ಚಾಮರಸ ಕವಿ
ಕವಿ ಚಾಮರಸನದು ವ್ಯಕ್ತಿತ್ವ ನಿರಸನ ಸ್ವಭಾವ. “ಪ್ರಭುಲಿಂಗಲೀಲೆ” ಕಾವ್ಯವೂ ವ್ಯಕ್ತಿತ್ವ ನಿರಸನವನ್ನೇ ಹೇಳುವಂಥದ್ದು. ಹೀಗಾಗಿ ಚಾಮರಸ ತನ್ನ ಬದುಕಿನ ಬಗ್ಗೆಯಾಗಲಿ ತನ್ನ ಕಾವ್ಯದ ಬಗ್ಗೆಯಾಗಲಿ ಎಲ್ಲಿಯೂ ಹೇಳಿಕೊಂಡಿಲ್ಲ. “ಪ್ರಭುಲಿಂಗಲೀಲೆ” ಕಾವ್ಯದಲ್ಲಿ ಎಲ್ಲಿಯೂ ಚಾಮರಸ ಎಂಬ ಹೆಸರಿನ ಉಲ್ಲೇಖವೇ ಇಲ್ಲ. ಆದರೆ ಬಾಹ್ಯ ಆಧಾರಗಳಿಂದ ಅಂದರೆ ನಂತರದ ಕವಿಗಳು ಚಾಮರಸನ ಬಗ್ಗೆ ಬರೆದಿರುವ ಸಂಗತಿಗಳಿಂದ ಈತ ಗದಗ ಜಿಲ್ಲೆಯ ನಾಗಣಾಪುರದವನು (ಈಗಿನ ನಾರಾಯಣಪುರ) ಎಂಬುದು ತಿಳಿದು ಬರುತ್ತದೆ. ಈತನ ಕಾಲ ೧೬ನೆಯ ಶತಮಾನ ಎಂದು ವಿದ್ವಾಂಸರು ಊಹಿಸಿದ್ದಾರೆ.
ಚಾಮರಸನು ವಿಜಯನಗರದ ಪ್ರೌಢದೆ’ವನ ಕಾಲದಲ್ಲ ಆತನ ಸಭೆಯಲ್ಲಿದ್ದನೆಂದೂ ನೂರೊಂದು ವಿರಕ್ತರೊಡನೆ ವಾಸಿಸುತ್ತಿದ್ದನೆಂದೂ ಗ್ರಂಥಗಳಿಂದ ಗೊತ್ತಾಗುವುದರಿಂದಲೂ ಪ್ರೌಢದೇವನು ಕ್ರಿ. ಶ. 1419 ರಿಂದ 1446ರ ವರೆಗೆ ಆಳಿದನೆಂದು ಇತಿಹಾಸದಿಂದ ತಿಳಿಯುವುದರಿಂದಲೂ ಚಾಮರಸನು 1430ರ ಸುಮಾರಕ್ಕೆ ಇದ್ದನೆಂದು ಕವಿಚರಿತೆಕಾರರು ಗ್ರಹಿಸಿದ್ದಾರೆ.
ಪ್ರಭುಲಿಂಗಲೀಲೆ ತೆಲುಗು, ತಮಿಳು, ಸಂಸ್ಕೃತ ಮತ್ತು ಮರಾಠಿ ಭಾಷೆಗಳಿಗೆ ಅನುವಾದಗೊಂಡಿರುವುದು ಅದರ ಹೆಗ್ಗಳಿಕೆಯ ಗುರುತು. ಗಾಳಿಯಂತೆ ಸುತ್ತೆಲ್ಲ ಸುಳಿದಾಡುವ ಅಲ್ಲಮ ಅನೇಕರ ಅಜ್ಜಾನವನ್ನು ಅಳಿಸಿಹಾಕಿ, ಅಹಂಕಾರವನ್ನು ತುಳಿದು ನಿಜಮಾರ್ಗದತ್ತ ನಡೆಯಲು ಪ್ರೇರೇಪಿಸಿದ ಮಹಾಮಹಿಮ.
ಬನವಾಸಿಂಯು ಅರಸನಾದ ಮಮಕಾರ ಮತ್ತು ಅವನ ಹೆಂಡತಿ ಮೋಹಿನಿದೇವಿಯ ಮಗಳಾಗಿ ಜನಿಸಿದ ಮಾಯೆಯ ಮಧುಕೇಶ್ವರ ದೇವಾಲಯಕ್ಕೆ ನಿತ್ಯ ಹೋಗಿ ನೃತ್ಯ ಸೇವೆ ಸಲ್ಪಿಸುತ್ತಿರುತ್ತಾಳೆ. ಮುಂದೆ ಮದ್ದಳೆಕಾರನಾಗಿ ಬಂದ ಅಲ್ಲಮನ ಮದ್ದಳೆ ದನಿಗೆ ಮನಸೋತು ಅವನನ್ನು ಒಲಿಸಿಕೊಳ್ಳಲು ಹಲವು ರೀತಿಯ ಪ್ರಯತ್ನ ಮಾಡುತ್ತಾಳೆ. ವಿರಹತಾಪ ತಾಳದೆ ಅಲ್ಲಮನನ್ನು ಅಪ್ಪಿಕೊಳ್ಳಲು ಹೋದಾಗ ಬಯಲನ್ನೇ ಅಪ್ಪಿಕೊಂಡಂತಾಗುತ್ತದೆ. ಹೇಗಾದರೂ ಮಾಡಿ ಅಲ್ಲಮನನ್ನು ಒಪ್ಪಿಸುವಂತೆ ತನ್ನ ಗೆಳತಿಯಾದ ವಿಮಳೆಗೆ ಹೇಳುತ್ತಾಳೆ. ಅಲ್ಲಮ ಹಾಗೂ ವಿಮಳೆಯರ ನಡುವೆ ಹಾಗೂ ಅಲ್ಲಮ-ಮಾಯೆಯರ ನಡುವೆ ನಡೆದ ಸಂವಾದ ತುಂಬಾ ತಾರ್ಕಿಕ ಸ್ಥಾರಸ್ಯದಿ೦ದ ಕೂಡಿದ್ದು, ಸಬಲ ಮನಸ್ಕರು ಆಸೆ-ಆಮಿಷಗಳಿಗೆ ಈಡಾಗಲಾರರು ಎಂಬುದನ್ನು ಬಿಂಬಿಸುತ್ತದೆ.