ಕನ್ನಡ ವ್ಯಾಕರಣ
ಭಾಷೆ ಮತ್ತು ವ್ಯಾಕರಣ
ಮಾನವ ಮನಸ್ಸಿನ ಭಾವನೆಗಳನ್ನು ಮಾತಿನ ಮೂಲಕ ವ್ಯಕ್ತಪಡಿಸುತ್ತಾನೆ.
ನಮ್ಮ ಭಾವನೆಗಳನ್ನು ಮತ್ತು ಅಭಿಪ್ರಾಯಗಳನ್ನು ಇತರರಿಗೆ ವ್ಯಕ್ತಪಡಿಸುವುದಕ್ಕೆ ಮತ್ತು ಅವರ ಅಭಿಪ್ರಾಯಗಳನ್ನು ಮತ್ತು ಭಾವನೆಗಳನ್ನು ನಾವು ತಿಳಿಯುವ ಮಾಧ್ಯಮಕ್ಕೆ ಭಾಷೆ ಎಂದು ಹೆಸರು.
ಆಡಿದ, ಆಡಬೇಕಾದ ಮಾತುಗಳನ್ನು ನಿರ್ದಿಷ್ಟ ಲಿಪಿಯ (ಲಿಖಿತ) ರೂಪಕ್ಕಿಳಿಸುವುದೇ ಬರೆವಣಿಗೆ. ಪದ ಮತ್ತು ಪದಗಳ ಸಂಬಂಧವನ್ನು ಖಚಿತವಾಗಿ ತಿಳಿಸುವುದೇ ವ್ಯಾಕರಣಶಾಸ್ತ್ರ. ಆದ್ದರಿಂದ ಭಾಷೆಯನ್ನು ಕಲಿಯುವವರು ಆ ಭಾಷೆಯ ವ್ಯಾಕರಣವನ್ನು ಅರಿಯುವುದು ಉತ್ತಮ. ಕ್ರಿಯಾತ್ಮಕ ವ್ಯಾಕರಣದ ಕಲಿಕೆಯಿಂದ ಭಾಷೆಯನ್ನು ಸ್ಪಷ್ಟ ಹಾಗೂ ನಿಖರವಾಗಿ ಬಳಸಲು ಸಾಧ್ಯ.
ಭಾಷೆಯನ್ನು ಸರಿಯಾದ ವಿಧಾನದಲ್ಲಿ ಬಳಸಲು ಹಾಗೂ ಸಾರ್ವತ್ರೀಕರಣಗೊಳಿಸಲು ಇರುವ ಮಾರ್ಗದರ್ಶಿಯನ್ನು ವ್ಯಾಕರಣ ಎನ್ನುತ್ತಾರೆ.
ಪ್ರಪಂಚದಲ್ಲಿ ಸಾವಿರಾರು ಭಾಷೆಗಳಿವೆ.ಹಲವು ಭಾಷೆಗಳಲ್ಲಿ ನಾವು ಮಾತಾನಾಡುವ ಕನ್ನಡವೂ ಒಂದು ಪ್ರಮುಖ ಭಾಷೆಯಾಗಿದ್ದು ತನ್ನದೇ ಲಿಪಿಯನ್ನು ಹೊಂದಿರುವ ವಿಶೇಷ ಭಾಷೆ ಇದಾಗಿದೆ.
ಕನ್ನಡ ವ್ಯಾಕರಣವು ಕೇಶೀರಾಜನ ಶಬ್ದಮಣಿದರ್ಪಣದ (ಕ್ರಿ.ಶ. ೧೨೬೦) ಮೇಲೆ ಆಧರಿಸಿದೆ. ಈ ಗ್ರಂಥವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ.(kannada vyakarana) ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ (ಅಲಂಕಾರಗಳ ಬಗ್ಗೆ ಉಲ್ಲೇಖವಿದೆ) ಹಾಗೂ ೨ನೇ ನಾಗವರ್ಮನ (೧೨ನೇ ಶತಮಾನದ ಮೊದಲಾರ್ಧದಲ್ಲಿ) ಕಾವ್ಯಲೋಕನ ಹಾಗೂ ಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವಿದೆ.
ಕನ್ನಡದ ಪ್ರತಿ ಅಕ್ಷರವು ತನ್ನದೇ ಆದ ರೂಪ ಮತ್ತು ಧ್ವನಿ ಹೊಂದಿದೆ.
ಕನ್ನಡ ವ್ಯಾಕರಣದ ಮೂಲಭೂತ ಅಂಶಗಳನ್ನು ಇಲ್ಲಿ ಕೊಡಲಾಗಿದೆ :