ಚಿಕ್ಕುಪಾಧ್ಯಾಯ ಕವಿ ಪರಿಚಯ

ಕವಿ-ಕಾವ್ಯ ಪರಿಚಯ :

ಚಿಕ್ಕುಪಾಧ್ಯಾಯ ಕ್ರಿ, ಶ. ಸುಮಾರು 1677ರಲ್ಲಿ ತೆರಕಣಾಂಬಿಯಲ್ಲಿ ಜನಿಸಿದನು. ತಂದೆ ರಂಗಾರ್ಯ ಪಂಡಿತ, ತಾಯಿ ನಾಚ್ಚಾರಮ್ಯ. ಕವಿಯ ಮೊದಲಿನ ಹೆಸರು ಲಕ್ಷ್ಮೀಪತಿ ಎಂಬುದಾಗಿತ್ತು. ಈತ ಮೈಸೂರು ಅರಸ ಚಿಕ್ಕದೇವರಾಜರಲ್ಲಿ ಮಂತ್ರಿಯಾಗಿದ್ದನು. ಈತನು ಚ೦ಪೂ, ಸಾ೦ಗತ್ಯ, ಗದ್ಯ ಹಾಡು ಮುಂತಾದ ಛಂದೋ ಪ್ರಭೇದಗಳಲ್ಲೆಲ್ಲಾ ಕಾವ್ಯಗಳನ್ನು ರಚಿಸಿದ್ದಲ್ಲದೆ, ಟೀಕೆಗಳನ್ನು ಬರೆದಿದ್ದಾನೆ. ಈತನಿಗೆ ಸಂಸ್ಕೃತ, ಕನ್ನಡ ಭಾಷೆಗಳೆರಡರಲ್ಲೂ ಅದ್ವಿತೀಯ ಪಾಂಡಿತ್ಯವಿದ್ದಂತೆ ವೇದ್ಯವಾಗುತ್ತದೆ. ಚಂಪೂಕಾವ್ಯಗಳು, ಸಂಸ್ಕೃತಮಯವಾಗಿ ಪ್ರೌಢವಾಗಿದ್ದರೂ ಸಾಂಗತ್ಯ ಗ್ರಂಥಗಳು ಅಚ್ಚಕನ್ನಡ ಮತ್ತು ದೇಶೀಯ ಶಬ್ದಗಳಿಂದ ಸುಲಲಿತವಾಗಿವೆ.

ಈತನ ರಚನೆಗಳು ವಿಷ್ಣುಪುರಾಣ, ದಿವ್ಯಸೂರಿಚರಿತೆ (ಚಂಪೂ) ಶೃಂಗಾರ ಶತಕದ ಸಾಂಗತ್ಯ, ಯಾದವಗಿರಿ ಮಹಾತ್ಮ್ಯೇ, ರಂಗಾಧಾಮ ನೀತಿಶತಕ ಸಾಂಗತ್ಯ, ಎರ ಶೇಷಧರ್ಮ, ಶ್ರೀರಂಗ ಮಹಾತ್ಮ್ಯೇ (ಗದ್ಯ), ಶೃಂಗಾರದ ಹಾಡುಗಳು, ತಿರುವಾಯ್ಮೊಳಿ ಟೀಕೆ (ಹಾಡು ಮತ್ತು ಟೀಕಿನ ಗ್ರಂಥಗಳು).

ಪ್ರಸ್ತುತ ಶತಕಗಳನ್ನು ರಂಗಧಾಮ ನೀತಿಶತಕ ಸಾಂಗತ್ಯದಿಂದ ಆಯ್ದುಕೊಳ್ಳಲಾಗಿದೆ. ‘ರಂಗೇಶ ಪಶ್ಚಿಮರಂಗ’ ಈತನ ಅಂಕಿತವಾಗಿದೆ.

ಆಡದೆ ಮಾಡುವನುತ್ತಮನಾಡಿತಾ
ಮಾಡುವ ಮಧ್ಯಮನೆನಿಪನು
ಆಡಿಯು೦ ಮಾಡದ ಮನುಜ ರಂಗೇಶ
ನಾಡವರರಿದು ಮೆಚ್ಚುವರೆ

ರಂಗಧಾಮ ನೀತಿಶತಕದಲ್ಲಿ ಕವಿ ಶತಕದ ಪದ್ಯಗಳ ಮೂಲಕ ನೀತಿಯ ಪಾಠವನ್ನು ದೃಷ್ಟಾಂತ ಪೂರ್ವಕವಾಗಿ ನಿರೂಪಿಸಿ ಮನದಟ್ಟು ಮಾಡುತ್ತಾನೆ. ಅಲ್ಲದೇ ತನ್ನ ಅನುಭವ ಸಾಕ್ಷಾತ್ಕಾರದ ಮೂಲಕ ಓದುಗರನ್ನು ಆತ್ಮಾನುಭವದ ಔನ್ನತ್ಯಕ್ಕೆ ಕೈಹಿಡಿದು ಕರೆದೊಯ್ಯುವ ಹಂಬಲವಿದೆ. ನೀತಿ ಮತ್ತು ಧಾರ್ಮಿಕಾಂಶಗಳನ್ನು ಹೊಂದಿರುವ ಈ ಶತಕಗಳು ಗುರು, ದೈವ, ನುಡಿ, ಭಾಷೆ ಹಾಗೂ ಬದುಕಿನ ಮೌಲ್ಯಗಳ ಚಿ೦ತನಗಳ ಸ್ಪರ್ಶದಿಂದ ಸತ್ಪರಿಣಾಮ ಬೀರುತ್ತವೆ.

Spread the Knowledge

You may also like...

Leave a Reply

Your email address will not be published. Required fields are marked *