ಸಾಂಗತ್ಯ ಸಾಹಿತ್ಯ ಪ್ರಕಾರ

ಚಂಪೂ, ತ್ರಿಪದಿ, ರಗಳೆ, ಷಟ್ಟದಿ ಈ ಮೊದಲಾದ ಛಂದೋರೂಪಗಳ ನ೦ತರ ಬಂದ ಸಾಂಗತ್ಯ ಪ್ರಕಾರವು ಐದು ಶತಮಾನಗಳ ಸುದೀರ್ಫವಾದ ಇತಿಹಾಸವನ್ನು ಹೊಂದಿದೆ. ಈ ದೇಶಿಯ ಕಾವ್ಯ ಪ್ರಕಾರದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಕೃತಿಗಳು ರಚಿತಗೊಂಡಿವೆ. ಆಧುನಿಕ ಕಾಲದಲ್ಲೂ ಈ ಪ್ರಕಾರ ವ್ಯಾಪಕವಾಗಿ ಬಳಕೆಯಾಗುತ್ತಿದೆ.

ಏಳೆ, ತ್ರಿಪದಿ, ಅಕ್ಕರ ಮೊದಲಾದುವೆಲ್ಲ ದೇಶಿಯ ಮಟ್ಟುಗಳಾಗಿದ್ದು ಅಂಶಗಣ ಛಂದಸ್ಸಿನಲ್ಲಿ ರೂಪುಗೊಂಡಿವೆ. ಸಾ೦ಗತ್ಯವು ಇವುಗಳಂತೆಯೇ ಅ೦ಶಗಣಕ್ಕೆ ಸಂಬಂಧಿಸಿದೆ. ಇದು ನಾಲ್ಕು ಚರಣಗಳುಳ್ಳ ಪದ್ಯ ಅಂಶಗಣಘಟಿತವಾದ ಸಾಂಗತ್ಯ ತುಂಬ ಸರಳ ಹಾಗೂ ಸೊಗಸಾದ ಸ್ವರದ ಏರಿಳಿತಗಳನ್ನು ಅಳವಡಿಸಿಕೊಂಡು ರಮ್ಯತೆಯನ್ನು ಉಂಟುಮಾಡುವ ಹಾಡುಗಬ್ಬಗಳಿಗೆ ಹೇಳಿ ಮಾಡಿಸಿದಂಥ ಪ್ರಕಾರ. 15ನೆಯ ಶತಮಾನದ ಆರಂಭದಿಂದ ಕನ್ನಡ ಕಾವ್ಯಗಳಿಗೆ ವಾಹಕವಾಗಿ ನಡೆದು ಬ೦ದ ಸಾಹಿತ್ಯದಲ್ಲಿ ಕನಕದಾಸ, ರತ್ನಾ ಕರವರ್ಣಿ, ನಂಜುಂಡ, ಪದ್ಮರಸ, ತಿರುಮಲಾರ್ಯ ಮೊದಲಾದ ಕವಿಗಳು ಸಂಚಿಯ ಹೊನ್ನಮ್ಮ, ಹೆಳವನಕಟ್ಟೆ ಗಿರಿಯಮ್ಮ ಮೊದಲಾದ ಕವಯಿತ್ರಿಯರೂ ತಮ್ಮ ಕೃತಿಗಳನ್ನು ರಚಿಸಿದ್ದಾರೆ. ದೇವರಾಜನೆಂಬ ಕವಿ (1410) ಬರೆದ ‘ಸೊಬಗಿನ ಸೋನೆ’ ಸಾಂಗತ್ಯದ ಮೊದಲ ಕೃತಿ ಎಂದು ತಿಳಿಯಲಾಗಿದೆ.

ಹದಿನಾರನೆಯ ಶತಮಾನದಲ್ಲಿ ಸಾಂಗತ್ಯ ಕೃತಿಗಳು ಅಪಾರವಾಗಿ ರಚಿತವಾಗಿವೆ. ಈ ಯುಗವನ್ನು ಸಾಂಗತ್ಯದ ಸುವರ್ಣಯುಗ ಎನ್ನಬಹುದು. ಆಧುನಿಕ ಸಾಹಿತ್ಯದಲ್ಲಿಯೂ ಪು.ತಿ.ನ, ಎಸ್‌. ಎ. ಪರಮೇಶ್ವರ ಭಟ್ಟ, ದ. ರಾ. ಬೇಂದ್ರೆ ಮುಂತಾದವರು ಸಾಂಗತ್ಯ ಕಾವ್ಯ ಪ್ರಕಾರವನ್ನು ಬೆಳೆಸಲು ಪ್ರಯತ್ನಿಸಿದ್ದಾರೆ.

ಸಾಂಗತ್ಯವು ಕನ್ನಡ ಕವಿಗಳಿಂದ ಪುರಸ್ಕೃತವಾದ ಒಂದು ಛಂದೋ ರೂಪವಾಗಿದೆ. ಸಾ೦ಗತ್ಯವು ಅಂಶಗಣದ ಗುಂಪಿಗೆ ಸೇರಿದ್ದು ಈ ಛಂದಸ್ಸಿನ ಲಕ್ಷಣ ಹೀಗಿದೆ;

೪ ಪಾದಗಳು : ಆದಿ ದ್ವಿತೀಯಾಕ್ಷರ ಪ್ರಾಸನಿಯತ
೧ ಮತ್ತು ೩ನೇ ಪಾದದಲ್ಲಿ ಕ್ರಮವಾಗಿ ನಾಲ್ಕು-ನಾಲ್ಕು ವಿಷ್ಣುಗಣಗಳು
೨ ಮತ್ತು ೪ನೇ ಪಾದಗಳಲ್ಲಿ ಎರಡು ವಿಷ್ಣು ಗಣಗಳ ಮುಂದೆ ಒಂದು ಬ್ರಹ್ಮಗಣವಿರುತ್ತದೆ.

Spread the Knowledge

You may also like...

Leave a Reply

Your email address will not be published. Required fields are marked *