ಕನ್ನಡ ಕವಿಗಳು – ಕುವೆಂಪು
ಕುವೆಂಪು ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಕುಪ್ಪಳಿ ವೆಂಕಟಪ್ಪನವರ ಮಗ ಪುಟ್ಟಪ್ಪನವರು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ೨೯ನೇ ಡಿಸೆಂಬರ್ ೧೯೦೪ರಂದು ಜನಿಸಿದರು.
ಇವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ಸಂಸ್ಥಾಪಕರಾಗಿ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದರು.
ಇವರು ರಚಿಸಿರುವ ‘ಶ್ರೀರಾಮಾಯಣ ದರ್ಶನಂ’ ಒಂದು ಮಹಾಕಾವ್ಯವಾಗಿದೆ. ಇವರು ರಚಿಸಿರುವ ‘ಕಾನೂರು ಹೆಗ್ಗಡಿತಿ’, ‘ಮಲೆಗಳಲ್ಲಿ ಮದುಮಗಳು’ ಎಂಬ ಬೃಹತ್ ಕಾದಂಬರಿಗಳು, ‘ನೆನಪಿನ ದೋಣಿಯಲ್ಲಿ’ ಎಂಬ ಆತ್ಮಕಥನ, ‘ನನ್ನ ಮನೆ’, ‘ಕೊಳಲು’, ‘ನವಿಲು’, ‘ಪ್ರೇಮಕಾಶ್ಮೀರ’ ಮುಂತಾದ ಕವನ ಸಂಕಲನಗಳು, ‘ಮಹಾರಾತ್ರಿ, ‘ಬೆರಳ್ಗೆ ಕೊರಳ್’, ‘ರಕ್ತಾಕ್ಷಿ’ ‘ಶೂದ್ರತಪಸ್ವಿ’ ಮೊದಲಾದ ನಾಟಕಗಳು ಸಾಹಿತ್ಯಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿವೆ.
ಕುವೆಂಪು ಇವರಿಗೆ ಭಾರತೀಯ ಜ್ಞಾನಪೀಠ ಪ್ರಶಸ್ತಿ, ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಪದ್ಮಭೂಷಣ, ಪದ್ಮವಿಭೂಷಣ ಹಾಗೂ ರಾಷ್ಟçಕವಿ ಪ್ರಶಸ್ತಿಗಳು ದೊರೆತಿವೆ.
ಇವರು ೦೯-೧೧-೧೯೯೪ರಲ್ಲಿ ನಿಧನರಾದರು