ಸಂಸ್ಕೃತ ಕವಿಗಳು ಮತ್ತು ಅವರ ಪ್ರಸಿದ್ಧ ಕೃತಿಗಳು /ಗ್ರಂಥಗಳು

ಪ್ರಾಚೀನ ಸಂಸ್ಕೃತ ಸಾಹಿತ್ಯವು ವಿಶ್ವದ ಅತ್ಯಂತ ಶ್ರೀಮಂತ ಮತ್ತು ವೈವಿಧ್ಯಮಯ ಸಾಹಿತ್ಯಗಳಲ್ಲಿ ಒಂದಾಗಿದೆ. ಇದು ಅನೇಕ ಪ್ರತಿಭಾವಂತ ಕವಿಗಳನ್ನು ಉತ್ಪಾದಿಸಿದೆ, ಅವರ ಕೃತಿಗಳು ಶತಮಾನಗಳಿಂದಲೂ ಜನಪ್ರಿಯವಾಗಿವೆ ಮತ್ತು ಅವು ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಒಂದು ಮಹತ್ವದ ಸ್ಥಾನವನ್ನು ಹೊಂದಿವೆ.
| ಕವಿ | ಗ್ರಂಥಗಳು |
|---|---|
| ವಾಲ್ಮೀಕಿ | ರಾಮಾಯಣ |
| ವ್ಯಾಸ | ಭಾರತ (ಮಹಾಭಾರತ) |
| ಪಾಣಿನಿ | ಅಷ್ಟಾಧ್ಯಾಯೀ, ಜಾಂಬವತೀಜಯಮ್, ಪಾತಾಳವಿಜಯ |
| ಭಾಸ | ಸ್ವಪ್ನವಾಸವದತ್ತಾ |
| ರಾಮಿಲ, ಸೌಮಿಲ | ಶೂದ್ರಕ ಕಥೆ |
| ಕಾಳಿದಾಸ (೧) | ಶಾಕುಂತಲ, ವಿಕ್ರಮೋರ್ವಶೀಯ, ಮಾಲವಿಕಾಗ್ನಿ ಮಿತ್ರ |
| ಕಾಳಿದಾಸ (೨) | ರಘುವಂಶ, ಕುಮಾರಸಂಭವ, ಮೇಘದೂತ |
| ಶಾತವಾಹನ /ಸಾತವಾಹನ | ಗಾಥಾಸಪ್ತಸತಿ / ಗಾಥಾಸಪ್ತಶತಿ |
| ಗುಣಾಢ್ಯ | ಬೃಹತ್ಕಥೆ |
| ಅಶ್ವಘೋಷ | ಬುದ್ಧಚರಿತೆ, ಸೌಂದರಾನಂದಕಾವ್ಯ, ಸೂತ್ರಾಲಂಕಾರಶಾಸ್ತ್ರ, ವಜ್ರಸೂಚೀ |
| ಶೂದ್ರಕ | ಮೃಚ್ಛಕಟಿಕ, ಪದ್ಮಪ್ರಾಭೃತಕ |
| ಚಂದ್ರಕವಿ | ನಾಟ್ಯಪ್ರಬಂಧ |
| ಅಮರಸಿಂಹ | ನಾಮಲಿಂಗಾನುಶಾಸನ |
| ಭಾಮಹ | ಕಾವ್ಯಾಲಂಕಾರ |
| ಭತೃಹರಿ | ಶತಕತ್ರಯ |
| ಬುದ್ಧಘೋಷ | ಪದ್ಯಚೂಡಾಮಣಿ |
| ವಿಷ್ಣುಶರ್ಮ | ಪಂಚತಂತ್ರ |
| ಕಾಳಿದಾಸ (೩) | ಋತುಸಂಹಾರ, ಶೃಂಗಾರತಿಲಕ, |
| ದಿಗ್ನಾಗ | ಕುಂಡಮಾಲಾ |
| ದಂಡಿ | ಕಾವ್ಯಾದರ್ಶ, ಛಂದೋವಿಚಿತಿ, ಕಲಾ ಪರಿಚ್ಛೇದ |
| ಸುಬಂಧು | ವಾಸವದತ್ತಾ |
| ಭಾರವಿ | ಕಿರಾತಾರ್ಜುನೀಯ |
| ಘಟಕರ್ಪರ | ಘಟಕರ್ಪರಕಾವ್ಯ (ನೀತಿಸಾರ) |
| ಶಾಶ್ವತ | ಅನೇಕಾರ್ಥಸಮುಚ್ಚಯ |
| ಶ್ರೀಹರ್ಷ | ರತ್ನಾವಳೀ , ಪ್ರಿಯದರ್ಶಿಕಾ, ನಾಗಾನಂದ |
| ಬಾಣಭಟ್ಟ | ಹರ್ಷಚರಿತ, ಕಾದಂಬರೀ (ಪೂರ್ವಭಾಗ), ಚಂಡೀಶತಕ |
| ಭೂಷಣಭಟ್ಟ | ಕಾದಂಬರೀ (ಉತ್ತರಭಾಗ) |
| ಮಯೂರ | ಮಯೂರಶತಕ,ಸೂರ್ಯಶತಕ |
| ಕುಮಾರದಾಸ | ಜಾನಕೀಹರಣ |
| ಭಟ್ಟಿ | ಭಟ್ಟಿಕಾವ್ಯ (ರಾವಣವಧೆ) |
| ಮಹೇಂದ್ರ ವಿಕ್ರಮವರ್ಮ | ಮತ್ತವಿಲಾಸ ಪ್ರಹಸನ |
| ಭಟ್ಟ ಭವಭೂತಿ | ಮಾಲತೀಮಾಧವ, ಮಹಾವೀರಚರಿತೆ, ಉತ್ತರರಾಮಚರಿತೆ |
| ವಾಕ್ಪತಿ | ಗೌಢವಧ |
| ಭಟ್ಟ ನಾರಾಯಣ | ವೇಣೀಸಂಹಾರ |
| ವಿಶಾಖದತ್ತ | ಮುದ್ರಾರಾಕ್ಷಸ |
| ಮುರಾರಿ | ಅನರ್ಘರಾಘವ |
| ದಾಮೋದರಗುಪ್ತ | ಕುಟ್ಟನೀಮತ |
| ಮಾಘ | ಶಿಶುಪಾಲವಧ |
| ಅಮರುಕ | ಅಮರುಶತಕ |
| ಆರ್ಯಸೂರಿ | ವಿಜಯವಿಕ್ರಮವ್ಯಾಯೋಗ |
| ತ್ರಿವಿಕ್ರಮ ಭಟ್ಟ | ನಳಚಂಪು (ದಮಯಂತೀ ಕಥಾ) |
| ಶಕ್ತಿಭದ್ರ | ಅಶ್ಚರ್ಯಚೂಡಾಮಣಿ |
| ಕವಿರಾಜ | ರಾಘವಪಾಂಡವೀಯ |
| ವಾಮನ | ಕಾವ್ಯಾಲಂಕಾರಸೂತ್ರವೃತ್ತಿ |
| ಪ್ರವರಸೇನ | ಸೇತುಬಂಧ |
ಶ್ರೀಯುತ ಎಮ್ . ಎನ್ . ಶ್ರೀನಿವಾಸ ಅಯ್ಯಂಗಾರ್ ಅವರ ಕೃತಿ “ಸಂಸ್ಕೃತ ಕವಿಚರಿತೆ” ಪುಸ್ತಕದಿಂದ ಆರಿಸಿ ಲೇಖನ

