The Blind Boy – Kannada Summary
O say what is that thing call’d light,
Which I must ne’er enjoy.
What are the blessings of the sight,
O tell your poor blind boy!
ಹೊಯ್, ಬೆಳಕು ಎನ್ನುವ ಅದು ಏನು ಎಂದು ಹೇಳು,
ನಾನು ಎಂದಿಗೂ ಸವಿಯಲು ಅಗೋವುದಿಲ್ಲವೋ ಅದನ್ನು.
ದೃಷ್ಟಿಯ ಅನುಗ್ರಹಗಳಾದರೂ ಏನು,
ಹೊಯ್ ಹೇಳು ಈ ಪಾಪದ ಕುರುಡು ಹುಡುಗನಿಗೆ!
You talk of wondrous things you see,
You say the sun shines bright;
I feel him warm, but how can he
Or make it day or night?
ನೀವು ನೋಡುವ ಅದ್ಭುತ ವಿಷಯವಾಗಿ ಮಾತನಾಡುತ್ತೀರಿ,
ಸೂರ್ಯನು ಪ್ರಕಾಶಮಾನವಾಗಿ ಹೊಳೆಯುತ್ತಾನೆ ಎಂದು ನೀವು ಹೇಳುತ್ತೀರಿ;
ನಾನೂ ಬೆಚ್ಚಗಿನ ಅವನನ್ನು ಅನುಭವಿಸಿದ್ದೇನೆ, ಆದರೆ ಅವನು ಹೇಗೆ
ಹಗಲು ಮತ್ತು ರಾತ್ರಿಗಳನ್ನು ಮಾಡಲು ಸಾಧ್ಯ ?
My day or night myself I make,
When’ver I sleep or play;
And could I ever keep awake
With me ‘twere always day.
ನನ್ನ ಹಗಲು ಅಥವಾ ರಾತ್ರಿಯನ್ನು ಸ್ವತಃ ನಾನೆ ಆಗಿಸುತ್ತೇನೆ,
ಯಾವಾಗ ಬೇಕೋ ಆಗ ನಿದ್ದೆ ಅಥವಾ ಆಟ;
ಮತ್ತು ನಾನು ಎಚ್ಚರವಾಗಿರುತ್ತೇನೆಯೋ
ಅಷ್ಟೂ ನನಗೆ ಹಗಲಾಗಿಯೇ ಇರುತ್ತದೆ.
With heavy sighs I often hear
You mourn my hapless woe;
But sure with patience I can bear
A loss I ne’er can know.
ನಾನು ಆಗಾಗ್ಗೆ ಕೇಳಿಸಿಕೊಳ್ಳುತ್ತೇನೆ ಭಾರವಾದ ನಿಟ್ಟುಸಿರುಗಳನ್ನು
ನನ್ನ ಅದೃಷ್ಟಹೀನ ಪರಿಸ್ಥಿತಿಯ ಬಗ್ಗೆ ನೀವು ದುಃಖಿಸುತ್ತೀರಿ;
ಆದರೆ ನನಗೆ ತಾಳ್ಮೆಯಿದೆ , ನಾನು
ಸಹಿಸುವೆ ನನಗೆ ಎಂದಿಗೂ ತಿಳಿಯಲಾಗದ ನಷ್ಟವನ್ನು.
Then let not what I cannot have
My cheer of mind destroy :
Whilst thus I sing, I am a king,
Although a poor blind boy.
ಅಂತೆಯೇ ನಾನು ಹೊಂದಲು ಸಾಧ್ಯವಾಗದ್ದನ್ನು ಬಿಡಬೇಡಿ
ನನ್ನ ಮನಸಿನ ಉಲ್ಲಾಸವನ್ನು ನಾಶಮಾಡಲು :
ನಾನು ಹೀಗೆ ಹಾಡುವಾಗ, ನಾನೆ ರಾಜ ,
ಪಾಪದ ಕುರುಡ ಹುಡುಗನಾದರೂ ಕೂಡ.
ಸಾರಾಂಶ
ಈ ಕವನದಲ್ಲಿ ಕಣ್ಣು ಕಾಣಿಸದ ಒಬ್ಬ ಅಂಧ ಹುಡುಗನು ಎಲ್ಲವನ್ನು ನೋಡಲು ದೃಷ್ಟಿ ಉಳ್ಳ ತನ್ನ ಜೊತೆಗಾರರಿಗೆ ತನ್ನ ಮನಸಿನ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದಾನೆ. ಅವನಿಗೆ ಮೊದಲು ಬೆಳಕು ಕತ್ತಲು ಎಂದರೇ ಏನು ಎಂದೇ ತಿಳಿಯುತ್ತಿಲ್ಲ. ಯಾಕೆಂದರೆ ಕಣ್ಣು ಕಾಣದ ಅವನಿಗೆ ಹಗಲು ಒಂದೇ, ರಾತ್ರಿಯೂ ಒಂದೇ. ಯಾವಾಗಲು ಕತ್ತಲೆಯೇ. ಹೀಗಾಗಲಿ ಅವನು ತನ್ನ ಗೆಳೆಯರಲ್ಲಿ ಕೇಳುತ್ತಿದ್ದಾನೆ –
ನಾನು ಎಂದೂ ನೋಡಲಾಗದ , ತಿಳಿಯಲಾಗದ, ಅನುಭಿವಿಸಲು ಆಗದ, ಆ ಬೆಳಕು ಎಂದು ನೀವು ಹೇಳುವ ಅದು ಹೇಗಿರುತ್ತದೆ ನನಗೆ ಹೇಳಿ. ನಿಮ್ಮ ಆ ದೃಷ್ಟಿಯಿಂದ ನಿಮಗೆ ಸಿಗುವ ಅನುಕೂಲಗಳಾದರೂ ಏನು ಎಂದು ಈ ನಿಮ್ಮ ಪಾಪದ ಕುರುಡು ಹುಡುಗನಿಗೆ ಹೇಳಿ.
ನಿಮಗೆ ಕಾಣಿಸುವ ಅನೇಕ ಅದ್ಭುತ ಕುತೂಹಲಕಾರಿ ಸಂಗತಿಗಳ ಬಗ್ಗೆ ಮಾತನಾಡುತ್ತೀರಲ್ಲ, ಸೂರ್ಯನು ಪ್ರಕಾಶಮಾನವಾಗಿ ಹೊಳೆಯುತ್ತಾನೆ ಎಂದು ಹೇಳುತ್ತೀರಿ. ನನಗು ಅವನ ಬಿಸಿಲ ಬೆಳಕಿನ ಬೆಚ್ಚಗಿನ ಅನುಭವವಾಗುತ್ತದೆ. ಆದರೆ ಅವನು ಅದು ಹೇಗೆ ಹಗಲು ರಾತ್ರಿಗಳನ್ನು ಮಾಡುತ್ತಾನೆ ಎಂದೇ ಅರ್ಥವಾಗುವುದಿಲ್ಲ.
ಯಾಕೆಂದರೆ ನನಗೆ ಹಗಲು ಇರುಳು ಎರಡೂ ಒಂದೇ ರೀತಿಯಾಗಿ ಕಾಣಿಸುತ್ತದೆ. ನನಗೆ ಬೇಕಾದಾಗ ಹಗಲು, ಬೇಕೆಂದಾಗ ರಾತ್ರಿ. ನಾನು ಎಚ್ಚರವಿದ್ದು ಆಟವಾಡುವಾಗ ಅದು ನನಗೆ ಹಗಳಾಗಿರುತ್ತದೆ. ನಿದ್ದೆ ಬಂದು ಮಲಗಿದಾಗಲೇ ರಾತ್ರಿ. ಹಾಗಾಗಿ ನಾನು ಎಚ್ಚರವರುವಷ್ಟೂ ಸಮಯ ನನಗೆ ಹಗಳಾಗಿಯೇ ಇರುತ್ತದೆ. ಸೂರ್ಯ ಮುಳುಗಿ ಕತ್ತಲಾದಾಗ ಅಲ್ಲ.
ನನ್ನ ಕಣ್ಣು ಕಾಣಿಸದ ಪರಿಸ್ಥಿಯ ಬಗ್ಗೆ ನೀವುಗಳು ಕನಿಕರದಿಂದ ದುಃಖಿಸಿ ಭಾರವಾದ ನಿಟ್ಟುಸಿರುಗಳನ್ನು ಬಿಡುವುದು ನನಗೆ ಕೇಳಿಸುತ್ತದೆ. ಆದರೆ ನನಗೆ ಗೊತ್ತೇ ಇರದ ,ಅರ್ಥವೇ ಆಗದ ವಿಷಯದ ಬಗ್ಗೆ ನಾನು ಏನು ಯೋಚಿಸಲು ಸಾಧ್ಯ . ಹಾಗಾಗಲಿ ನನಗೆ ದೃಷ್ಟಿಯಿಲ್ಲದ ಬಗ್ಗೆ ನನಗೆ ಏನು ಅನಿಸುವುದಿಲ್ಲ. ನನಗೆ ತಿಳಿಯದ ವಿಷಯವು ನನಗೆ ಬೇಕು ಎಂದು ಹೇಗೆ ಅನಿಸುತ್ತದೆ. ನನಗೆ ಈ ವಿಷಯದಲ್ಲಿ ಏನು ಬೇಜಾರಿಲ್ಲ.
ಹಾಗಾಗಿ ನನಗೆ ಅರ್ಥವೇ ಆಗದ, ನನಗೆ ಎಂದೂ ಸಿಗದ ದೃಷ್ಟಿಯ ವಿಷಯವಾಗಿ ನನ್ನ ಮನಸಿನ ಶಾಂತಿ ಸಂತೋಷಗಳನ್ನು ಬಳಿ ಕೊಡಲು ನನಗೆ ಇಷ್ಟವಿಲ್ಲ. ನೀವುಗಳು ಕೂಡ ನನ್ನ ಕುರುಡುತನದ ಬಗ್ಗೆ ಮರುಗಿ ನನಗೆ ನೋವು ಮಾಡಬೇಡಿ. ನನಗೆ ಕಣ್ಣು ಕಾಣಿಸದೆ ಇರಬಹುದು. ನಾನು ಪಾಪದ ಕುರುಡ ಹುಡುನಗಾದರು ಸರಿ ಪರವಾಗಿಲ್ಲ. ಆದರೆ ನನಗೆ ಅನುಭವಕ್ಕೆ ಸಿಗುವ ಅರ್ಥವಾಗುವ ನನ್ನ ಪ್ರಪಂಚದಲ್ಲಿ ನಾನೆ ರಾಜ. ನಾನು ಅಲ್ಲಿ ಖುಷಿಯಿಂದ ಹಾಡುತ್ತೇನೆ, ಆಡುತ್ತೇನೆ.