ಕನ್ನಡ ವ್ಯಾಕರಣ – ವಚನಗಳು
ವಚನಗಳು
ವ್ಯಾಕರಣ ಪರಿಭಾಷೆಯಲ್ಲಿ ‘ವಚನ’ ಎಂದರೆ ಸಂಖ್ಯೆ.
ಕನ್ನಡ ಭಾಷೆಯಲ್ಲಿ ಏಕವಚನ ಮತ್ತು ಬಹುವಚನ ಎಂಬುದಾಗಿ ಎರಡು ವಿಧಗಳಿವೆ.
ಏಕವಚನ :
ಒಂದು ವಸ್ತುವನ್ನು ಸೂಚಿಸುವ ಪದಗಳೆಲ್ಲ ಏಕವಚನದವು.
ಉದಾ : ಹುಡುಗ, ಹುಡುಗಿ, ಅರಸು, ಮರ, ಅಣ್ಣ, ನೀನು, ಅವನು, ಅವಳು.
ಬಹುವಚನ:
ಒಂದಕ್ಕಿಂತ ಹೆಚ್ಚಾದ ವಸ್ತುಗಳೆಂದು ತಿಳಿಸುವ ಪದಗಳೆಲ್ಲ ಬಹುವಚನ ಪದಗಳು. ಬಹುವಚನವನ್ನು ಗೌರವ ಸೂಚಕವಾಗಿಯೂ ಬಳಸಲಾಗುತ್ತದೆ.
ಉದಾ : ಹುಡುಗರು, ಹುಡುಗಿಯರು, ಅರಸರು, ಮರಗಳು, ಅಣ್ಣಂದಿರು, ನೀವು, ನಾವು, ಅವರು, ತಾಯಂದಿರು, ಮನೆಗಳು. ಕಣ್ಣುಗಳು.