕೈಲಾಸವೆಂಬ ಹೊಸಸೃಷ್ಟಿ ಎನಿಸುವ ಅಪ್ರತಿಮವಾದ ದೇವಾಲಯವನ್ನು ವಿಶ್ವಕರ್ಮನೆಂಬ ಶಿಲ್ಪಿಯಿಂದ ಒಂದೇ ಒಂದು ದೊಡ್ಡ ಬಂಡೆಯಲ್ಲಿ ಕೊರೆಯಿಸಿದನು. (ಕ್ರಿ. ಶ . ೭೫೩ – ೭೭೫) ಮುಮ್ಮಡಿ ಕೃಷ್ಣನು ಸಿಂಹಳದ್ವೀಪದದವರೆಗೆ ಹೋಗಿ, ಕನ್ನಡ ಬಾವುಟವನ್ನು ಹರಿಸಿದನು. ರಾಮೇಶ್ವರದ ಹತ್ತಿರ ಜಯಸ್ತಂಭ ನೆಡಿಸಿದನು. ಪೊನ್ನ ಎಂಬ ಜೈನ ಕವಿಗೆ ‘ಕವಿಚಕ್ರವರ್ತಿ’ ಎಂದು ಬಿರುದು ಕೊಟ್ಟನು. ರಾಷ್ಟ್ರಕೂಟರ ಕಾಲದಲ್ಲಿ ಕನ್ನಡಕ್ಕೆ ಹೆಚ್ಚಿನ ಪ್ರಾಶಸ್ತವು ದೊರೆಯಿತು. ರಾಷ್ಟ್ರಕೂಟರ ಕಾಲದ ಹೆಚ್ಚು ಶಿಲಾಲಿಪಿಗಳು ಕನ್ನಡದಲ್ಲಿವೆ. ಇವರಾಳಿಕೆಯಲ್ಲಿ ಕಳಸ, ಹೆಬ್ಬಳ್ಳಿ, ಡಂಬಳ, ಸೊರಟೂರು, ಸಾಲೋಟಗಿ (ವಿಜಾಪುರ ಜಿಲ್ಲೆ) ಮನಗೂಳಿಗಳಲ್ಲಿ ದೊಡ್ಡ ದೊಡ್ಡ ಸಂಸ್ಕೃತ ಪಾಠಶಾಲೆಗಳಿದ್ದವು. ಈಗ ಸಿಕ್ಕ ಕನ್ನಡ ಹಳೆಯ ಗ್ರಂಥಗಳಲ್ಲಿ ನೃಪತುಂಗನದೇ ಮೊದಲನೆಯ ಗ್ರಂಥ. 

ಕಲ್ಯಾಣದ ಚಾಲುಕ್ಯರು

( ಕ್ರಿ. ಶೆ. ೮೭೩-೧೧೯೦ರವರೆಗೆ) ಬಾದಾಮಿಯಲ್ಲಿ ಆಳುತ್ತಿದ್ದ ಚಲುಕ್ಯರ ವಂಶಜನಾದ ತೈಲಪನೆಂಬುವನು ಮಳಖೇಡದ ರಾಷ್ಟ್ರಕೂಟರ ಕಕ್ಕಲನನ್ನು ಸೋಲಿಸಿ, ತಾನೇ ಆಳಹತ್ತಿ ತನ್ನ ರಾಜಧಾನಿಯನ್ನು ಕಲ್ಯಾಣಕ್ಕೆ ಒಯ್ದನು. ಇವರಿಗೆ ಪಶ್ಚಿಮ ಚಾಲುಕ್ಯ ರೆಂದು ಹೆಸರು. ಇವರಲ್ಲಿ ಆಹವಮಲ್ಲ ಸೋಮೇಶ್ವರ, ತ್ರಿಭುವನಮಲ್ಲ ವಿಕ್ರಮಾದಿತ್ಯ, ಮುಮ್ಮಡಿ ಸೋಮೇಶ್ವರ ಇವರು ಮುಖ್ಯರು, ತೈಲಪನು ತನ್ನ ಆಳಿಕೆಯಲ್ಲಿ ಮುಧೋಳದ ಬಳೆಗಾರ ಜಾತಿಯ ರನ್ನ ಎಂಬ ಕವಿಗೆ “ಕವಿಚಕ್ರವರ್ತಿ” ಎಂಬ ಬಿರುದು ಕೊಟ್ಟು ಮರ್ಯಾದೆ ಮಾಡಿದನು. ಇವನ ೫ನೆಯ ತಲೆಯವನಾದ ವಿಕ್ರಮಾದಿತ್ಯನು ೫ಂವರ್ಷಗಳವರೆಗೆ ಅತ್ಯಂತ ವೈಭವದಿಂದ ಆಳಿದನು. ಇವನ ಕೀರ್ತಿ ಕೇಳಿ, ಬಿಲ್ಬಣನೆಂಬ ಕಾಶ್ಮೀರ ಕವಿಯು ಕಲ್ಯಾಣಕ್ಕೆ ಬಂದು, ಇವನಾಶ್ರಯದಲ್ಲಿದ್ದು ವಿಕ್ರಮಾಂಕಜೀವ ಚರಿತವೆಂಬ ಸಂಸ್ಕೃತಕಾವ್ಯವನ್ನು ಬರೆದನು. ವಿಕ್ರಮಾದಿತ್ಯನ ಮಂತ್ರಿಯಾದ ವಿಜ್ಞಾನೇಶ್ವರ ಎಂಬ ಪಂಡಿತನು ಯಾಜ್ಞವಲ್ಕ್ಯಸ್ಮೃ ತಿಗೆ ಸಂಸ್ಕೃತದಲ್ಲಿ “ಮಿತಾಕ್ಷರಾ’ ಎಂಬ ಟೀಕೆಯನ್ನು ಬರೆದನು. ಹಿಂದುಸ್ಥಾನದಲ್ಲಿ ಮಿತಾಕ್ಷರ ವನ್ನು ಇಂದಿಗೂ ಆಧಾರಭೂತವಾದ ಹಿಂದೂ ಧರ್ಮಶಾಸ್ತ್ರನೆಂದು ತಿಳಿಯುವರು.ಇವನ ಮಗ ಸೋಮೇಶ್ವರನು ಸಂಸ್ಕೃತದಲ್ಲಿ ಮಾನಸೋಲ್ಲಾಸ ಎಂಬ ಗ್ರಂಥ ಬರೆದನು. 

ಕಲಚೂರಿಯ ಅರಸರು

(ಕ್ರಿ.ಶ.೧೧೫೬-೧೧೮೨) ಚಾಲುಕ್ಯರ ದಂಡನಾಯಕನೂ ವಿಜಾಪುರ ಪ್ರಾಂತದ ಮಹಾಮಂಡಲೇಶ್ವರನೂ ಆದ ಬಿಜ್ಜಳನು ಕಲ್ಯಾಣದ ಪಟ್ಟವನ್ನು ನಾಲ್ಮಡಿ ಸೋಮೇಶ್ವರನಿಂದ ಕಸಿದು ಕೊಂಡನು. ವೀರಶೈವ ಮತೋದ್ಧಾರಕರಾದ ಬಸವೇಶ್ವರರು ಇವನಾಳಿಕೆ ಯಲ್ಲಿ ಬೆಳಕಿಗೆ ಬಂದರು. ಅವರಿಂದ ಶಿವಶರಣರ ಶಿವಭಕ್ತಿಯ ಮಹಿಮೆಯೂ ಬೆಳೆಯಿತು. ಅವರೊಡನೆ ಶರಣ ಸಾಹಿತ್ಯವೂ ಬಲಿಯಿತು. ಶಿವಶರಣರು ತಮ್ಮ ಅನುಭವದ ಮಾತುಗಳನ್ನು ಕನ್ನಡದಲ್ಲಿ ಹೇಳಿ, ಕನ್ನಡಕ್ಕೆ ಕಳೆತುಂಬಿದರು. 

ಹೊಯ್ಸಳ ಯಾದವರು

 (ಕ್ರಿ. ಶ. ೧೦೦೬-೧೩೧೦) ಹೊಯ್ಸಳ ಯಾದವ ರಾಜ್ಯಕ್ಕೆ ಯದುಕುಲದ ಸಳನೇ ಮೂಲಪುರುಷ. ಅವನ ತರುವಾಯ ಹೊಯ್ಸಳರಲ್ಲಿ ವಿಷ್ಣುವರ್ಧನ, ವೀರಬಲ್ಲಾಳ, ವೀರನರಸಿಂಹ ಮೊದಲಾದ ವೀರರು ಆಳಿದರು. ಇವರು ಮೊದಲು ಜೈನರು, ವಿಷ್ಣುವರ್ಧನನ ಕಾಲಕ್ಕೆ ವೈಷ್ಣನರಾದರು. ಹಳೆಬೀಡು ಬೇಲೂರುಗಳು ಇವರ ಆಳಿಕೆ ಯಲ್ಲಿ ರಾಜಧಾನಿಗಳಾಗಿದ್ದವು. ಇವರ ರಾಜ್ಯವು ಒಂದಾನೊಂದು ಕಾಲಕ್ಕೆ ಕರ್ನಾಟಕವನ್ನೆಲ್ಲ ವ್ಯಾಪಿಸಿತ್ತು. ಇವರಿಗೂ ಯಾದವರಿಗೂ ಮೇಲಿಂದಮೇಲೆ ಯುದ್ಧಗಳು ಜರುಗುತ್ತಿದವು. ೨ನೆಯ ವೀರಬಲ್ಲಾಳನ ಕಾಲದಲ್ಲಿ ಹೊಯ್ಸಳ ರಾಜ್ಯವು ಕೃಷ್ಣಾನದಿಯ ವರೆಗೆ ಹಬ್ಬಿತ್ತು. ವೀರಬಲ್ಲಾಳನು ಲಕ್ಕುಂಡಿಯಲ್ಲಿ ತನ್ನ ಅರಮನೆ, ದೇವಾಲಯಗಳನ್ನು ಕಟ್ಟಿ ಸಿದನು, ಕೊನೆಯ ವೀರಬಲ್ಲಾಳನ ಆಳಿಕೆಯಲ್ಲಿ ಇಡೀ ರಾಜ್ಯವೇ ಮುಸಲ್ಮಾನರಿಗೆ ತುತ್ತಾಯಿತು. ಹೊಯ್ಸಳ ಅರಸರು ಹಳೆಬೀಡು, ಬೇಲೂರು ಗಳಲ್ಲಿ ಕನ್ನಡ ಶಿಲ್ಪಿಗಳಿಂದ ಹೊಸಮಾದರಿಯ, ಕುಸುರು ಶಿಲ್ಪದಿಂದ ಮೆರೆವ, ಶಿಲ್ಪಕಲಾಪೂರ್ಣತೆಯಿಂದ ಒಪ್ಪುವ ದೇವಾಲಯಗಳನ್ನು ಕಟ್ಟಿಸಿ, ಕಲ್ಲುಗಳಲ್ಲಿಯೂ ಜೀವಕಳೆಯನ್ನು ತುಂಬುವಂತೆ ಕೊಡುಗೈಯಿಂದ ಆ ಕಾಲದ ಶಿಲ್ಪಿಗಳಿಗೆ ಉತ್ತೇಜನವಿತ್ತರು. ಇವರಾಳಿಕೆಯಲ್ಲಿ ಅಭಿನವಸಂಪ, ಕಂತಿ, ಸುಮನೋಬಾಣ, ಕೇಶಿರಾಜ, ಜನ್ನ, ಮಲ್ಲಿಕಾರ್ಜುನ, ರುದ್ರಭಟ್ಟ, ಮೊದಲಾದ ಕನ್ನಡ ಕವಿಗಳು ಹುಟ್ಟಿದರು. ಕೇಶಿರಾಜನ “ಶಬ್ದಮಣಿದರ್ಪಣ’ ಗ್ರಂಥವು ಇಂದಿಗೂ ಕನ್ನಡಕ್ಕೆ ಆಧಾರಗ್ರಂಥವಾಗಿದೆ. ಇವನು ಹೊಯ್ಸಳ ರಲ್ಲಿ ದಂಡನಾಯಕನಿದ್ದನು.

ದೇವಗಿರಿಯ ಯಾದವರು

 (ಕ್ರಿ. ಶೆ. ೧೧೮೯-೧೩೧೨) ದೇವಗಿರಿಯ ಸಿಂಹಾಸನವನ್ನು ೫ನೆಯ ಭಿಲ್ಲಮನು ಸ್ಥಾಪಿಸಿದನು. ಇವರಲ್ಲಿ ೫ನೆಯ ಭಿಲ್ಲಮ, ಸಿಂಹಣ, ರಾಮದೇವ ಮೊದಲಾದವರು ಶೂರರಿದ್ದರು. ಇವರ ಕಾಲಕ್ಕೂ ಇಡೀ ಕರ್ನಾಟಕಕ್ಕೆ ಯಾದವರು ಚಕ್ರವರ್ತಿಗಳಾಗಿದ್ದರು. ದೇವಗಿರಿಯೇ ಇವರ ರಾಜಧಾನಿ. ಸಿಂಹಣನು ತನ್ನ ಬಾಹುಬಲದಿಂದ ಯಾದನ ರಾಜ್ಯವನ್ನು ದಕ್ಷಿಣದಲ್ಲಿ ಶಿವಮೊಗ್ಗೆ ಜಿಲ್ಲೆಯವರೆಗೂ ಹಬ್ಬಸಿದ್ದನು, ಇವನು ಮಹಾ ಬಲಿಷ್ಠ ಅರಸನು

ಮುಸಲ್ಮಾನರ ದಾಳಿಯ ಕಾಲ

ಕರ್ನಾಟಕದಲ್ಲಿಯ ಹೊಯ್ಸಳ, ಯಾದವ,ದೇವಗಿರಿಯ ಯಾದವ, ಓರಗಲ್ಲಿನ ಕಾಕತಿಯ ಮುಂತಾದ ಅರಸರು ನಿರ್ವೀರ್ಯರಾದ ಕಾಲಕ್ಕೆ ಸರಿಯಾಗಿ ಉತ್ತರದಿಂದ ಮುಸಲ್ಮಾನರ ದಾಳಿಗಾರರು ಕರ್ನಾಟಕದಲ್ಲಿ ಹೊಕ್ಕರು. ಅವರ ಮುಂದೆ ಕನ್ನಡ ಅರಸರ ಆಟ ನಡೆಯಲಿಲ್ಲ. ಪ್ರಚಂಡ ಬಿರುಗಾಳಿಗಳ ಹೊಡೆತಕ್ಕೆ ನೂರಾರು ವರ್ಷದ ಹೆಮ್ಮರಗಳು ಬೇರು ಕಳಚಿ ಹೊರಳಿ ಬೀಳುವಂತೆ ನೂರಾರು ವರ್ಷದಿಂದ ನಡೆದುಬಂದ ಅರಸುಮನೆತನಗಳು ಉರುಳಿದವು. ಆಗ  ಕರ್ನಾಟಕವು ಪರದೇಸಿ ಆಯಿತು. ಪರರಾಜರ ದಾಳಿಗಳಿಂದ ಇಡೀ ಕನ್ನಡ ಜನಾಂಗವೇ ಗದಗದ ನಡುಗಿತು. ಇಡೀ ದಕ್ಷಿಣ ಹಿಂದುಸ್ಥಾನನೇ ಅಗ್ನಿ ಪರೀಕ್ಷೆಯಲ್ಲಿರಲು, ಹಿಂದೂ ಧರ್ಮವನ್ನು ಕಾಪಾಡುವ ಹೆಗ್ಗುರಿಯಿಂದ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಆಯಿತು.

ವಿಜಯನಗರದ ಅರಸು ಮನೆತನ

 (ಕ್ರಿ. ಶ. ೧೩೩೬:೧೬೦೦) ಘ್ರ ರಾಜ್ಯವನ್ನು, ಪರರ ಹಾವಳಿಯಿಂದ ದೇಶವನ್ನು, ಧರ್ಮವನ್ನು ಕಾಯಲಿಕ್ಕೆಂದೇ ಶ್ರೀವಿದ್ಯಾರಣ್ಯ ಹುಕ್ಕ-ಬುಕ್ಕರು ಸ್ಥಾಪಿಸಿದರು. ಈ ಅರಸು ಮನೆತನದವರು ಜರುಗಿಸಿದ ಕಾರ್ಯವು ಧರ್ಮ ಮತ್ತು ದೆಶದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ವಿಜಯನಗರದ ಅರಸರಲ್ಲಿ ಸಂಗಮ ಮನೆತನದಲ್ಲಿ ಹುಕ್ಕ-ಬುಕ್ಯ, ಇಮ್ಮಡಿ ಹರಿಹರ, ಪ್ರೌಢದೇವರಾಯ ಇವರು ಕೀರ್ತಿವಂತರು. ಶ್ರೀವಿದ್ಯಾರಣ್ಯರು ಹುಕ್ಕ-ಬುಕ್ಕ, ಇಮ್ಮಡಿಹರಿಹರ ಇವರ ಆಳಿಕೆ ಯಲ್ಲಿ ಮಂತ್ರಿಗಳಿದ್ದರು. ಇವರೂ ಇವರ ತಮ್ಮಂದಿರಾದ ಶ್ರಿ ಸಾಯಣಾಚಾರ್ಯರೂ ಕೂಡಿ ಸಂಸ್ಕೃತದಲ್ಲಿ ಹಲವು ಧರ್ಮ ಮತ್ತು ಶಾಸ್ತ್ರಗಳನ್ನು ಬರೆದರಲ್ಲದೆ, ವೇದಕ್ಕೆ ಭಾಷ್ಯ ಬರೆದರು. ಬುಕ್ಕರಾಯನ ಸೊಸೆಯೂ,  ವೀರಕಂಪಣರಾಯನ ಪತ್ನಿಯೂ ಆದ ಗಂಗಾದೇವಿಯು ಮಧುರಾ ವಿಜಯವೆಂಬ ಸಂಸ್ಕೃತ ಕಾವ್ಯ ಬರೆದಳು. ತೋಂಟದಾರ್ಯ ನಿಜಗುಣಿ ಶಿವಯೋಗಿಗಳು ಇದೇ ಕಾಲದಲ್ಲಿದ್ದರು. ಪ್ರೌಢದೇವರಾಯನ ಅಳಿಕೆಯಲ್ಲಿ ವೀರಶೈವ ಮತದವರಿಗೆ ವಿಶೇಷ ಪ್ರೋತ್ಸಾಹ ದೊರೆಯಿತು. ಲಕೃಣ್ಣ, ದಂಡೇಶ, ಜಕ್ಕಣಾರ್ಯ, ಇವರು ದಂಡನಾಯಕರಲ್ಲದೆ ಕವಿಗಳೂ ಇದ್ದರು. ಅಲ್ಲದೆ, ಚಾಮರಸ, ಕುಮಾರವ್ಯಾಸ ಈ ಕವಿಗಳೂ ಇದ್ದರು. ಇವರು ಅನುಕ್ರಮವಾಗಿ ಶಿವತತ್ವ ಚಿಂತಾಮಣಿ, ನೂರೊಂದು ಸ್ಥಲ,  ಅಲ್ಲಮಪ್ರಭುದೇವರ ಚರಿತ್ರ,ಕನ್ನಡ ಭಾರತ ಎಂಬೀ ಗ್ರಂಧಗಳನ್ನು ಬರೆದರು.ಮುಂದೆ ಸಾಳುವ ವಂಶದ ಅರಸರಲ್ಲಿ ಯಾರೂ ಹೇಳುವಷ್ಟು ಹೆಸರು ಪಡೆಯಲಿಲ್ಲ. ಆಮೇಲೆ ತುಳುವಂಶದ ನರಸನಾಯಕನೆಂಬವನು ಸಾಳುವ ನರಸಿಂಹನನ್ನು ತಳ್ಳಿ ತಾನೇ ಅರಸನಾದನು. ಇವನ ಮನೆತನದಲ್ಲಿ ಕೃಷ್ಣದೇವರಾಯನೇ ಮಹಾ ಪ್ರಬಲ ಅರಸು. ಈ ರಾಯನಿಗೆ “ಕನ್ನಡ ರಾಜ್ಯ ರಮಾರಮಣ” ಎಂದು ಬಿರುದಿತ್ತು. ಪ್ರೌಢ ದೇವರಾಯನ ಆಳಿಕೆಯಲ್ಲಿ ಕುಮಾರವ್ಯಾಸನು ಬರೆದ ಕನ್ನಡ ಮಹಾಭಾರತ ಕಾವ್ಯವನ್ನು ರಾಯನು ತಿಮ್ಮಣ್ಣ ಕವಿಯಿಂದ ಪೂರ್ತಿಗೊಳಿಸಿದನು. ರಾಯನು ಸೋಸಲೆ ಮಠದ ಶ್ರಿ ವ್ಯಾಸರಾಯರನ್ನು ತನ್ನ ಗುರುಗಳನ್ನಾಗಿ ಮಾಡಿಕೊಂಡನು, ರಾಜ್ಯಕ್ಕೆ ” ಕುಹುಯೋಗ’ ವೆಂಬ ದುಷ್ಪಗ್ರಹ ಬಂದಾಗ, ಶ್ರಿವ್ಯಾಸರಾಯರನ್ನು ಚಿನ್ನದ ಸಿಂಹಾಸನದಲ್ಲಿ ಕುಳ್ಳಿರಿಸಿ, ಮುತ್ತು-ರತ್ನ್ನಗಳಿಂದ ಅಭಿಷೇಕ ಮಾಡಿದೆನು. ಶ್ರಿ ವಿಜಯವಿಕ್ಶಲ, ಹಜಾರ ರಾಮನ ದೇವಾಲಯಗಳನ್ನು ಹೊಯ್ಸಳ ಅರಸರು ಕಟ್ಟಿಸಿದ ಮಾದರಿಯಿಂದ ಕಟ್ಟಿಸಿ ಕನ್ನಡ ಶಿಲ್ಪಕಲಾ ಸೌಂದರ್ಯಕ್ಕೆ ಮತ್ತೊಮ್ಮೆ ಕಳೆ ತುಂಬಿದನು. ಇವನಾಳಿಕೆಯಲ್ಲಿ ತ್ರೀ ಪುರಂದರದಾಸರು ವಿಜಯನಗರದಲ್ಲಿಯೇ ವಾಸವಾಗಿದ್ದರು. ಅವರನ್ನು ಬಹು ಪರಿಯಿಂದ ಮನ್ನಿಸಿದನು. ಇವನು ತಿರುಪತಿಯ ಶ್ರೀ ವೆಂಕಟೇಶ ದೇವರ ಭಕ್ತನಾಗಿದ್ದುದರಿಂದ, ತನ್ನ ಮತ್ತು ರಾಣಿಯರಾದ ಚಿನ್ನಾದೇವಿ, ತಿರುಮಲಾದೇವಿಯರೊಡನೆ, ತಿರುಪತಿಯ ದೇವರ ಮಹಾದ್ವಾರದೊಳಗೆ ಪ್ರತಿಮೆಗಳನ್ನು ಇಡಿಸಿದನು. ಅಲ್ಲಿ ಅವು ಈಗ್ಯೂ ಇನೆ.ಅವುಗಳ ಮೇಲೆ, “ಶ್ರೀ ಕೃಷ್ಣದೇವರಾಯ ಚಿನ್ನಾದೇವಿಯರು, ತಿರುಮಲಾದೇವಿಯರು’ ಎಂದು ಕನ್ನಡ ಅಕ್ಷರಗಳಿವೆ. ಮುಂದೆ, ಅಳಿಯ ರಾಮರಾಯನ ಕಾಲದಲ್ಲಿ ರಕ್ಕಸಿಗಿ-ತಂಗಡಗಿಯ ಯುದ್ಧವಾಗಿ ಕರ್ನಾಟಕದ ಸಿಂಹಾಸನವು ಪೆನುಗೊಂಡೆಗೆ ಹೋಯಿತು. ಅಲ್ಲಿಂದ ಚಂದ್ರಗಿರಿಗೆ ಹೋಯಿತು.ಅದು ತೆಲಗು ದೇಶವಾದ್ದರಿಂದ ಕೆಲವು ರೀತಿ, ನಡತೆಗಳು ಬದಲಾದರೂ, “ಕರ್ನಾಟಕ ಅರಸರು’ ಎಂಬ ಬಿರುದು ಕೊನೆಯತನಕ ಇತ್ತು. 

ಪಾಳ್ಯಗಾರ-ನಾಯಕರ ಕಾಲ

(ಕ್ರಿ. ಶ. ೧೫೬೫ — ೧೭೧೩) ವಿಜಯನಗರ ಸಾಮ್ರಾಜ್ಯ ಸೂರ್ಯನು ರಕ್ಕಸಿಗಿ- ತಂಗಡಿಗಿ ಕಾಳಗದಲ್ಲಿ ಮುಳುಗಿದನು. ಆಗ ಆ ಸಾಮ್ರಾಜ್ಯಕ್ಕೆ ಅಂಕಿತರಾಗಿದ್ದ ಮಧುರೆ, ತಂಜಾವರ; ಕೆಳದಿ, ಚಿತ್ರದುರ್ಗ, ಹರಪನಹಳ್ಳಿ, ಅನಂತಪುರ, ಬಳ್ಳಾರಿಯ ನಾಯಕರು, ಮೈಸೂರು ಅರಸರು, ಕೊಡಗು ಅರಸರು ಅಲ್ಲಲ್ಲಿ ರಾತ್ರೆಯಲ್ಲಿಯ ನಕ್ಚತ್ರಗಳಂತೆ ಸ್ವತಂತ್ರನಾಗಿ ಮಿನುಗಲಾರಂಭಿಸಿದರು. ಆ ಕಾಲಕ್ಕೆ ಕರ್ನಾಟಕದ ದಕ್ಷಿಣ ಭಾಗವೆಲ್ಲವೂ ಪಾಳ್ಯಗಾರರ ಆಳಿಕೆಯಲ್ಲಿದ್ದು, ಉತ್ತರ ಭಾಗವಾದ ಧಾರವಾಡ, ಬೆಳಗಾವಿ, ವಿಜಾಪುರಗಳು ಅದಿಲಶಹರ ಆಳಿಕೆಯಲ್ಲಿ ದ್ವವು, ವಿಜಾಪುರ ಅದಿಲಶಾಹಿ ಅರಸರು ತಮ್ಮ ದಾಳಿಗಳನ್ನು ಮೈಸೂರು. ತಂಜಾವರದವರೆಗೆ ನಡೆಸುತ್ತಿದ್ದರೂ ಆ ಕಾಲಕ್ಕೆ ಕೆಳದಿಯ ನಾಯಕರು ಮುಸಲ್ಮಾನರ ದಾಳಿಗಳನ್ನು ಒಳ್ಳೇ ಕಸುವಿನಿಂದ ಅಡ್ಡಗಟ್ಟದರು. ಪಾಳ್ಯ ಗಾರರು ಬೇಡರ ಜಾತಿಯವರು. ಕೆಳದಿಯ ನಾಯಕರು ವೀರಶೈವರು. ಕೆಳದಿಯ ಅರಸರು ತಮ್ಮ ರಾಜ್ಯದೊಳಗೂ ರಾಜಧಾನಿಗಳಾದ ಇಕ್ಕೇರಿ, ಕೆಳದಿ, ಬಿದನೂರಗಳಲ್ಲಿ ಅಘೋರೇಶ್ವರ, ನಂದೀ ಮುಂತಾದ ದೇವಾಲಯಗಳನ್ನು ಕಟ್ಟಿಸಿದರು. ವೀರಕೈವ-ಬ್ರಾಹ್ಮಣ ಕವಿಗಳಿಗೆ ಆಶ್ರಯ ಕೊಟ್ಟರು. ೧ನೆಯ ವೆಂಕಟವ್ಪನಾಯಕನು ಶಿವಗೀತೆಗೆ ಸಂಸ್ಕೃತದಲ್ಲಿ ದೀಕೆ ಬರೆದನು. ಬಸವಪ್ಪನಾಯಕನು “ಶಿವತತ್ವ ರತ್ನಾಕರ’ವೆಂಬ ಪ್ರಚಂಡ ಕೋಶ ಗ್ರಂಥ ವನ್ನು ಸಂಸ್ಕೃತದಲ್ಲಿ ಬರೆದನು. ಇವನೇ ಕನ್ನಡದೊಳಗೆ ಸೂಕ್ತಿ ಸುಧಾಕರ ಎಂಬ ಗ್ರಂಥ ಬರೆದನು. ಈ ನಾಯಕರು ವೀರಶೈವರಿದ್ದರೂ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಇವೆಲ್ಲ ಮತದವರಿಗೂ ಆಯಾ ಕಾಲಕ್ಕೆ ಸಹಾಯ ಮಾಡಿದರು; ಒಂದೆಡೆಯಲ್ಲಿ ಮುಸಲ್ಮಾನ ಮಸೀದಿಗೂ ಭೂಮಿ ಉಂಬಳಿ ಹಾಕಿಕೊಟ್ಟಿರುವರು.

ಆದಿಲ್‌ಶಾಹಿ ಅರಸರ ಆಳಿಕೆ

 ( ಕ್ರಿ. ಶ.  ೧೪೮೯-೧೬೮೬) ಕಲಬುರ್ಗೆಯ ಬಹಾಮನಿ ರಾಜ್ಯವು ಮುರಿದು, ಅದರಲ್ಲಿ ಐದು ಹೋಳುಗಳಾದವು. ಅವುಗಳನ್ನು ಅಲ್ಲಲ್ಲಿಯ ಸರದಾರರು ಆಳಹತ್ತಿ ದರು. ಈ ಐದು ಹೋಳುಗಳಲ್ಲಿಯೇ ಆದಿಲ್ ಶಾಹಿಯು ಒಂದು ಹೋಳು. ಇದನ್ನು ಆದಿಲ್‌ಶಹ ಎಂಬ ಸರದಾರನು ಸ್ಥಾಪಿಸಿದನು. ಇವನು ಆಗಿನ ಕಾಲಕ್ಕೆ ವ್ಯವಹಾರಜ್ಜ್ಯಾನ, ಶೌರ್ಯ, ರಾಜಕೀಯ ಹಂಚಿಕೆಗಳಲ್ಲಿ ಬಲು ಮಿಗಿಲಾದವನು; ಧರ್ಮದ ವಿಷಯದಲ್ಲಿಯಂತೂ ಇವನ ಸಮದೃಷ್ಟಿಯು ಅಸಾಮಾನ್ಯವಾಗಿತ್ತು. ಇವನಿಗೆ ಹಿಂದೂ ಜನರ ಮೇಲೆ ವಿಶೇಷ ಪ್ರೀತಿ; ಆದುದರಿಂದ ತನ್ನ ಆಳಿಕೆಯಲ್ಲಿ ಹಿಂದೂ ಜನರಿಗೆ ದೊಡ್ಡ ದೊಡ್ಡ ಕೆಲಸ ಗಳನ್ನು ಕೊಟ್ಟನು. ತರುವಾಯ ಇಸ್ಮಾಯಿಲ್‌ಆದಿಲ್‌ಶಹ, ಇಬ್ರಾಹಿಮ್‌ ಆದಿಲ್‌ಶಹ, ಅಲಿ ಆದಿಲ್‌ಶಹ, ಚಾಂದಬೀಬಿ, ಮಹಮ್ಮದಶಹ, ಮೊದಲಾದವರು ಆಳಿದರು. ಇವರಲ್ಲಿ ಅಲಿ ಆದಿಲ್‌ಶಹ, ಚಾಂದಬೀಬಿ, ಮಹಮ್ಮದಶಹರು ಶ್ರೇಷ್ಠರು. ಅಲ್ಲಿಆದಿಲ್‌ಶಹನ ಕಾಲಕ್ಕೆ ವಿಜಯನಗರ ಸಾಮ್ರಾಜ್ಯಕ್ಕೆ ಸಿಡಿಲು ಬಡಿಯಿತು. ಇವನಿಗೆ “ಕನ್ನಡ ಜಾಣ” ಎಂಬ ಬಿರುದು ಇತ್ತು. ಮಹಮ್ಮದಶಹ ಒಳ್ಳೆ  ರಸಿಕನೂ ಲಲಿತಕಲಾ ಪ್ರಿಯನೂ ಶೂರನೂ ಜನರ ಪರೀಕ್ಷಕನೂ ಇದ್ದುದರಿಂದ, ತನ್ನ ರಾಜ್ಯ ಕಾಯ್ದು ಕೊಂಡು ಬೆಳೆಯಿಸಿದನು. ಒಳ್ಳೊಳ್ಳೆಯ ಸರದಾರರನ್ನು ಕೆಲಸಕ್ಕಿಟ್ಟುಕೊಂಡು ಅವರಿಂದ ತನ್ನ ರಾಜ್ಯ ಲಾಭ ಮಾಡಿಕೊಂಡನು. ವಿಜಾಪುರದ ಜಗಪ್ರಸಿದ್ಧ ಗೋಲಗುಮುಟವನ್ನು ಇವನೇ ಕಟ್ಟಿಸಿದನು. ಇವನ ತರುವಾಯ ಆದಿಲ್‌ಶಾಹಿಯಲ್ಲಿ ವಿಶೇಷವಾಗಿ ಹೆಸರೆತ್ತುವಂಥ ಅರಸರಾಗಲಿಲ್ಲ. ಆದಿಲ್‌ಶಹರ ಆಳಿಕೆಯಲ್ಲಿ ಕರ್ನಾಟಕದಲ್ಲಿಯ ಹಲವು ದೇಸಾಯಿ, ದೇಶಪಾಂಡೆ, ನಾಡಗೌಡ ಮನೆತನಗಳು ಮುಂದೆ ಬಂ ದವು. ಅಗಡಿ, ಸಿರಸಂಗಿ ದೇಸಾಯರ ಮೂಲ ಪುರುಷರು ಇದೇ ಕಾಲಕ್ಕೆ ದೇಸಗತಿ ಪಡೆದರು. ೧೭ನೆಯ ಶತಮಾನದೊಳಗೆ ಉತ್ತರ ಕರ್ನಾಟಕದಲ್ಲಿ ಸರ್ವಜ್ಞಕವಿ, ಮಹಾಲಿಂಗರಂಗ ಮೈಸೂರು ಸೀಮೆಯಲ್ಲಿ ಷಡಕ್ಷರಿ, ಲಕ್ಷ್ಮೀಶ ಈ ಕವಿಗಳು, ಮಂಗಳೂರು ಸೀಮೆಯಲ್ಲಿ ಶ್ರೀ ರತ್ನಾಕರಸಿದ್ದನೆಂಬ ಕವಿಯು ಇದ್ದರು. 

ಮರಾಠರ-ಪೇಶವೆಯರ ಆಳಿಕೆ

 (ಕ್ರಿ. ಶೆ. ೧೭೧೩ – ೧೮೧೮) ಮರಾಠರ ಆಳಿಕೆಯ ಏರಿಕೆಯ ಕಾಲದಲ್ಲಿ ಕರ್ನಾಟಕದ ಉತ್ತರ ಭಾಗವು ಮರಾಠರ ಕೈಯಲ್ಲಿದ್ದು,  ಮಿಕ್ಕ ಭಾಗವು ಮೈಸೂರು ಅರಸರ ವಶದಲ್ಲಿತ್ತು. ಮುಂದೆ, ಹೈದರಲ್ಲಿಯ ಕಾಲಕ್ಕೂ ಅಲ್ಲಲ್ಲಿ ಕನ್ನಡಿಗರ ಶೌರ್ಯದ-ಶೀಲದ ಮಿಂಚುಗಳು ಹೊಳೆಯುತ್ತಿದ್ದವು. ಇವನ್ನು ನಾವು ಬೆಳನಡಿಯ ಮಲ್ಲವ್ವ ದೇಸಾಯಿತಿ, ಚಿಕ್ರದುರ್ಗದ ಓಬಿ, ನಿಜಗಲ್ಲಿನ ರಾಣಿ ಇವರ ಕಥೆಗಳಲ್ಲಿ ಕಾಣಬಹುದು. ಹೈದರನಾದರೂ ಪೇಶವೆಯರ ವಶದಲ್ಲಿದ್ದ ಕನ್ನಡ ನಾಡನ್ನೆಲ್ಲ ತನ್ನ ವಶಕ್ಕೆ ತೆಗೆದುಕೊಳ್ಳಬೇಕೆಂದು ಮೀರಿ ಹೆಣಗಿದನು. ಇದು ಹೈದರನ ಚರಿತ್ರೆಯಲ್ಲಿ ಎದ್ದು ಕಾಣಿಸುನಂತಿದೆ; ಹೈದರನ ಮಗ ಟೀಪೂನ ತರುವಾಯ ಮೈಸೂರು ರಾಜ್ಯವು ಮೈಸೂರು ಒಡೆಯರ ಮನೆತನಕ್ಕೆ ಬಂದಂದಿನಿಂದ ಮತ್ತೆ ಮುಮ್ಮಡಿ ಕೃಷ್ಣರಾಜೇಂದ್ರ ಒಡೆಯರ ಆಳಿಕೆಯಲ್ಲಿ ಕನ್ನಡನಾಡಿಗೆ ವಿಶೇಷ ಉತ್ತೇಜನ ದೊರೆತಿದ್ದರಿಂದ, ಹೊನ್ನನ್ಮು, ಚಿಕ್ಕುಪಾಧ್ಯಾಯರಂಥ ಕವಿಗಳು ಅಲ್ಲಿ ಹುಟ್ಟಿದರು; ಹೊನ್ನಮ್ಮ ಒಡೆಯರಿಗೆ ಸಂಚಿ ಹಿಡಿಯುವವಳು. ಅಕೆ “ಹದಿಬದೆಯ ಧರ್ಮ’ವೆಂಬ ಪತಿವ್ರತೆಯರ ಲಕ್ಷಣಗಳನ್ನು ಹೇಳುವ ಉತ್ತಮ ಕಾವ್ಯವನ್ನು ಕನ್ನಡದಲ್ಲಿ ಬರೆದಳು.ಉತ್ತರ- ಕರ್ನಾಟಕದಲ್ಲಿ ಆ ಕಾಲದಲ್ಲಿ ಶಿರಹಟ್ಟಿ ಫಕೀರಸ್ವಾಮಿ, ಮುರಗೋಡದೆ ಶ್ರಿ. ಚಿದಂಬರ ದೀಕ್ಷಿತ ಮೊದಲಾದ ಸಾಧುಸತ್ಪುರುಷರು ಕಾಖಂಡಿಕೆಯ ಮಹಿಪತಿದಾಸ, ಪ್ರಸನ್ನ ವೆಂಕಟ್ಟಿ ಮೊದಲಾದ ಕವಿಗಳೂ ಬಾಳಿದ್ದರು. ಅವರು ಜನರ ಸ್ಥಿತಿಗತಿಗಳನ್ನು ಧಾರ್ಮಿಕ, ನೈತಿಕ, ರಾಜಕೀಯ ದೃಷ್ಟಿ ಯಿಂದ ಸುಧಾರಿಸಲು ಹೆಣಗಿದರು.

ಇಂಗ್ಲೀಷರ ಆಳಿಕೆ

ಇಂಗ್ಲೀಸರ ಆಳಿಕೆಯು ಪ್ರಾರಂಭವಾದ ಮೇಲೆ ಕೊಡಗಿನ ವೀರರಾಜೇಂದ್ರನು ತನ್ನ ಸ್ವಾತಂತ್ರ್ಯಕಾಯ್ದುಕೊಳ್ಳಲು ಟೀಪು ಸುಲ್ತಾನನೊಡನೆ ನಡಿಸಿದ ಹೋರಾಟವು ಸ್ಫೂರ್ತಿದಾಯಕವಾಗಿದೆ. ತರುವಾಯ್ಕ ಕಿತ್ತೂರಿನ ಚನ್ನಮ್ಮ ದೇಸಾಯಿತಿಯು ಬ್ರಿಟಿಶರಿಂದ ತನ್ನ ಚಿಕ್ಕ ದೇಸಗತಿಯ ಸ್ವಾತಂತ್ರ್ಯ ಕಾಯಲು ಹೆಣಗಿದ್ದೂ ಅಷ್ಟೇ ಹೃದಯಂಗಮವಾಗಿದೆ. ಕನ್ನಡನಾಡಿನ ಇಳಿಗಾಲದ ಕಾಲದಲ್ಲಿಯೂ ಮೈಸೂರಿನ ಒಡೆಯರ ಮನೆತನದ ಅರಸರು ಕನ್ನಡ ಸಂಸ್ಕೃತಿಗೆ ತಮ್ಮ ಉದಾರಾಶ್ರಯ ನನ್ನು ದಯಸಾಲಿಸಿರುವರು. ಕನ್ನಡನಾಡು-ನುಡಿ-ಸಂಸ್ಕೃತಿಗಳಿಗೆ ಅಧಾರ ಸ್ತಂಭರಾಗಿಯೂ ಬದ್ಭಾಕಂಕಣರಾಗಿಯೂ ನಿಂತ ಮೈಸೂರು ಶ್ರೀಮನ್‌ ಮಹಾರಾಜ ಶ್ರೀ ನಾಲ್ಕಡಿಕೃಷ್ಣರಾಜೇಂದ್ರಒಡೆಯರ ಬಾಹದ್ಧೂರ ಅಂದಿನ ಅರಸರಲ್ಲಿ “ರಾಜರ್ಷಿ” ಗಳೆಂದು ಹೆಸರಾಗಿರುವದು ಕನ್ನಡಿಗರಿಗೆ ಅತ್ಯಂತ ಅಭಿಮಾನದ ಸಂಗತಿ.

Spread the Knowledge

You may also like...

Leave a Reply

Your email address will not be published. Required fields are marked *