ನಾ. ಡಿಸೋಜ

ನಾ . ಡಿಸೋಜ

ಡಾ. ನಾರ್ಬಟ್‌ ಡಿಸೋಜರವರು 1937 ಜೂನ್‌ 6ರಂದು ಜನಿಸಿದರು. ತಂದೆ ಎಫ್‌.ಪಿ.ಡಿಸೋಜ, ತಾಯಿ ರೂಪಿನ್ನಾ ಡಿಸೋಜ.

ನಾ.ಡಿಸೋಜರವರು ಈವರೆಗೆ 37 ಕಾದ೦ಬರಿಗಳನ್ನು ನಾಲ್ಕು ನಾಟಕಗಳನ್ನು, ಇಪ್ಪತ್ತೆಂಟು ಮಕ್ಕಳ ಕೃತಿಗಳನ್ನು ನೂರಾರು ಕತೆಗಳನ್ನು ಬರೆದಿದ್ದಾರೆ. ಇವರ ಕಾದ೦ಬರಿ “ಕಾಡಿನ ಬೆಂಕಿ” ಹಾಗೊ “ದ್ವೀಪ’ ಚಲನಚಿತ್ರಗಳಾಗಿ ‘ರಜತಕಮಲ’ ಹಾಗೂ “ಸ್ವರ್ಣಕಮಲ” ಪ್ರಶಸ್ತಿಗಳನ್ನು ಪಡೆದಿವೆ. “ಬಳುವಳಿ ಕಾದ೦ಬರಿ ಕೊಂಕಣೆಯಲ್ಲಿ ಚಲನಚಿತ್ರವಾಗಿದೆ. “ಸಾರ್ಕ್‌’ ದೇಶಗಳ ಸಾಹಿತಿಗಳ ಸಮ್ಮೇಳನದಲ್ಲಿ ಸ್ವಂತ ಕಥಾವಾಚನ ಮಾಡಿದ್ದರು. ಇವರ “ಮುಳುಗಡೆಯ ಊರಿಗೆ ಬ೦ದವರು’ ಕಿರು ಕಾದಂಬರಿಗೆ 2011 ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ದೊರೆತಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗುಲ್ವಾಡಿ ವೆಂಕಟರಾವ್‌ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರು ಸಂದೇಶ ಪ್ರಶಸ್ತಿ, ನವದೆಹಲಿ ಕಥಾ ಪ್ರಶಸ್ತಿ, ಪುತ್ತೂರು ನಿರಂಜನ ಸಾಹಿತ್ಯ ಪ್ರಶಸ್ತಿ ಮುಂತಾದವುಗಳಿಂದ ಪುರಸ್ಕೃತರಾಗಿದ್ದಾರೆ. ಜನವರಿ 2014ರಲ್ಲಿ ಮಡಿಕೇರಿಯಲ್ಲಿ ನಡೆದ ಅಖಿಲ್ಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Spread the Knowledge

You may also like...

Leave a Reply

Your email address will not be published. Required fields are marked *