ಕನ್ನಡ ವ್ಯಾಕರಣ – ಕಾಲ ಸೂಚಕ ಕ್ರಿಯಾಪದ
ಇದನ್ನ ಓದಿರಿ : ಕ್ರಿಯಾಪದ
ಕಾಲ ಸೂಚಕ ಕ್ರಿಯಾಪದ
ಕ್ರಿಯೆಯ ಅರ್ಥವನ್ನು ಕೊಡುವ ಪದಗಳೆಲ್ಲವೂ ಕ್ರಿಯಾಪದಗಳು. ಕ್ರಿಯಾಪದದ ಮೂಲರೂಪವೇ ಕ್ರಿಯಾಪ್ರಕೃತಿ.
ಕ್ರಿಯಾಪ್ರಕೃತಿಯನ್ನು ಧಾತು ಎನ್ನುವರು. ಧಾತುವಿಗೆ ಆಖ್ಯಾತ ಪ್ರತ್ಯಯಗಳು ಸೇರಿ ಕ್ರಿಯಾಪದಗಳಾಗುತ್ತವೆ.
ಈ ಎರಡರ ನಡುವೆ ಕ್ರಮವಾಗಿ ಉತ್ತ, ದ, ವ, ಎಂಬ ಕಾಲಸೂಚಕ ಪ್ರತ್ಯಯಗಳು ಸೇರಿ ಕೆಲಸ ನಡೆಯುವ ಕಾಲವನ್ನು ತಿಳಿಸುತ್ತವೆ.
ಇದರಲ್ಲಿ ಭೂತಕಾಲ, ವರ್ತಮಾನಕಾಲ ಮತ್ತು ಭವಿಷ್ಯತ್ ಕಾಲ ಎಂದು ಮೂರು ಬಗೆಗಳಿವೆ.
ಭೂತಕಾಲ :
ಧಾತುಗಳಿಗೆ ಭೂತಕಾಲದಲ್ಲಿ ಆಖ್ಯಾತ ಪ್ರತ್ಯಯಗಳು ಸೇರಿ ಭೂತಕಾಲದ ಕ್ರಿಯಾಪದಗಳು ಎನಿಸುವುವು. ಭೂತ ಕಾಲದಲ್ಲಿ ‘ದ’ ಎಂಬ ಕಾಲಸೂಚಕ ಪ್ರತ್ಯಯವು ಸಾಮಾನ್ಯವಾಗಿ ಬರುವುದು.
ಉದಾ: ಓದಿದನು, ತಿಂದಳು, ಬಂದಿತು, ಹಾಡಿದರು, ಬಂದೆನು.
ವರ್ತಮಾನಕಾಲ :
ಧಾತುಗಳಿಗೆ ವರ್ತಮಾನ ಕಾಲದಲ್ಲಿ ಆಖ್ಯಾತ ಪ್ರತ್ಯಯಗಳು ಸೇರಿ ವರ್ತಮಾನ ಕಾಲದ ಕ್ರಿಯಾಪದಗಳು ಎನಿಸುವುವು. ವರ್ತಮಾನಕಾಲದಲ್ಲಿ ‘ಉತ್ತ’ ಎಂಬ ಕಾಲ ಸೂಚಕ ಪ್ರತ್ಯಯವು ಸಾಮಾನ್ಯವಾಗಿ ಬರುವುದು.
ಉದಾ: ತಿನ್ನುತ್ತಾನೆ, ಓದುತ್ತಾಳೆ, ಬರುತ್ತದೆ, ಹಾಡುತ್ತಾರೆ, ಬರೆಯುತ್ತಾರೆ.
ಭವಿಷ್ಯತ್‌ಕಾಲ :
ಧಾತುಗಳಿಗೆ ಭವಿಷ್ಯತ್ ಕಾಲದಲ್ಲಿ ಆಖ್ಯಾತ ಪ್ರತ್ಯಗಳು ಸೇರಿ ಭವಿಷ್ಯತ್ ಕಾಲದ ಕ್ರಿಯಾಪದಗಳು ಎನಿಸುವುವು. ಭವಿಷ್ಯತ್ ಕಾಲದಲ್ಲಿ ‘ವ’ ಎಂಬ ಕಾಲ ಸೂಚಕ ಪ್ರತ್ಯಯವು ಸಾಮಾನ್ಯವಾಗಿ ಬರುವುದು.
ಉದಾ: ಬರುವನು, ಬರುವರು, ಹಾಡುವರು, ಬರೆಯುವರು, ತಿನ್ನುವನು
please give me an idea of kriyapadha
please please i am an 7th standard student
Please refer this page
https://themindpalace.in/index.php/2021/08/26/kannada-grammer-kriyapada/
please give me an idea of kriyapadha
please please i am an 7th standard student
https://themindpalace.in/index.php/2021/08/26/kannada-grammer-kriyapada/
Ramya