The Stolen Boat, a poem by William Wordsworth – Kannada Translation

Notes

ಕನ್ನಡ ಅನುವಾದ

One summer evening (led by her) I found
A little boat tied to a willow tree
Within a rocky cave, its usual home.
Straight I unloosed her chain, and stepping in
Pushed from the shore. It was an act of stealth
ಒಂದು ಬೇಸಗೆಯ ಸಂಜೆಯಲಿ ( ಅವಳು ತೋರಿದ ಹಾದಿಯಲಿ) ನಾ ಕಂಡೆ
ವಿಲೋ ಮರಕ್ಕೆ(ನೀರುಹಬ್ಬೆಗಿಡ) ಕಟ್ಟಿದ ಆ ಪುಟ್ಟ ದೋಣಿಯನು
ಅದರ ಮಾಮೂಲಿನ ಸ್ಥಳವಾದ ಆ ಬಂಡೆಯ ಗುಹೆಯೊಳಗೆ
ಸೀದಾ ಅದರ ಸರಪಳಿಯನ್ನು ಬಿಚ್ಚಿದ ನಾನು ಕಾಲಿಟ್ಟೆ ಅದರೊಳಗೆ
ತೀರದಿಂದ ತಳ್ಳಿದೆ. ಅದೊಂದು ರಹಸ್ಯದ ಕೃತ್ಯವಾಗಿತ್ತು

And troubled pleasure, nor without the voice
Of mountain-echoes did my boat move on;
Leaving behind her still, on either side,
Small circles glittering idly in the moon,
Until they melted all into one track
ಕಳವಳದಿಂದ ಕೂಡಿದ ಆನಂದ, ಮೌನದಿಂದಲೇ
ಪ್ರತಿದ್ವನಿಸುವ ಪರ್ವತಗಳ ನಡುವೆ ತೇಲಿತು ಆ ನನ್ನ ದೋಣಿ ;
ತನ್ನೆರಡು ಬದಿಯಲ್ಲೂ, ನಿಶ್ಚಲತೆಯನ್ನು ಬಿಟ್ಟು ತನ್ನ ಹಿಂದೆ,
ವೃತ್ತಾಕಾರದ ಅಲೆಗಳು ಚಂದಿರನ ಬೆಳಕಿಗಿ ಹೊಳೆಹೊಳೆದು,
ಮತ್ತೆ ಎಲ್ಲ ಒಂದಾಗಿ ಕರಗುವವರೆಗೆ

Of sparkling light. But now, like one who rows,
Proud of his skill, to reach a chosen point
With an unswerving line, I fixed my view
Upon the summit of a craggy ridge,
The horizon’s utmost boundary; far above
ಹೊಳೆಯುವ ಬೆಳಕಿನಲ್ಲಿ. ಆದರೆ ಈಗ, ಪರಿಣತ ಹುಟ್ಟು ಹಾಕುವವರಂತೆ,
ತನ್ನ ಕೌಶಲ್ಯದ ಬಗ್ಗೆ ಹೆಮ್ಮೆಯಿಂದ, ನನ್ನ ಆಯ್ಕೆಯ ಗುರಿಯನ್ನು ತಲುಪಲು
ದೃಢವಾದ ನೇರ ದಾರಿಯಲಿ , ನನ್ನ ದೃಷ್ಟಿ ಇಟ್ಟೆ
ಒರಟಾದ ಪರ್ವತ ಶ್ರೇಣಿಯ ತುತ್ತ ತುದಿಯ ಮೇಲೆ,
ದಿಗಂತದ ಅತ್ಯಂತ ಕೊನೆಯಲ್ಲಿ ; ದೂರದ ಎತ್ತರದಲ್ಲಿ

Was nothing but the stars and the grey sky.
She was an elfin pinnace; lustily
I dipped my oars into the silent lake,
And, as I rose upon the stroke, my boat
Went heaving through the water like a swan;
ನಕ್ಷತ್ರಗಳು ಮತ್ತು ಬೂದು ಆಕಾಶವನ್ನು ಹೊರತುಪಡಿಸಿ ಏನೂ ಇರಲಿಲ್ಲ.
ಅವಳು(ದೋಣಿ) ಯಕ್ಷರಂತೆ ಮಾಯಾವಿಯಾದ ಪುಟ್ಟ ದೋಣಿಯಾಗಿದ್ದಳು ; ಉತ್ಸಾಹದಿಂದ
ನಾನು ಹುಟ್ಟುಗೋಲನ್ನು ಮೌನದಲ್ಲಿದ್ದ ಸರೋವರದಲ್ಲಿ ಅದ್ದಿದೆನು,
ಮತ್ತು, ಹುಟ್ಟು ಹಾಕಿದಂತೆ ನಾ ಮೇಲೇರಿದಂತೆ, ನನ್ನ ದೋಣಿಯು
ಹಂಸದಂತೆ ನೀರಿನ ಮೇಲೆ ಏರಿತು ;

When, from behind that craggy steep till then
The horizon’s bound, a huge peak, black and huge,
As if with voluntary power instinct,
Upreared its head. I struck and struck again,
And growing still in stature the grim shape
ಆವಾಗ, ಅಲ್ಲಿಯವರೆಗೂ ಆ ಒರಟು ಕಡಿದಾದ ಪರ್ವತ ಸಾಲಿನ ಹಿಂದಿನಿಂದ
ದಿಗಂತದ ಎಲ್ಲೆಯಲ್ಲಿ ಇದ್ದ , ದೊಡ್ಡದೊಂದು ಶಿಖರ, ಕಪ್ಪಗೆ ಮತ್ತು ಬೃಹತ್ತಾಗಿ,
ಸ್ವಯಂಪ್ರೇರಿತವಾಗಿ ಶಕ್ತಿಯುತ ಸ್ವರೂಪದಂತೆ,
ತನ್ನ ತಲೆಯನ್ನು ಮೇಲೆತ್ತಿತು.. ನಾನು ಮತ್ತೆ ಮತ್ತೆ ಹುಟ್ಟು ಹಾಕಿದೆ,
ಜೊತೆಯೇ ಭಯಂಕರ ಆಕಾರವು ಕೂಡ ಇನ್ನು ದೊಡ್ಡದಾಗಿ ಬೆಳೆಯತೊಡಗಿ

Towered up between me and the stars, and still,
For so it seemed, with purpose of its own
And measured motion like a living thing,
Strode after me. With trembling oars I turned,
And through the silent water stole my way
ನನ್ನ ಮತ್ತು ನಕ್ಷತ್ರಗಳ ಮತ್ತು ಸ್ಥಿರವಾಗಿದ್ದ ಪರಾವತಗಳ ನಡುವೆ ಎತ್ತರವಾಗಿ ನಿಂತಿತು,
ಅದು ತನ್ನದೇ ಅದ ಏನೋ ಉದ್ದೇಶದಿಂದಲೇ ಇರುವಂತೆ ಅನಿಸುತಿತ್ತು
ಏನೋ ಲೆಕ್ಕಾಚಾರ ಮಾಡಿ ಚಲಿಸುತ್ತಿರುವಂತೆ,
ನನ್ನೆಡೆಗೆ ನುಗ್ಗಿತು. ನಡುಗುವ ಹುಟ್ಟುಗೋಳುಗಳೊಂದಿಗೆ ನಾ ತಿರುಗಿದೆ,
ನಿಶಬ್ಧವಾಗಿದ್ದ ಆ ನೀರಿನ ಮೇಲೆ ಮೆತ್ತಗೆ ನಾನು ನನ್ನ ದಾರಿ ಹಿಡಿದೆ

Back to the covert of the willow tree;
There in her mooring-place I left my bark,—
And through the meadows homeward went, in grave
And serious mood; but after I had seen
That spectacle, for many days, my brain
ವಿಲೋ ಮರದ ಆ ರಹಸ್ಯ ಸ್ಥಳಕ್ಕೆ ಹಿಂತಿರುಗಿ;
ಅಲ್ಲಿ ಅವಳ(ದೋಣಿಯ) ಲಂಗರು ಹಾಕಿ, ಹುಟ್ಟುಗೋಲನ್ನು ಬಿಟ್ಟು ನಾ ಹೊರಟೆ, —
ಮತ್ತು ಹುಲ್ಲುಗಾವಲಿನ ಮೂಲಕ ಮನೆಯ ದಾರಿಯಲ್ಲಿ ನಡೆದ, ಭಾರವಾದ
ಮತ್ತು ಗಂಭೀರ ಮನಸ್ಥಿತಿಯಲ್ಲಿ; ಆದರೆ ನಂತರವೂ ನಾನು ನೋಡಿದ
ಆ ಚಮತ್ಕಾರ, ಹಲವು ದಿನಗಳವರೆಗೆ, ನನ್ನ ಮೆದುಳು

Worked with a dim and undetermined sense
Of unknown modes of being; o’er my thoughts
There hung a darkness, call it solitude
Or blank desertion. No familiar shapes
Remained, no pleasant images of trees,
ಮಂದ ಮತ್ತು ಅಸ್ಥಿರ ಭಾವದಲ್ಲಿಯೇ ಇದ್ದುಬಿಟ್ಟಿತು
ತಿಳಿಯದ ಯಾವುದೊ ಸ್ಥಿತಿಯಲ್ಲಿ; ಆ ನನ್ನ ಆಲೋಚನೆಗಳೋ
ಕತ್ತಲೆಯ ಮಬ್ಬಿನಲ್ಲಿಯೇ ತೂಗಿದವು, ಅದನ್ನು ಏಕಾಂತವೇ ಅನ್ನಿ
ಅಥವಾ ಖಾಲಿ ವೈರಾಗ್ಯವೆನ್ನಿ. ಪರಿಚಿತ ಆಕರಗಳು ಯಾವ
ಉಳಿಯಲಿಲ್ಲ, ಮರಗಳ ಮನೋಹರ ಚಿತ್ರವು ಉಳಿಯಲಿಲ್ಲ,

Of sea or sky, no colours of green fields;
But huge and mighty forms, that do not live
Like living men, moved slowly through the mind
By day, and were a trouble to my dreams.
ಸಮುದ್ರ ಅಥವಾ ಆಕಾಶವೂ ಇಲ್ಲ, ಹೊಲಗದ್ದೆಗಳ ಹಸಿರು ಬಣ್ಣಗಳೂ ಇಲ್ಲ;
ಆದರೆ ಬೃಹತ್ತಾದ ಮತ್ತು ಭಯಂಕರ ಶಕ್ತಿಯುಳ್ಳ ಆಕೃತಿಗಳು, ಜೀವವಿರಿರುವ
ಮನುಷ್ಯರಂತೆ ಇಲ್ಲದವು, ಸರಿದವು ಮೆತ್ತಗೆ ನನ್ನ ಮನದಲ್ಲಿ
ಹಗಲಿನಲ್ಲಿ, ಮತ್ತು ಅವು ನನ್ನ ಕನಸಿನೊಳಗಿನ ಪೀಡೆಗಳಾಗಿದ್ದವು.

Notes

Spread the Knowledge

You may also like...

Leave a Reply

Your email address will not be published.