ರಾಷ್ತ್ರಕವಿ ಡಾ|| ಜಿ.ಎಸ್. ಶಿವರುದ್ರಪ್ಪ

ರಾಷ್ತ್ರಕವಿ ಡಾ|| ಜಿ.ಎಸ್. ಶಿವರುದ್ರಪ್ಪನವರು
ಚಿತ್ರಕೃಪೆ: ಸತ್ಯನಾರಾಯಣ.ಎ, CC BY-SA 4.0 https://creativecommons.org/licenses/by-sa/4.0, via Wikimedia Commons

ರಾಷ್ತ್ರಕವಿ ಡಾ|| ಜಿ.ಎಸ್. ಶಿವರುದ್ರಪ್ಪನವರು ೧೯೨೬ ನೇ ಇಸವಿ ಫೆಬ್ರವರಿ ೭ನೇ ತಾರೀಖು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಈಸೂರಿನಲ್ಲಿ ಜನಿಸಿದರು.

ಇವರು ಮೈಸೂರು, ಬೆಂಗಳೂರು ಮತ್ತು ಉಸ್ಮಾನಿಯ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರಾಗಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿರುತ್ತಾರೆ. ‘ಸಾಮಗಾನ’, ‘ಪ್ರೀತಿ ಇಲ್ಲದ ಮೇಲೆ’, ‘ಕಾರ್ತೀಕ’, ‘ದೀಪದಹೆಜ್ಜೆ’, ‘ದೇವಶಿಲ್ಪಿ’ ‘ಚೆಲುವು ಒಲವು’, ‘ವಿಮರ್ಶೆಯ ಪೂರ್ವ ಪಶ್ಚಿಮ’, ‘ಸೌಂರ‍್ಯ ಸಮೀಕ್ಷೆ’, ‘ಕಾವ್ಯಾರ್ಥ ಚಿಂತನ’, ‘ಗಂಗೆಯ ಶಿಖರದಲ್ಲಿ’ ಮೊದಲಾದವು ಇವರ ಪ್ರಮುಖ ಕೃತಿಗಳಾಗಿವೆ.

ಇವರು ರಾಷ್ಟçಕವಿ ಪುರಸ್ಕಾರವನ್ನು ಪಡೆದಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಡಾ|| ಜಿ.ಎಸ್. ಶಿವರುದ್ರಪ್ಪ ಅವರು ಡಿಸೆಂಬರ್ ೨೩. ೨೦೧೩ರಲ್ಲಿ ನಿಧನರಾದರು

Spread the Knowledge

You may also like...

Leave a Reply

Your email address will not be published. Required fields are marked *