ಕನ್ನಡ ವ್ಯಾಕರಣ – ಛಂದಸ್ಸು

ಕನ್ನಡ ವ್ಯಾಕರಣ – ಛಂದಸ್ಸು
ಕನ್ನಡ ವ್ಯಾಕರಣ – ಛಂದಸ್ಸು

ಛಂದಸ್ಸು

ಶುದ್ಧ ಹಾಗೂ ಅರ್ಥಪೂರ್ಣವಾಗಿ ಮಾತನಾಡಲು, ಬರೆಯಲು ವ್ಯಾಕರಣ ಶಾಸ್ತ್ರವು ಹೇಗೆ ಅಗತ್ಯವೋ ಹಾಗೆಯೇ ಪದ್ಯರಚನೆ ಮಾಡಲೂ ಕೆಲವು ನಿಯಮಗಳಿರುತ್ತವೆ. ಇಂತಹ ಪದ್ಯರಚನಾ ನಿಯಮವನ್ನು ಛಂದಸ್ಸು ಎಂದು ಕರೆಯಲಾಗಿದೆ.

ಸುಮಾರು ಕ್ರಿ.ಶ. ೯೯೦ರಲ್ಲಿ ಇದ್ದ ಒಂದನೆಯ ನಾಗವರ್ಮ ಎಂಬವನು ಛಂದೋಂಬುಧಿ ಎಂಬ ಗ್ರಂಥದ ಮೂಲಕ ಈ ಶಾಸ್ತ್ರವನ್ನು ನೀಡಿದ್ದಾನೆ. ಹಳಗನ್ನಡದ ಮತ್ತು ನಡುಗನ್ನಡದ ಪದ್ಯಕಾವ್ಯಗಳು ಈ ಶಾಸ್ತ್ರವನ್ನು ಅನುಸರಿಸಿಯೇ ಬರೆಯಲ್ಪಟ್ಟವು.

ಕಾವ್ಯವನ್ನು ಗದ್ಯ, ಪದ್ಯ ಮತ್ತು ಚಂಪೂ ಎಂದು ಮೂರು ವಿಭಾಗ ಮಾಡಲಾಗಿದೆ.

ಚಂಪೂ ಕಾವ್ಯ ಗದ್ಯಪದ್ಯ ಮಿಶ್ರಿತ ಶೈಲಿಯಾಗಿರುವುದರಿಂದ ಪ್ರಧಾನವಾಗಿ ಗದ್ಯ ಮತ್ತು ಪದ್ಯ ಎಂಬೆರಡೇ ವಿಭಾಗಗಳೆಂದೂ ಹೇಳಬಹುದು.

ಪದ್ಯ ರಚನೆಯ ನಿಯಮಗಳನ್ನು ವಿವರಿಸುವ ಶಾಸ್ಟ್ರವೇ ಛಂದಶ್ಯಾಸ್ಟ್ರ.

ವ್ಯಾಕರಣಶಾಸ್ತ್ರವು ಗದ್ಯ ಮತ್ತು ಪದ್ಯ ಎರಡಕ್ಕೂ ಸಂಬಂಧಿಸಿದ್ದು. ಛಂದಶ್ಶಾಸ್ತ್ರವು ಪದ್ಯಕ್ಕೆ ಮಾತ್ರ ಸೀಮಿತವಾದುದು.

ಆಧುನಿಕ ಕನ್ನಡ ಕಾವ್ಯಗಳಲ್ಲಿ ಛಂದಸ್ಸು ಹೆಚ್ಚು ಬಳಕೆಯಾಗುತ್ತಿಲ್ಲ. ಆದರೆ ಕಾವ್ಯ ಪರಂಪರೆಯಲ್ಲಿ ಛಂದಸ್ಸಿಗೆ ವಿಶೇಷ ಮಹತ್ವವಿದೆ.

ಇಲ್ಲಿ ಕೊಟ್ಟಿರುವ ಮೂರು ಕಾರಣಗಳಿಂದಾಗಿ ಛಂದಸ್ಸಿಗೆ ಗುರುತರವಾದ ಮಹತ್ವವುಂಟು.

 1. ಹಿಂದಿನ ಕಾವ್ಯಗಳ ಲಕ್ಷಣ ತಿಳಿಯಲು
 2. ಛಂದಸ್ಸನ್ನು ಕಡೆಗಣಿಸಿದ್ದರ ಔಚಿತ್ಯದ ಬಗ್ಗೆ ಮರು ಚಿಂತಿಸಲು
 3. ಛಂದಸ್ಸಿನ ಹೊಸ ಬಗೆಯ ಪ್ರಯೋಗಗಳನ್ನು ಅರಿಯಲು

ಒಂದು ಗೊತ್ತಾದ ಸಾಲುಗಳ (ಪಾದಗಳ) ನಿಯಮ ಅನುಸರಿಸಿ ಬರೆದವುಗಳೇ ಪದ್ಯಗಳು.

ಮೂರು ಪಾದಗಳ ಪದ್ಯವನ್ನು ತ್ರಿಪದಿ ಎಂತಲೂ
ನಾಲ್ಕು ಪಾದಗಳ ಪದ್ಯವನ್ನು ಚೌಪದಿ ಎಂತಲೂ
ಆರು ಪಾದಗಳ ಪದ್ಯವನ್ನು ಷಟ್ಪದಿ ಎಂತಲೂ
— ಇತ್ತೀಚಿನ ಹದಿನಾಲ್ಕು ಪಾದಗಳ ಪದ್ಯವನ್ನು ಅಷ್ಟಷಟ್ಪದಿ (ಸುನೀತ/ಸಾನೆಟ್) ಎಂತಲೂ ಕರೆಯುವರು.

‘ತ್ರಿ’ ಎಂದರೆ ಮೂರು ‘ಪದಿ’ ಎಂದರೆ ಪಾದ (ಸಾಲು) ಗಳು.

ಸರ್ವಜ್ಞನ ಕಾಲಕ್ಕೆ ಬೃಹತ್ತಾಗಿ ಬೆಳೆದು ಕನ್ನಡ ಸಾಹಿತ್ಯದಲ್ಲಿ ಮಹತ್ವದ ಸ್ಥಾನ ಕಲ್ಪಿಸಿಕೊಂಡಿವೆ.

ಕನ್ನಡ ಜನಪದ ಸಾಹಿತ್ಯ ಪ್ರಕಾರಗಳಲ್ಲಿ ತ್ರಿಪದಿಗಳದೇ ಸಿಂಹಪಾಲು.

ಹಾಗಾಗಿ ಪದ್ಯ ಎಂಬುದು ನಿರ್ದಿಷ್ಟ ಸಂಖ್ಯೆಯ ಪಾದಗಳಿಂದ ಕೂಡಿರಬೇಕು.


ಛಂದಶ್ಯಾಸ್ಟ್ರದ ಪ್ರಕಾರ ರಚಿತವಾದ ಪದ್ಯವನ್ನು ಛಂದೋಬದ್ಧ ಪದ್ಯ ಎನ್ನುವರು.

ಛಂದಶ್ಶಾಸ್ತ್ರವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ

1. ಪ್ರಾಸ,
2. ಯತಿ
ಮತ್ತು
3. ಗಣ

ಆದುದರಿಂದ ಪದ್ಯವನ್ನು ರಚಿಸಲು ಬೇಕಾದ ನಿರ್ದಿಷ್ಟ ಪಾದಗಳ ಬಗ್ಗೆ ಮತ್ತು ಪ್ರತಿ ಪಾದದಲ್ಲಿ ಇರಬೇಕಾದ ಪ್ರಾಸ, ಯತಿ, ಗಣಗಳ ಬಗ್ಗೆ ತಿಳಿಸುವ ಶಾಸ್ತ್ರವೇ ಛಂದಸ್ಸು.


ಪ್ರಾಸ :

ಗುರು ಹಿರಿಯರ ಅರಿಯದವನ ಅರಿವದೇತಕೆ
ಹಿತಾರ್ಥಕಿಲ್ಲದವನ ಶರೀರವೇತಕೆ
ರಿಯ ಪೂಜೆ ಮಾಡದವನ ಜನುಮವೇತಕೆ
ಸೇರಿದವರ ಹೊರೆಯದಂಥ ದೊರೆಯು ಏತಕೆ


ಈ ಪದ್ಯವನ್ನು ಗಮನಿಸಿದಾಗ ಪ್ರತಿ ಸಾಲಿನ ಎರಡನೆಯ ಅಕ್ಷರದಲ್ಲಿರುವ ವ್ಯಂಜನಾಕ್ಷರ ಒಂದೇ ಆಗಿದೆ.

ಅದೇ ರೀತಿ ಪ್ರತಿ ಸಾಲಿನ ಕೊನೆಯ ವ್ಯಂಜನವೂ ಒಂದೇ ಆಗಿದೆ.

ಹೀಗೆ – ಪದ್ಯದ ಪ್ರತಿಯೊಂದು ಪಾದದ ಎರಡನೆಯ ಅಕ್ಷರದಲ್ಲಿ ಅಥವಾ ಪ್ರತಿಸಾಲಿನ ಕೊನೆಯ ಅಕ್ಷರದಲ್ಲಿ ಒಂದೇ ಜಾತಿಯ ವ್ಯಂಜನವಿದ್ದರೆ ಅದೇ ಪ್ರಾಸ.

— ಪದ್ಯದ ಪ್ರತಿ ಸಾಲಿನ ಒಂದು ಮತ್ತು ಎರಡನೆಯ ಸ್ವರಗಳ ಮಧ್ಯದಲ್ಲಿ ಒಂದೇ ಜಾತಿಯ ವ್ಯಂಜನವಿದ್ದರೆ ಅದನ್ನು ಆದಿಪ್ರಾಸವೆಂತಲೂ
— ಪ್ರತಿ ಪಾದದ ಕೊನೆಯಲ್ಲಿ ಒಂದೇ ಜಾತಿಯ ವ್ಯಂಜನವಿದ್ದರೆ ಅದನ್ನು ಅಂತ್ಯಪ್ರಾಸವೆಂತಲೂ ಕರೆಯುತ್ತಾರೆ.
— ಕೆಲವೊಮ್ಮೆ ಅಪರೂಪಕ್ಕೆ ಸಾಲಿನ ಮಧ್ಯದಲ್ಲಿ ಪ್ರಾಸಾಕ್ಷರಗಳು ಬರುವುದುಂಟು ಅದನ್ನು ಒಳಪ್ರಾಸ ಅಥವಾ ಮಧ್ಯಪ್ರಾಸ ಎಂದು ಕರೆಯಲಾಗಿದೆ.

ಪ್ರಾಸಾಕ್ಷರದ

1. ಹಿಂದಿನ ಸ್ವರವು ಹ್ರಸ್ವವಾಗಿದ್ದರೆ ಅದನ್ನು ಸಿಂಹಪ್ರಾಸ ಎಂತಲೂ
2. ಹಿಂದಿನ ಸ್ವರವು ದೀರ್ಘವಾಗಿದ್ದರೆ ಅದನ್ನು ಗಜಪ್ರಾಸ ಎಂತಲೂ
3. ಹಿಂದೆ ಅನುಸ್ವಾರವಿದ್ದರೆ ವೃಷಭಪ್ರಾಸ ಎಂತಲೂ
4. ಹಿಂದೆ ವಿಸರ್ಗವಿದ್ದರೆ ಅಜಪ್ರಾಸ ಎಂತಲೂ
5. ಬೇರೆಬೇರೆ ಜಾತಿಯ ಎರಡು ಮೂರು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ಶರಭಪ್ರಾಸ ಎಂತಲೂ
6. ಒಂದೇಜಾತಿಯ ಎರಡು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ಹಯಪ್ರಾಸ ಎಂತಲೂ

ಕರೆಯಲ್ಪಡುವ ಆರು ವಿಧದ ಪ್ರಾಸಗಳನ್ನು ಕಾಣಬಹುದು.

ಒಂದು ನಿರ್ದಿಷ್ಟ ವ್ಯಂಜನವು ಪದ್ಯದ ಪ್ರತಿ ಸಾಲಿನ ಆದಿ, ಮಧ್ಯ, ಅಥವಾ ಅಂತ್ಯದಲ್ಲಿ ನಿಯತವಾಗಿ ಬರುವುದೇ ಪ್ರಾಸ.

ಯತಿ :

ಕಾವ್ಯವನ್ನು ಓದುವಾಗ ಉಸಿರು ತೆಗೆದುಕೊಳ್ಳುವ ಸಲುವಾಗಿ ನಿಲ್ಲಿಸುವ ಸ್ಥಳವನ್ನು ಯತಿ ಎಂದು ಕರೆಯಲಾಗಿದೆ. ಹಾಗೆಂದ ಮಾತ್ರಕ್ಕೆ ನಮಗೆ ಇಷ್ಟ ಬಂದಲ್ಲಿ ನಿಲ್ಲಿಸುವ ಸ್ವಾತಂತ್ರ್ಯವಿಲ್ಲ. ಓದುವಾಗ ಅಥವಾ ಹಾಡುವಾಗ ಅರ್ಥಕ್ಕೆ ಲೋಪ ಬಾರದಂತೆ ನಿಲ್ಲಿಸಬೇಕಾದ ಅನಿವರ‍್ಯತೆಯಿದೆ.

ಹೀಗೆ__
ಕಾವ್ಯವನ್ನು ಓದುವಾಗ ಅಥವಾ ಹಾಡುವಾಗ ಅರ್ಥಕ್ಕೆ ಲೋಪಬಾರದಂತೆ ನಿಲ್ಲಿಸುವ ಸ್ಥಳವನ್ನುಯತಿ’ ಎಂದು ಗುರುತಿಸಲಾಗಿದೆ.

ಕೆಲವು ಕವಿಗಳು ಯತಿಯ ಸ್ಥಾನವನ್ನು ಕೆಲವು ಸಂಕೇತಗಳೊಂದಿಗೆ ತಮ್ಮ ಕಾವ್ಯಗಳಲ್ಲಿ ಗುರುತಿಸಿದ್ದು ಕಂಡುಬರುತ್ತದೆ.

ಕನ್ನಡ ಕಾವ್ಯಗಳಲ್ಲಿ ಯತಿಯ ಬಳಕೆ ಅತ್ಯಂತ ಕಡಿಮೆಯಾಗಿದ್ದು ಸಂಸ್ಕೃತ ಕಾವ್ಯಗಳಲ್ಲಿ ಬಹಳಷ್ಟು ಇರುವುದನ್ನು ಗಮನಿಸಬಹುದು.

ಕಾವ್ಯವನ್ನು ವಾಚಿಸುವಾಗ ಅರ್ಥಕ್ಕೆ ಅಡ್ಡಿಯಾಗದಂತೆ ಉಸಿರು ತೆಗೆದುಕೊಳ್ಳಲು ನಿಲ್ಲಿಸುವ ತಾಣವೇ ಯತಿ.

ಗಣ :

ಗಣ’ ಎಂದರೆ ‘ಗುಂಪು’ ಅಥವಾ ‘ಸಮೂಹ’ ಎಂದರ್ಥ.
ಛಂದಶ್ಶಾಸ್ತ್ರದಲ್ಲಿ ‘ಗಣ’ ಎಂದರೆ ಪದ್ಯದ ಪ್ರತಿ ಸಾಲಿನಲ್ಲೂ ವಿಭಾಗಿಸಲ್ಪಡುವ ಮಾತ್ರೆ ಅಥವಾ ಅಕ್ಷರ ಅಥವಾ ಅಂಶಗಳ ಗುಂಪು ಎಂದರ್ಥ.

ಪದ್ಯದ ಪ್ರತಿಸಾಲಿನ ಅಕ್ಷರ ಅಥವಾ ಮಾತ್ರೆ ಅಥವಾ ಅಂಶಗಳ ಗುಂಪೇ ಗಣ.

ಮಾತ್ರೆಗಳ ಲೆಕ್ಕಾಚಾರದಿಂದ ಗುಂಪು ಮಾಡಿದರೆ ಮಾತ್ರಾಗಣ ಎಂತಲೂ
ಅಕ್ಷರಗಳ ಲೆಕ್ಕಾಚಾರದಿಂದ ಗುಂಪು ಮಾಡಿದರೆ ಅಕ್ಷರಗಣ ಎಂತಲೂ
ಅಂಶಗಳ ಆಧಾರದಿಂದ ಗುಂಪು ಮಾಡಿದರೆ ಅಂಶಗಣ ಎಂತಲೂ ಕರೆಯುವರು.


ಮಾತ್ರಾಗಣ :

ಮಾತ್ರೆ :
— ಛಂದಶ್ಶಾಸ್ತ್ರದಲ್ಲಿ ಮಾತ್ರೆ ಎಂಬುದು ಕಾಲವನ್ನು ಅಳೆಯುವ ಮಾನ.
— ಒಂದು ಹ್ರಸ್ವ ಅಕ್ಷರವನ್ನು ಉಚ್ಚರಿಸಲು ಬೇಕಾಗುವ ಕಾಲವೇ ಒಂದು ಮಾತ್ರಾಕಾಲ.
— ಮಾತ್ರೆಗಳಲ್ಲಿ ಎರಡು ವಿಧ. ಅವೇ ಲಘು ಮತ್ತು ಗುರು.
ಲಘುವನ್ನು ’ ಎಂತಲೂ ಗುರುವನ್ನು _ ಎಂತಲೂ ಗುರುತಿಸಲಾಗುವುದು.
— ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸಬಹುದಾದ ಅಕ್ಷರವೇ ಲಘು.
— ಎರಡು ಅಥವಾ ಎರಡಕ್ಕಿಂತ ಹೆಚ್ಚು ಮಾತ್ರಾ ಕಾಲದಲ್ಲಿ ಉಚ್ಚರಿಸಬಹುದಾದ ಅಕ್ಷರವೇ ಗುರು.

ಗುರು ಎನಿಸುವ ಅಕ್ಷರಗಳು :

ಗುರು ಎನಿಸುವ ಅಕ್ಷರಗಳು
ಗುರು ಎನಿಸುವ ಅಕ್ಷರಗಳು

ಮಾತ್ರಾಗಣ :
— ಮಾತ್ರೆಗಳ ಆಧಾರದಿಂದ ಗಣವಿಭಾಗ ಮಾಡಲಾಗುವ ಮಾತ್ರಾಗಣದಲ್ಲಿ ಮೂರು ವಿಧ.
— ಅವೇ ಮೂರು ಮಾತ್ರೆಗಳ ಗಣ, ನಾಲ್ಕು ಮಾತ್ರೆಗಳ ಗಣ ಮತ್ತು ಐದು ಮಾತ್ರೆಗಳ ಗಣ.
ಕಂದ, ಷಟ್ಪದಿ, ರಗಳೆ ಇವು ಮಾತ್ರಾಗಣ ಆಧಾರಿತ ಛಂದಸ್ಸುಗಳು.


ಕಂದ :

ಮಾತ್ರಾಗಣ ಆಧಾರಿತ ಛಂದಸ್ಸುಗಳಲ್ಲಿ ಕಂದ ಕೂಡ ಒಂದು. ಇದು ಚೌಪದಿಯಾಗಿರುತ್ತದೆ.
ಕೊಟ್ಟಿರುವ ಪದ್ಯದ ಆಧಾರದಿಂದ ಇದರ ಲಕ್ಷಣಗಳನ್ನು ತಿಳಿದುಕೊಳ್ಳಬಹುದು.

ಕಂದ ಪದ್ಯ ಲಕ್ಷಣ
ಕಂದ ಪದ್ಯ ಲಕ್ಷಣ

— ಈ ಪದ್ಯದಲ್ಲಿ ನಾಲ್ಕು ಪಾದಗಳಿವೆ.
ಒಂದು ಮತ್ತು ಮೂರನೆಯ ಪಾದಗಳಲ್ಲಿ ತಲಾ ಹನ್ನೆರಡು ಮಾತ್ರೆಗಳಿವೆ.
ಎರಡು ಮತ್ತು ನಾಲ್ಕನೆಯ ಪಾದಗಳಲ್ಲಿ ತಲಾ ಇಪ್ಪತ್ತು ಮಾತ್ರೆಗಳಿವೆ.
ಒಂದು ಮತ್ತು ಮೂರನೆಯ ಪಾದಗಳು ಮಾತ್ರಾ ಸಂಖ್ಯೆಯಲ್ಲಿ ಪರಸ್ಪರ ಸಮವಾಗಿವೆ.
— ಹಾಗೆಯೇ ಎರಡು ಮತ್ತು ನಾಲ್ಕನೆಯ ಪಾದಗಳು ಪರಸ್ಪರ ಸಮವಾಗಿವೆ.
ಹಾಗಾಗಿ ಮೊದಲೆರಡು ಪಾದಗಳನ್ನು ಪೂರ್ವಾರ್ಧ ಎಂತಲೂ ಮೂರೂ ಮತ್ತು ನಾಲ್ಕನೆಯ ಪಾದಗಳನ್ನು ಉತ್ತರಾರ್ಧವೆಂತಲೂ ಕರೆಯಬಹುದು. ಪ್ರತಿಪಾದವೂ ತಲಾ ನಾಲ್ಕು ಮಾತ್ರೆಗಳ ಗಣದಂತೆ ವಿಭಾಗಿಸಲ್ಪಟ್ಟಿವೆ.

ಲಕ್ಷಣ :
— ನಾಲ್ಕು ಪಾದಗಳಿರಬೇಕು.
— ಒಂದು ಮತ್ತು ಮೂರನೆಯ ಪಾದಗಳು ಪರಸ್ಪರ ಸಮವಾಗಿದ್ದು ನಾಲ್ಕು ಮಾತ್ರೆಗಳ ತಲಾ ಮೂರು ಮೂರು ಗಣಗಳಿರಬೇಕು.
— ಎರಡು ಮತ್ತು ನಾಲ್ಕನೆಯ ಪಾದಗಳು ಪರಸ್ಪರ ಸಮವಾಗಿದ್ದು ನಾಲ್ಕು ಮಾತ್ರೆಗಳ ತಲಾ ಐದೈದು ಗಣಗಳಿರಬೇಕು.
— ಪ್ರತಿ ಪಾದವೂ ಆದಿಪ್ರಾಸದಿಂದ ಕೂಡಿರಬೇಕು.


ಇದನ್ನೂ ಓದಿರಿ : ರಗಳೆ
ಇದನ್ನೂ ಓದಿರಿ : ಷಟ್ಪದಿ


ಅಕ್ಷರಗಣ:

— ಮೂರು ಮೂರು ಅಕ್ಷರಗಳ ಗುಂಪನ್ನು ಅಕ್ಷರಗಣವೆನ್ನುತ್ತೇವೆ.
— ಇಲ್ಲಿ ಮಾತ್ರೆಗಳು ಇಂತಿಷ್ಟೇ ಇರಬೇಕೆಂಬ ನಿಯಮವಿಲ್ಲ.
— ಹೀಗೆ ಮೂರು ಮೂರು ಅಕ್ಷರಗಳ ಲೆಕ್ಕಾಚಾರದಿಂದ ಗಣಗಳನ್ನು ವಿಂಗಡಿಸುವುದು ವೃತ್ತ ಜಾತಿಯ ಛಂದಸ್ಸುಗಳಲ್ಲಿ ಮಾತ್ರ.

ಕನ್ನಡದಲ್ಲಿ ಮುಖ್ಯವಾಗಿ ಆರು ವೃತ್ತಗಳು ಹೆಸರುವಾಸಿಯಾಗಿವೆ.

 1. ಉತ್ಪಲಮಾಲ,
 2. ಚಂಪಕಮಾಲ,
 3. ಶಾರ್ದೂಲ ವಿಕ್ರೀಡಿತ,
 4. ಮತ್ರೇಭವಿಕ್ರೀಡಿತ,
 5. ಸ್ರಗ್ಥರಾ,
 6. ಮಹಾಸ್ರಗ್ಥರಾ

ಇವುಗಳನು ಖ್ಯಾತ ಕರ್ಕಾಟಕಗಳು ಎನ್ನುತ್ತಾರೆ.

ಅಕ್ಷರಗಣದಲ್ಲಿ ಎಂಟು ವಿಧದ ಗಣಗಳು ಇವೆ. ಅವುಗಳನ್ನು ಒಂದು ಸೂತ್ರದಲ್ಲಿ ಹೇಳಬಹುದು. ಅವು ಹೀಗಿವೆ.

ಯಮಾತಾರಾಜಭಾನಸಲಗಂ

ಯಮಾತಾ = – – ಯಗಣ
ಮಾತಾರಾ = – – – ಮಗಣ
ತಾರಾಜ = – – ತಗಣ
ರಾಜಭಾ = – ∪ – ರಗಣ
ಜಭಾನ = ∪ – ಜಗಣ
ಭಾನಸ = ∪ ∪ ಭಗಣ
ನಸಲ = ನಗಣ
ಸಲಗಂ = ಸಗಣ

ಆರುವೃತ್ತಗಳನ್ನು ಸುಲಭವಾಗಿ ಗುರುತಿಸಲು ಇರುವ ಸ್ಥೂಲ ಸಾಧನ ಪದ್ಯ

“ಗುರುವೊಂದಾದಿಯೊಳುತ್ಪಲಂ ಗುರು ಮೊದಲ್ ಮೂರಾಗೆ ಶಾರ್ದೂಲಮಾ |
ಗುರುನಾಲ್ಕಾಗಿರಲಂತು ಸ್ರಗ್ಧರೆ ಲಘುದ್ವಂದ್ವಂ ಗುರುದ್ವಂದ್ವಮಾ |
ಗಿರೆ ಮತ್ತೇಭ ಲಘುದ್ವಯ ತ್ರಿಗುರುವಿಂದಕ್ಕುಂ ಮಹಾಸ್ರಗ್ಧರಾ|
ಹರಿಣಾಕ್ಷೀ ಲಘುನಾಲ್ಕು ಚಂಪಕಮಿವಾರು ಖ್ಯಾತಕರ್ಣಾಟಕಂ


1. ಉತ್ಪಲಮಾಲಾ ವೃತ್ತ

ಲಕ್ಷಣ :-
ನಾಲ್ಕು ಸಾಲುಗಳಿರುವ ಪದ್ಯ.
— ಪ್ರತಿ ಸಾಲಿನಲ್ಲೂ ೨೦ ಅಕ್ಷರಗಳು ಇರುತ್ತವೆ.
— ಪ್ರತಿ ಸಾಲಿನಲ್ಲೂ ಭಗಣ, ರಗಣ, ನಗಣ, ಭಗಣ, ಭಗಣ, ರಗಣಗಳೂ ಕೊನೆಯಲ್ಲಿ ಲಘು, ಗುರುಗಳೂ ಬರುತ್ತವೆ.


ಸೂತ್ರ :- ಉತ್ಪಲಮಾಲೆಯಪ್ಪುದುಭರಂನಭಭಂರಲಗಂನೆಗಳ್ದಿರಲ್

ಉದಾ :

ಉತ್ಪಲಮಾಲಾ ವೃತ್ತ
ಉತ್ಪಲಮಾಲಾ ವೃತ್ತ

2. ಚಂಪಕಮಾಲಾ ವೃತ್ತ

ಲಕ್ಷಣ :-
— ಪ್ರತಿಪಾದಲ್ಲೂ ಇಪ್ಪತ್ತೊಂದು ಅಕ್ಷರಗಳಿವೆ.
— ಪ್ರತಿಪಾದವೂ ನ, ಜ, ಭ, ಜ, ಜ, ಜ, ರ ಎಂಬ ಗಣಗಳಿಂದ ಕೂಡಿದೆ.
ಆದಿ ಪ್ರಾಸದಿಂದ ಕೂಡಿರುತ್ತದೆ.

ಸೂತ್ರ :- ನಜಭಜಜಂಜರಂ ಬಗೆಗೊಳುತ್ತಿರೆ ಚಂಪಕ ಮಾಲೆಯೆಂದಪರ್

ಉದಾ :

ಚಂಪಕಮಾಲಾ ವೃತ್ತ
ಚಂಪಕಮಾಲಾ ವೃತ್ತ

3. ಶಾರ್ದೂಲ ವಿಕ್ರೀಡಿತ ವೃತ್ತ

ಲಕ್ಷಣ : –
— ಇದು ಅಕ್ಷರಗಣದಲ್ಲಿರುವ ಪದ್ಯ.
— ಇದರಲ್ಲಿ ನಾಲ್ಕು ಪಾದಗಳಿದ್ದು ಅಕ್ಷರಗಳ ಸಂಖ್ಯೆಯಲ್ಲಿ ಸಮಾನವಾಗಿವೆ.
— ಪ್ರತಿಪಾದದಲ್ಲೂ ಮ,ಸ,ಜ,ಸ,ತ,ತ ಗಣಗಳು ಮತ್ತು ಒಂದು ಗುರು ಇರುತ್ತದೆ.
— ಒಟ್ಟು ಹತ್ತೊಂಬತ್ತು ಅಕ್ಷರಗಳಿರುತ್ತವೆ.

ಸೂತ್ರ : ಕಣ್ಗೊಪ್ಪಲ್ ಮಸಜಂ ಸತಂತಗಮುಮಾ ಶಾರ್ದೂಲವಿಕ್ರೀಡಿತಂ

ಉದಾ :

ಶಾರ್ದೂಲ ವಿಕ್ರೀಡಿತ ವೃತ್ತ
ಶಾರ್ದೂಲ ವಿಕ್ರೀಡಿತ ವೃತ್ತ

ಅಂಶಗಣ

ಅಂಶಗಣದಲ್ಲಿ ಮೂರು ವಿಧದ ಗಣಗಳಿವೆ.
1. ಬ್ರಹ್ಮ,
2. ವಿಷ್ಣು ಮತ್ತು
3. ರುದ್ರ


Spread the Knowledge

You may also like...

2 Responses

 1. Meera tushar says:

  Explained very well

Leave a Reply

Your email address will not be published. Required fields are marked *