Category: General Knowledge
Liberty cannot be preserved without general knowledge among the people.
~John Adams
‘ಮಾಸ್ತಿ ಕನ್ನಡದ ಆಸ್ತಿ’ ಎಂದು ಪ್ರಸಿದ್ಧರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಕೋಲಾರ ಜಿಲ್ಲೆಯ ಮಾಸ್ತಿ ಎಂಬ ಊರಿನಲ್ಲಿ ೦೬.೦೬.೧೮೯೧ರಲ್ಲಿ ಜನಿಸಿದರು. ಕನ್ನಡ ಸಣ್ಣಕತೆಗಳ ಜನಕ ಎನಿಸಿದ ಇವರು ಕತೆ, ಕಾದಂಬರಿ, ಕಾವ್ಯ ವಿಮರ್ಶೆ ಹೀಗೆ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ‘ಚೆನ್ನಬಸವನಾಯಕ’ ‘ಚಿಕವೀರರಾಜೇಂದ್ರ` ‘ಭಾವ’ ಮುಂತಾದವು...
ಬೆಳಗೆರೆ ಕೃಷ್ಣಶಾಸ್ತ್ರಿಗಳು ೨೨ನೇ ಮೇ ೧೯೧೬ರಲ್ಲಿ ಜನಿಸಿದರು. ಇವರು ವೃತ್ತಿಯಲ್ಲಿ ಉಪಾಧ್ಯಾಯರಾಗಿದ್ದರು. ವಿನೋಬಾಭಾವೆಯೊಂದಿಗೆ ಭೂದಾನ ಚಳುವಳಿಯಲ್ಲಿ ಭಾಗವಹಿಸಿದ್ದರು. ‘ತುಂಬಿ’ ಎಂಬುದು ಇವರ ಕಥಾಸಂಕಲನ. ‘ಹಳ್ಳಿಮೇಷ್ಟ್ರು’ ಮತ್ತು ‘ಹಳ್ಳಿಚಿತ್ರ’ ‘ಆಕಸ್ಮಿಕ’, ‘ಯೇಗ್ದಾಗೆಲ್ಲಾ ಐತೆ’, ಇವರು ರಚಿಸಿದ ಕೆಲವು ಪ್ರಮುಖ ಕೃತಿಗಳು. ಶಾಸ್ತ್ರಿಗಳು ದಿನಾಂಕ ೨೨-೩-೨೦೧೩ರಂದು ನಿಧನರಾದರು.
ರಾಷ್ತ್ರಕವಿ ಡಾ|| ಜಿ.ಎಸ್. ಶಿವರುದ್ರಪ್ಪನವರು ೧೯೨೬ ನೇ ಇಸವಿ ಫೆಬ್ರವರಿ ೭ನೇ ತಾರೀಖು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಈಸೂರಿನಲ್ಲಿ ಜನಿಸಿದರು. ಇವರು ಮೈಸೂರು, ಬೆಂಗಳೂರು ಮತ್ತು ಉಸ್ಮಾನಿಯ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರಾಗಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿರುತ್ತಾರೆ. ‘ಸಾಮಗಾನ’, ‘ಪ್ರೀತಿ...
ಕೋಟ ಶಿವರಾಮ ಕಾರಂತರು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೋಟ ಎಂಬಲ್ಲಿ ಅಕ್ಟೋಬರ್ ೧೦, ೧೯೦೨ ರಲ್ಲಿ ಜನಿಸಿದರು. ‘ಮರಳಿ ಮಣ್ಣಿಗೆ’, ‘ಅಳಿದ ಮೇಲೆ’, ‘ಬೆಟ್ಟದ ಜೀವ’ ‘ಸರಸಮ್ಮನ ಸಮಾಧಿ’, ‘ನಾವು ಕಟ್ಟಿದ ಸ್ವರ್ಗ’, ‘ಚಿಗುರಿದ ಕನಸು’, ‘ಅಭುವಿನಿಂದ ಬರಾಮಕ್ಕೆ’, ‘ಹುಚ್ಚು ಮನಸಿನ ಹತ್ತು ಮುಖಗಳು’, ‘ಮೈಮನಗಳ...
ಕುವೆಂಪು ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಕುಪ್ಪಳಿ ವೆಂಕಟಪ್ಪನವರ ಮಗ ಪುಟ್ಟಪ್ಪನವರು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ೨೯ನೇ ಡಿಸೆಂಬರ್ ೧೯೦೪ರಂದು ಜನಿಸಿದರು. ಇವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ಸಂಸ್ಥಾಪಕರಾಗಿ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದರು....
ಕನ್ನಡದ ರತ್ನತ್ರಯರಲ್ಲಿ ಒಬ್ಬನೆಂದೂ, ಕವಿಚಿಕ್ರವರ್ತಿಯೆಂದೂ ಪರಿಗಣಿತನಾದ ಮಹಾಕವಿ ರನ್ನನ ಪ್ರಸಿದ್ದಿ ನೆಲೆನಿಂತಿರುವುದು ‘ಸಾಹಸಭೀಮವಿಜಯ‘ ಎಂಬ ಕೃತಿಯಿಂದಲೆ ಎನ್ನಬಹುದು. ರನ್ನ ಕವಿಯು ತನ್ನ ರಚನೆಗಳಾದ ‘ಅಜಿತಪುರಾಣ’ ದಲ್ಲಿಯೂ “ಗದಾಯುದ್ಧ’ದಲ್ಲಿಯೂ ತಿಳಿಸಿರುವ ಅಂಶಗಳನ್ನು ಕ್ರೋಡೀಕರಿಸಿ ನಾವು ಅವನ ಜೀವನವನ್ನು ಹೀಗೆ ಚಿತ್ರಿಸಿಕೊಳ್ಳಬಹುದು. ಈಗ ಮುಧೋಳವೆಂದು ಹೆಸರಾದ ಮುದುವೊಳಲು ಎಂಬ ಊರಲ್ಲಿದ್ದ...
ಒಂದು ಎರಡುಬಾಳೆಲೆ ಹರಡು ಮೂರು ನಾಲ್ಕುಅನ್ನ ಹಾಕು ಐದು ಆರುಬೇಳೆ ಸಾರು ಏಳು ಎಂಟುಪಲ್ಯಕೆ ದಂಟು ಒಂಬತ್ತು ಹತ್ತುಎಲೆ ಮುದಿರೆತ್ತು ಒಂದರಿಂದ ಹತ್ತುಹೀಗಿತ್ತು ಊಟದ ಆಟವುಮುಗಿದಿತ್ತು ಕವಿ ಜಿ.ಪಿ. ರಾಜರತ್ನಂ
ನವಮಾಸ ಹೊತ್ತುನನ್ನನು ಹೆತ್ತುಸಾಕಿದ ತಾಯಿಗೆ ವಂದನೆ ಮೈಮುರಿ ದುಡಿದುನನ್ನನು ಸಲುಹಿಬೆಳೆಸಿದ ತಂದೆಗೆ ವಂದನೆ ವಿದ್ಯಾ ಬುದ್ಧಿಬಾಲ್ಯದಿ ಕಲಿಸಿಹರಸಿದ ಗುರುವಿಗೆ ವಂದನೆ ಬಗೆ ಬಗೆ ರೋಗವವಾಸಿ ಮಾಡುವವೈದ್ಯೆಗೆ ಮಾಡುವೆ ವಂದನೆ ನಿತ್ಯದಿ ದುಡಿದುಅನ್ನವ ನೀಡುವರೈತಗೆ ಮಾಡುವೆ ವಂದನೆ ನಾಡಿನ ರಕ್ಷಣೆನಿತ್ಯದಿ ಮಾಡುವಯೋಧಗೆ ಮಾಡುವೆ ವಂದನೆ ಎಲ್.ಕೆ.ಕಂಬಾರ