ಕಂಪ್ಯೂಟರ್ ಗಳ ಇತಿಹಾಸ ಮತ್ತು ವರ್ಗೀಕರಣ

ವೆಬ್ ಸ್ಟರ್ ನ ನಿಘಂಟು(Webster’s Dictionary) “ಕಂಪ್ಯೂಟರ್” ಅನ್ನು ಡೇಟಾವನ್ನು ಸಂಗ್ರಹಿಸುವ, ಸಂಗ್ರಹಿಸಿದ ಡಾಟಾವನ್ನು ತೆಗೆದು ತೋರಿಸುವ ಮತ್ತು ಪ್ರಕ್ರಿಯೆಗೊಳಿಸುವ ಯಾವುದೇ ಪ್ರೋಗ್ರಾಮೇಬಲ್ ಎಲೆಕ್ಟ್ರಾನಿಕ್ ಸಾಧನ ಎಂದು ವ್ಯಾಖ್ಯಾನಿಸುತ್ತದೆ.


ಕಂಪ್ಯೂಟರ್ ಗಳ ಇತಿಹಾಸ

ಬ್ಲೇಸ್ ಪ್ಯಾಸ್ಕಲ್(Blaise Pascal) ಮೊದಲ ವಾಣಿಜ್ಯ ಕ್ಯಾಲ್ಕುಲೇಟರ್ ಅನ್ನು ಕಂಡುಹಿಡಿದರು, ಇದು ಕೈ ಚಾಲಿತ, ಕೂಡುವ ಕಳೆಯುವ ಯಂತ್ರವಾಗಿತ್ತು.

ಬ್ಲೇಸ್ ಪ್ಯಾಸ್ಕಲ್ ನ ಮೊದಲ ವಾಣಿಜ್ಯ ಕ್ಯಾಲ್ಕುಲೇಟರ್
ಚಿತ್ರ

1946 ರಲ್ಲಿ, ಜಾನ್ ವಾನ್ ನ್ಯೂಮನ್ ( John Von Neuman model ) ಮಾದರಿಯನ್ನು ಆಧರಿಸಿದ ENIAC ಪೂರ್ಣಗೊಂಡಿತು. ಮೊದಲ ವಾಣಿಜ್ಯಿಕವಾಗಿ ಯಶಸ್ವಿ ಕಂಪ್ಯೂಟರ್ IBM 701 ಆಗಿದೆ.

ENIAC ಕಂಪ್ಯೂಟರ್

ಒಂದು ಪೀಳಿಗೆಯು ಒಂದು ಉತ್ಪನ್ನದ ಅಭಿವೃದ್ಧಿಯಲ್ಲಿನ ಸುಧಾರಣೆಯ ಸ್ಥಿತಿಯನ್ನು ಸೂಚಿಸುತ್ತದೆ. ಈ ಪದವನ್ನು ಕಂಪ್ಯೂಟರ್ ತಂತ್ರಜ್ಞಾನದ ವಿವಿಧ ಪ್ರಗತಿಗಳಲ್ಲಿ ಸಹ ಬಳಸಲಾಗುತ್ತದೆ. ಪ್ರತಿ ತಲೆಮಾರಿನೊಂದಿಗೆ,ಸರ್ಕ್ಯೂಟ್ ತಂತ್ರಜ್ಞಾನ (circuitry) ಹಿಂದಿನ ಪೀಳಿಗೆಗಳಿಗಿಂತ ಚಿಕ್ಕದಾಗಿದೆ ಮತ್ತು ಹೆಚ್ಚು ಮುಂದುವರಿದಿದೆ. ಕಿರುದಾಗಿಸುವ ತಂತ್ರದ (ಮಿನಿಯೇಟರೈಸೇಶನ್ miniaturization) ಪರಿಣಾಮವಾಗಿ, ಕಂಪ್ಯೂಟರ್ ಗಳ ವೇಗ, ಶಕ್ತಿ ಮತ್ತು ಮೆಮೊರಿ ಅನುಪಾತದಲ್ಲಿ ಹೆಚ್ಚಾಗಿದೆ. ನಾವು ಬದುಕುವ, ಕೆಲಸ ಮಾಡುವ ಮತ್ತು ಆಡುವ ವಿಧಾನದ ಮೇಲೆ ಪರಿಣಾಮ ಬೀರುವ ಹೊಸ ಆವಿಷ್ಕಾರಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಕಾಲಾಂತರದಲ್ಲಿ ತಾಂತ್ರಿಕ ಬೆಳವಣಿಗೆಗಳ ದೃಷ್ಟಿಯಿಂದ, ಕಂಪ್ಯೂಟರ್ ಗಳನ್ನು ಸ್ಥೂಲವಾಗಿ ಐದು ತಲೆಮಾರುಗಳಾಗಿ ವರ್ಗೀಕರಿಸಲಾಗಿದೆ.

ಮೊದಲ ಪೀಳಿಗೆ – 1940-1956 (The First Generation)

ಮೊದಲ ಕಂಪ್ಯೂಟರ್ ಗಳು ಸರ್ಕ್ಯೂಟ್ರಿಗಾಗಿ(circuitry) ನಿರ್ವಾತ ಟ್ಯೂಬ್ ಗಳನ್ನು(vacuum tubes ವ್ಯಾಕ್ಕ್ಯುಮ್ ಟ್ಯೂಬ್ಸ್ ) ಮತ್ತು ಮೆಮೊರಿಗಾಗಿ ಕಾಂತೀಯ ಡ್ರಮ್ ಗಳನ್ನು(magnetic drums ಮ್ಯಾಗ್ನೆಟಿಕ್ ಡ್ರಮ್ಸ್) ಬಳಸುತ್ತಿದ್ದವು, ಮತ್ತು ಅಗಾಧ ಗಾತ್ರದವಾಗಿದ್ದವು, ಇಡೀ ಕೋಣೆಗಳಷ್ಟು ಜಾಗವನ್ನು ತೆಗೆದುಕೊಳ್ಳುತ್ತಿದ್ದವು. ಅವು ಕಾರ್ಯನಿರ್ವಹಿಸಲು ತುಂಬಾ ದುಬಾರಿಯಾಗಿದ್ದವು ಮತ್ತು ಹೆಚ್ಚಿನ ಪ್ರಮಾಣದ ವಿದ್ಯುತ್ತನ್ನು ಬಳಸುವುದರ ಜೊತೆಗೆ, ಅವು ಸಾಕಷ್ಟು ಶಾಖವನ್ನು ಉತ್ಪಾದಿಸುತ್ತಿದ್ದವು , ಇದು ಆಗಾಗ್ಗೆ ಅಸಮರ್ಪಕ ಕಾರ್ಯಗಳಿಗೆ ಕಾರಣವಾಗಿತ್ತು. ಮೊದಲ ತಲೆಮಾರಿನ ಕಂಪ್ಯೂಟರ್ ಗಳು ಕಾರ್ಯಾಚರಣೆಗಳನ್ನು ನಿರ್ವಹಿಸಲು ಯಂತ್ರ ಭಾಷೆಯನ್ನು(machine language) ಅವಲಂಬಿಸಿದ್ದವು, ಮತ್ತು ಅವು ಒಂದು ಸಮಯದಲ್ಲಿ ಒಂದು ಸಮಸ್ಯೆಯನ್ನು ಮಾತ್ರ ಪರಿಹರಿಸಬಲ್ಲವಾಗಿದ್ದವು. ಇನ್ ಪುಟ್ ಅನ್ನು ಪಂಚ್ ಮಾಡಿದ ಕಾರ್ಡ್ ಗಳು ಮತ್ತು ಪೇಪರ್ ಟೇಪ್ ಅನ್ನು ಆಧರಿಸಿತ್ತು, ಮತ್ತು ಔಟ್ ಪುಟ್ ಅನ್ನು ಪ್ರಿಂಟ್ ಔಟ್ ಗಳಲ್ಲಿ ಪ್ರದರ್ಶಿಸಲಾಯಿತು.

ನಿರ್ವಾತ ಟ್ಯೂಬ್ ಗಳನ್ನು(vacuum tubes ವ್ಯಾಕ್ಕ್ಯುಮ್ ಟ್ಯೂಬ್ಸ್ )
ಮೆಮೊರಿಗಾಗಿ ಕಾಂತೀಯ ಡ್ರಮ್ ಗಳನ್ನು(magnetic drums ಮ್ಯಾಗ್ನೆಟಿಕ್ ಡ್ರಮ್ಸ್)

ಅಮೆರಿಕದ ಯುನಿವಾಕ್(UNIVAC), ಇಎನ್ಐಎಸಿ(ENIAC) ಮತ್ತು ಹಿಂದಿನ ಸೋವಿಯತ್ ಒಕ್ಕೂಟದ ಬಿಇಎಸ್ಇಎಂ(BESEM) ಕಂಪ್ಯೂಟರ್ಗಳು ಮೊದಲ ತಲೆಮಾರಿನ ಕಂಪ್ಯೂಟಿಂಗ್ ಸಾಧನಗಳಿಗೆ ಉದಾಹರಣೆಗಳಾಗಿವೆ.

ಎರಡನೇ ಪೀಳಿಗೆ – 1956-1963 (The Second Generation)

ನಿರ್ವಾತ ಟ್ಯೂಬ್ ಗಳನ್ನು(vacuum tubes) ಬದಲಿಗೆ ಟ್ರಾನ್ಸಿಸ್ಟರ್ ಗಳು(Transistors) ಬಂದು ಕಂಪ್ಯೂಟರ್ ಗಳ ಎರಡನೇ ಪೀಳಿಗೆಯನ್ನು ಪ್ರಾರಂಭಿಸಿದವು. ಕಂಪ್ಯೂಟರ್ ಗಳು ತಮ್ಮ ಮೊದಲ ತಲೆಮಾರಿನ ಹಿಂದಿನವರಿಗಿಂತ ಚಿಕ್ಕದಾಗಿ, ವೇಗವಾಗಿ, ಅಗ್ಗವಾಗಿ, ಹೆಚ್ಚು ಶಕ್ತಿ-ದಕ್ಷತೆ ಮತ್ತು ಹೆಚ್ಚು ವಿಶ್ವಾಸಾರ್ಹವಾದವು. ಎರಡನೇ ತಲೆಮಾರಿನ ಕಂಪ್ಯೂಟರ್ ಗಳು ಇನ್ನೂ ಕೂಡ ಇನ್ ಪುಟ್ ಗಾಗಿ ಪಂಚ್ ಮಾಡಿದ ಕಾರ್ಡ್ ಗಳನ್ನು(punched cards) ಮತ್ತು ಔಟ್ ಪುಟ್ ಗಾಗಿ ಪ್ರಿಂಟ್ ಔಟ್ ಗಳನ್ನೇ(printouts) ಅವಲಂಬಿಸಿದ್ದವು. ಕೋಬೋಲ್(COBOL) ಮತ್ತು ಫೋರ್ಟ್ರಾನ್ ನ(FORTRAN) ಆರಂಭಿಕ ಆವೃತ್ತಿಗಳಂತಹ ಉನ್ನತ ಮಟ್ಟದ ಪ್ರೋಗ್ರಾಮಿಂಗ್ ಭಾಷೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿತ್ತು.
ಈ ತಲೆಮಾರಿನ ಮೊದಲ ಕಂಪ್ಯೂಟರ್ ಗಳನ್ನು ಪರಮಾಣು ಶಕ್ತಿ ಉದ್ಯಮಕ್ಕಾಗಿ ಅಭಿವೃದ್ಧಿಪಡಿಸಲಾಯಿತು.

ಟ್ರಾನ್ಸಿಸ್ಟರ್ ಗಳು(Transistors)
ಚಿತ್ರ

ಯುಎಸ್ ನ IBM-1070 ಮತ್ತು ಹಿಂದಿನ ಸೋವಿಯತ್ ಒಕ್ಕೂಟದ MINSK ಕಂಪ್ಯೂಟರ್ಗಳು ಎರಡನೇ ಪೀಳಿಗೆಗೆ ಸೇರಿದ್ದವು.

ಪಂಚ್ ಮಾಡಿದ ಕಾರ್ಡ್ ಗಳನ್ನು(punched cards)
ಚಿತ್ರ

ಮೂರನೇ ಪೀಳಿಗೆ – 1964-1971: ಇಂಟಿಗ್ರೇಟೆಡ್ ಸರ್ಕ್ಯೂಟ್ ಗಳು (ಸಂಯೋಜಿಸಿದ ಸರ್ಕ್ಯೂಟ್ ಗಳು) The Third Generation : Integrated Circuits

ಇಂಟಿಗ್ರೇಟೆಡ್ ಸರ್ಕ್ಯೂಟ್ ನ ಅಭಿವೃದ್ಧಿಯು ಮೂರನೇ ತಲೆಮಾರಿನ ಕಂಪ್ಯೂಟರ್ ಗಳ ಲಕ್ಷಣವಾಗಿತ್ತು. ಟ್ರಾನ್ಸಿಸ್ಟರ್ ಗಳನ್ನು ಮಿನಿಯೇಚರ್(ಚಿಕ್ಕದನ್ನಾಗಿ) ಮಾಡಲಾಯಿತು ಮತ್ತು ಸೆಮಿಕಂಡಕ್ಟರ್ ಗಳು ಎಂದು ಕರೆಯಲ್ಪಡುವ ಸಿಲಿಕಾನ್ ಚಿಪ್ ಗಳ ಮೇಲೆ ಇರಿಸಲಾಯಿತು, ಇದು ಕಂಪ್ಯೂಟರ್ ಗಳ ವೇಗ ಮತ್ತು ದಕ್ಷತೆಯನ್ನು ತೀವ್ರವಾಗಿ ಹೆಚ್ಚಿಸಿತು. ಬಳಕೆದಾರರು ಕೀಲಿಮಣೆಗಳು ಮತ್ತು ಮಾನಿಟರ್ ಗಳ ಮೂಲಕ ಮೂರನೇ ತಲೆಮಾರಿನ ಕಂಪ್ಯೂಟರ್ ಗಳೊಂದಿಗೆ ಸಂವಹನ ನಡೆಸಿದರು ಮತ್ತು ಆಪರೇಟಿಂಗ್ ಸಿಸ್ಟಮ್ ನೊಂದಿಗೆ ಸಂಪರ್ಕ (interface ಇಂಟರ್ಫೇಸ್ ) ಮಾಡಿದರು, ಇದು ಕಂಪ್ಯೂಟರ್ ಸಾಧನವು ಒಂದೇ ಸಮಯದಲ್ಲಿ ಅನೇಕ ವಿಭಿನ್ನ ಅಪ್ಲಿಕೇಶನ್ ಗಳನ್ನು ಚಲಾಯಿಸಲು ಅನುವು ಮಾಡಿಕೊಟ್ಟಿತು.

: ಇಂಟಿಗ್ರೇಟೆಡ್ ಸರ್ಕ್ಯೂಟ್ ಗಳು / Integrated Circuits
ಚಿತ್ರ

ಮೂರನೇ ತಲೆಮಾರಿನ ವಿಶಿಷ್ಟ ಕಂಪ್ಯೂಟರ್ ಗಳೆಂದರೆ IBM 360 (ಯುನೈಟೆಡ್ ಸ್ಟೇಟ್ಸ್) ಮತ್ತು EC (ಮಾಜಿ ಸೋವಿಯತ್ ಯೂನಿಯನ್).

ನಾಲ್ಕನೇ ಪೀಳಿಗೆ – 1971- ಪ್ರಸ್ತುತ: ಮೈಕ್ರೊಪ್ರೊಸೆಸರ್ ಗಳು (The Fourth Generation : Microprocessors)

ಮೈಕ್ರೋಪ್ರೊಸೆಸರ್ ನಾಲ್ಕನೇ ತಲೆಮಾರಿನ ಕಂಪ್ಯೂಟರ್ ಗಳನ್ನು ತಂದವು, ಏಕೆಂದರೆ ಸಾವಿರಾರು ಇಂಟಿಗ್ರೇಟೆಡ್ ಸರ್ಕ್ಯೂಟ್ ಗಳನ್ನು ಒಂದೇ ಸಿಲಿಕಾನ್ ಚಿಪ್ ನಲ್ಲಿ ನಿರ್ಮಿಸಲಾಯಿತು. ಮೊದಲ ತಲೆಮಾರಿನಲ್ಲಿ ಇಡೀ ಕೋಣೆಯನ್ನು ತುಂಬಿದ್ದು ಈಗ ಅಂಗೈಯಲ್ಲಿ ಹಿಡಿಸುವಷ್ಟು ಚಿಕ್ಕದಾಯಿತು. ಇಂಟೆಲ್ 4004 ಚಿಪ್ (Intel 4004), 1971 ರಲ್ಲಿ ಅಭಿವೃದ್ಧಿಪಡಿಸಲ್ಪಟ್ಟಿತು, ಕಂಪ್ಯೂಟರ್ ನ ಎಲ್ಲಾ ಘಟಕಗಳನ್ನು – ಕೇಂದ್ರೀಯ ಸಂಸ್ಕರಣಾ ಘಟಕ ಮತ್ತು ಮೆಮೊರಿಯಿಂದ ಇನ್ಪುಟ್ / ಔಟ್ಪುಟ್ ನಿಯಂತ್ರಣಗಳವರೆಗೆ(central processing unit, memory and input/output controls) – ಒಂದೇ ಚಿಪ್ನಲ್ಲಿ ಇರಿಸಲಾಯಿತು.

ಮೈಕ್ರೊಪ್ರೊಸೆಸರ್ ಗಳು Microprocessors

1981 ರಲ್ಲಿ IBM ತನ್ನ ಮೊದಲ ಕಂಪ್ಯೂಟರ್ ಅನ್ನು ಸಾಮಾನ್ಯ ಬಳಕೆದಾರರಿಗೆ ಪರಿಚಯಿಸಿತು, ಮತ್ತು 1984 ರಲ್ಲಿ ಆಪಲ್ ಮ್ಯಾಕಿಂತೋಷ್ ಅನ್ನು(Apple Macintosh) ಪರಿಚಯಿಸಿತು. ಹೆಚ್ಚು ಹೆಚ್ಚು ದೈನಂದಿನ ಉತ್ಪನ್ನಗಳು ಮೈಕ್ರೋಪ್ರೊಸೆಸರ್ ಗಳನ್ನು ಬಳಸಲು ಪ್ರಾರಂಭಿಸುತ್ತಿದ್ದಂತೆ ಮೈಕ್ರೋಪ್ರೊಸೆಸರ್ ಗಳು ಡೆಸ್ಕ್ ಟಾಪ್ ಕಂಪ್ಯೂಟರ್ ಗಳ ವಲಯದಿಂದ ಹೊರಬಂದು ಜೀವನದ ಅನೇಕ ಕ್ಷೇತ್ರಗಳಿಗೆ ಸ್ಥಳಾಂತರಗೊಂಡವು.
ಈ ಸಣ್ಣ ಕಂಪ್ಯೂಟರ್ ಗಳು ಹೆಚ್ಚು ಶಕ್ತಿಶಾಲಿಯಾದಂತೆ, ಅವುಗಳನ್ನು ಒಟ್ಟಿಗೆ ಜೋಡಿಸಿ ನೆಟ್ವರ್ಕ್ ಗಳನ್ನು (networks) ರಚಿಸಬಹುದು, ಇದು ಅಂತಿಮವಾಗಿ ಇಂಟರ್ನೆಟ್ ನ(Internet) ಅಭಿವೃದ್ಧಿಗೆ ಕಾರಣವಾಯಿತು. ನಾಲ್ಕನೇ ತಲೆಮಾರಿನ ಕಂಪ್ಯೂಟರ್ ಗಳು GUI (ಗ್ರಾಫಿಕ್ ಯೂಸರ್ ಇಂಟರ್ಫೇಸ್ Graphic User Interface), ಮೌಸ್(mouse ) ಮತ್ತು ಹ್ಯಾಂಡ್ ಹೆಲ್ಡ್(handheld ) ಸಾಧನಗಳ ಅಭಿವೃದ್ಧಿಯನ್ನು ಸಹ ಕಂಡವು.

ಐದನೇ ಪೀಳಿಗೆ – ಪ್ರಸ್ತುತ ಮತ್ತು ಅದರಾಚೆಗೆ: ಕೃತಕ ಬುದ್ಧಿಮತ್ತೆ (The Fifth Generation – Present and Beyond: Artificial Intelligence)

ಕೃತಕ ಬುದ್ಧಿಮತ್ತೆಯನ್ನು ಆಧರಿಸಿದ ಐದನೇ ತಲೆಮಾರಿನ ಕಂಪ್ಯೂಟಿಂಗ್ ಸಾಧನಗಳು ಇನ್ನೂ ಅಭಿವೃದ್ಧಿ ಹಂತದಲ್ಲಿವೆ, ಧ್ವನಿ ಗುರುತಿಸುವಿಕೆಯಂತಹ ಕೆಲವು ಅಪ್ಲಿಕೇಶನ್ ಗಳು ಇಂದು ಬಳಸಲ್ಪಡುತ್ತಿವೆ. ಸಮಾನಾಂತರ ಸಂಸ್ಕರಣೆ ಮತ್ತು ಸೂಪರ್ ಕಂಡಕ್ಟರ್ ಗಳ(parallel processing and superconductors ) ಬಳಕೆಯು ಕೃತಕ ಬುದ್ಧಿಮತ್ತೆಯನ್ನು(AI artificial intelligence) ವಾಸ್ತವವಾಗಿಸಲು ಸಹಾಯ ಮಾಡುತ್ತಿದೆ. ಕ್ವಾಂಟಮ್ ಕಂಪ್ಯೂಟೇಶನ್(Quantum computation) ಮತ್ತು ಮಾಲಿಕ್ಯುಲಾರ್ ಮತ್ತು ನ್ಯಾನೊಟೆಕ್ನಾಲಜಿ(molecular and nanotechnology) ಮುಂಬರುವ ವರ್ಷಗಳಲ್ಲಿ ಕಂಪ್ಯೂಟರ್ ಗಳ ಮುಖವನ್ನು ಆಮೂಲಾಗ್ರವಾಗಿ ಬದಲಾಯಿಸುತ್ತದೆ.

ಕೃತಕ ಬುದ್ಧಿಮತ್ತೆ (AI artificial intelligence)


ಐದನೇ ತಲೆಮಾರಿನ ಕಂಪ್ಯೂಟಿಂಗ್ ನ ಗುರಿ ನೈಸರ್ಗಿಕ ಭಾಷಾ ಆದೇಶಗಳಿಗೆ ಪ್ರತಿಕ್ರಿಯಿಸುವ ಮತ್ತು ಸ್ವಯಂ-ಕಲಿಕೆ ಮತ್ತು ಸ್ವಯಂ-ಸಂಘಟನೆಗೆ ಸಮರ್ಥವಾಗಿರುವ ಸಾಧನಗಳನ್ನು ಅಭಿವೃದ್ಧಿಪಡಿಸುವುದು ಆಗಿದೆ.


ಕಂಪ್ಯೂಟರ್ ಗಳ ವರ್ಗೀಕರಣ (Classification of Computers)

ಕಂಪ್ಯೂಟರ್ ಗಳು ವಿಭಿನ್ನ ಆಕಾರಗಳು, ಗಾತ್ರಗಳು ಮತ್ತು ತೂಕಗಳಲ್ಲಿ ಲಭ್ಯವಿವೆ, ಈ ವಿಭಿನ್ನ ಆಕಾರಗಳು ಮತ್ತು ಗಾತ್ರಗಳಿಂದಾಗಿ ಅವು ಒಂದಕ್ಕಿಂತ ಇನ್ನೊಂದು ವಿಭಿನ್ನ ರೀತಿಯ ಕೆಲಸಗಳನ್ನು ನಿರ್ವಹಿಸುತ್ತವೆ.

ಮೇನ್ ಫ್ರೇಮ್ ಮತ್ತು ಸೂಪರ್ ಕಂಪ್ಯೂಟರ್ ಗಳು (Mainframe and Super Computers)

ಗಾತ್ರದಲ್ಲಿ ದೊಡ್ಡದಾಗಿರುವ, ಬೇರೆಲ್ಲಾ ಕಂಪ್ಯೂಟರ್ ಗಳಿಗಿಂತ ದುಬಾರಿಯಾದ ಬೆಲೆಯ ಕಂಪ್ಯೂಟರ್ ನ್ನು  ಸೂಪರ್ ಕಂಪ್ಯೂಟರ್ ಎಂದು ಕರೆಯಲಾಗುತ್ತದೆ. ಇದು ಸೆಕೆಂಡುಗಳಲ್ಲಿ ಟ್ರಿಲಿಯನ್ ಗಟ್ಟಲೆ ಸೂಚನೆಗಳನ್ನು ಪ್ರಕ್ರಿಯೆಗೊಳಿಸಬಹುದು. ಸರ್ಕಾರಗಳು ವಿಶೇಷವಾಗಿ ಈ ರೀತಿಯ ಕಂಪ್ಯೂಟರ್ ಅನ್ನು ತಮ್ಮ ವಿಭಿನ್ನ ಲೆಕ್ಕಾಚಾರಗಳು ಮತ್ತು ಭಾರವಾದ ಕೆಲಸಗಳಿಗೆ ಬಳಸುತ್ತವೆ. ಈ ರೀತಿಯ ಕಂಪ್ಯೂಟರ್ ವಿಶ್ವದಾದ್ಯಂತ ಹವಾಮಾನ ವರದಿಗಳನ್ನು ಮುನ್ಸೂಚಿಸಲು ಸಹ ಸಹಾಯಕವಾಗಿದೆ.

ಸೂಪರ್ ಕಂಪ್ಯೂಟರ್ ಗಳು

ಸೂಪರ್ ಕಂಪ್ಯೂಟರ್ ನಂತರ ಕಂಪ್ಯೂಟರ್ ಗಳಲ್ಲಿನ ಮತ್ತೊಂದು ದೈತ್ಯವೆಂದರೆ ಮೈನ್ ಫ್ರೇಮ್, ಇದು ಪ್ರತಿ ಸೆಕೆಂಡಿಗೆ ಲಕ್ಷಾಂತರ ಸೂಚನೆಗಳನ್ನು ಪ್ರಕ್ರಿಯೆಗೊಳಿಸಬಹುದು ಮತ್ತು ಶತಕೋಟಿ ಡೇಟಾವನ್ನು ಸಂಗ್ರಹಿಸಿ ತಿರುಗಿ ಪ್ರಸ್ತುತ ಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಂಪ್ಯೂಟರ್ ಅನ್ನು ಸಾಮಾನ್ಯವಾಗಿ ದೊಡ್ಡ ಆಸ್ಪತ್ರೆಗಳು, ವಿಮಾನಯಾನ ಕಾಯ್ದಿರಿಸುವ ಕಂಪನಿಗಳಲ್ಲಿ ಬಳಸಲಾಗುತ್ತದೆ, ಮತ್ತು ಇತರ ಅನೇಕ ದೊಡ್ಡ ಕಂಪನಿಗಳು ಮೇನ್ ಫ್ರೇಮ್ ಗೆ ಆದ್ಯತೆ ನೀಡುತ್ತವೆ, ಏಕೆಂದರೆ ಅದಕ್ಕೆ ಅತಿ ಹೆಚ್ಚು ಡೇಟಾವನ್ನು ಹಿಂಪಡೆಯುವ ಸಾಮರ್ಥ್ಯವಿದೆ. ಇದು ಸಾಮಾನ್ಯವಾಗಿ ತುಂಬಾ ದುಬಾರಿಯಾಗಿದೆ ಮತ್ತು ತನ್ನ ಮನೆಗೆ ಕಂಪ್ಯೂಟರ್ ಅನ್ನು ಬಯಸುವ ಸಂಬಳ-ಆಧಾರಿತ ವ್ಯಕ್ತಿಯ ಕೈಗೆಟುಕುವುದಿಲ್ಲ.

ಮೇನ್ ಫ್ರೇಮ್ ಮತ್ತು ಸೂಪರ್ ಕಂಪ್ಯೂಟರ್ ಗಳು

ಮಿನಿಕಂಪ್ಯೂಟರ್ ಗಳು Minicomputers

ಈ ಕಂಪ್ಯೂಟರ್ ಕೆಲಸ ಮತ್ತು ಕಾರ್ಯನಿರ್ವಹಣೆಯಲ್ಲಿ ಮೇನ್ ಫ್ರೇಮ್ ಗಿಂತ ಕಡಿಮೆ ಸಾಮರ್ಥ್ಯ ಹೊಂದಿವೆ. ಇವುಗಳನ್ನು ಹೆಚ್ಚಾಗಿ ಸಣ್ಣ ರೀತಿಯ ವ್ಯವಹಾರದ ವ್ಯಕ್ತಿಗಳು, ಕಾಲೇಜುಗಳು, ಇತ್ಯಾದಿಗಳ ಬಳಕೆಗೆ ಅನುಕೂಲಕರವಾಗಿವೆ.

ವಿವಿಧ ಮಿನಿ-ಕಂಪ್ಯೂಟರ್ ಗಳು

ಮೈಕ್ರೋಕಂಪ್ಯೂಟರ್ ಗಳು Microcomputers

ಈ ಕಂಪ್ಯೂಟರ್ ಗಳು ಮೇಲೆ ನೀಡಲಾದ ಕಂಪ್ಯೂಟರ್ ಗಳಿಗಿಂತ ಕಡಿಮೆ ವೆಚ್ಚದ್ದಾಗಿರುತ್ತವೆ ಮತ್ತು ಗಾತ್ರದಲ್ಲಿ ಚಿಕ್ಕದಾಗಿರುತ್ತವೆ; ಅವರು ದೊಡ್ಡ ಪ್ರಮಾಣದ ಡೇಟಾವನ್ನು ಸಂಗ್ರಹಿಸಬಹುದು ಮತ್ತು ವಿದ್ಯಾರ್ಥಿಗಳ ಕೆಲಸಗಳು ಮತ್ತು ವ್ಯವಹಾರಿಕ ಹಾಗು ಜನರ ಇತರ ವೈಯುಕ್ತಿಕ ಅಗತ್ಯ ಕಾರ್ಯಗಳನ್ನು ಪೂರೈಸುವ ಸ್ಮರಣೆಯನ್ನು ಹೊಂದಿರಬಹುದು. ಮೈಕ್ರೋಕಂಪ್ಯೂಟರ್ ಗಳಲ್ಲಿ ಅನೇಕ ವಿಧಗಳಿವೆ: ಡೆಸ್ಕ್ ಟಾಪ್, ವರ್ಕ್ ಸ್ಟೇಷನ್, ಲ್ಯಾಪ್ ಟಾಪ್, ಪಿಡಿಎ(PDA, Personal Digital Assistant), ಇತ್ಯಾದಿ.

ಮೈಕ್ರೋಕಂಪ್ಯೂಟರ್ ಗಳು

ಇದನ್ನೂ ಓದಿರಿ

ಕಂಪ್ಯೂಟರ್, ಒಂದು ಪರಿಚಯ

ಮೊಬೈಲ್ ಫೋನ್ / ಸ್ಮಾರ್ಟ್ ಫೋನಿನ್ನಲ್ಲಿ ಇರಲೇಬೇಕಾದ ಅಪ್ಲಿಕೇಶನ್ನುಗಳು (mobile apps)


Source : Introduction to Computer Science By: Huong Nguyen

Spread the Knowledge

ಕಂಪ್ಯೂಟರ್ ಗಳ ಇತಿಹಾಸ ಮತ್ತು ವರ್ಗೀಕರಣ

ವೆಬ್ ಸ್ಟರ್ ನ ನಿಘಂಟು(Webster’s Dictionary) “ಕಂಪ್ಯೂಟರ್” ಅನ್ನು ಡೇಟಾವನ್ನು ಸಂಗ್ರಹಿಸುವ, ಸಂಗ್ರಹಿಸಿದ ಡಾಟಾವನ್ನು ತೆಗೆದು ತೋರಿಸುವ ಮತ್ತು ಪ್ರಕ್ರಿಯೆಗೊಳಿಸುವ ಯಾವುದೇ ಪ್ರೋಗ್ರಾಮೇಬಲ್ ಎಲೆಕ್ಟ್ರಾನಿಕ್ ಸಾಧನ ಎಂದು […]

A desktop computer

ಕಂಪ್ಯೂಟರ್, ಒಂದು ಪರಿಚಯ

ಕಂಪ್ಯೂಟರ್ ಎನ್ನುವುದು ಒಂದು ಮಷೀನ್, ಎಲೆಕ್ಟ್ರಾನಿಕ್ ಸಾಧನ. ನಾವು ಕೊಟ್ಟ ಡಾಟಾವನ್ನು ಸ್ಟೋರ್ ಮಾಡಿ ಇಡುತ್ತದೆ. ಮತ್ತು ಪ್ರೋಗ್ರಾಮ್ಗಳ ಮೂಲಕ ನಾವು ಕೊಡುವ ಸೂಚನೆಗಳನ್ನು ಲಾಜಿಕ್ ಗಳು […]

Smartphones

ಮೊಬೈಲ್ ಫೋನ್ / ಸ್ಮಾರ್ಟ್ ಫೋನಿನ್ನಲ್ಲಿ ಇರಲೇಬೇಕಾದ ಅಪ್ಲಿಕೇಶನ್ನುಗಳು (mobile apps)

ನಿಮ್ಮ ಆಂಡ್ರಾಯ್ಡ್ ಮೊಬೈಲಿನ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕೆಂದರೆ ಮಟ್ಟಮೊದಲು ನೀವು ಬಳಸಬೇಕಾದ ಆಪ್ ‘GOOGLE’ ಗೂಗಲ್ ಅಕೌಂಟ್ ನಿಮಗೆ ಒಂದು ಹೆಬಾಗಿಲಿನಂತೆ. ಅದರ ಮೂಲಕ ನೀವು ಮೊಬೈಲಿನಲ್ಲಿ […]

You may also like...

Leave a Reply

Your email address will not be published. Required fields are marked *