ಕನ್ನಡ ವ್ಯಾಕರಣ – ವಿಭಕ್ತಿ ಪ್ರತ್ಯಯಗಳು

ನಾಮಪ್ರಕೃತಿಗಳ ಮುಂದೆ ಸೇರಿ, ಬೇರೆಬೇರೆ ಅರ್ಥವನ್ನುಂಟು ಮಾಡುವ ಉ, ಅನ್ನು, ಇಂದ ಗೆ, ಕೆ ದೆಸೆಯಿಂದ, ಅ, ಅಲ್ಲಿ, ಇತ್ಯಾದಿಗಳಿಗೆ ವಿಭಕ್ತಿ ಪ್ರತ್ಯಯಗಳು ಎನ್ನುವರು.

ನಾಮಪ್ರಕೃತಿಗಳ ಮುಂದೆ ಸೇರಿ, ಬೇರೆಬೇರೆ ಅರ್ಥವನ್ನುಂಟು ಮಾಡುವ ಉ, ಅನ್ನು, ಇಂದ ಗೆ, ಕೆ ದೆಸೆಯಿಂದ, ಅ, ಅಲ್ಲಿ, ಇತ್ಯಾದಿಗಳಿಗೆ ವಿಭಕ್ತಿ ಪ್ರತ್ಯಯಗಳು ಎನ್ನುವರು.

ನಾಮಪ್ರಕೃತಿ: ನಾಮಪದದ ಮೂಲ ರೂಪವನ್ನು ನಾಮಪ್ರಕೃತಿ ಎನ್ನುವರು.

ನಾಮ ಪದದ ಮೂಲರೂಪದೊಂದಿಗೆ ಸೇರಿರುವ – ಉ, ಅನ್ನು, ಇಂದ, ಗೆ, ದೆಸೆಯಿಂದ, ಅ, ಅಲ್ಲಿ – ಇವು ವಿಭಕ್ತಿ ಪ್ರತ್ಯಯಗಳು.

ಹೀಗೆ ನಾಮಪ್ರಕೃತಿಗಳಿಗೆ ವಿಭಕ್ತಿ ಪ್ರತ್ಯಯಗಳು ಸೇರಿದ ರೂಪವನ್ನು ‘ನಾಮಪದ’ ಎಂದು ಕರೆಯುತ್ತೇವೆ.

ನಾಮಪ್ರಕೃತಿ + ಪ್ರತ್ಯಯ = ನಾಮಪದ

ಮನೆ + ಅನ್ನು = ಮನೆಯನ್ನು
ರಾಮ + ಅನ್ನು = ರಾಮನನ್ನು


ಈ ವಾಕ್ಯವನ್ನು ಗಮನಿಸಿ:

“ಭೀಮನು ತನ್ನ ಬಲಗಾಲಿನಿಂದ ಚೆಂಡನ್ನು ಒದೆದನು.”

ಈ ವಾಕ್ಯದಲ್ಲಿ ಭೀಮ, ತಾನು, ಬಲಗಾಲು, ಚೆಂಡು ಎಂಬ ಪದಗಳು ನಾಮಪ್ರಕೃತಿಗಳಾಗಿವೆ.
ಈ ನಾಮಪ್ರಕೃತಿಗಳನ್ನು ಮಾತ್ರ ಹೇಳಿ ‘ಒದೆದನು’ ಎಂಬ ಕ್ರಿಯಾಪದವನ್ನು ಹೇಳಿದರೆ ಅರ್ಥ ಸ್ಪಷ್ಟವಾಗುವುದಿಲ್ಲ. ( ಭೀಮ ತಾನು ಬಳಗಳು ಚೆಂಡು ಒದೆದನು ಎಂದು ಹೇಳಿದ್ದರೆ )
ಈ ಎಲ್ಲಾ ನಮ ಪ್ರಕೃತಿಗಳಿಗೆ ಕಾರಕಾರ್ಥಕ್ಕೆ ಅನುಗುಣವಾಗಿ ಪ್ರತ್ಯಗಳನ್ನು ಸೇರಿಸಿದಾಗ ವಾಕ್ಯವು ಅರ್ಥಪೂರ್ಣವಾಗುತ್ತದೆ.

— ‘ಭೀಮ’ ಎಂಬ ಪದಕ್ಕೆ ‘ಕರ್ತ್ರರ್ಥ’ದಲ್ಲಿ ‘’ ಎಂಬ ಪ್ರತ್ಯಯವನ್ನೂ
— ‘ತಾನು’ ಎಂಬ ಸರ್ವನಾಮಕ್ಕೆ ‘ಸಂಬಂಧಾರ್ಥ’ದಲ್ಲಿ ‘ಅ’ ಎಂಬ ಪ್ರತ್ಯಯವನ್ನೂ
— ‘ಚೆಂಡು’ ಎಂಬ ಪದಕ್ಕೆ ‘ಕರ್ಮಾರ್ಥ’ದಲ್ಲಿ ‘ಅನ್ನು’ ಎಂಬ ಪ್ರತ್ಯಯವನ್ನೂ
—‘ಬಲಗಾಲು’ ಎಂಬ ಪದಕ್ಕೆ ‘ಕರಣಾರ್ಥ’ದಲ್ಲಿ ‘ಇಂದ’ ಎಂಬ ಪ್ರತ್ಯಯವನ್ನೂ ಸೇರಿಸಿ
— ‘ಒದೆದನು’ ಎಂಬ ‘ಕ್ರಿಯಾಪದ’ವನ್ನು ಸೇರಿಸಿದಾಗ

— ‘ಭೀಮನು ತನ್ನ ಬಲಗಾಲಿನಿಂದ ಚೆಂಡನ್ನು ಒದೆದನು’ ಎಂಬ ಅರ್ಥಪೂರ್ಣವಾದ ವಾಕ್ಯದ ರಚನೆಯಾಯಿತು.

ಹೀಗೆ….
ಕರ್ತೃ, ಕರ್ಮ, ಕರಣ, ಸಂಪ್ರದಾನ, ಅಪಾದಾನ, ಅಧಿಕರಣಾದಿ ಕಾರಕಾರ್ಥಗಳನ್ನು ಹೊಂದಿರುವ ಪ್ರತ್ಯಯಗಳೇ ವಿಭಕ್ತಿ ಪ್ರತ್ಯಯಗಳು.

ವಿಭಕ್ತಿ ಪ್ರತ್ಯಯಗಳು

ವಿಭಕ್ತಿ ಪ್ರತ್ಯಯಗಳು
ವಿಭಕ್ತಿ ಪ್ರತ್ಯಯಗಳು

ಈ ವಿಭಕ್ತಿ ಪ್ರತ್ಯಯಗಳು ಹಳಗನ್ನಡ ಮತ್ತು ಹೊಸಗನ್ನಡದಲ್ಲಿ ಯಾವ ರೂಪದಲ್ಲಿವೆ ಎಂಬುದನ್ನು ನೋಡೋಣ.

ವಿಭಕ್ತಿ ಪ್ರತ್ಯಯಗಳು ಹೊಸಗನ್ನಡ ಮತ್ತು ಹಳಗನ್ನಡ ರೂಪದಲ್ಲಿ
ವಿಭಕ್ತಿ ಪ್ರತ್ಯಯಗಳು ಹೊಸಗನ್ನಡ ಮತ್ತು ಹಳಗನ್ನಡ ರೂಪದಲ್ಲಿ

ವಿಭಕ್ತಿ ಪಲ್ಲಟ :

ನಾವು ಮಾತನಾಡುವಾಗ ಪ್ರಕೃತಿಗಳಿಗೆ ಯಾವ ವಿಭಕ್ತಿ ಪ್ರತ್ಯಯವನ್ನು ಬಳಸಬೇಕೋ ಅದನ್ನು ಬಳಸದೆ ಬೇರೆ ವಿಭಕ್ತಿ ಪ್ರತ್ಯಯವನ್ನು ಬಳಸಿ ಮಾತಾನಾಡುವುದುಂಟು.
ಹೀಗೆ ಒಂದು ವಿಭಕ್ತಿ ಪ್ರತ್ಯಯದ ಬದಲಿಗೆ ಅರ್ಥ ವ್ಯತ್ಯಾಸವಾಗದಂತೆ ಇನ್ನೊಂದು ವಿಭಕ್ತಿ ಪ್ರತ್ಯಯವನ್ನು ಬಳಸುವ ಕ್ರಮಕ್ಕೆ ‘ವಿಭಕ್ತಿ ಪಲ್ಲಟ’ ಎಂದು ಹೇಳುತ್ತೇವೆ.

ದ್ವಿತೀಯಾ ಬದಲಿಗೆ ಚತುರ್ಥೀ ವಿಭಕ್ತಿ ಸೇರಿದಾಗ –
— ಊರನ್ನು ಸೇರಿದನು (ದ್ವಿತೀಯಾ) ಊರಿಗೆ ಸೇರಿದನು (ಚತುರ್ಥೀ)
—ಬೆಟ್ಟವನ್ನು ಹತ್ತಿದನು (ದ್ವಿತೀಯಾ) ಬೆಟ್ಟಕ್ಕೆ ಹತ್ತಿದನು. (ಚತುರ್ಥೀ)

ಪಂಚಮೀ ಬದಲಿಗೆ ತೃತೀಯಾ ವಿಭಕ್ತಿ ಸೇರಿದಾಗ –
— ಮರದ ದೆಸೆಯಿಂದ ಹಣ್ಣು ಬಿತ್ತು (ಪಂಚಮೀ)
—— ಮರದಿಂದ ಹಣ್ಣು ಬಿತ್ತು (ತೃತೀಯಾ)

—ಕೌರವನ ದೆಸೆಯಿಂದ ಕೇಡಾಯ್ತು (ಪಂಚಮೀ)
——ಕೌರವನಿಂದ ಕೇಡಾಯ್ತು (ತೃತೀಯಾ)

ಷಷ್ಠೀ ಬದಲಿಗೆ ಚತುರ್ಥೀ ವಿಭಕ್ತಿ ಸೇರಿದಾಗ –
—ನಮ್ಮ ಚಿಕ್ಕಪ್ಪ (ಷಷ್ಠೀ) ನಮಗೆ ಚಿಕ್ಕಪ್ಪ (ಚತುರ್ಥೀ)
— ಅಯೋಧ್ಯೆಯ ರಾಜ (ಷಷ್ಠೀ) ಅಯೋಧ್ಯೆಗೆ ರಾಜ (ಚತುರ್ಥೀ)


Spread the Knowledge

You may also like...

1 Response

  1. Ramesh says:

    Hey hi

Leave a Reply

Your email address will not be published. Required fields are marked *