ನಾರಾಯಣ ಶರ್ಮ (ಕೆಂಪುನಾರಾಯಣ) – ಕವಿ ಪರಿಚಯ
ನಾರಾಯಣ ಶರ್ಮ– ಬ್ರಾಹ್ಮಣ ಕವಿಯಾದ ಇವನು ಕನ್ನಡದಲ್ಲಿ ‘ಮುದ್ರಾಮಂಜೂಷ’ವೆಂಬ ಗದ್ಯಗ್ರಂಥವನ್ನು ಬರೆದಿದ್ದಾನೆ, ಮೈಸೂರಿನ ದೊರೆಯಾದ ಮುಮ್ಮಡಿ ಕೃಷ್ಣರಾಜರ ಆಸ್ಥಾನ ಕನಿಯಾಗಿದ್ದನು. ಗ್ರಂಥ ರಚನೆಯ ಕಾಲ ಕ್ರಿ.ಶ . 1823. ವಿಶಾಖದತ್ತನ ಮುದ್ರಾರಾಕ್ಷಸದ ಕಥೆಯೊಂದಿಗೆ ಪೂರ್ವ ಕಥೆಯನ್ನು ಸೇರಿಸಿ ಗ್ರಂಥರಚನೆ ಮಾಡಿದ್ದಾನೆ. ಕಳೆದ ಶತಮಾನದ ಆದಿಯಲ್ಲಿ ಸಂಸ್ಕೃತ ನಾಟಕಗಳನ್ನು ಕನ್ನಡಕ್ಕೆ ಅನೇಕರು ಅನುವಾದ ಮಾಡಿದ ಕಾರಣ ರಾಜನ ಪ್ರೇರಣೆಯಂತೆ ಕವಿ ಇದನ್ನು ಬರೆದಿರಬಹುದು, ಕವಿಯ ರೂಢನಾಮ ಕೆಂಪುನಾರಾಯಣ