ಕನ್ನಡ ವ್ಯಾಕರಣ – ಕಾಲಗಳು

ಕಾಲಗಳು :

ನಮೂದಿತ ವಾಕ್ಯಗಳನ್ನು ಗಮನಿಸಿ:

ಅವನು ಶಾಲೆಗೆ ಹೋಗುತ್ತಾನೆ.
ಅವನು ಶಾಲೆಗೆ ಹೋದನು.
ಅವನು ಶಾಲೆಗೆ ಹೋಗುವನು.

ಮೂರೂ ವಾಕ್ಯಗಳಲ್ಲಿ ಹೋಗು ಎಂಬ ಪದ ಧಾತುವಾಗಿದ್ದು ಇದರ ಜತೆಗೆ ಮೊದಲ ವಾಕ್ಯದಲ್ಲಿ -ಉತ್ತ ಎರಡನೆಯ ವಾಕ್ಯದಲ್ಲಿ -ದ ಹಾಗೂ ಮೂರನೆಯ ವಾಕ್ಯದಲ್ಲಿ -ವ ಎಂಬ ಪ್ರತ್ಯಯ ಇರುವುದನ್ನು ಗಮನಿಸಬಹುದು. ಇವುಗಳಲ್ಲಿ -ಉತ್ತ ಎಂಬುದು ವರ್ತಮಾನಕಾಲವನ್ನೂ -ದ ಎಂಬುದು ಭೂತಕಾಲವನ್ನೂ -ವ ಎಂಬುದು ಭವಿಷ್ಯತ್‌ಕಾಲವನ್ನೂ ಸೂಚಿಸುವ ಪ್ರತ್ಯಯಗಳಾಗಿರುವುದರಿಂದ ಮೊದಲ ವಾಕ್ಯ ವರ್ತಮಾನಕಾಲದಲ್ಲೂ ಎರಡನೆಯ ವಾಕ್ಯ ಭೂತಕಾಲದಲ್ಲೂ ಮೂರನೆಯ ವಾಕ್ಯ ಭವಿಷ್ಯತ್‌ಕಾಲದಲ್ಲೂ ಇವೆ ಎಂದು ತಿಳಿಯಬೇಕು. ಧಾತುಗಳಿಗೆ ಕಾಲಸೂಚಕ ಪ್ರತ್ಯಯ ಸೇರುವುದರ ಜತೆಗೆ -ಆನೆ -ಅನು -ಉದು -ಎನು ಇತ್ಯಾದಿ ಆಖ್ಯಾತಪ್ರತ್ಯಯಗಳು ಸೇರುತ್ತವೆ.

ಈ ಪ್ರತ್ಯಯಗಳು ಪುರುಷಾರ್ಥಕ ಸರ್ವನಾಮ, ಲಿಂಗ ಮತ್ತು ವಚನಗಳಿಗನುಗುಣವಾಗಿ ಬೇರೆಬೇರೆ ಆಗಿರುವುದನ್ನು ತಿನ್ನು ಎಂಬ ಧಾತುವಿನ ಆಧಾರದಿಂದ ಗಮನಿಸಬಹುದು.

1. ವರ್ತಮಾನಕಾಲ

ವರ್ತಮಾನಕಾಲ
ವರ್ತಮಾನಕಾಲ

2. ಭೂತಕಾಲ

ಭೂತಕಾಲ
ಭೂತಕಾಲ

3. ಭವಿಷ್ಯತ್‌ಕಾಲ

ಭವಿಷ್ಯತ್‌ಕಾಲ
ಭವಿಷ್ಯತ್‌ಕಾಲ

ಕಾಲಪಲ್ಲಟ

ಒಂದು ಕಾಲದ ಕ್ರಿಯೆಯನ್ನು ಇನ್ನೊಂದು ಕಾಲದ ಕ್ರಿಯಾರೂಪದಿಂದ ಹೇಳುವುದೇ ಕಾಲಪಲ್ಲಟ.

ಹೀಗೆ ಕಾಲಪಲ್ಲಟವಾಗುವಾಗ ಭವಿಷ್ಯತ್ ಕಾಲದ ಕ್ರಿಯಾಪದಗಳು ವರ್ತಮಾನ ಕಾಲದಲ್ಲೂ ವರ್ತಮಾನದ ಕಾಲದ ಕ್ರಿಯಾಪದಗಳು ಭವಿಷ್ಯತ್ ಕಾಲದಲ್ಲೂ ಪ್ರಯೋಗವಾಗುವುವು.

ಉದಾ: 1. ವರ್ತಮಾನಕಾಲವು ಭವಿಷ್ಯತ್‌ಕಾಲದಲ್ಲಿ
ಅವನು ಒಳಗೆ ಊಟ ಮಾಡುವನು (ಊಟ ಮಾಡುತ್ತಾನೆ ಎಂದಾಗಬೇಕು)
ಅವಳು ಒಳಗೆ ಅಡುಗೆ ಮಾಡುವಳು (ಅಡುಗೆ ಮಾಡುತ್ತಾಳೆ ಎಂದಾಗಬೇಕು)

ಉದಾ.: 2. ಭವಿಷ್ಯತ್‌ಕಾಲವು ವರ್ತಮಾನಕಾಲದಲ್ಲಿ
ಅವನು ನಾಳೆ ಹೋಗುತ್ತಾನೆ (ಹೋಗುವನು ಎಂದಾಗಬೇಕು)
ನಾನು ಮುಂದಿನ ತಿಂಗಳು ಬರುತ್ತೇನೆ (ಬರುವೆನು ಎಂದಾಗಬೇಕು)

ಇದನ್ನೂ ಓದಿರಿ : ಕಾಲ ಸೂಚಕ ಕ್ರಿಯಾಪದ

Spread the Knowledge

You may also like...

Leave a Reply

Your email address will not be published. Required fields are marked *