Gentleman of Rio en Medio – Juan A.A. Sedillo Kannada Summary
ರಿಯೊ ಎನ್ ಮೆಡಿಯೊದ ಸಂಭಾವಿತ ವ್ಯಕ್ತಿ
1. It took months of negotiation to come to an understanding with the old man. He was in no hurry. What he had the most of was time. He lived up in Rio en Medio, where his people had been for hundreds of years. He tilled the same land they had tilled. His house was small and wretched, but quaint. The little creek ran through his land. His orchard was gnarled and beautiful.
ಮುದುಕನೊಡನೆ ಒಂದು ಒಪ್ಪಂದಕ್ಕೆ ಬರಲು ತಿಂಗಳುಗಳ ಕಾಲ ಮಾತುಕತೆಗಳು ಬೇಕಾಯಿತು. ಅವನಿಗೆ ಆತುರವಿರಲಿಲ್ಲ. ಅವನ ಬಳಿ ಸಾಕು ಸಾಕು ಅನ್ನೋ ಅಷ್ಟು ಬಿಡುವಿನ ಸಮಯವಿತ್ತು. ಅವನು ರಿಯೊ ಎನ್ ಮೆಡಿಯೋದಲ್ಲಿ ವಾಸಿಸುತ್ತಿದ್ದನು, ಅವನ ಕುಟುಂಬಸ್ಥರು ನೂರಾರು ವರ್ಷಗಳಿಂದ ಅಲ್ಲಿಯೇ ಇದ್ದರು. ಅವರು ಉಳುಮೆ ಮಾಡಿದ ಅದೇ ಭೂಮಿಯನ್ನು ಅವನು ಕೂಡ ಉಳುತ್ತಿದ್ದನು. ಅವನ ಮನೆ ಚಿಕ್ಕದಾಗಿತ್ತು ಬಡತನ ಎದ್ದು ಕಾಣುತಿತ್ತು ಆದರೆ ವಿಲಕ್ಷಣವಾಗಿಯೂ ಒಂದು ರೀತಿಯಲ್ಲಿ ಆಕರ್ಷಕವಾಗಿಯೂ ಇತ್ತು. ಅವನ ಭೂಮಿಯ ಮೂಲಕ ಸಣ್ಣ ತೊರೆಯು ಹರಿಯುತಿತ್ತು. ಅವನ ಹಣ್ಣಿನ ತೋಟವು ಗಬ್ಬು ನಾರುತ್ತಿದ್ದರೂ ಸುಂದರವಾಗಿತ್ತು.
2. The day of the sale he came into the office. His coat was old, green and faded. I thought of Senator Catron, who has been such a power with these people up there in the mountains. Perhaps it was one of his old Prince Alberts. He wore gloves. They were old and torn and his finger tips showed through them. He carried a cane, but it was only the skeleton of a worn-out umbrella. Behind him walked one of his innumerable kin_a dark young man with eyes like a gazelle.
ಮಾರಾಟದ ದಿನ ಅವನು ಕಚೇರಿಗೆ ಬಂದನು. ಅವನ ಅಂಗಿ ಹಳೆಯದಾಗಿ, ಹಸಿರು ಹಾಗು ಮಸುಕಾಗಿತ್ತು. ನಾನು ನ್ಯಾಯಾಧೀಶ ಕ್ಯಾಟ್ರಾನ್ ನ ಬಗ್ಗೆ ಯೋಚಿಸಿದೆ, ಅವನು ಪರ್ವತಗಳ ಈ ಜನರ ಮೇಲೆ ಅಪಾರ ಅಧಿಕಾರ ಹೊಂದಿದ್ದಾನೆ.ಮುದುಕನಕ್ ಪ್ರಾಯಶಃ ಹಳೆಯ ಪ್ರಿನ್ಸ್ ಆಲ್ಬರ್ಟ್ ಶೈಲಿಯ ಕೋಟು ಹಾಕಿ, ಕೈಗವಸುಗಳನ್ನು ಧರಿಸಿದ್ದನು. ಅವು ಹಳೆಯದಾಗಿ ಹರಿದು ಹೋಗಿದ್ದವು ಮತ್ತು ಅವನ ಬೆರಳ ತುದಿಗಳು ಆ ತೂತುಗಳ ಮೂಲಕ ಕಾಣಿಸುತ್ತಿದ್ದವು . ಅವನು ಸವೆದುಹೋದ ಛತ್ರಿಯ ಅಸ್ಥಿಪಂಜರವಾದ ಕೋಲನ್ನು ಊರುಗೋಲನ್ನಾಗಿ ಹಿಡಿದಿದ್ದನು. ಅವನ ಅಸಂಖ್ಯಾತ ಬಳಗದಲ್ಲಿ ಜಿಂಕೆಯಂತಹ ಕಣ್ಣುಗಳನ್ನು ಹೊಂದಿದ್ದ ಒಬ್ಬ ಕಪ್ಪು ಯುವಕನು ಅವನ ಹಿಂದೆಯೇ ಬರುತ್ತಿದ್ದನು.
3. The old man bowed to all of us in the room. Then he removed his hat and gloves, slowly and carefully. Chaplin once did that in a picture, in a bank_he was the janitor. Then he handed his things to the boy who stood obediently behind the old man’s chair.
3. ಮುದುಕನು ಕೋಣೆಯಲ್ಲಿದ್ದ ನಮ್ಮೆಲ್ಲರಿಗೂ ನಮಸ್ಕರಿಸಿದ. ನಂತರ ಅವನು ತನ್ನ ಟೋಪಿ ಮತ್ತು ಕೈಗವಸುಗಳನ್ನು ನಿಧಾನವಾಗಿ ಮತ್ತು ಜಾಗರೂಕತೆಯಿಂದ ತೆಗೆದನು. ಚಾಪ್ಲಿನ್ ಅದೇ ರೀತಿ ಒಮ್ಮೆ ಒಂದು ಸಿನಿಮಾದಲ್ಲಿ ಮಾಡಿದ್ದಾನೆ, ಅದರಲ್ಲಿ ಅವನು ಒಂದು ಬ್ಯಾಂಕಿನ ಕಾವಲುಗಾರನಾಗಿದ್ದನು. ನಂತರ ಮುದುಕನು ತನ್ನ ವಸ್ತುಗಳನ್ನು ತನ್ನ ಕುರ್ಚಿಯ ಹಿಂದೆ ವಿಧೇಯತೆಯಿಂದ ನಿಂತಿದ್ದ ಹುಡುಗನ ಕೈಗೆ ನೀಡಿದನು.
4. There was a great deal of conversation about rain and his family. He was very proud of his large family. Finally we got down to business. Yes, he would sell, as he had agreed, for twelve hundred dollars, in cash. We would buy, and the money was ready. “Don Anselmo,” I said to him in Spanish, “We have made a discovery. You remember that we sent that surveyor, that engineer, up there to survey your land so as to make the deed. Well, he finds that you own more than eight acres. He tells us that your land extends across the river and that you own almost twice as much as you thought.” He didn’t know that. “And now, Don Anselmo,” I added, “These Americans are buena gente, they are good people, and they are willing to pay you for the additional land as well, at the same rate per acre, so that instead of twelve hundred dollars you will get almost twice as much, and the money is here for you.’’
4. ಮಳೆ ಮತ್ತು ಅವನ ಕುಟುಂಬದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ಅವನು ತಮ್ಮ ದೊಡ್ಡ ಕುಟುಂಬದ ಬಗ್ಗೆ ತುಂಬಾ ಹೆಮ್ಮೆಪಟ್ಟನು. ಕೊನೆಗೆ ನಾವು ವ್ಯವಹಾರಕ್ಕೆ ಇಳಿದೆವು. ಹೌದು, ಅವನು ಒಪ್ಪಿದಂತೆ ಹನ್ನೆರಡು ನೂರು ಡಾಲರುಗಳನ್ನು ನಗದು ರೂಪದಲ್ಲಿ ಮಾರುತ್ತಿದ್ದನು. ನಾವು ಖರೀದಿಸುತ್ತಿದ್ದೆವು, ಮತ್ತು ಹಣ ಸಿದ್ಧವಾಗಿತ್ತು. “ಡಾನ್ ಅನ್ಸೆಲ್ಮೊ,” ನಾನು ಸ್ಪ್ಯಾನಿಷ್ ಭಾಷೆಯಲ್ಲಿ ಹೇಳಿದೆ, “ನಾವು ಒಂದು ವಿಷಯವನ್ನು ಕಂಡುಹಿಡಿದಿದ್ದೇವೆ. ನಾವು ಆ ಸರ್ವೇಯರ್, ಆ ಎಂಜಿನಿಯರ್ ಅನ್ನು ನಿಮ್ಮ ಜಮೀನಿನ ಸರ್ವೇಕ್ಷಣೆ ಮಾಡಲು ಅಲ್ಲಿಗೆ ಕಳುಹಿಸಿದ್ದು ನಿಮಗೆ ನೆನಪಿದೆ ತಾನೇ. ಸರಿ, ನೀವು ಎಂಟು ಎಕರೆಗಿಂತ ಹೆಚ್ಚು ಭೂಮಿಯನ್ನು ಹೊಂದಿದ್ದೀರಿ ಎಂದು ಅವನು ಕಂಡು ಹಿಡಿದ. ನಿಮ್ಮ ಭೂಮಿ ನದಿಯುದ್ದಕ್ಕೂ ವ್ಯಾಪಿಸಿದೆ ಮತ್ತು ನೀವು ಅಂದುಕೊಂಡಿದ್ದಕ್ಕಿಂತ ಎರಡು ಪಟ್ಟು ಹೆಚ್ಚು ಒಡೆತನವನ್ನು ನೀವು ಹೊಂದಿದ್ದೀರಿ ಎಂದು ಅವರು ನಮಗೆ ಹೇಳುತ್ತಾರೆ.” ಅದು ಆ ಮುದುಕನಿಗೇ ಗೊತ್ತಿರಲಿಲ್ಲ. “ಈಗ, ಡಾನ್ ಅನ್ಸೆಲ್ಮೋ, ಈ ಅಮೆರಿಕನ್ನರು ಸಜ್ಜನರು, ಅವರು ಒಳ್ಳೆಯ ಜನರು, ಮತ್ತು ಅವರು ಹೆಚ್ಚುವರಿ ಜಮೀನಿಗೂ ಸಹ, ಎಕರೆಗೆ ಅದೇ ದರದಲ್ಲಿ ಪಾವತಿಸಲು ಸಿದ್ಧರಿದ್ದಾರೆ, ಆದ್ದರಿಂದ ಹನ್ನೆರಡು ನೂರು ಡಾಲರ್ ಗಳ ಬದಲು ನೀವು ಸುಮಾರು ಎರಡು ಪಟ್ಟು ಹೆಚ್ಚು ಪಡೆಯುತ್ತೀರಿ, ಮತ್ತು ಹಣ ನಿಮಗಾಗಿ ಇಲ್ಲಿದೆ” ಎಂದು ನಾನು ಹೇಳಿದೆ.
5. The old man hung his head for a moment in thought. Then he stood up and stared at me, “Friend,” he said, “I do not like to have you speak to me in that manner.” I kept still and let him have his say. “I know theseAmericans are good people, and that is why I have agreed to sell to them, but I do not care to be insulted. I have agreed to sell my house and land for twelve hundred dollars and that is the price.”
ಮುದುಕ ಒಂದು ಕ್ಷಣ ಯೋಚಿಸುತ್ತ ತಲೆ ತಗ್ಗಿಸಿದ. ಆಮೇಲೆ ಅವನು ಎದ್ದು ನಿಂತು ನನ್ನನ್ನೇ ದಿಟ್ಟಿಸಿ ನೋಡಿದನು, “ಗೆಳೆಯಾ,” ಅವನು ಹೇಳಿದನು, “ನೀನು ನನ್ನೊಂದಿಗೆ ಆ ರೀತಿ ಮಾತನಾಡುವುದನ್ನು ನಾನು ಇಷ್ಟಪಡುವುದಿಲ್ಲ.” ನಾನು ಸುಮ್ಮನಿದ್ದು ಅವನು ತನ್ನ ಮಾತನ್ನು ಹೇಳಲು ಬಿಟ್ಟೆ. “ಈ ಅಮೆರಿಕನ್ನರು ಒಳ್ಳೆಯವರು ಎಂದು ನನಗೆ ತಿಳಿದಿದೆ, ಮತ್ತು ಅದಕ್ಕಾಗಿಯೇ ನಾನು ಅವರಿಗೆ ಮಾರಾಟ ಮಾಡಲು ಒಪ್ಪಿಕೊಂಡಿದ್ದೇನೆ, ಆದರೆ ಅವಮಾನಕ್ಕೆ ಒಳಗಾಗಲು ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ನನ್ನ ಮನೆ ಮತ್ತು ಭೂಮಿಯನ್ನು ಹನ್ನೆರಡು ನೂರು ಡಾಲರ್ ಗಳಿಗೆ ಮಾರಾಟ ಮಾಡಲು ಒಪ್ಪಿಕೊಂಡಿದ್ದೇನೆ ಮತ್ತು ಅದೇ ಬೆಲೆ ಇರುತ್ತದೆ.”
6. I argued with him but it was useless. Finally he signed the deed and took the money but refused to take more than the amount agreed upon. Then he shook hands all around, put on his ragged gloves, took his stick and walked out with the boy behind him.
6. ನಾನು ಅವನೊಂದಿಗೆ ವಾದಿಸಿದೆ, ಆದರೆ ಅದು ನಿಷ್ಪ್ರಯೋಜಕವಾಗಿತ್ತು. ಅಂತಿಮವಾಗಿ ಅವನು ದಸ್ತಾವೇಜಿಗೆ ಸಹಿ ಹಾಕಿದನು ಮತ್ತು ಹಣವನ್ನು ತೆಗೆದುಕೊಂಡನು. ಆದರೆ ಒಪ್ಪಿದ ಮೊತ್ತಕ್ಕಿಂತ ಹೆಚ್ಚಿನದನ್ನು ತೆಗೆದುಕೊಳ್ಳಲು ನಿರಾಕರಿಸಿದನು. ನಂತರ ಅವನು ಸುತ್ತಲೂ ಎಲ್ಲರ ಕೈಕುಲುಕಿದನು, ತನ್ನ ಹರಿದ ಕೈಗವಸುಗಳನ್ನು ಧರಿಸಿ, ತನ್ನ ಕೋಲನ್ನು ತೆಗೆದುಕೊಂಡು ತನ್ನ ಹಿಂದೆ ಇದ್ದ ಹುಡುಗನೊಂದಿಗೆ ಹೊರಗೆ ನಡೆದನು.
7. A month later my friends had moved into Rio en Medio. They had replastered the old house, pruned the trees, patched the fence and moved in summer. One day they came back to the office to complain. The children of the village were overrunning their property. They came everyday and played under the trees, built little play fences around them, and took blossoms. When they were spoken to, they only laughed and talked back good-naturedly in Spanish.
ಒಂದು ತಿಂಗಳ ನಂತರ ನನ್ನ ಸ್ನೇಹಿತರು ರಿಯೊ ಎನ್ ಮೆಡಿಯೋಗೆ ಸ್ಥಳಾಂತರಗೊಂಡಿದ್ದರು. ಅವರು ಹಳೆಯ ಮನೆಯನ್ನು ಮರುವಿನ್ಯಾಸಗೊಳಿಸಿದ್ದರು, ಮರಗಳನ್ನು ಕತ್ತರಿಸಿದ್ದರು, ಬೇಲಿಗೆ ತೇಪೆ ಹಾಕಿದ್ದರು ಮತ್ತು ಬೇಸಿಗೆಯಲ್ಲಿ ಆ ಮನೆಗೆ ವಾಸವಿರಲು ಬಂದರು . ಒಂದು ದಿನ ಅವರು ದೂರು ನೀಡಲು ಕಚೇರಿಗೆ ಹಿಂತಿರುಗಿದರು. ಹಳ್ಳಿಯ ಮಕ್ಕಳು ಅವರ ಆಸ್ತಿಯನ್ನು ಅತಿಕ್ರಮಿಸುತ್ತಿದ್ದರು. ಮಕ್ಕಳು ಪ್ರತಿದಿನ ಬಂದು ಮರಗಳ ಕೆಳಗೆ ಆಟವಾಡುತ್ತಿದ್ದರು, ಸುತ್ತಲೂ ಸಣ್ಣ ಆಟದ ಬೇಲಿಗಳನ್ನು ನಿರ್ಮಿಸಿ ಹೂವುಗಳನ್ನು ಕಿತ್ತುಕೊಳ್ಳುತ್ತಿದ್ದರು. ಏನಾದರು ಹೇಳಿದರೆ, ಅವರು ಕೇವಲ ನಗುತ್ತಿದ್ದರು ಮತ್ತು ಸ್ಪ್ಯಾನಿಷ್ ಭಾಷೆಯಲ್ಲಿ ಒಳ್ಳೆಯ ಸ್ವಭಾವದವರಾಗಿ ಮಾತನಾಡಿದರು.
8. I sent a messenger up to the mountains for Don Anselmo. It took a week to arrange another meeting. When he arrived he repeated his previous preliminary performance. He wore the same faded cutaway, carried the same stick and was accompanied by the boy again. He shook hands all around, sat down with the boy behind his chair, and talked about the weather. Finally I broached the subject. “Don Anselmo, about the ranch you sold to these people. They are good people and want to be your good neighbours always. When you sold to them you signed a document, a deed, and in that deed you agreed to several things. One thing was that they were to have the complete possession of the property. Now, Don Anselmo, it seems that every day the children of the village overrun the orchard and spend most of their time there. We would like to know if you, as the most respected man in the village, could not stop them from doing so in order that these people might enjoy their new home more in peace.”
ಡಾನ್ ಅನ್ಸೆಲ್ಮೊಗಾಗಿ ಪರ್ವತಗಳಿಗೆ ಒಬ್ಬ ದೂತನನ್ನು ಕಳುಹಿಸಿದೆ. ಮತ್ತೊಂದು ಸಭೆಯನ್ನು ಏರ್ಪಡಿಸಲು ಒಂದು ವಾರ ಬೇಕಾಯಿತು. ಅವರು ಬಂದಾಗ ಅವರು ತಮ್ಮ ಹಿಂದಿನ ಪ್ರಾಥಮಿಕ ಪ್ರದರ್ಶನವನ್ನು ಪುನರಾವರ್ತಿಸಿದರು. ಅವನು ಅದೇ ಮಾಸಿದ ಕೋಟನ್ನು ಧರಿಸಿದ್ದನು, ಅದೇ ಕೋಲನ್ನು ಹಿಡಿದನು ಮತ್ತು ಮತ್ತೆ ಅದೇ ಹುಡುಗನೊಂದಿಗೆ ಬಂದನು. ಅವನು ಸುತ್ತಲೂ ಕೈಕುಲುಕಿದನು, ಕುಳಿತು ತನ್ನ ಕುರ್ಚಿಯ ಹಿಂದೆ ನಿಂತ ಹುಡುಗನೊಂದಿಗೆ , ಹವಾಮಾನದ ಬಗ್ಗೆ ಮಾತನಾಡಿದನು. ಅಂತಿಮವಾಗಿ ನಾನು ವಿಷಯವನ್ನು ಪ್ರಸ್ತಾಪಿಸಿದೆ. “ಡಾನ್ ಅನ್ಸೆಲ್ಮೋ, ನೀನು ಈ ಜನರಿಗೆ ಮಾರಿದ ಹೊಲದ ವಿಷಯವಾಗಿ ಕರೆಸಿದೆ. ಅವರು ಒಳ್ಳೆಯ ಜನರು ಮತ್ತು ಯಾವಾಗಲೂ ನಿಮ್ಮ ಉತ್ತಮ ನೆರೆಹೊರೆಯವರಾಗಿರಲು ಬಯಸುತ್ತಾರೆ. ನೀವು ಅವರಿಗೆ ಮಾರಾಟ ಮಾಡಿದಾಗ ನೀವು ಒಂದು ದಸ್ತಾವೇಜಿಗೆ, ಒಪ್ಪಂದಕ್ಕೆ ಸಹಿ ಮಾಡಿದಿರಿ, ಮತ್ತು ಆ ದಸ್ತಾವೇಜಿನಲ್ಲಿ ನೀವು ಹಲವಾರು ವಿಷಯಗಳಿಗೆ ಒಪ್ಪಿದ್ದೀರಿ. ಒಂದು ವಿಷಯವೆಂದರೆ ಅವರು ಆಸ್ತಿಯ ಸಂಪೂರ್ಣ ಸ್ವಾಧೀನವನ್ನು ಹೊಂದಿರಬೇಕು. ಈಗ, ಡಾನ್ ಅನ್ಸೆಲ್ಮೊ, ಪ್ರತಿದಿನ ಹಳ್ಳಿಯ ಮಕ್ಕಳು ತೋಟವನ್ನು ಅತಿಕ್ರಮಿಸುತ್ತಾರೆ ಮತ್ತು ತಮ್ಮ ಹೆಚ್ಚಿನ ಸಮಯವನ್ನು ಅಲ್ಲಿಯೇ ಕಳೆಯುತ್ತಾರೆ ಎಂದು ತೋರುತ್ತದೆ. ಹಳ್ಳಿಯ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿ, ಈ ಜನರು ತಮ್ಮ ಹೊಸ ಮನೆಯಲ್ಲಿ ಹೆಚ್ಚು ಶಾಂತಿಯಿಂದ ಆನಂದಿಸುವ ಸಲುವಾಗಿ ಆ ಮಕ್ಕಳನ್ನು ತಡೆಯಲು ನಿಮಗೆ ಸಾಧ್ಯವಾಗಲಿಲ್ಲವೇ ಎಂದು ನಾವು ತಿಳಿಯಲು ಬಯಸುತ್ತೇವೆ.”
9. Don Anselmo stood up. “We have all learned to love these Americans,” he said, “because they are good people and good neighbours. I sold them my property because I knew they were good people, but I did not sell them the trees in the orchard.”
ಡಾನ್ ಅನ್ಸೆಲ್ಮೊ ಎದ್ದು ನಿಂತನು. “ನಾವೆಲ್ಲರೂ ಈ ಅಮೆರಿಕನ್ನರನ್ನು ಪ್ರೀತಿಸುವುದನ್ನು ಕಲಿತಿದ್ದೇವೆ, ಏಕೆಂದರೆ ಅವರು ಒಳ್ಳೆಯ ಜನರು ಮತ್ತು ಉತ್ತಮ ನೆರೆಹೊರೆಯವರು. ಅವರು ಒಳ್ಳೆಯ ಜನರು ಎಂದು ನನಗೆ ತಿಳಿದಿದ್ದರಿಂದ ನಾನು ಅವರಿಗೆ ನನ್ನ ಆಸ್ತಿಯನ್ನು ಮಾರಿದೆ, ಆದರೆ ನಾನು ತೋಟದಲ್ಲಿನ ಮರಗಳನ್ನು ಅವರಿಗೆ ಮಾರಾಟ ಮಾಡಲಿಲ್ಲ.”
10. ‘‘This was bad, Don Anselmo,” I pleaded, “when one signs a deed and sells real property one sells also everything that grows on the land, and those trees, every one of them, are on the land and inside the boundaries of what you sold.”
ಡಾನ್ ಅನ್ಸೆಲ್ಮೋ, ಇದು ಸರಿಯಿಲ್ಲ, ಒಬ್ಬನು ದಸ್ತಾವೇಜಿಗೆ ಸಹಿ ಹಾಕಿದಾಗ ಮತ್ತು ನಿಜವಾದ ಆಸ್ತಿಯನ್ನು ಮಾರಾಟ ಮಾಡಿದಾಗ, ಒಬ್ಬನು ಭೂಮಿಯ ಮೇಲೆ ಬೆಳೆಯುವ ಎಲ್ಲವನ್ನೂ ಸಹ ಮಾರಾಟ ಮಾಡುತ್ತಾನೆ, ಮತ್ತು ಆ ಮರಗಳು, ಅವುಗಳಲ್ಲಿ ಪ್ರತಿಯೊಂದೂ ಭೂಮಿಯ ಮೇಲೆ ಮತ್ತು ನೀವು ಮಾರಾಟ ಮಾಡಿದ ಗಡಿಯೊಳಗೆ ಇರುತ್ತವೆ” ಎಂದು ನಾನು ವಿನಂತಿಸಿದೆ.
11. “Yes, I admit that,” he said. “You know,” he added, “I am the oldest man in the village. Almost everyone there is my relative and all the children of Rio en Medio are my sobrinos and nietos, my descendants. Every time a child has been born in Rio en Medio since I took possession of the house from my mother, I have planted a tree for that child. The trees in that orchard are not mine, Senor, they belong to the children of the village. Every person in Rio en Medio born since the railroad came to Santa Fe owns a tree in that orchard. I did not sell the trees because I could not. They are not mine.”
“ಹೌದು, ನಾನು ಅದನ್ನು ಒಪ್ಪಿಕೊಳ್ಳುತ್ತೇನೆ” ಎಂದು ಅವರು ಹೇಳಿದರು. “ನಿಮಗೆ ತಿಳಿದಿದೆ,” ಅವರು ಹೇಳಿದರು, “ನಾನು ಹಳ್ಳಿಯ ಅತ್ಯಂತ ಹಿರಿಯ ವ್ಯಕ್ತಿ. ಅಲ್ಲಿ ಬಹುತೇಕ ಎಲ್ಲರೂ ನನ್ನ ಸಂಬಂಧಿಗಳು ಮತ್ತು ರಿಯೊ ಎನ್ ಮೆಡಿಯೋದ ಎಲ್ಲಾ ಮಕ್ಕಳು ನನ್ನ ಸೋದರಳಿಯಂದಿರು ಮತ್ತು ಮೊಮ್ಮಕ್ಕಳು, ನನ್ನ ವಂಶಜರು. ನಾನು ನನ್ನ ತಾಯಿಯಿಂದ ಮನೆಯನ್ನು ಸ್ವಾಧೀನಪಡಿಸಿಕೊಂಡಾಗಿನಿಂದ ರಿಯೊ ಎನ್ ಮೆಡಿಯೋದಲ್ಲಿ ಒಂದು ಮಗು ಜನಿಸಿದಾಗಲೆಲ್ಲಾ, ನಾನು ಆ ಮಗುವಿಗೆ ಒಂದು ಮರವನ್ನು ನೆಟ್ಟಿದ್ದೇನೆ. ಆ ತೋಟದಲ್ಲಿರುವ ಮರಗಳು ನನ್ನದಲ್ಲ, ಮಿಸ್ಟರ್, ಅವು ಹಳ್ಳಿಯ ಮಕ್ಕಳಿಗೆ ಸೇರಿವೆ. ರಿಯೋ ಎನ್ ಮೆಡಿಯೋದಲ್ಲಿ ರೈಲುಮಾರ್ಗವು ಸಾಂತಾ ಫೆಗೆ ಬಂದಾಗಿನಿಂದ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯು ಆ ತೋಟದಲ್ಲಿ ಒಂದು ಮರವನ್ನು ಹೊಂದಿದ್ದಾನೆ. ನನಗೆ ಸಾಧ್ಯವಾಗದ ಕಾರಣ ನಾನು ಮರಗಳನ್ನು ಮಾರಾಟ ಮಾಡಲಿಲ್ಲ. ಅವು ನನ್ನ ಸ್ವಂತದವಲ್ಲ. “
12. There was nothing we could do. Legally we owned the trees but the old man had been so generous, refusing what amounted to a fortune for him. It took most of the following winter to buy the trees, individually, from the descendants of Don Anselmo in the valley of Rio en Medio.
ನಾವು ಏನೂ ಮಾಡಲು ಸಾಧ್ಯವಾಗಲಿಲ್ಲ. ಕಾನೂನುಬದ್ಧವಾಗಿ ನಾವು ಮರಗಳನ್ನು ಹೊಂದಿದ್ದೆವು. ಆದರೆ ಮುದುಕನು ತುಂಬಾ ಉದಾರನಾಗಿದ್ದನು, ಅವನು ತನ್ನ ಪಾಲಿಗೆ ಬಂದ ಅದೃಷ್ಟವನ್ನು ನಿರಾಕರಿಸಿದ್ದನು. ರಿಯೋ ಎನ್ ಮೆಡಿಯೋ ಕಣಿವೆಯಲ್ಲಿ ಡಾನ್ ಆನ್ಸೆಲ್ಮೊನ ವಂಶಸ್ಥರಿಂದ ಮರಗಳನ್ನು ಖರೀದಿಸಲು ಮುಂದಿನ ಚಳಿಗಾಲದ ಸಮಯವನ್ನೆಲ್ಲಾ ತೆಗೆದುಕೊಂಡಿತು.