ಮಾಸ್ತಿ ವೆಂಕಟೇಶ ಅಯ್ಯಂಗಾರ್
‘ಮಾಸ್ತಿ ಕನ್ನಡದ ಆಸ್ತಿ’ ಎಂದು ಪ್ರಸಿದ್ಧರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಕೋಲಾರ ಜಿಲ್ಲೆಯ ಮಾಸ್ತಿ ಎಂಬ ಊರಿನಲ್ಲಿ ೦೬.೦೬.೧೮೯೧ರಲ್ಲಿ ಜನಿಸಿದರು.
ಕನ್ನಡ ಸಣ್ಣಕತೆಗಳ ಜನಕ ಎನಿಸಿದ ಇವರು ಕತೆ, ಕಾದಂಬರಿ, ಕಾವ್ಯ ವಿಮರ್ಶೆ ಹೀಗೆ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ‘ಚೆನ್ನಬಸವನಾಯಕ’ ‘ಚಿಕವೀರರಾಜೇಂದ್ರ` ‘ಭಾವ’ ಮುಂತಾದವು ಅವರ ಕೃತಿಗಳು.
ಅವರಿಗೆ ಜ್ಞಾನಪೀಠ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.
ಶ್ರೀಯುತರು ೧೯೮೪ರಲ್ಲಿ ನಿಧನರಾದರು.