ವಚನಕಾರ: ಅಲ್ಲಮಪ್ರಭು – ಕ್ರಿ.ಶ .1160

ವಚನಕಾರ: ಅಲ್ಲಮಪ್ರಭು – ಕ್ರಿ.ಶ .1160

ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆ ಇವನ ಜನ್ಮಸ್ಥಳ. ಯೌವನದಲ್ಲಿಯೇ ವಿರಕ್ತಿಯತ್ತ ಮುಖ ಮಾಡಿ ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ ಮದ್ದಳೆ ಬಾರಿಸುವ ಸೇವೆ ಮಾಡುತ್ತಿದ್ದನು. ಶಿವನ ಧ್ಯಾನದಲ್ಲಿ ಆಸಕ್ತನಾಗಿ, ಆಳವಾದ ಆತ್ಮಚಿಂತನೆ ನಡೆಸಿ, ತನ್ನ ಕಾಣ್ಕೆಯನ್ನು ವಚನಗಳಲ್ಲಿ ಪ್ರಕಟಿಸಿದ್ದಾನೆ. ಅನುಭವ ಮಂಟಪದ ಅಧ್ಯಕ್ಷನಾಗಿದ್ದ. ಬಸವಣ್ಣ, ಅಕ್ಕಮಹಾದೇವಿ, ಚೆನ್ನಬಸವಣ್ಣ, ಸಕಲೇಶಮಾದರಸ ಮುಂತಾದ ಶರಣರಿಗೆ ಮಾರ್ಗದರ್ಶಕನಾಗಿದ್ದನು.


ಅಲ್ಲಮಪ್ರಭುವಿನ ವಚನಗಳು ಪ್ರತಿಭಟನಾತ್ಮಕ, ವಿಚಾರಾತ್ಮಕ ಹಾಗೂ ವಿಮರ್ಶಾತ್ಮಕ ಅಂಶಗಳನ್ನೊಳಗೊಂಡು ಸತ್ಯಾನ್ವೇಷಣೆಯ ದಿಕ್ಕಿಗೆ ಕೊಂಡೊಯ್ಯುತ್ತವೆ. ಇಂತಹ ಸಂದರ್ಭದಲ್ಲಿ ಅವನ ವಾಕ್ಶಕ್ತಿ ಹಾಗೂ ಪದಪ್ರಯೋಗಗಳು ನೇರವಾಗಿರುತ್ತವೆ. ಹೇಳಲಿಚ್ಛಿಸಿದ್ದನ್ನು ಅಳುಕದೆ ಹೇಳುವುದು ಇವನ ವಚನಗಳ ವೈಶಿಷ್ಟ್ಯ. ತಾನು ಪಡೆದ ಲೋಕಾನುಭವವನ್ನು ಇತರರಿಗೆ ಹಂಚುವ ಪ್ರಯತ್ನ ಮಾಡಿದ್ದಾನೆ.

ದೇಹವನ್ನು ಬಂಡಿಗೆ ಹೋಲಿಸಿ ಅದನ್ನು ಆಳಲು ಪ್ರಯತ್ನ ಮಾಡುವ ಪಂಚೇಂದ್ರಿಯಗಳನ್ನು ಹದ್ದುಬಸ್ತಿನಲ್ಲಿಡದಿದ್ದರೆ ಅನಾಹುತಕ್ಕೆ ಆಹ್ವಾನವಿತ್ತಂತೆ. ಆಡಂಬರದ ಹಾಗೂ ಯಾಂತ್ರಿಕ ಭಕ್ತಿಯನ್ನು ಪ್ರಶ್ನಿಸುವ ಮನೋಭಾವನೆಯ ಜೊತೆಗೆ ಶರಣ ಮತ್ತು ಆರಾಧನೆಯ ನಡುವಿನ ವ್ಯತ್ಯಾಸವನ್ನು ಖಂಡಿಸುವ ಪ್ರವೃತ್ತಿಯಿದೆ. ದೇವರನ್ನೇ ಪ್ರಶ್ನಿಸುವ ಹಾಗೂ ನಾನೇ ದೇವರೆನ್ನುವ ಧೈರ್ಯ ಇವನ ವಚನಗಳಲ್ಲಿ ಕಂಡುಬರುತ್ತದೆ.

Spread the Knowledge

You may also like...

Leave a Reply

Your email address will not be published. Required fields are marked *