ಕನ್ನಡ ವ್ಯಾಕರಣ – ಸಂಧಿಗಳು

ಸಂಧಿಗಳು
ಸಂಧಿಗಳು

ಸಂಧಿ ಪರಿಚಯಾತ್ಮಕ ವಿವರ

ಮಾತನಾಡುವಾಗ ಕೆಲವು ಪದಗಳನ್ನು ಬಿಡಿಬಿಡಿಯಾಗಿ ಹೇಳದೆ ಕೂಡಿಸಿ ಹೇಳುತ್ತೇವೆ.

ಉದಾ: ಅಲ್ಲಿಅಲ್ಲಿ ಎಂಬ ಎರಡು ಪದಗಳನ್ನು ‘ಅಲ್ಲಲ್ಲಿ’ ಎಂದು ಒಂದೇ ಪದವಾಗಿ ಹೇಳುತ್ತೇವೆ.

ಇಲ್ಲಿ ಎರಡು ಪದಗಳ ನಾಲ್ಕು ಅಕ್ಷರಗಳು ಒಟ್ಟು ಸೇರಿ ಮೂರು ಅಕ್ಷರಗಳ ಒಂದು ಪದವಾಗಿದೆ.

ಹೀಗೆ – ಪದ ರಚನೆ ಆಗುವಾಗ ಎರಡು ಅಕ್ಷರಗಳು ಕಾಲವಿಳಂಬವಿಲ್ಲದೆ ಒಟ್ಟು ಸೇರುವುದೇ ಸಂಧಿ.

ಈ ರೀತಿಯಲ್ಲಿ ಪದಗಳು ಒಟ್ಟು ಸೇರುವಾಗ ಮೂಲ ಪದಗಳ ಅರ್ಥಕ್ಕೆ ಯಾವ ಲೋಪವೂ ಬರಬಾರದು. ಅರ್ಥಕ್ಕೆ ಲೋಪ ಬರುವುದಾದಲ್ಲಿ ಸಂಧಿ ಮಾಡಬಾರದೆಂಬ ನಿಯಮವುಂಟು.


— ಸಂಧಿಗಳಲ್ಲಿ ಮೂಲಭೂತವಾಗಿ ಕನ್ನಡಸಂಧಿ ಮತ್ತು ಸಂಸ್ಕೃತಸಂಧಿ ಎಂದು ಎರಡು ವಿಭಾಗಗಳಿವೆ.
ಲೋಪ, ಆಗಮ, ಆದೇಶ ಸಂಧಿಗಳನ್ನು ಕನ್ನಡ ಸಂಧಿಗಳೆಂದು ಕರೆಯಲಾಗಿದೆ.
— ಇವುಗಳಲ್ಲಿ ಲೋಪ ಮತ್ತು ಆಗಮ ಸಂಧಿಗಳು ಸ್ವರಸಂಧಿಗಳೆಂತಲೂ ಆದೇಶ ಸಂಧಿಯು ವ್ಯಂಜನ ಸಂಧಿಯೆಂತಲೂ ಕರೆಯಲ್ಪಡುತ್ತವೆ.

ಸವರ್ಣದೀರ್ಘ, ಗುಣ, ವೃದ್ಧಿ, ಯಣ್, ಜಶ್ತ್ವ, ಶ್ಚುತ್ವ, ಅನುನಾಸಿಕ ಸಂಧಿಗಳನ್ನು ಸಂಸ್ಕೃತ ಸಂಧಿಗಳೆಂದು ಕರೆಯಲಾಗುವುದು.
— ಇವುಗಳಲ್ಲಿ ಸವರ್ಣದೀರ್ಘ, ಗುಣ, ವೃದ್ಧಿ ಮತ್ತು ಯಣ್ ಸಂಧಿಗಳು ಸ್ವರಸಂಧಿಗಳೆಂತಲೂ
ಜಶ್ತ್ವ, ಶ್ಚುತ್ವ, ಅನುನಾಸಿಕ ಸಂಧಿಗಳು ವ್ಯಂಜನ ಸಂಧಿಗಳೆಂತಲೂ ಕರೆಯಲ್ಪಡುತ್ತವೆ.

ಹೀಗೆ ಸಂಧಿಯಾಗುವಾಗ ಸ್ವರದ ಮುಂದೆ ಸ್ವರ ಇದ್ದು ಸಂಧಿಯಾದರೆ ಅದು ಸ್ವರಸಂಧಿ.

ಸ್ವರದ ಮುಂದೆ ವ್ಯಂಜನ ಅಥವಾ ವ್ಯಂಜನದ ಮುಂದೆ ಸ್ವರ ಅಥವಾ ವ್ಯಂಜನದ ಮುಂದೆ ವ್ಯಂಜನ ಇದ್ದು ಸಂಧಿಯಾದರೆ ಅದು ವ್ಯಂಜನ ಸಂಧಿ.

ಕನ್ನಡ ಪದಗಳೇ ಸೇರಿ ಅಥವಾ ಕನ್ನಡ ಮತ್ತು ಸಂಸ್ಕೃತ ಪದಗಳು ಸೇರಿ ಸಂಧಿಯಾದರೆ ‘ಕನ್ನಡಸಂಧಿ’ ಎಂತಲೂ ಸಂಸ್ಕೃತ ಪದಗಳು ಸೇರಿ ಸಂಧಿಯಾದರೆ ‘ ಸಂಸ್ಕೃತ ಸಂಧಿ’ ಎಂತಲೂ ಕರೆಯಲ್ಪಡುತ್ತವೆ.

ಕನ್ನಡಸಂಧಿಗಳು (3 ಸಂಧಿಗಳು )

  1. ಲೋಪಸಂಧಿ
  2. ಆಗಮಸಂಧಿ
  3. ಆದೇಶಸಂಧಿ

ಸಂಸ್ಕೃತ ಸಂಧಿಗಳು (7 ಸಂಧಿಗಳು )

  • ಸ್ವರಸಂಧಿ
    1. ಸವರ್ಣದೀರ್ಘ ಸಂಧಿ
    2. ಗುಣಸಂಧಿ
    3. ವೃದ್ಧಿಸಂಧಿ
    4. ಯಣ್‌ಸಂಧಿ
  • ವ್ಯಂಜನ ಸಂಧಿ
    1. ಜಶ್ತ್ವ ಸಂಧಿ
    1. ಶ್ಚುತ್ವಸಂಧಿ
    2. ಅನುನಾಸಿಕಸಂಧಿ

ಸಂಧಿಯಾಗುವಾಗ ಕೆಲವು ವ್ಯತ್ಯಾಸಗಳಾಗುತ್ತವೆ. ಈ ವ್ಯತ್ಯಾಸವೇ ಸಂಧಿಕ್ರಿಯೆ.

ಈ ವ್ಯತ್ಯಾಸ ಪೂರ್ವಪದದ ಅಂತ್ಯದಲ್ಲಿ ಅಥವಾ ಪರಪದದ (ಉತ್ತರಪದ) ಆದಿಯಲ್ಲಿ ಇಲ್ಲವೇ ಎರಡೂ ಪದಗಳ ಮಧ್ಯದಲ್ಲಿ ನಡೆಯುತ್ತದೆ. ಈ ವರ್ಣ ವ್ಯತ್ಯಾಸಕ್ಕನುಗುಣವಾಗಿ ಲೋಪ, ಆಗಮ, ಆದೇಶ ಎಂಬ ಮೂರು ವಿಧದ ಸಂಧಿಕ್ರಿಯೆಗಳು ನಡೆಯುತ್ತವೆ.

ಉದಾ : ಬೇರೆ + ಒಬ್ಬ > ಬೇರೊಬ್ಬ

ರ್ + ಎ + ಒ > ರ್ + ಒ ಇಲ್ಲಿ ಸಂಧಿಕ್ರಿಯೆಗೆ ಒಳಪಟ್ಟ ಅಕ್ಷರಗಳನ್ನು ಗೆರೆ ಹಾಕಿ ಗುರುತಿಸಿದೆ.

ಸಂಧಿಕ್ರಿಯೆ ನಡೆಯುವ ಮೊದಲು ಬೇರೆ ಮತ್ತು ಒಬ್ಬ ಎಂಬ ಎರಡು ಪದಗಳಿರುವುದನ್ನು ಗಮನಿಸಬಹುದು. ಪೂರ್ವಪದದ ಅಂತ್ಯದಲ್ಲಿ ರ್ ಮತ್ತು ಎಂಬ ಎರಡು ಅಕ್ಷರಗಳಿವೆ. ಪರಪದದ ಆದಿಯಲ್ಲಿ ಎಂಬ ಅಕ್ಷರವಿದೆ. ಸಂಧಿಯಾದಾಗ ಬೇರೊಬ್ಬ ಎಂಬ ಪದ ರಚನೆಯಾಗಿದ್ದು ಸಂಧಿಗೊಳಪಟ್ಟ ರೊ ಅಕ್ಷರದಲ್ಲಿ ರ್ ಮತ್ತು ಎಂಬ ಎರಡು ಅಕ್ಷರಗಳಿವೆ. ಹಾಗಾಗಿ ಪೂರ್ವಪದದ ಅಂತ್ಯದಲ್ಲಿದ್ದ ಎಂಬ ಸ್ವರಾಕ್ಷರ ಲೋಪವಾಗಿದೆ. ಇದೇ ಲೋಪಕ್ರಿಯೆ.

ಉದಾ: ಮನೆ + ಅಲ್ಲಿ > ಮನೆಯಲ್ಲಿ

ನ್ + ಎ + ಅ > ನ್ + ಎ + ಯ್ + ಅ

ಈ ಉದಾಹರಣೆಯನ್ನು ಗಮನಿಸಿದಾಗ ಸಂಧಿಯಾಗುವ ಮೊದಲು ಮೂರು ಅಕ್ಷರಗಳಿದ್ದು ಸಂಧಿಯಾದಾಗ ನಾಲ್ಕು ಅಕ್ಷರಗಳಾಗಿವೆ. ಇಲ್ಲಿ ಪೂರ್ವಪದದ ಅಂತ್ಯ ಮತ್ತು ಪರಪದದ
ಆದಿಯ ಮಧ್ಯೆ ಯ್ ಎಂಬ ವ್ಯಂಜನಾಕ್ಷರ ಸೇರಿಕೊಂಡಿದೆ. ಹೀಗೆ ಹೊಸತಾಗಿ ಅಕ್ಷರ ಬಂದು ಸೇರುವುದೇ ಆಗಮಕ್ರಿಯೆ.

ಉದಾ: ಮಳೆ + ಕಾಲ > ಮಳೆಗಾಲ

ಳ್ + ಎ + ಕ್ + ಆ > ಳ್ + ಎ + ಗ್ + ಆ

ಇಲ್ಲಿ ಪರಪದದ ಆದಿಯಲ್ಲಿದ್ದ ಕ್ ಅಕ್ಷರದ ಬದಲಿಗೆ ಗ್ ಅಕ್ಷರ ಬಂದಿದೆ. ಹೀಗೆ ಒಂದು ಅಕ್ಷರದ ಬದಲಿಗೆ ಮತ್ತೊಂದು ಅಕ್ಷರ ಬರುವುದೇ ಆದೇಶಕ್ರಿಯೆ.

ಸಂಧಿಕ್ರಿಯೆಯ ಹೆಸರಿನಿಂದಲೇ ಕನ್ನಡ ಸಂಧಿಗಳನ್ನು ಹೆಸರಿಸಲಾಗುವುದು. ಲೋಪಕ್ರಿಯೆ ಆದರೆ ಲೋಪಸಂಧಿ, ಆಗಮಕ್ರಿಯೆ ಆದರೆ ಆಗಮಸಂಧಿ ಮತ್ತು ಆದೇಶಕ್ರಿಯೆ ಆದರೆ ಆದೇಶಸಂಧಿ.

ಹೀಗೆ ಕನ್ನಡದಲ್ಲಿ ಲೋಪ, ಆಗಮ ಮತ್ತು ಆದೇಶ ಎಂಬ ಮೂರು ವಿಧದ ಸಂಧಿಗಳಿವೆ

ಸಂಧಿಗಳು :

ಈ ಸಂಧಿಗಳಲ್ಲಿ ‘ಕನ್ನಡಸಂಧಿ’ ಮತ್ತು ‘ಸಂಸ್ಕೃತ ಸಂಧಿ’ ಗಳೆಂದು ಎರಡು ವಿಧಗಳಿವೆ.

ಕನ್ನಡ ಪದಗಳೇ ಸೇರಿ ಅಥವಾ ಕನ್ನಡ ಮತ್ತು ಸಂಸ್ಕೃತ ಪದಗಳು ಸೇರಿ ಸಂಧಿಯಾದರೆ ‘ಕನ್ನಡಸಂಧಿ’ ಎಂತಲೂ ಸಂಸ್ಕೃತ ಪದಗಳು ಸೇರಿ ಸಂಧಿಯಾದರೆ ‘ ಸಂಸ್ಕೃತ ಸಂಧಿ’ ಎಂತಲೂ ಕರೆಯಲ್ಪಡುತ್ತವೆ.

ಕನ್ನಡ ಸಂಧಿಗಳು :

ಸಂಧಿ ಆಗುವ ಎರಡು ಪದಗಳು ಕನ್ನಡ, ಇಲ್ಲವೇ ಒಂದು ಕನ್ನಡ ಮತ್ತೊಂದು ಸಂಸ್ಕೃತವಾಗಿದ್ದರೆ ಅದನ್ನು ‘ಕನ್ನಡ ಸಂಧಿ’ ಎಂದು ಕರೆಯಲಾಗುತ್ತದೆ.

ಕನ್ನಡ ಸಂಧಿಯಲ್ಲಿ ಮೂರು ವಿಧಗಳಿವೆ.

  • ಲೋಪಸಂಧಿ

  • ಆಗಮಸಂಧಿ

  • ಆದೇಶಸಂಧಿ

1. ಲೋಪಸಂಧಿ :

ಎರಡು ಸ್ವರಾಕ್ಷರಗಳ ನಡುವೆ ಸಂಧಿ ಕಾರ್ಯ ನಡೆಯುವಾಗ ಪೂರ್ವ ಪದದ ಅಂತ್ಯದಲ್ಲಿರುವ ಸ್ವರವು ಅರ್ಥ ಕೆಡದಿರುವ ಸಂದರ್ಭದಲ್ಲಿ ಇಲ್ಲವಾಗುವುದನ್ನು ‘ಲೋಪಸಂಧಿ’ ಎಂದು
ಕರೆಯಲಾಗುತ್ತದೆ.

ಸಂಧಿಕ್ರಿಯೆ ಆಗುವಾಗ ಸ್ವರದ ಮುಂದೆ ಸ್ವರ ಬಂದು ಪೂರ್ವಪದದ ಸ್ವರ ಲೋಪವಾದರೆ ಅದು ಲೋಪಸಂಧಿ.

ಉದಾ :

ತುಪ್ಪಳದ + ಅಂತೆ = ತುಪ್ಪಳದಂತೆ ಕಾರ ಲೋಪ
ಅಲ್ಲಿ + ಇದ್ದೇನೆ = ಅಲ್ಲಿದ್ದೇನೆ ಕಾರ ಲೋಪ
ಇವನು + ಒಬ್ಬ = ಇವನೊಬ್ಬ ಕಾರ ಲೋಪ
ಬೆಳ್ಳಗೆ + ಆಗಿ = ಬೆಳ್ಳಗಾಗಿ ಕಾರ ಲೋಪ

ಪೂರ್ವಪದ + ಉತ್ತರಪದ = ಸಂಧಿಪದ
ಮಾತು + ಇಲ್ಲ = ಮಾತಿಲ್ಲ
ಬೇರೆ + ಒಬ್ಬ = ಬೇರೊಬ್ಬ
ನಿನಗೆ + ಅಲ್ಲದೆ = ನಿನಗಲ್ಲದೆ


2. ಆಗಮ ಸಂಧಿ :

ಲೋಪ ಸಂಧಿ ಮಾಡಿದರೆ ಅರ್ಥ ಕೆಡುವಂತಿದ್ದರೆ, ಆ ಎರಡು ಸ್ವರಗಳ ನಡುವೆ ‘ಯ್’ ಇಲ್ಲವೆ ‘ವ್’ ಅಕ್ಷರವನ್ನು ಹೊಸದಾಗಿ ಸೇರಿಸಿ ಸಂಧಿ ಮಾಡಿದರೆ ಅದನ್ನು ‘ಆಗಮ ಸಂಧಿ’ ಎಂದು ಕರೆಯುತ್ತಾರೆ.

‘ಯ್’ ಅಕ್ಷರ ಬಂದಲ್ಲಿ ಯಕಾರಾಗಮ ಸಂಧಿ ಎಂತಲೂ, ‘ವ್’ ಅಕ್ಷರ ಬಂದಲ್ಲಿ ವಕಾರಾಗಮ ಸಂಧಿ ಎಂತಲೂ ಎರಡು ವಿಧಗಳನ್ನು ಗುರುತಿಸಲಾಗುತ್ತದೆ.

ಸ್ವರದ ಮುಂದೆ ಸ್ವರಬಂದು ಸಂಧಿಯಾಗುವಾಗ ‘ಯ’ ಕಾರ ಅಥವಾ ‘ವ’ ಕಾರವು ಈ ಸ್ವರಗಳ ಮಧ್ಯೆ ಹೊಸದಾಗಿ ಸೇರಿದರೆ ಅದು ಆಗಮಸಂಧಿ.

ಉದಾ :

ಪೂರ್ವಪದ + ಉತ್ತರಪದ = ಸಂಧಿಪದ
ಗುರು + ಅನ್ನು = ಗುರುವನ್ನು
ಪಿತೃ + ಅನ್ನು = ಪಿತೃವನ್ನು
ಕೈ + ಅಲ್ಲಿ = ಕೈಯಲ್ಲಿ
ಶಾಲೆ + ಇಂದ = ಶಾಲೆಯಿಂದ
ಹಳ್ಳಿ + ಅಲ್ಲಿ = ಹಳ್ಳಿಯಲ್ಲಿ
ಭಾವನೆ + ಉಂಟಾಯಿತು = ಭಾವನೆಯುಂಟಾಯಿತು
ಗುರು + ಅನ್ನು = ಗುರುವನ್ನು
ಸ್ವಾರಸ್ಯ + ಇಲ್ಲ = ಸ್ವಾರಸ್ಯವಿಲ್ಲ


3. ಆದೇಶ ಸಂಧಿ :

ಎರಡು ಅಕ್ಷರಗಳ ನಡುವೆ ಸಂಧಿಕಾರ್ಯ ನಡೆಯುವಾಗ ಉತ್ತರ ಪದದ ಆದಿಯಲ್ಲಿರುವ ‘ಕ್’ ‘ತ್’ ‘ಪ್’ ವ್ಯಂಜನಗಳಿಗೆ ಕ್ರಮವಾಗಿ ‘ಗ್’ ‘ದ್’ ‘ಬ್’ ವ್ಯಂಜನಗಳು ಬದಲಿಯಾಗಿ ಬರುವುದನ್ನು ‘ಆದೇಶ ಸಂಧಿ’ ಎಂದು ಕರೆಯಲಾಗುತ್ತದೆ.

ಕೆಲವೊಮ್ಮೆ ಉತ್ತರ ಪದದ ಆದಿಯ ಪ್, ಬ್, ಮ್ ವ್ಯಂಜನಗಳಿಗೆ ‘’ ಕಾರವು ಆದೇಶವಾಗುವುದು.

ಸಂಧಿಕ್ರಿಯೆ ಆಗುವಾಗ ಪರಪದದ ಆದಿಯಲ್ಲಿರುವ ವ್ಯಂಜನದ ಬದಲಿಗೆ ಬೇರೊಂದು ವ್ಯಂಜನ ಬಂದು ಸೇರುವುದೇ ಆದೇಶಸಂಧಿ. ಕ ತ ಪ ಗಳಿಗೆ ಗ ದ ಬ ಗಳೂ ಕೆಲವೊಮ್ಮೆ ಪ ಬ ಮ ಗಳ ಬದಲಿಗೆ ವ ಕಾರವೂ ಆದೇಶವಾಗಿ ಬರುತ್ತವೆ.

ಉದಾ : ಪೂರ್ವಪದ + ಉತ್ತರಪದ = ಸಂಧಿಪದ

ತುದಿ + ಕಾಲಲ್ಲಿ (ಕ್>ಗ್) = ತುದಿಗಾಲಲ್ಲಿ
ಹುಲಿ + ತೊಗಲು (ತ್>ದ್) = ಹುಲಿದೊಗಲು
ಕಣ್ + ಪನಿ (ಪ್>ಬ್) = ಕಂಬನಿ
ನೀರ್ + ಪನಿ (ಪ್>ವ್) = ನರ‍್ವನಿ
ಕಡು + ಬೆಳ್ಪು (ಬ್>ವ್) = ಕಡುವೆಳ್ಪು
ಮೆಲ್ + ಮಾತು (ಮ್>ವ್) = ಮೆಲ್ವಾತು

ಮಳೆ + ಕಾಲ = ಮಳೆಗಾಲ
ಬೆಟ್ಟ + ತಾವರೆ = ಬೆಟ್ಟದಾವರೆ
ಹೂ + ಪುಟ್ಟಿ = ಹೂಬುಟ್ಟಿ


ಪ್ರಕೃತಿಭಾವ :

ಆ + ಆಡು
ಅಯ್ಯೋ + ಇದೇನು
ಓಹೋ + ಅಜ್ಜಿ ಬಂದರೇ
ಅಕ್ಕಾ + ಇತ್ತಬಾ

ಕೊಟ್ಟಿರುವ ಉದಾಹರಣೆಗಳನ್ನು ಗಮನಿಸಿದಾಗ ಸ್ವರದ ಮುಂದೆ ಸ್ವರ ಬಂದಿರುವುದರಿಂದ ಲೋಪ ಅಥವಾ ಆಗಮ ಸಂಧಿ ಆಗಬೇಕಿತ್ತು. ಹಾಗೆ ಸಂಧಿ ಮಾಡಿದರೆ ಅರ್ಥ ಕೆಡುತ್ತದೆ. ಹಾಗಾಗಿ ಸಂಧಿ ಮಾಡುವುದಿಲ್ಲ. ಪ್ಲುತ ಸ್ವರದ ಮುಂದೆ ಸ್ವರ ಬಂದಾಗ; ಅಯ್ಯೋ, ಆಹಾ, ಓಹೋ ಮುಂತಾದ ಭಾವಸೂಚಕ ಅವ್ಯಯಗಳ ಮುಂದೆ ಸ್ವರ ಬಂದಾಗ ಹಾಗೂ ಆ ಎಂಬ ಪದದ ಮುಂದೆ (ಅಕ್ಷರದ ಮುಂದೆ ಅಲ್ಲ) ಸ್ವರ ಬಂದಾಗ ಸಂಧಿ ಮಾಡಬಾರದು. ಹೀಗೆ – ಸ್ವರದ ಮುಂದೆ ಸ್ವರ ಬಂದರೂ ಸಂಧಿಯಾಗದೆ ಇದ್ದ ಹಾಗೆಯೇ ಇರುವುದು ಪ್ರಕೃತಿಭಾವ.


ಸಂಸ್ಕೃತ ಸಂಧಿಗಳು :

ನಮೂದಿತ ವಾಕ್ಯಗಳನ್ನು ಗಮನಿಸಿ:

—ರಾಮಾಯಣ ಮಹೋನ್ನತ ಗ್ರಂಥ.
—ಸರ‍್ಯೋದಯ ದೃಶ್ಯ ಅತ್ಯಂತ ಮನೋಹರವಾಗಿದೆ.

ನಮೂದಿತ ಎರಡು ವಾಕ್ಯಗಳಲ್ಲಿರುವ ರಾಮಾಯಣ, ಮಹೋನ್ನತ, ಗ್ರಂಥ, ಸರ‍್ಯೋದಯ, ದೃಶ್ಯ, ಅತ್ಯಂತ, ಮನೋಹರ – ಎಲ್ಲವೂ ಸಂಸ್ಕೃತ ಪದಗಳು.

ಆದರೆ ಕನ್ನಡ ಪದಗಳೆಂದು ಪರಿಗಣಿಸಲ್ಪಟ್ಟಿವೆ. ಹೀಗೆ ಕನ್ನಡ ಭಾಷೆಗೆ ಸಂಸ್ಕೃತ ಪದಗಳು ಸೇರ್ಪಡೆಯಾಗಿವೆ.

ಇಂತಹ ಸಂಸ್ಕೃತ ಪದಗಳೇ ಸೇರಿ ಸಂಧಿಯಾದರೆ ಅವುಗಳನ್ನು ಸಂಸ್ಕೃತ ಸಂಧಿ ಎಂದು ಕರೆಯಲಾಗುತ್ತದೆ.

ಎರಡು ಸ್ವರಗಳ ನಡುವೆ ಸಂಧಿಯಾದರೆ ಅದು ಸ್ವರಸಂಧಿ.

ಸ್ವರಕ್ಕೆ ವ್ಯಂಜನ ಅಥವಾ ವ್ಯಂಜನಕ್ಕೆ ವ್ಯಂಜನ ಸೇರಿ ಸಂಧಿಯಾದರೆ ಅದು ವ್ಯಂಜನಸಂಧಿ.


1. ಸವರ್ಣದೀರ್ಘ ಸಂಧಿ

ವಿದ್ಯಾಭ್ಯಾಸ ಮಾಡು.
ರವೀಂದ್ರನು ಹಾಡಿದನು.
ಗುರೂಪದೇಶವನ್ನು ಪಡೆ.

ಈ ಹೇಳಿಕೆಗಳಲ್ಲಿರುವ ವಿದ್ಯಾಭ್ಯಾಸ, ರವೀಂದ್ರ, ಗುರೂಪದೇಶ ಪದಗಳನ್ನು ಗಮನಿಸಿ.

ವಿದ್ಯಾ + ಅಭ್ಯಾಸ > ವಿದ್ಯಾಭ್ಯಾಸ

ದ್ + ಯ್ + ಆ + ಅ > ದ್ + ಯ್ + ಆ

ಇಲ್ಲಿ ಪೂರ್ವಪದದ ಕೊನೆಯಲ್ಲಿರುವ -ಆ ಸ್ವರದ ಮುಂದೆ ಪರಪದದ ಆದಿಯಲ್ಲಿ ‘’- ಸ್ವರ ಇರುವುದು.
ಇವೆರಡೂ ಸ್ವರಗಳು ಒಂದೇ ಸ್ಥಾನದಲ್ಲಿ ಹುಟ್ಟುವುದರಿಂದ ಇವು ಸವರ್ಣಗಳು.
ಈ ಸವರ್ಣ ಸ್ವರಗಳು ಸಂಧಿಯಾದಾಗ ದೀರ್ಘಸ್ವರವಾಗಿ ಪರಿವರ್ತನೆಯಾಗುತ್ತವೆ.
ಹಾಗಾಗಿ ಇದನ್ನು ಸವರ್ಣದೀರ್ಘ ಸಂಧಿ ಎಂದು ಕರೆಯಲಾಗಿದೆ. (ಅ, ಆ; ಇ, ಈ; ಉ, ಊ; ಇವು ಸವರ್ಣಸ್ವರಗಳು)

ಉದಾ :
ರವಿ + ಇಂದ್ರ > ರವೀಂದ್ರ
ವ್ + ಇ + ಇ > ವ್ + ಈ

ಇಲ್ಲಿ ಎರಡು ‘’ ಕಾರಗಳು ಸೇರಿ ‘’ ಕಾರವಾಗಿದೆ.

ಗುರು + ಉಪದೇಶ > ಗುರೂಪದೇಶ
ರ್ + ಉ + ಉ > ರ್ + ಊ

ಇಲ್ಲಿ ಎರಡು ‘’ ಕಾರಗಳು ಸೇರಿ ‘’ ಕಾರ ಆಗಿದೆ.

ಹಾಗಾಗಿ ಇವು ಕೂಡಾ ಸವರ್ಣದೀರ್ಘ ಸಂಧಿಗೆ ಉದಾಹರಣೆಗಳು.

ಸೂತ್ರ : ಸವರ್ಣಸ್ವರಗಳು ಒಂದರ ಮುಂದೆ ಒಂದು ಸೇರಿ ಸಂಧಿಯಾದಾಗ ಅವೆರಡರ ಸ್ಥಾನದಲ್ಲಿ ಅದೇ ಜಾತಿಯ ದೀರ್ಘಸ್ವರ ಆದೇಶವಾಗಿ ಬಂದರೆ ಅದನ್ನು ಸವರ್ಣ ದೀರ್ಘಸಂಧಿ ಎಂದು ಕರೆಯುವರು.

ಉದಾ: ಸಭಾಂಗಣ, ದೇವಾಲಯ, ರವೀಶ, ವಧೂಪೇತ. ಬಿಏಖಿಃS


2. ಗುಣಸಂಧಿ

ದೇವೇಂದ್ರನ ಸಭೆ.
ಸರ‍್ಯೋದಯವಾಯಿತು.
ಮಹರ್ಷಿಯು ತಪವನ್ನು ಮಾಡುವನು.
ಇಲ್ಲಿರುವ ದೇವೇಂದ್ರ, ಸರ‍್ಯೋದಯ ಮತ್ತು ಮಹರ್ಷಿ ಪದಗಳನ್ನು ಗಮನಿಸಿ.

ದೇವ + ಇಂದ್ರ > ದೇವೇಂದ್ರ
ವ್ + ಅ + ಇಂ > ವ್ + ಏಂ

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ‘ಅ’ ಕಾರಕ್ಕೆ ಪರಪದದ ಆದಿಯಲ್ಲಿರುವ ‘’ ಕಾರ ಸೇರಿ ‘ಏ’ ಕಾರ ಆದೇಶವಾಗಿದೆ.

ಸರ‍್ಯ + ಉದಯ > ಸರ‍್ಯೋದಯ
ರ್ + ಯ್ + ಅ + ಉ > ರ್ + ಯ್ + ಓ

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ‘’ ಕಾರಕ್ಕೆ ಪರಪದದ ಆದಿಯಲ್ಲಿರುವ ‘’ ಕಾರ ಸೇರಿ ‘’ ಕಾರ ಆದೇಶವಾಗಿ ಬಂದಿದೆ.

ಮಹಾ + ಋಷಿ > ಮಹರ್ಷಿ
ಹ್ + ಆ + ಋ > ಹ್ + ಅರ್

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ‘’ ಕಾರಕ್ಕೆ ಪರಪದದ ಆದಿಯಲ್ಲಿರುವ ‘’ ಕಾರ ಸೇರಿ ‘ಅರ್’ ಕಾರ ಆದೇಶವಾಗಿ ಬಂದಿದೆ.

ಸೂತ್ರ : ಅ ಆ ಕಾರಗಳಿಗೆ ಇ ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘’ ಕಾರವೂ ಉ ಊ ಕಾರಗಳು ಪರವಾದರೆ ‘’ ಕಾರವೂ ‘’ ಕಾರ ಪರವಾದರೆ ‘ಅರ್’ ಕಾರವೂ ಆದೇಶವಾಗಿ ಬಂದರೆ ಅದು ಗುಣಸಂಧಿ.

ಉದಾ: ಸುರೇಂದ್ರ, ಮಹೇಶ್ವರ, ಚಂದ್ರೋದಯ, ದೇವರ್ಷಿ.


3. ವೃದ್ಧಿಸಂಧಿ

— ಅವನು ಏಕೈಕ ವೀರ.
— ಆಯುರ್ವೇದದಲ್ಲಿ ವನೌಷಧಗಳನ್ನು ಬಳಸುತ್ತಾರೆ.

ಇಲ್ಲಿರುವ ಏಕೈಕ ಪದವನ್ನು ಗಮನಿಸಿ.

ಏಕ + ಏಕ > ಏಕೈಕ
ಕ್ + ಅ + ಏ > ಕ್ + ಐ

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ಕಾರಕ್ಕೆ ಪರಪದದ ಆದಿಯಲ್ಲಿರುವ ‘’ ಕಾರವು ಪರವಾಗಿ ಸಂಧಿಯಾದಾಗ ‘ಐ’ ಕಾರವು ಏಕಾದೇಶವಾಗಿ ಬಂದಿದೆ.

ವನ + ಓಷಧ > ವನೌಷಧ
ನ್ + ಅ + ಓ > ನ್ + ಔ

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ‘ಅ’ ಕಾರಕ್ಕೆ ಪರಪದದ ಆದಿಯಲ್ಲಿರುವ ‘ಓ’ ಕಾರವು ಪರವಾಗಿ ಸಂಧಿಯಾದಾಗ ‘’ ಕಾರವು ಏಕಾದೇಶವಾಗಿ ಬಂದಿದೆ.

ಸೂತ್ರ : ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದಾಗ ಅವೆರಡರ ಸ್ಥಾನದಲ್ಲಿ ‘’ ಕಾರವೂ ಓ ಔ ಕಾರಗಳು ಪರವಾದಾಗ ‘’ ಕಾರವೂ ಆದೇಶವಾಗಿ ಬಂದರೆ (ಐ, ಔ ಕಾರಗಳು ಆದೇಶವಾಗಿ ಬಂದಾಗ) ಅದೇ ವೃದ್ಧಿಸಂಧಿ.

ಉದಾ : ಲೋಕೈಕ, ಜನೈಕ್ಯ, ಜಲೌಘ.


4. ಯಣ್‌ಸಂಧಿ

ಸಂಸ್ಕೃತ ವ್ಯಾಕರಣದಲ್ಲಿ ಕೆಲವು ಸಂಜ್ಞೆಗಳನ್ನು ಮಾಡಿಕೊಳ್ಳಲಾಗಿದೆ.

ಅವುಗಳಲ್ಲಿ ‘ಯಣ್’ ಎಂಬ ಸಂಜ್ಞೆಯೂ ಒಂದು.

ಯ್ ರ್ ಲ್ ವ್ ಎಂಬ ನಾಲ್ಕು ವ್ಯಂಜನಗಳನ್ನು ಯಣ್ ಅಕ್ಷರಗಳೆಂದು ಗುರುತಿಸಲಾಗಿದೆ.

ಸಂಧಿಯಾಗುವಾಗ ಯಣ್ ಅಕ್ಷರಗಳಲ್ಲಿ ಯಾವುದಾದರೂ ಒಂದು ಅಕ್ಷರ ಆದೇಶವಾಗಿ ಬಂದರೆ ಅದೇ ಯಣ್ ಸಂಧಿ.

— ಅವನು ಅತ್ಯಂತ ಪರಾಕ್ರಮಿ.
— ಯುದ್ಧದಲ್ಲಿ ಅಣ್ವಸ್ತ್ರಗಳನ್ನು ಬಳಸುತ್ತಾರೆ.
— ಎಲ್ಲಾ ಮಕ್ಕಳಿಗೂ ಪಿತ್ರಾರ್ಜಿತ ಆಸ್ತಿಯ ಮೇಲೆ ಹಕ್ಕು ಇರುತ್ತದೆ.
ಈ ವಾಕ್ಯದಲ್ಲಿರುವ ಅತ್ಯಂತ ಅಣ್ವಸ್ತ್ರ ಮತ್ತು ಪಿತ್ರಾರ್ಜಿತ ಎಂಬ ಪದವನ್ನು ಗಮನಿಸಿ.

ಅತಿ + ಅಂತ > ಅತ್ಯಂತ
ತ್ + ಇ + ಅಂ > ತ್ + ಯ್ + ಅಂ

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ‘‘ ಕಾರಕ್ಕೆ ಪರಪದದ ಆದಿಯಲ್ಲಿರುವ ‘‘ ಕಾರ ಸೇರಿ ಸಂಧಿಯಾದಾಗ ‘‘ ಕಾರದ ಬದಲಿಗೆ ‘ಯ್‘ ಕಾರ ಆದೇಶವಾಗಿದೆ.

ಅಣು + ಅಸ್ತ್ರ > ಅಣ್ವಸ್ತ್ರ
ಣ್ + ಉ + ಅ > ಣ್ + ಉ + ಅ

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ‘’ ಕಾರಕ್ಕೆ ಪರಪದದ ಆದಿಯಲ್ಲಿರುವ ‘’ ಕಾರ ಸೇರಿ ಸಂಧಿಯಾದಾಗ ‘’ ಕಾರದ ಬದಲಿಗೆ ‘ವ್’ ಕಾರ ಆದೇಶವಾಗಿದೆ.


ಪಿತೃ + ಆರ್ಜಿತ > ಪಿತ್ರಾರ್ಜಿತ
ತ್ + ಋ + ಆ > ತ್ + ರ್ + ಆ

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ‘’ ಕಾರಕ್ಕೆ ಪರಪದದ ಆದಿಯಲ್ಲಿರುವ ‘’ ಕಾರ ಸೇರಿ ಸಂಧಿಯಾದಾಗ ‘’ ಕಾರದ ಬದಲಿಗೆ ‘ರ್’ ಕಾರ ಆದೇಶವಾಗಿದೆ.

ಸೂತ್ರ : ಇ ಈ ಕಾರಗಳಿಗೆ ‘ಯ್’ ಕಾರವೂ ಉ ಊ ಕಾರಗಳಿಗೆ ‘ವ್’ ಕಾರವೂ ‘ಋ’ ಕಾರಕ್ಕೆ ‘ರ್’ ಕಾರವೂ ಆದೇಶವಾಗಿ ಬಂದರೆ ಅದು ಯಣ್ ಸಂಧಿ.

ಉದಾ: ಅತ್ಯವಸರ, ಜಾತ್ಯತೀತ, ಕೋಟ್ಯಧೀಶ, ಪ್ರತ್ಯುತ್ತರ, ಮನ್ವಾದಿ, ಮನ್ವಂತರ.


5. ಜಶ್ತ್ವ ಸಂಧಿ

ಸಂಸ್ಕೃತ ವ್ಯಾಕರಣದಲ್ಲಿ ವರ್ಗೀಯ ವ್ಯಂಜನದ ವರ್ಗ ತೃತೀಯಾಕ್ಷರಗಳಾದ ಗ್ ಜ್ ಡ್ ದ್ ಬ್ ಅಕ್ಷರಗಳನ್ನು ‘ಜಶ್’ ಎಂಬ ಸಂಜ್ಞೆಯಿಂದ ಕರೆಯಲಾಗಿದೆ.
ಜಶ್ ಅಕ್ಷರಗಳು ಆದೇಶವಾಗಿ ಬರುವ ಸಂಧಿಗಳೇ ಜಶ್ತ್ವ ಸಂಧಿ.

— ಷಣ್ಮುಖನಿಗೆ ಷಡಾನನ ಎಂಬ ಹೆಸರೂ ಇದೆ.
ಈ ವಾಕ್ಯದಲ್ಲಿರುವ ಷಡಾನನ ಪದರಚನೆಯನ್ನು ಗಮನಿಸಿ
ಷಟ್ + ಆನನ > ಷಡಾನನ
ಟ್ + ಆ > ಡ್ + ಆ

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ‘’ ಕಾರಕ್ಕೆ (ವರ್ಗದ ಪ್ರಥಮಾಕ್ಷರಕ್ಕೆ) ಪರಪದದ ಆದಿಯಲ್ಲಿರುವ ‘’ ಕಾರ ಪರವಾಗಿ ಸಂಧಿಯಾದಾಗ ‘ಡ್’ ಕಾರ (ಅದೇ ವರ್ಗದ ತೃತೀಯಾಕ್ಷರ
ಅಂದರೆ ಜಶ್ ಅಕ್ಷರಗಳಲ್ಲಿ ಒಂದು) ಆದೇಶವಾಗಿ ಬಂದಿದೆ.

ಸೂತ್ರ ಪೂರ್ವಪದದ ಕೊನೆಯಲ್ಲಿರುವ ವರ್ಗ ಪ್ರಥಮಾಕ್ಷರಕ್ಕೆ ಅಂದರೆ ಕ್ ಚ್ ಟ್ ತ್ ಪ್ ಗಳಿಗೆ ಅದೇ ವರ್ಗದ ತೃತೀಯಾಕ್ಷರಗಳು ಅಂದರೆ ಗ್ ಜ್ ಡ್ ದ್ ಬ್ ಗಳು ಅಂದರೆ ಜಶ್ ಅಕ್ಷರಗಳು ಆದೇಶವಾಗಿ ಬಂದರೆ ಅದೇ ಜಶ್ತ್ವ ಸಂಧಿ.

ಉದಾ: ವಾಗ್ದೇವಿ, ಅಜಂತ, ಷಡಂಗ, ಚಿದಾನಂದ, ಅಬ್ಧಿ.


6. ಶ್ಚುತ್ವಸಂಧಿ

ಶ್ ಚ್ ಛ್ ಜ್ ಝ್ ಞ್ – ಈ ಆರು ಅಕ್ಷರಗಳನ್ನು ‘ಶ್ಚು‘ ಎಂಬ ಸಂಜ್ಞೆಯಿಂದ ಕರೆಯಲಾಗಿದೆ.
ಶ್ಚು’ ಅಕ್ಷರಗಳು ಆದೇಶವಾಗಿ ಬರುವ ಸಂಧಿಗಳೇ ಶ್ಚುತ್ವ ಸಂಧಿ.

— ಮಾನವನಿಗೆ ಮನಶ್ಶುದ್ಧಿ ಇರಬೇಕು
ಈ ವಾಕ್ಯದಲ್ಲಿರುವ ಮನಶ್ಶುದ್ಧಿ ಪದವನ್ನು ಗಮನಿಸಿ
ಮನಸ್ + ಶುದ್ಧಿ > ಮನಶ್ಶುದ್ಧಿ
ಸ್ + ಶ್ + ಉ > ಶ್ + ಶ್ + ಉ


ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ‘’ ಕಾರಕ್ಕೆ ಪರಪದದ ಆದಿಯಲ್ಲಿರುವ ‘’ ಕಾರ ಪರವಾಗಿ ಸಂಧಿಯಾದಾಗ ಪೂರ್ವಪದದ ಅಂತ್ಯದ ‘’ ಕಾರಕ್ಕೆ ‘’ ಕಾರ ಆದೇಶವಾಗಿ ಬಂದಿರುವುದು.

ಸೂತ್ರ: ಕಾರ ವರ್ಗಗಳಿಗೆ ಕಾರ ವರ್ಗಗಳು ಅಂದರೆ ಶ್ಚು ಅಕ್ಷರಗಳು ಆದೇಶವಾಗಿ ಬಂದರೆ ಅಂತಹ ಸಂಧಿಗಳೇ ಶ್ಚುತ್ವ ಸಂಧಿ.

ಉದಾ: ಪಯಶ್ಶಯನ, ಶರಚ್ಚಂದ್ರ, ಜಗಜ್ಜ್ಯೋತಿ.


7. ಅನುನಾಸಿಕಸಂಧಿ

ಅನುನಾಸಿಕ ಅಕ್ಷರಗಳಾದ ಙ್ ಞ್ ಣ್ ನ್ ಮ್ ಗಳು ಆದೇಶವಾಗಿ ಬರುವ ಸಂದಿಯೇ ಅನುನಾಸಿಕ ಸಂಧಿ.

ಉದಾ:
ವಾಕ್ + ಮಯ > ವಾಙ್ಮಯ
ಕ್ + ಮ್ + ಅ > ಙ್ + ಮ್ + ಅ

ಇಲ್ಲಿ ಪೂರ್ವಪದದ ಕೊನೆಯ ಅಕ್ಷರವಾದ ‘’ ಕಾರಕ್ಕೆ ಪರಪದದ ಆದಿಯಲ್ಲಿರುವ ‘’ ಕಾರ ಪರವಾಗಿ ಸಂಧಿಯಾದಾಗ ‘’ ಕಾರದ ಬದಲಿಗೆ ಅದೇ ವರ್ಗದ ಅನುನಾಸಿಕ ಅಕ್ಷರ ‘’ ಕಾರ ಆದೇಶವಾಗಿ ಬಂದಿದೆ.

ಸೂತ್ರ : ವರ್ಗದ ಪ್ರಥಮಾಕ್ಷರಗಳಿಗೆ ಯಾವುದೇ ಅನುನಾಸಿಕ ಅಕ್ಷರಗಳು ಪರವಾದರೂ ಅವುಗಳಿಗೆ ಅಂದರೆ ವರ್ಗದ ಪ್ರಥಮಾಕ್ಷರಗಳಿಗೆ ಅದೇ ವರ್ಗದ ಅನುನಾಸಿಕ ಅಕ್ಷರಗಳು ಆದೇಶವಾಗಿ ಬಂದರೆ ಅದು ಅನುನಾಸಿಕ ಸಂಧಿ.

ಉದಾ: ವಾಙ್ಮಯ, ಷಣ್ಮುಖ, ಸನ್ಮಾನ.


Spread the Knowledge

You may also like...

1 Response

  1. Lakshmi singh says:

    ಢದಖಷದಭನೊ ಎಇಪಕೊಫಗೊ ಪಥ ಟೊಆತ ಌಇಫಥೢ

Leave a Reply

Your email address will not be published. Required fields are marked *