ಕೋಟ ಶಿವರಾಮ ಕಾರಂತರು
ಕೋಟ ಶಿವರಾಮ ಕಾರಂತರು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೋಟ ಎಂಬಲ್ಲಿ ಅಕ್ಟೋಬರ್ ೧೦, ೧೯೦೨ ರಲ್ಲಿ ಜನಿಸಿದರು.
‘ಮರಳಿ ಮಣ್ಣಿಗೆ’, ‘ಅಳಿದ ಮೇಲೆ’, ‘ಬೆಟ್ಟದ ಜೀವ’ ‘ಸರಸಮ್ಮನ ಸಮಾಧಿ’, ‘ನಾವು ಕಟ್ಟಿದ ಸ್ವರ್ಗ’, ‘ಚಿಗುರಿದ ಕನಸು’, ‘ಅಭುವಿನಿಂದ ಬರಾಮಕ್ಕೆ’, ‘ಹುಚ್ಚು ಮನಸಿನ ಹತ್ತು ಮುಖಗಳು’, ‘ಮೈಮನಗಳ ಸುಳಿಯಲ್ಲಿ’, ‘ಚೋಮನ ದುಡಿ’ ಇವು ಕಾರಂತರ ಕೆಲವು ಕೃತಿಗಳು.
ಇವರ ‘ಮೈಮನಗಳ ಸುಳಿಯಲ್ಲಿ’ ಕೃತಿಗೆ ಕರ್ನಾಟಕ ಸರ್ಕಾರದ ಪಂಪ ಪ್ರಶಸ್ತಿ, ‘ಯಕ್ಷಗಾನ ಬಯಲಾಟ’ ಕೃತಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ‘ಮೂಕಜ್ಜಿಯ ಕನಸುಗಳು’ ಕೃತಿಗೆ ಭಾರತೀಯ ಜ್ಞಾನಪೀಠ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳು ಲಭಿಸಿವೆ.
ಕಾರಂತರು ೧೯೯೭ ಸೆಪ್ಟಂಬರ್ ೧೨ ರಂದು ನಿಧನರಾದರು.