ಕನ್ನಡ ವ್ಯಾಕರಣ – ಹಳಗನ್ನಡ

ಹಳಗನ್ನಡದ ವಿಭಕ್ತಿ ಪ್ರತ್ಯಯಗಳು

ಹಳಗನ್ನಡದ ವಿಭಕ್ತಿ ಪ್ರತ್ಯಯಗಳು
ಹಳಗನ್ನಡದ ವಿಭಕ್ತಿ ಪ್ರತ್ಯಯಗಳು

ಱ(ರ)ಳ-ಕುಳ-ಕ್ಷಳ :

ಹಿಂದೆ ಕನ್ನಡದಲ್ಲಿ ಇದ್ದ ೞ, ಳ ಎಂಬ ಎರಡು ವರ್ಣಗಳು ಇವತ್ತು ಸೇರಿ ಎಂಬ ಒಂದೇ ಅಕ್ಷರವಾಗಿದೆ. ಇದನ್ನು ಸೂಚಿಸಲು ವ್ಯಾಕರಣಕಾರರು ಮಾಡಿಕೊಂಡ ಸಂಜ್ಞೆ ಱಳ, ಕುಳ, ಮತ್ತು ಕ್ಷಳ. * ಮೊದಲಿಗೆ ವಾಗಿದ್ದು, ನಂತರ ಆಗಿ ಬದಲಾಗಿದ್ದಕ್ಕೆ ಱಳ ಎಂದು ಹೆಸರು. ಯಾಕೆಂದರೆ ಈ ಕಾರ ನೋಡುವುದಕ್ಕೆ ಕಾರ ಕ್ಕೆ ಹೋಲುತ್ತದೆ (ಬರೆವರೂಪ)

ಕನ್ನಡ ವರ್ಣಮಾಲೆಯಲ್ಲಿ ಹಿಂದೆ ಮೂರು ರೀತಿಯ ‘ಳ’ ಕಾರಗಳಿದ್ದುವು. ಅವೇ

ಱಳ,
ಕುಳ,
ಕ್ಷಳ.

’ ಈ ‘ಳ’ ಕಾರವೇ ಱಳ. ಸೂೞ್ ಪದಕ್ಕೆ ಸರದಿ, ಪಾಳಿ ಎಂಬರ್ಥವಿದೆ.

ಳ’ ಅಕ್ಷರವೇ ಕುಳ. ಎಳ– ಚಿಕ್ಕ, ಸಣ್ಣ; ಕಳಿ– ಪಕ್ವವಾಗು, ಮಾಗು ಎಂಬ ಅರ್ಥವುಳ್ಳ ಪದಗಳಿವು.

ಸಂಸ್ಕೃತದ ‘’ ಕಾರ ಕನ್ನಡಕ್ಕೆ ಬರುವಾಗ ‘ ‘ ಕಾರ ರೂಪವನ್ನು ಹೊಂದುತ್ತದೆ. ಇದೇ ಕ್ಷಳ,

ಮಂಗಲ- ಮಂಗಳ; ಪಿಂಗಲ- ಪಿಂಗಳ ಇತ್ಯಾದಿ.

ಇದೇ ರೀತಿ ‘ರ’ ಕಾರದಲ್ಲಿಯೂ ಎರಡು ರೀತಿಯ ‘ರ’ ಕಾರಗಳು ಇದ್ದುವು. ಅವುಗಳನ್ನು

ರೇಫ, ಮತ್ತು
ಶಕಟರೇಫ

ಎಂದು ಕರೆಯಲಾಗುತ್ತಿತ್ತು.

’ ಅಕ್ಷರವೇ ರೇಫ ಮತ್ತು
’ ಅಕ್ಷರವೇ ಶಕಟರೇಫ.

ಈ ಅಕ್ಷರಗಳಿಂದ ಕೂಡಿದ ಪದಗಳಿಗೆ ಅರ್ಥ ವ್ಯತ್ಯಾಸವಿತ್ತು.
ಉದಾ : ಏರ್– ಹತ್ತು; ಏಱ – ಗಾಯ
ನೆರೆ – ಸಮೀಪ, ಅಕ್ಕಪಕ್ಕ ; ನೆಱೆ – ಪ್ರವಾಹ, ಮಹಾಪೂರ
ಮೊರೆ – ಪ್ರಾರ್ಥನೆ ;
ಮೊಱೆ– ಗೋಳಾಟ, ಗುಂಯ್ ಗುಡು. (ದುಂಬಿ ಮೊಱೆಯುತ್ತದೆ)


ಹಿಂದೆ ಕನ್ನಡದಲ್ಲಿ ಇದ್ದ ೞ, ಳ ಎಂಬ ಎರಡು ವರ್ಣಗಳು ಇವತ್ತು ಸೇರಿ ಳ ಎಂಬ ಒಂದೇ ಅಕ್ಷರವಾಗಿದೆ. ಇದನ್ನು ಸೂಚಿಸಲು ವ್ಯಾಕರಣಕಾರರು ಮಾಡಿಕೊಂಡ ಸಂಜ್ಞೆ ಱಳ, ಕುಳ, ಮತ್ತು ಕ್ಷಳ.

* ಮೊದಲಿಗೆ ೞ ವಾಗಿದ್ದು, ನಂತರ ಳ ಆಗಿ ಬದಲಾಗಿದ್ದಕ್ಕೆ ಱಳ ಎಂದು ಹೆಸರು. ಯಾಕೆಂದರೆ ಈ ೞಕಾರ ನೋಡುವುದಕ್ಕೆ ಱಕಾರಕ್ಕೆ ಹೋಲುತ್ತದೆ (ಬರೆವರೂಪ)

ಈ ಹೆಸರು ಬಂದಾಗ ಱ ಕಾರ ಇನ್ನೂ ಕನ್ನಡದಲ್ಲಿ ಬಳಕೆಯಲ್ಲಿತ್ತು, ಈಗ ಅದೂ ಕೂಡ ರ ಕಾರವಾಗಿ ಬದಲಾಗಿದೆ.

ಱಳ ಕ್ಕೆ ಉದಾಹರಣೆಗೆ, ಮಳೆ , ಹಳೆಯ ಇಂತಹ ಪದಗಳಲ್ಲಿ ಬರುವ ಳ ಕಾರವು ಱಳ. (ಹೋಲಿಸಿ ನೋಡಲು, ತಮಿಳು ಮಲೆಯಾಳಗಳಲ್ಲಿ ಇದು , ಮೞೈ, ಪೞಯ ಎಂದೇ ಇದೆ).

ಇದನ್ನು ಬಿಟ್ಟು ಅಚ್ಚಕನ್ನಡ ಪದಗಳಲ್ಲಿ ಬರುವ ಳ ಕಾರಕ್ಕೆ ಕುಳ ಎಂದು ಹೆಸರು – ಏಕೆಂದರೆ ಈ ಳಕಾರ ನೋಡೋದಕ್ಕೆ ಕು ಅನ್ನುವ ಅಕ್ಷರದಂತೆ ಕಾಣುತ್ತಿತ್ತು (~೧೦-೧೧ನೇ ಶತಮಾನದಲ್ಲಿ) . ಆಗಲೇ ಈ ವಿಂಗಡಣೆ ಬಂದದ್ದು.

ಇವತ್ತು ಕನ್ನಡವೊಂದನ್ನೇ ಮಾತಾಡುವವರಿಗೆ ಯಾವುದು ಱಳ, ಯಾವುದು ಕುಳ ಎಂದು ಹೇಳುವುದು ಬಹಳ ಕಷ್ಟ – ಉದಾಹರಣೆಗೆ ಹೊಳೆ (ಪ್ರಕಾಶಿಸು) ಎಂಬಲ್ಲಿ ಅದು ಕುಳ, ಹೊಳೆ (ನದಿ) ಎಂಬಲ್ಲಿ ಅದು ಱಳ.

ಇನ್ನು ಕ್ಷಳ ಎಂದರೆ ಕ್ಷ ಎಂಬ ಅಕ್ಷರದ ಪಕ್ಕದ ಳ – ಬರೆಯುವುದರಲ್ಲೂ ಹೇಳುವುದರಲ್ಲೂ ಯಾವ ವ್ಯತ್ಯಾಸವೂ ಇಲ್ಲದಿದ್ದರೆ, ಕುಳಕ್ಕೂ ಕ್ಷಳಕ್ಕೂ ವ್ಯತ್ಯಾಸವೇನು? ಸಂಸ್ಕೃತದಲ್ಲಿ ಲ ಕಾರವಾಗಿದ್ದು, ಕನ್ನಡದಲ್ಲಿ ಳ ಕಾರವಾಗುವ ವರ್ಣಕ್ಕೆ ಕ್ಷಳ ಎನ್ನುತ್ತಿದ್ದರು. ಉದಾಹರಣೆಗೆ ಮಂಜುಳ, ಜಳಜ, ವಿಮಳ ಇತ್ಯಾದಿ.

ಕ್ಷ ಅನ್ನುವುದನ್ನು ವರ್ಣಮಾಲೆಯಲ್ಲಿ ತೋರಿಸುತ್ತಿದ್ದಕ್ಕೆ ಒಂದು ಕಾರಣವಿದೆ. ದೇವನಾಗರಿಯಲ್ಲಿ ಈ ಅಕ್ಷರ ಕ (क) ಮತ್ತು ಷ (ष) ಗಳನ್ನು ಸೇರಿಸಿ ಬರೆದಂತೆ ಕಾಣದೇ ಬೇರೆಯದೇ ರೂಪದಲ್ಲಿ (क्ष) ಇರುತ್ತದೆ. ಹಾಗಾಗಿ ವರ್ಣಮಾಲೆಯಲ್ಲಿ ಅದಕ್ಕೊಂದು ಸ್ಥಳ (ಅದು ವರ್ಣವಲ್ಲದೆ, ಸಂಯುಕ್ತಾಕ್ಷರ ಆಗಿದ್ದರೂ ಕೂಡ).

ಕನ್ನಡದಲ್ಲಿ ಕ ಮತ್ತು ಷ ಸೇರಿಸಿ ಕ್ಷ ಎಂದು ಬರೆಯುವುದರಿಂದ, ಕ್ಷ ಎಂದು ವರ್ಣಮಾಲೆಯಲ್ಲಿ ತೋರಿಸುವ ಅಗತ್ಯ ತೋರದು.

ಇನ್ನು ಱ , ರ ಎರಡೂ ಈಗ ರ ಎಂದೇ ಆಗಿವೆ. ೧೦-೧೧ ನೇ ಶತಮಾನದಲ್ಲಿ ೞ ಹೋಗಲು ತೊಡಗಿತೆಂದೂ, ಱ ಎಂಬುದು ೧೫-೧೬ನೇ ಶತಮಾನದ ನಂತರ ಹೋಗಲು ತೊಡಗಿತೆಂದು ಭಾಷೆಯ ಬೇರೆ ಬೇರೆ ಮಾದರಿಗಳನ್ನ ನೋಡಿ ತಿಳಿಯಬಹುದಾದ ಸಂಗತಿ.

ಆಧಾರ

Spread the Knowledge

You may also like...

Leave a Reply

Your email address will not be published. Required fields are marked *