ಹಬಲ್ ಬಾಹ್ಯಾಕಾಶ ದೂರದರ್ಶಕ – ಒಂದು ಅವಲೋಕನ

ಹಬಲ್ ಬಾಹ್ಯಾಕಾಶ ದೂರದರ್ಶಕ - ಒಂದು ಅವಲೋಕನ
ಹಬಲ್ ಬಾಹ್ಯಾಕಾಶ ದೂರದರ್ಶಕ – ಒಂದು ಅವಲೋಕನ

“The most important discoveries will provide answers to questions that we do not yet know how to ask and will concern objects we have not yet imagined.”

John Bahcall
(1934–2005)
Hubble pioneer, about the space telescope

“ಅತ್ಯಂತ ಪ್ರಮುಖ ಆವಿಷ್ಕಾರಗಳು ಹೇಗೆ ಪ್ರಶ್ನಿಸುವುದು ಎಂದು ಕೂಡ ತಿಳಿಯದ ಪ್ರಶ್ನೆಗಳಿಗೆ ಉತ್ತರಗಳನ್ನು ಒದಗಿಸುತ್ತವೆ ನಾವು ಇನ್ನೂ ಊಹಿಸಿರದ ವಸ್ತುಗಳ ಬಗ್ಗೆ ಕೂಡ ನಮಗೆ ಅರಿವು ಮೂಡಿಸುತ್ತವೆ.”

ಜಾನ್ ಬಹ್ಕಾಲ್
(1934–2005) ಹಬಲ್ ಪ್ರವರ್ತಕ, ಬಾಹ್ಯಾಕಾಶ ದೂರದರ್ಶಕದ ಬಗ್ಗೆ

ಪರಿಚಯ

ವಿಜ್ಞಾನದ ಇತಿಹಾಸವು ಕ್ರಾಂತಿಕಾರಿ ಸಾಧನಗಳಿಂದ ಮಾಡಿದ ಮಹತ್ವಕಾರಿ ಆವಿಷ್ಕಾರಗಳಿಂದ ಪ್ರೇರಿತವಾಗಿದೆ. ಉದಾಹರಣೆಗೆ, ಮೈಕ್ರೋಬಯಾಲಜಿಯ ಕ್ಷೇತ್ರವು ಸೂಕ್ಷ್ಮದರ್ಶಕದ ಆವಿಷ್ಕಾರದ ಮೂಲಕ ಕೋಶಗಳ (cellular ಸೆಲ್ಯುಲಾರ್) ಜೀವನದ ಸಂಶೋಧನೆಯಿಂದ ಆರಂಭಿಸಲಾಯಿತು. ರೋಹಿತದರ್ಶಕವು ಬೆಳಕನ್ನು ಹೊರಸೂಸುವ ವಸ್ತುಗಳು ತಮ್ಮ ಬಣ್ಣಗಳನ್ನು ಮಾತ್ರವಲ್ಲ, ಅವುಗಳನ್ನು ಉತ್ಪಾದಿಸಿದ ಪರಮಾಣುವಿನ ಪ್ರಕ್ರಿಯೆಗಳ ಬಗ್ಗೆ ಮಾಹಿತಿಯನ್ನು ಸಹ ಪ್ರಸಾರ ಮಾಡುತ್ತವೆ ಎಂಬುದನ್ನು ನಮಗೆ ಬಹಿರಂಗಪಡಿಸಿತು. ಈ ಮೂಲಕ, ನಾವು ನಕ್ಷತ್ರಗಳ ರಾಸಾಯನಿಕ ರಚನೆಯನ್ನುಕಲಿಯಲು ಸಾಧ್ಯವಾಯಿತು. ಅಂತೆಯೇ, ಕಣ ವೇಗವರ್ಧಕಗಳು ಕ್ವಾಂಟಮ್-ಭೌತಶಾಸ್ತ್ರದ ಮಾಪಕದಲ್ಲಿ ಅಸ್ತಿತ್ವದಲ್ಲಿರುವ ಆಶ್ಚರ್ಯಕರ ಸಂಕೀರ್ಣತೆಯನ್ನು ಬಹಿರಂಗಪಡಿಸಿತು.

ನಾಗರೀಕತೆಯನ್ನು ಬದಲಾಯಿಸಿದ ಈ ಆವಿಷ್ಕಾರಗಳಲ್ಲಿ ದೂರದರ್ಶಕವು ಗೌರವಾನ್ವಿತ ಸ್ಥಾನವನ್ನು ಹೊಂದಿದೆ. 1609 ರಲ್ಲಿ, ದೂರದರ್ಶಿತ್ವದ ವಿಜ್ಞಾನಿ ಗೆಲಿಲಿಯೋ ಗೆಲಿಲಿಯೋ ತನ್ನ ಕಾಲದ ಈ ಹೊಸದಾಗಿ ಆವಿಷ್ಕರಿಸಿದ ಸಾಧನವನ್ನು ಆಕಾಶವನ್ನು ನೋಡಲು ತಿರುಗಿಸಿದನು. ಅವರ ಅವಲೋಕನಗಳು ಖಗೋಳೀಯ ಕಾಯಗಳು ಭೂಮಿಯ ಸುತ್ತ ಸುತ್ತುವುದಿಲ್ಲ ಎಂಬುದನ್ನು ನಿರ್ಣಾಯಕವಾಗಿ ತೋರಿಸಿದವು, ಹೀಗೆ ಆಮೂಲಾಗ್ರವಾಗಿ ಸೌರವ್ಯೂಹದ ಹೊಸ ಮಾದರಿಯನ್ನು ಮತ್ತು ಅದರಲ್ಲಿ ನಮ್ಮ ಸ್ಥಾನವನ್ನು ಮನ್ನಿಸುವಂತಾಯಿತು.

ನಾಲ್ಕು ನೂರು ವರ್ಷಗಳ ನಂತರ, ಡಿಜಿಟಲ್ ಶೋಧಕಗಳನ್ನು ಹೊಂದಿರುವ ಮತ್ತು ಮೋಡಗಳಿಂದಾಚೆಗೆ ಇರಿಸಲಾದ ದೂರದರ್ಶಕವು ಗೆಲಿಲಿಯೋನ ಮೊದಲ ಪ್ರಭಾವಶಾಲಿ ಸ್ಪೈಗ್ಲಾಸ್ ನ(spyglass – ಒಂದು ಚಿಕ್ಕದಾದ ಕೈಯಲ್ಲಿ ಹಿಡಿಯಬಹುದಾದ ದೂರದರ್ಶಕ) ಪರಂಪರೆಯನ್ನು ಮುಂದುವರಿಸುತ್ತಲೇ ಇದೆ. ಹಬಲ್ ಬಾಹ್ಯಾಕಾಶ ದೂರದರ್ಶಕವು – 1990 ರಲ್ಲಿ ಉಡಾವಣೆಯಾಯಿತು. ಇದು ಭೂಮಿಯ ವಾತಾವರಣದ ಪರಿಣಾಮಗಳಿಂದ ಬೆಳಕನ್ನು ಕ್ಷೀಣಿಸುವ ಕಕ್ಷೆಗಳಿಗಿಂತ ಮೇಲೆ ಸುತ್ತುತ್ತದೆ. ಖಗೋಳಶಾಸ್ತ್ರಜ್ಞರು ಇದನ್ನು ಸಣ್ಣ, ಹತ್ತಿರದ ಕ್ಷುದ್ರಗ್ರಹಗಳಿಂದ ಹಿಡಿದು ಅಗಾಧ ಮತ್ತು ದೂರದ ಗ್ಯಾಲಕ್ಸಿಗಳವರೆಗೆ ಅನೇಕ ಆಕಾಶಕಾಯಗಳ ಪರಿವರ್ತನಾತ್ಮಕ ಹೊಸ ದೃಷ್ಟಿಕೋನಗಳನ್ನು ಪಡೆಯಲು ಬಳಸಿದ್ದಾರೆ. ವಾಸ್ತವವಾಗಿ ಈಗ ಬ್ರಹ್ಮಾಂಡವನ್ನು ವ್ಯಾಪಿಸಿರುವಂತೆ ತೋರುವ ನಿಗೂಢ ಡಾರ್ಕ್ ಎನರ್ಜಿಯನ್ನು(dark energy) ಕಂಡುಹಿಡಿಯುವುದು ಮತ್ತು ನಿರೂಪಿಸುವುದರಲ್ಲಿ ಹಬಲ್ ಅವಲೋಕನಗಳು ಪ್ರಮುಖ ಪಾತ್ರ ವಹಿಸಿವೆ .

ಹಬಲ್ ಎಂಬ ಹೆಸರು ಫಲಪ್ರದವಾದ ವೈಜ್ಞಾನಿಕ ಅನ್ವೇಷಣೆಗೆ ಸಮಾನಾರ್ಥಕವಾಗಿದೆ. ಈ ಕಾರ್ಯಾಚರಣೆಗಳ (mission) ಯಶಸ್ಸು ಸಾರ್ವಜನಿಕರೊಂದಿಗೆ ಮಾನವನ ಜಿಜ್ಞಾಸೆ ಮತ್ತು ಎಂಜಿನಿಯರಿಂಗ್ ಜಾಣ್ಮೆಯ ಮೂಲರೂಪವಾಗಿ ಪ್ರತಿಧ್ವನಿಸುತ್ತದೆ. ಇದು ರಾಷ್ಟ್ರೀಯ ಹೆಮ್ಮೆಯ ಮೂಲವಾಗಿದೆ ಮತ್ತು ಇದಕ್ಕೆ ಅಂತರರಾಷ್ಟ್ರೀಯ ಸಹಯೋಗಕ್ಕೆ ಒಂದು ಮಾದರಿಯಾಗಿದೆ. ದೂರದರ್ಶಕದ ಆವಿಷ್ಕಾರಗಳ ಬೌದ್ಧಿಕ ಪ್ರಚೋದನೆ ಮತ್ತು ಸಂಪೂರ್ಣ ಸೌಂದರ್ಯವು ಸಾರ್ವಜನಿಕರನ್ನು ಆಕರ್ಷಿಸಿ ಅವರ ಸಂಸ್ಕೃತಿಗೂ ವ್ಯಾಪಿಸಿದೆ. ಹಬಲ್ ದೂರದರ್ಶಕದ ವೈಜ್ಞಾನಿಕ ಕೊಡುಗೆಗಳನ್ನು ಲಕ್ಷಾಂತರ ವಿದ್ಯಾರ್ಥಿಗಳ ತರಗತಿಯ ಪಠ್ಯಕ್ರಮದಲ್ಲಿ ವಾರ್ಷಿಕವಾಗಿ ಸಂಯೋಜಿಸಲಾಗುತ್ತದೆ ಮತ್ತು ವಿಶ್ವದಾದ್ಯಂತ ಪಠ್ಯಪುಸ್ತಕಗಳು, ವಸ್ತುಸಂಗ್ರಹಾಲಯಗಳು ಮತ್ತು ಮಾಧ್ಯಮ ತಾಣಗಳಲ್ಲಿ ಕಾಣಿಸಿಕೊಳ್ಳುತ್ತವೆ. ಹಬಲ್ ಸೆರೆಹಿಡಿದ ಚಿತ್ರಗಳು ಕಲೆ, ನೃತ್ಯ, ಸಂಗೀತ, ಸಿನೆಮಾ ಮತ್ತು ಫ್ಯಾಷನ್ ಗಳ ಮೇಲೆ ಸಹ ಗಮನಾರ್ಹವಾದ ಪ್ರಭಾವ ಬೀರಿವೆ.

ಈ ಪಠ್ಯವು ಐತಿಹಾಸಿಕ ಬಾಹ್ಯಾಕಾಶ ದೂರದರ್ಶಕದ ಬಗ್ಗೆ ಒಂದು ಅವಲೋಕನವನ್ನು ಒದಗಿಸುತ್ತದೆ. ಜೊತೆಗೆ ಅದರ ಇತಿಹಾಸ, ವಿನ್ಯಾಸ, ಕಾರ್ಯಾಚರಣೆ ಮತ್ತು ಅದರ ಕೆಲವು ಗಮನಾರ್ಹ ಆವಿಷ್ಕಾರಗಳು, ತಾಂತ್ರಿಕ ಕೊಡುಗೆಗಳು ಮತ್ತು ಸಂಸ್ಕೃತಿಯ ಮೇಲಿನ ಪ್ರಭಾವಗಳನ್ನು ಸಹ ಸಂಕ್ಷಿಪ್ತ ವಿಭಾಗಗಳಲ್ಲಿ ವಿವರಿಸಲಾಗಿದೆ.

ಹಬಲ್ ದೂರದರ್ಶಕದ ಅವಲೋಕನಗಳು ಖಗೋಳಶಾಸ್ತ್ರದ ಪ್ರತಿಯೊಂದು ಕ್ಷೇತ್ರಕ್ಕೂ ಹೊಸ ಮತ್ತು ಗಮನಾರ್ಹವಾದ ವೈಜ್ಞಾನಿಕ ಕೊಡುಗೆಗಳನ್ನು ನೀಡಿವೆ. ಉದಾಹರಣೆಗೆ ಅದರ ಬೆಕ್ಕಿನ ಕಣ್ಣಿನ ನೀಹಾರಿಕೆಯ (Cat’s Eye Nebula -NGC 6543) ವಿವರವಾದ ಚಿತ್ರಣವು, ಹಿಂದೆಂದಿಗಿಂತಲೂ ಹೆಚ್ಚು ಸಂಕೀರ್ಣ ರಚನೆಗಳನ್ನು ಬಹಿರಂಗಪಡಿಸಿತು. ಈ ಸಂಕೀರ್ಣ ಗ್ರಹಗಳ ನೀಹಾರಿಕೆಯು ತನ್ನ ಬಹು ಅನಿಲ ಶೆಲ್ಲುಗಳು(multiple gas shells), ಆಘಾತ ತರಂಗಗಳು(shockwaves) ಮತ್ತು ಸ್ಟೆಲ್ಲರ್ ಜೆಟ್ ಗಳನ್ನು (stellar jets) ಸೃಷ್ಟಿಸಿದ ಒಂದು ಅವಳಿ ನಕ್ಷತ್ರವನ್ನು (binary star) ಸುತ್ತುವರೆದಿದೆ ಎಂದು ಶಂಕಿಸಲಾಗಿದೆ.

ಬೆಕ್ಕಿನ ಕಣ್ಣಿನ ನೀಹಾರಿಕೆಯ - ಹಬಲ್ ಸೆರೆಹಿಡಿದ  ಚಿತ್ರ
ಬೆಕ್ಕಿನ ಕಣ್ಣಿನ ನೀಹಾರಿಕೆಯ – ಹಬಲ್ ಸೆರೆಹಿಡಿದ ಚಿತ್ರ
Spread the Knowledge

You may also like...

Leave a Reply

Your email address will not be published. Required fields are marked *