The Pie and the Tart – Kannada Summary

The Pie and the Tart ನಾಟಕದ ಕನ್ನಡ ಅನುವಾದ.


Characters

  • Pierre – Vagabonds (ಪಿಯರ್ -ಅಲೆಮಾರಿ)
  • Jean – Vagabonds (ಜೀನ್ – ಅಲೆಮಾರಿ)
  • Gaultier, a pastry cook (ಗೌಲ್ಟಿಯರ್ – ಕೇಕ್ ಮಾಡುವವನು)
  • Marion, his wife (ಮರಿಯನ್ – ಅವನ ಹೆಂಡತಿ)

The scene is laid outside GAULTIER’S cake shop in Paris. The time is the middle of the fifteenth century. The Act could be played on a curtained stage with one door, back centre. The only furniture is a bench, right. JEAN and PIERRE are discovered, the former seated on the bench, in an attitude of extreme dejection; the latter pacing up and down, blowing on his fingers. Both must indicate that they are cold and hungry.

ಈ ದೃಶ್ಯವನ್ನು ಪ್ಯಾರಿಸ್‌ನ ‘ಗೌಲ್ಟಿಯರ್ಸ್ ‘ (ಫ್ರೆಂಚ್ ಭಾಷೆಯಲ್ಲಿ – ಗುಟಿಯೆ ) ಕೇಕ್ ಅಂಗಡಿಯ ಹೊರಗೆ ಕಲ್ಪಿಸಲಾಗಿದೆ. ಸಮಯ ಹದಿನೈದನೆಯ ಶತಮಾನದ ಮಧ್ಯಭಾಗ. ಈ ನಾಟಕವನ್ನು ಮಧ್ಯದಲ್ಲಿ ಹಿಂದಕ್ಕೆ, ಒಂದು ಬಾಗಿಲು ಸಹಿತ ಪರದೆ ಇರುವ ವೇದಿಕೆಯಲ್ಲಿ ಆಡಬಹುದು. ಬೇಕಾಗಿರುವ ಪೀಠೋಪಕರಣಗವೆಂದರೆ ಒಂದು ಬೆಂಚ್, ಸರಿ. ಜೀನ್ ಮತ್ತು ಪಿಯರ್ ಅವರು ಕಾಣಿಸಿಕೊಳ್ಳುವುದರೊಂದಿಗೆ ಕತೆ ಶುರುವಾಗುತ್ತದೆ. ಜೀನ್ ಬೆಂಚ್ ಮೇಲೆ ಕುಳಿತಿದ್ದಾನೆ, ತೀವ್ರ ಬೇಜಾರಿನ ಮನೋಭಾವದಲ್ಲಿ; ಪಿಯರ್ ಅವನ ಬೆರಳುಗಳ ಮೇಲೆ ಬಾಯಿಂದ ಊದಿಕೊಳ್ಳುತ್ತ ಅತ್ತಿಂದಿತ್ತ ಮೇಲಕ್ಕೆ ಮತ್ತು ಕೆಳಕ್ಕೆಹೆಜ್ಜೆ ಹಾಕುತ್ತಿದ್ದಾನೆ. ಇಬ್ಬರೂ ತಂಡಿ(ಶೀತ) ಮತ್ತು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ತೋರಿಸುವಂತೆ ಇರಬೇಕು.


JEAN (regarding PIERRE’S restless pacing): Must you keep doing that?
ಜೀನ್ : (ಪಿಯರ್ ನ ಚಡಪಡಿಕೆಯ ಓಡಾಟದ ಬಗ್ಗೆ): ನೀನು ಹೀಗೆ ಮಾಡುತ್ತಿರಲೇ ಬೇಕೇ?


PIERRE : It’s this blasted cold. If I stop walking I shall freeze. I’m dying of hunger and cold.
ಪಿಯರ್ : ಇದು ಈ ಬಿರುಸಾದ ಶೀತದಿಂದ. ನಡೆಯುವುದನ್ನು ನಿಲ್ಲಿಸಿದರೆ ನಾನು ಹೆಪ್ಪುಗಟ್ಟಿ ಬಿಡುತ್ತೇನೆ. ಹಸಿವು ಮತ್ತು ಶೀತದಿಂದ ನಾನು ಸಾಯುತ್ತ ಇದ್ದೀನಿ.

JEAN: So am I. But I prefer to die sitting down.
ಜೀನ್ : ನನಗು ಹಾಗೆಯೇ ಆಗುತ್ತಿದೆ. ಆದರೆ ಕುಳಿತುಕೊಂಡು ಸಾಯುವುದೇ ಮೇಲೆಂದು ನನಗೆ ಅನಿಸುತ್ತದೆ.


PIERRE : We make a pretty pair, you and I. Paris should be proud of us. (Displaying his rags.) There are twenty-three holes in this tunic. I know because I counted them this morning.
That’s only reckoning the ones that let the wind through. No doubt there are others. But let that pass.
ಪಿಯರ್ : ನಾವು ಒಂದು ಒಳ್ಳೆಯ ಜೋಡಿಯಾಗುತ್ತೇವೆ, ನೀನು ಮತ್ತು ನಾನು. ಪ್ಯಾರಿಸ್ ನಮ್ಮ ಬಗ್ಗೆ ಹೆಮ್ಮೆ ಪಡಬೇಕು. (ಅವನ ಚಿಂದಿ ಉಡುಪನ್ನು ತೋರಿಸುತ್ತಾ) ಈ ನಿಲುವಂಗಿಯಲ್ಲಿ ಇಪ್ಪತ್ಮೂರು ತೂತುಗಳು ಇವೆ. ಈ ಬೆಳಗ್ಗೆ ತಾನೇ ಅವುಗಳನ್ನು ಎನಿಸಿದ್ದೇನೆ, ಅದಕ್ಕೆ ನನಗದು ಗೊತ್ತಿದೆ.
ಇದು ಗಾಳಿಯನ್ನು ಒಳ ತೂರಲು ಬಿಡುವ ತೂತುಗಳ ಲೆಕ್ಕವಷ್ಟೆ. ಇನ್ನು ಬೇಕಾದಷ್ಟು ಇದ್ದಾವೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದ್ರೆ ಅವುಗಳನ್ನು ಬಿಟ್ಟುಬಿಡುವ.


JEAN : The holes in your tunic don’t interest me. What I am concerned about is the hollow in my stomach. We must live; and without a meal……………
ಜೀನ್ : ನಿನ್ನ ನಿಲುವಂಗಿಯ ಇರುವ ರಂಧ್ರಗಳ ಬಗ್ಗೆ ನನಗೆ ಯಾವ ಆಸಕ್ತಿಯೂ ಇಲ್ಲ. ನನ್ನ ಖಾಲಿ ಹೊಟ್ಟೆಯ ಬಗ್ಗೆಯಷ್ಟೇ ನಂಗೆ ಚಿಂತೆ. ನಾವು ಬದುಕಲೇಬೇಕು; ಆದರೆ ಏನು ಊಟವೇ ಇಲ್ಲದೇ ……..


PIERRE : That’s what I said to Judge Gaston when I was pinched last month for begging.
ಪಿಯರ್ : ಹೋದ ಸಲ ಭಿಕ್ಷೆ ಬೇಡಿದೆನೆಂದು ನನ್ನನ್ನು ಬಂದಿಸಿದಾಗ ನ್ಯಾಯಾಧೀಶ ಗ್ಯಾಸ್ಟನ್ ಅವರಿಗೆ ನಾನು ಇದನ್ನೇ ಹೇಳಿದ್ದೆ.

JEAN : Said what?
ಜೀನ್ : ಏನಂಥ ಹೇಳಿದ್ದೆ?


PIERRE : He asked me why I did it, and I said, “Well, your honour, I must live.” And he looked me up and down and said, “I really don’t see the necessity.”
ಪಿಯರ್ : ನಾನು ಯಾಕೆ ಹಾಗೆ ಮಾಡಿದೆ ಅಂತ ಅವರು ನನ್ನನ್ನು ಕೇಳಿದರು, “ಯಾಕೆಂದರೆ, ಮಹನೀಯರೇ ನಾನೂ ಬದುಕಬೇಕು’, ಅಂತ ಹೇಳಿದೆ. ಅವರು ನನ್ನನ್ನು ಮೇಲಿಂದ ಕೆಳಗಿನವರೆಗೆ ನೋಡಿ , ” ನನಗೆ ಅದರ ಅವಶ್ಯಕತೆ ಕಾಣಿಸುತ್ತಿಲ್ಲ” ಎಂದರು.

JEAN : A wag, that Judge.
ಜೀನ್ : ಅವರೊಬ್ಬ ತಮಾಷೆ ಮನುಷ್ಯ, ಆ ನ್ಯಾಯಾಧೀಶ.


PIERRE : He didn’t know what it was to be hungry. See here, my pretty, this can’t go on. I’m going to knock on every door in this street. And since charity begins at home I shall begin right here. (Indicating the cake shop.) You’d better not be seen. Go into the next street and try your luck there. (JEAN begins to go, but PIERRE calls him back.) Wait a minute, brother; let’s hear what you can do.
(JEAN knocks on the bench and assumes a mendicant voice and attitude.)
ಪಿಯರ್ : ಅವರಿಗೆ ಹಸಿವು ಅಂದರೇನು ಅಂತ ಗೊತ್ತಿಲ್ಲ. ಇಲ್ಲಿ ನೋಡು, ನನ್ನ ಮುದ್ದು, ಇದು ಹೀಗೆ ಮುಂದುವರಿಯಲು ಸಾಧ್ಯವಿಲ್ಲ. ನಾನು ಈ ಬೀದಿಯ ಪ್ರತಿಯೊಂದು ಬಾಗಿಲನ್ನು ತಟ್ಟಲಿದ್ದೇನೆ. ದಾನ ಧರ್ಮ ಮನೆಯಿಂದಲೇ ಪ್ರಾರಂಭವಾಗುವುದರಿಂದ ನಾನು ಇಲ್ಲಿಂದಲೇ ಶುರು ಮಾಡುತ್ತೇನೆ (ಕೇಕ್ ಅಂಗಡಿಯನ್ನು ಸೂಚಿಸುತ್ತಾ). ನೀನು ಕಾಣಿಸಕೊಳ್ಳದಿರುವುದೇ ಉತ್ತಮ. ಮುಂದಿನ ಬೀದಿಗೆ ಹೋಗಿ ಅಲ್ಲಿ ನಿನ್ನ ಅದೃಷ್ಟವನ್ನು ಪ್ರಯತ್ನಿಸು. (ಜೀನ್ ಹೊರಡಲು ಅನುವಾಗುತ್ತಾನೆ, ಆದರೆ ಪಿಯರ್ ಅವನನ್ನು ಹಿಂದಕ್ಕೆ ಕರೆಯುತ್ತಾನೆ.) ಒಂದು ನಿಮಿಷಇರು, ಸಹೋದರ; ನೀನು ಏನು ಮಾಡಬಹುದು ಎಂದು ಕೇಳಿಸಿಕೊಳ್ಳೋಣ.
(ಜೀನ್ ಬೆಂಚಿನ ಮೇಲೆ ತಟ್ಟಿ, ದಯಾನೀಯವಾದ ಧ್ವನಿ ಮತ್ತು ಮುಖಭಾವನ್ನು ತಳೆಯುತ್ತಾನೆ.)

JEAN : “For the love of St. Agatha and all the blessed saints, have pity on a poor Miserable who has had no food for three days.” How’s that?
ಜೀನ್ : “ಸೇಂಟ್ ಅಗಾಥಾ ಮತ್ತು ಎಲ್ಲ ಪುಣ್ಯವಂತ ಸಂತರ ಪ್ರೀತಿಯಿರಲಿ, ಮೂರು ದಿನಗಳಿಂದ ಏನೂ ಆಹಾರವಿಲ್ಲದ ಈ ಬಡ ದೀನನ ಬಗ್ಗೆ ಕರುಣೆ ತೋರಿಸಿ.” ಹೇಗಿದೆ ಇದು?

PIERRE : Not bad. But make it seven days and squint slightly. It’s a sure sign of starvation.
(Exit JEAN)
ಪಿಯರ್ : ಪರವಾಗಿಲ್ಲ. ಆದರೆ ಏಳು ದಿನ ಅಂತ ಮಾಡಿಕೋ, ಮತ್ತು ಕಣ್ಣನ್ನು ಸ್ವಲ್ಪ ತೇಲಿಸು. ಹಸಿವಿನ ಖಚಿತ ಗುರುತು ಇದು.
(ಜೀನ್ ಹೊರಡುತ್ತಾನೆ)


PIERRE : (Knocking on the cake shop door): Alms, good sir; for the love of God and all His blessed angels, take pity on a poor traveller who has had no food for a week.
(M. GAULTIER comes to the door. He is a man of about fifty, well preserved and obviously content with his lot.)
ಪಿಯರ್ : (ಕೇಕ್ ಅಂಗಡಿಯ ಬಾಗಿಲು ತಟ್ಟುತ್ತಾ) : ಭಿಕ್ಷೆ, ದಯವಂತರೇ; ದೇವರ ಮತ್ತು ಆತನ ಆಶೀರ್ವಾದ ಪಡೆದ ಎಲ್ಲಾ ದೇವತೆಗಳ ಕೃಪೆಯಿಂದ, ಒಂದು ವಾರದಿಂದ ಊಟವಿಲ್ಲದ ಈ ಬಡ ಪ್ರಯಾಣಿಕನ ಮೇಲೆ ಕರುಣೆ ತೋರಿಸಿ.
(ಶ್ರೀಮಾನ್.ಗೌಲ್ಟಿಯರ್ ಬಾಗಿಲ ಬಳಿ ಬರುತ್ತಾನೆ. ಅವನು ಸುಮಾರು ಐವತ್ತು ವರ್ಷ ವಯಸ್ಸಿನ ಸಮೃದ್ಧಿಯಿಂದ ಮತ್ತು ಸಂತೃಪ್ತಿಯಿಂದ ಇರುವವನು.)


GAULTIER : Go away. I’ve got nothing for you. My wife is away and I am busy. You’d better go to the next street.
(M.GAULTIER slams the door. Exit PIERRE, R. Enter JEAN, L. He looks at the door, hesitates and then knocks.)
ಗೌಲ್ಟಿಯರ್ : ಮುಂದೆ ಹೋಗಯ್ಯ , ನಿನಗೆ ಕೊಡೋಕೆ ನನ್ನ ಬಳಿ ಏನೂ ಇಲ್ಲ. ನನ್ನ ಹೆಂಡತಿ ಎಲ್ಲೋ ಹೋಗಿದಾಳೆ, ಮತ್ತೆ ನನಗೆ ಕೆಲಸದಲ್ಲಿ ನಿರತನಾಗಿದ್ದೇನೆ. ನೀನು ಮುಂದಿನ ಬೀದಿಗೆ ಹೋಗುವುದು ಒಳ್ಳೆಯದು.
(ಶ್ರೀಮಾನ್.ಗೌಲ್ಟಿಯರ್ ಬಾಗಿಲನ್ನು ರಭಸದಿಂದ ಮುಚ್ಚುತ್ತಾನೆ. ಪಿಯರ್ ಬಲಭಾಗದಿಂದ ನಿರ್ಗಮಿಸುತ್ತಾನೆ, ಜೀನ್ ಬಲಭಾಗದಿಂದ ಆಗಮಿಸುತ್ತಾನೆ. ಅವನು ಬಾಗಿಲನ್ನು ನೋಡಿ, ಹಿಂಜರಿಯುತ್ತ ನಂತರ ತಟ್ಟುತ್ತಾನೆ.)

JEAN : For the love of St. Agatha, St. Nicholas, St. Crispin and all the blessed company of Heaven, have pity upon a poor Miserable who has had no food for seven days.
(The door is opened by MARION. She is younger than her husband, stoutish, but comely.)
ಜೀನ್ : ಸೇಂಟ್ ಅಗಾಥಾ, ಸೇಂಟ್ ನಿಕೋಲಸ್, ಸೇಂಟ್ ಕ್ರಿಸ್ಪಿನ್ ಮತ್ತು ಸ್ವರ್ಗದಲ್ಲಿನ ಎಲ್ಲ ಪುಣ್ಯವಂತರ ಕೃಪೆಯಿಂದ, ಕಳೆದ ಏಳು ದಿನಗಳಿಂದ ತಿನ್ನಲು ಏನೂ ಇಲ್ಲದ ಈ ಬಡ ದೀನನ ಮೇಲೆ ಕರುಣೆ ತೋರಿಸಿ.
(ಮರಿಯನ್ ಳಿಂದ ಬಾಗಿಲು ತೆರೆಯಲ್ಪಡುತ್ತದೆ. ಅವಳ ಗಂಡನಿಗಿಂತ ವಯಸಿನಲ್ಲಿ ಚಿಕ್ಕವಳು ಆಕೆ, ದುಂಡಗೆ ಇದ್ದಾಳೆ ಆದರೂ ಸುಂದರವಾಗಿದ್ದಾಳೆ.)

MARION: Go away, beggar. My husband is out and I have nothing for you. You’d better call again when he comes back.
(MARION shuts the door. JEAN sits disconsolately on the bench. Presently GAULTIER comes out of the shop. He makes as if to go out, R., but remembers something and goes back towards the shop. MARION appears at the door)
ಮರಿಯನ್ : ಏ ಭಿಕ್ಷುಕ, ಹೋಗೋಗು. ನನ್ನ ಗಂಡ ಹೊರಗೆ ಹೋಗಿದ್ದಾರೆ ಹಾಗು ನಿನಗೆ ಕೊಡಲಿಕ್ಕೆ ಇಲ್ಲೇನೂ ಇಲ್ಲ. ಅವರು ತಿರುಗಿ ಬಂದ ಮೇಲೆ ನೀನು ಬರುವುದು ಒಳ್ಳೆಯದು.
(ಮರಿಯನ್ ಬಾಗಿಲು ಮುಚ್ಚಿಬಿಡುತ್ತಾಳೆ. ಜೀನ್ ಅಸಮಾಧಾನದಿಂದ ಬೆಂಚ್ ಮೇಲೆ ಕುಳಿತುಕೊಳ್ಳುತ್ತಾನೆ. ಆ ಸಮಯದಲ್ಲೇ ಗಾಲ್ಟಿಯರ್ ಅಂಗಡಿಯಿಂದ ಹೊರಬರುತ್ತಾನೆ. ಅವನು ಹೊರಗೆ ಹೋಗುವವನಂತೆ ಬಲಬದಿಗೆ ಹೋಗಿ, ಏನನ್ನೋ ನೆನಪಿಸಿಕೊಂಡು ಮತ್ತೆ ಅಂಗಡಿಯ ಕಡೆಗೆ ಹೋಗುತ್ತಾನೆ. ಮರಿಯನ್ಬಾ ಬಾಗಿಲಲ್ಲಿ ಕಾಣಿಸಿಕೊಳ್ಳುತ್ತಾಳೆ.)

M. GAULTIER : Ah, Marion. I am just off to dine with the Mayor. He keeps none too good a table. I am thinking that I’d better take that eel pie with me – the big one that I made last Monday. Just get it for me. Hurry; I mustn’t be late.
ಗೌಲ್ಟಿಯರ್ : ಆಹ್, ಮರಿಯನ್. ನಾನು ಮೇಯರ್ ಜೊತೆ ಊಟ ಮಾಡಲು ಹೊರಟಿದ್ದೇನೆ. ಅವರು ರುಚಿಯಿರುವ ಯಾವುದನ್ನೂ ಟೇಬಲ್ಇ ಮೇಲೆ ಊಟಕ್ಕೆ ಇಡುವುದಿಲ್ಲ. ಕಳೆದ ಸೋಮವಾರ ನಾನು ಮಾಡಿದ ದೊಡ್ಡದಾದ ಈಲ್ ಪೈ ( ಈಲ್ ಫಿಶ್ ನಿಂದ ಮಾಡಿದ ಮಸಾಲೆ ಹೋಳಿಗೆಯಿಂತಹ ತಿನಿಸು ) ಅನ್ನು ನನ್ನೊಂದಿಗೆ ತೆಗೆದುಕೊಂಡು ಹೋಗುವುದು ಉತ್ತಮ ಎಂದು ನಾನು ಯೋಚಿಸುತ್ತಿದ್ದೇನೆ. ಅದನ್ನು ನನಗಾಗಿತೆಗೆದುಕೊಂಡು ಬಾ. ಬೇಗನೆ; ನಾನು ತಡ ಮಾಡಲಾಗದು.

MARION: Very good, husband.
(She goes back into the shop, but GAULTIER calls her back.)
ಮರಿಯನ್ : ತುಂಬಾ ಒಳ್ಳೆಯದು, ಪತಿರಾಯರೇ.
(ಅವಳು ಅಂಗಡಿ ಒಳಗೆ ಹೋಗುತ್ತಾಳೆ, ಆದರೆ ಗೌಲ್ಟಿಯರ್ ಅವಳನ್ನು ಹಿಂದಕ್ಕೆ ಕರೆಯುತ್ತಾನೆ.)

GAULTIER : Wait. I can’t very well be seen carrying an eel pie through the streets of Paris, can I? Not quite the thing for a man of my position. Do you think you could bring it along after me?
ಗೌಲ್ಟಿಯರ್ : ತಡೆ. ನಾನು ಪ್ಯಾರಿಸ್‌ನ ಬೀದಿಗಳಲ್ಲಿ ಈಲ್ ಪೈ ಹೊತ್ತುಕೊಂಡು ಹೋಗುವುದು ನೋಡಲು ಚೆನ್ನಾಗಿ ಕಾಣುವುದೇ, ಅದು ಆಗದು? ನನ್ನ ಸ್ಥಾನದಲ್ಲಿರುವ ವ್ಯಕಿಗೆ ಸರಿ ಕಾಣಿಸುವುದಿಲ್ಲ. ನಾನು ಹೋರಾಟ ನಂತರ ನೀನು ಅದನ್ನು ತಂದು ಕೊಡಲು ಸಾಧ್ಯವೇ?

MARION: Quite impossible. I’ve too much to do to run errands. Why not send someone back for it?
ಮರಿಯನ್ : ಅದು ಕೊಂಚ ಅಸಾಧ್ಯ. ನನಗೆ ಮಾಡಲು ಬಹಳ ಕೆಲಸಗಳಿವೆ. ನಾವು ಯಾಕೆ ಬೇರೆ ಯಾರನ್ನಾದರೂ ಈ ಕೆಲಸಕ್ಕೆ ಕಳಿಸಬಾರದು?

GAULTIER : A good idea. But who?
ಗೌಲ್ಟಿಯರ್ : ಅದು ಒಳ್ಳೆಯ ವಿಚಾರ. ಆದರೆ ಯಾರನ್ನು?

MARION: Well, you’ll be bound to meet someone on the way.
ಮರಿಯನ್ : ಸರಿ, ದಾರಿಯಲ್ಲಿ ನಿಮಗೆ ಯಾರಾದರೂ ಸಿಗಬಹುದು.

GAULTIER : Yes, but how will you know if he’s the right one? Anyone might just come and say they had been sent.
ಗೌಲ್ಟಿಯರ್ : ಹೌದು, ಆದರೆ ಇದೇ ವ್ಯಕ್ತಿ ಎಂದು ನೀನು ಹೇಗೆ ತಿಳಿಯುತ್ತೀಯ? ಯಾರು ಬೇಕಾದರೂ ಹಾಗೆಯೆ ಬಂದು ಅವನೇ ನಾನು ಕಳುಹಿಸಿದ ವ್ಯಕ್ತಿ ಎಂದು ಹೇಳಬಹುದು.

MARION: I hadn’t thought of that.
ಮರಿಯನ್ : ನಾನು ಆ ಬಗ್ಗೆ ಯೋಚನೆಯೇ ಮಾಡಲಿಲ್ಲ.

GAULTIER : I have it. I’ll tell the messenger, when I have found him, to kiss your hand. That will be the sign and you’ll know that everything is all right.
ಗೌಲ್ಟಿಯರ್ : ನನಗೆ ತಿಳಿಯಿತು. ನನಗೆ ಸಂದೇಶವಾಹಕನು ಸಿಕ್ಕಿದಾಗ, ನಿನ್ನ ಕೈಗೆ ಮುತ್ತಿಡಲು ಅವನಿಗೆ ನಾನು ಹೇಳುತ್ತೇನೆ. ಅದುವೇ ಸಂಕೇತ ಮತ್ತು ಆಗ ನಿನಗೆ ಎಲ್ಲವು ಸರಿಯಾಗಿದೆ ಎಂದು ತಿಳಿಯುತ್ತದೆ.

MARION (laughing): Well, choose a good-looking one. (Coyly): Madame Gaultier’s hand is not for everyone to kiss.
(MARION returns to the shop. GAULTIER exit, R. JEAN who has overheard all the foregoing, sits pondering. Presently enter PIERRE L.)
ಮರಿಯನ್ : (ನಗುತ್ತ ) ಅದು ಸರಿ, ಸುಂದರವಾಗಿ ಕಾಣಿಸುವನನ್ನೇ ಆರಿಸಿ. (ಸಂಕೋಚಪಡುತ್ತಾ) ಶ್ರೀಮತಿ ಗೌಲ್ಟಿಯರ್ ಳ ಕೈಗೆ ಯಾರು ಬೇಕಾದರೂ ಮುತ್ತಿಡಲು ಆಗುವುದಿಲ್ಲ.

PIERRE : Any luck?
ಪಿಯರ್ : ಏನಾದರು ಅದೃಷ್ಟವಿತ್ತೇ?

JEAN : Yes — and no.
ಜೀನ್ : ಹೌದು — ಮತ್ತು ಇಲ್ಲ.

PIERRE : What does that mean?
ಪಿಯರ್ : ಹಾಗೆಂದರೆ ಏನು ಅರ್ಥ?

JEAN (after a pause) : Look here. Are you ready to do exactly as I tell you? And no questions asked?
ಜೀನ್ (ತುಸು ತಡೆದು) : ಇಲ್ಲಿ ನೋಡು, ನಾನು ಹೇಳಿದ ಹಾಗೆಯೇ ಮಾಡಲು ನೀನು ತಯಾರಿದ್ದೀಯಾ? ಮತ್ತೆ ಏನು ಪ್ರಶ್ನೆಗಳನ್ನು ಕೇಳದ ಹಾಗೆ?

PIERRE : I’ll do anything to keep my stomach quiet.
ಪಿಯರ್ : ನನ್ನ ಹೊಟ್ಟೆಯನ್ನು ಸುಮ್ಮನಿರಿಸಲು ನಾನು ಏನು ಬೇಕಾದರೂ ಮಾಡುತ್ತೇನೆ.

JEAN : Very well. Now listen. I am going into the next street. Directly I am gone, go up to the door, knock on it and say…..
ಜೀನ್ : ಬಹಳ ಚೆನ್ನಾಗಿದೆ. ಕೇಳು ಈಗ . ನಾನು ಮುಂದಿನ ಬೀದಿಗೆ ಹೋಗುತ್ತಿದ್ದೇನೆ. ನಾನು ಹೋದ ನಂತರ, ಸೀದಾ ಆ ಬಾಗಿಲ ಬಳಿ ಹೋಗಿ , ಅದನ್ನು ತಟ್ಟಿ ಹೀಗೆ ಹೇಳು….

PIERRE : Thanks. I’ve been there once today already. I got what I expected. (Mimicking M GAULTIER’S pompous manner.) “Go away, beggar! Go away; I’m busy. Go into the next street.” Bah! (He spits.)
ಪಿಯರ್ : ಧನ್ಯವಾದ, ನಾನು ಇವತ್ತು ಆಗಲೆ ಅಲ್ಲಿಗೆ ಹೋಗಿದ್ದೆ. ನಾನು ಏನು ಯೋಚಿಸಿದ್ದೆನೋ ಅದೇ ಸಿಕ್ಕಿತು. (ಶ್ರೀಮತಿ ಗೌಲ್ಟಿಯರ್ ಳ ಆಡಂಬರದ ನಡವಳಿಕೆಯನ್ನು ಅನುಕರಿಸುತ್ತ ) ” ಹೋಗು, ಭಿಕ್ಷುಕ! ಹೋಗೋಗು; ನನನಗೆ ಕೆಲಸವಿದೆ. ಮುಂದಿನ ಬೀದಿಗೆ ಹೋಗು.” ಬ್ಯಾಹ್ !(ಅವನು ಉಗಿಯುತ್ತಾನೆ.)

JEAN : Never mind about that. Listen. I say directly I am gone, go up to the door and knock on it. The lady will come to the door…..
ಜೀನ್ : ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ. ಕೇಳಿಸಿಕೋ. ನಾನು ಹೇಳಿದ ಹಾಗೆ, ನಾನು ಹೋದ ನಂತರ ಆ ಬಾಗಿಲಿಗೆ ಹೋಗಿ ತಟ್ಟು. ಆ ಮಹಿಳೆ ಬಾಗಿಲಿಗೆ ಬರುತ್ತಾಳೆ….

PIERRE : But how do you….
ಪಿಯರ್ : ಆದರೆ ನಿನಗೆ ಹೇಗೆ ಗೊತ್ತು…

JEAN : Don’t interrupt. The lady will come to the door. When she does so you will take her hand and kiss it.
ಜೀನ್ : ಅಡ್ಡಿ ಮಾಡಬೇಡ. ಮಹಿಳೆ ಬಾಗಿಲಿಗೆ ಬರುತ್ತಾಳೆ. ಅವಳು ಹಾಗೆ ಮಾಡಿದಾಗ ನೀನು ಅವಳ ಕೈಯನ್ನು ತೆಗೆದುಕೊಂಡು ಅದನ್ನು ಚುಂಬಿಸುತ್ತೀಯ.

PIERRE : Kiss the lady’s hand? I think you’re making a slight mistake, brother. I’m not lovesick; I’m starving.
ಪಿಯರ್ : ಮಹಿಳೆಯ ಕೈಯನ್ನು ಚುಂಬಿಸುಬೇಕಾ? ಸಹೋದರ, ನೀವು ಎಲ್ಲೋ ಕೊಂಚ ತಪ್ಪು ಮಾಡುತ್ತಿದ್ದೀಯ ಎಂದು ನನಗೆ ಅನಿಸುತ್ತಿದೆ. ನಾನು ಪ್ರೀತಿಯಲ್ಲಿ ಸಿಕ್ಕಿ ಬಿದ್ದಿಲ್ಲ; ನಾನು ಹಸಿವಿನಿಂದ ಬಳಲುತ್ತಿದ್ದೆನೆ.

JEAN : Wait. That’s not all. When you have kissed her hand you will say, “Madam, I am sent by M. Gaultier to fetch the pie.” She will then give you a large eel pie and …..
ಜೀನ್ : ಇರು . ಅಷ್ಟೆ ಅಲ್ಲ. ನೀನು ಅವಳ ಕೈಗೆ ಮುತ್ತಿಟ್ಟಾಗ, “ಮೇಡಂ, ಪೈಯನ್ನು ತರಲು ನನ್ನನ್ನು ಶ್ರೀಮಾನ್.ಗೌಲ್ಟಿಯರ್ ಕಳುಹಿಸಿದ್ದಾರೆ” ಎಂದು ಹೇಳಬೇಕು.. ಆ ನಂತರ ಅವಳು ನಿನಗೆ ಒಂದು ದೊಡ್ಡ ಈಲ್ ಪೈಯನ್ನು ನೀಡುತ್ತಾಳೆ ಮತ್ತು…..

PIERRE : And the heavens will open; roast fowl and nectarines will be seen to rain upon us from the clouds, and champagne will be heard gurgling in the gutters. Where did you learn this conjuring trick?
ಪಿಯರ್ : ಮತ್ತು ಸ್ವರ್ಗದ ಬಾಗಿಲು ತೆರೆಯುತ್ತದೆ; ಹುರಿದ ಕೋಳಿ ಮತ್ತು ರಸಭರಿತ ಹಣ್ಣುಗಳ ಮಳೆಯು, ಮೋಡಗಳಿಂದ ನಮ್ಮ ಮೇಲೆ ಸುರಿಯುವುದನ್ನು ಕಾಣಬಹುದು, ಮತ್ತು ಷಾಂಪೇನ್ ಗಟಾರಗಳಲ್ಲಿ ಜುಳುಜುಳಿಸುತ್ತ ಹರಿಯುವುದು ಕೇಳಿಸುತ್ತದೆ. ಈ ಮಾಯಾ ತಂತ್ರವನ್ನು ನೀನು ಎಲ್ಲಿ ಕಲಿತೇ?

JEAN : Very well. Believe it or not as you like. The point is: are you hungry, or are you not?
ಜೀನ್ : ಸರಿ ಸರಿ. ನಂಬಿದರೆ ನಂಬು ಇಲ್ಲ ಬಿಡು, ನಿನ್ನಿಷ್ಟ. ವಿಷಯ ಏನೆಂದರೆ : ನೀನು ಹಸಿದಿದ್ದೀವೋ, ಇಲ್ಲವೋ?

PIERRE : (rubbing his waist-line) Hungry? I’ve a hollow in here that all the birds of the air could nest in.
ಪಿಯರ್ : (ಹೊಟ್ಟೆಯನ್ನು ಸವರಿಕೊಳ್ಳುತ್ತಾ) ಹಸಿವಾ? ಇಲ್ಲಿ ನಾನು ಎಷ್ಟು ಟೊಳ್ಳಾಗಿದ್ದೇನೆ ಅಂದರೆ ಗಾಳಿಯಲ್ಲಿರುವ ಎಲ್ಲಾ ಹಕ್ಕಿಗಳೂ ಬಂದು ಗೂಡು ಕಟ್ಟಬಹುದು.

JEAN : Then do as I tell you. If it doesn’t come off, never trust me again. But it will.
ಜೀನ್ : ಮತ್ತೆ ನಾನು ಹೇಳಿದ ಹಾಗೆ ಮಾಡು. ಅದು ಹಾಗೆ ಆಗದಿದ್ದರೆ ನೀನು ನನ್ನನು ಮತ್ತೆಂದಿಗೂ ನಂಬಬೇಡ. ಆದರೆ ಅದು ಆಗೇ ಆಗುತ್ತೆ.

PIERRE : Criminy, Jean, I believe you’re serious!
ಪಿಯರ್ : ಓ ದೇವರೇ, ಜೀನ್, ನಾನು ನಂಬುತ್ತೇನೆ ನೀನು ನಿಜಾನೆ ಹೇಳ್ತ ಇದ್ದೀಯ ಅಂತ!

JEAN : Of course I’m serious.
ಜೀನ್ : ಖಂಡಿತವಾಗಿಯೂ, ನಾನು ಗಂಭೀರವಾಗಿ ಇದ್ದೀನಿ.

PIERRE : All right. I’ll do it.
ಪಿಯರ್ : ಸರಿ ಬಿಡು, ನಾನು ಇದು ಮಾಡುತ್ತೀನಿ.

JEAN : Good.
ಜೀನ್ : ಒಳ್ಳೆಯದು.

PIERRE : Tell me again. What do I have to do?
ಪಿಯರ್ : ಎಲ್ಲಿ ಮತ್ತೊಮ್ಮೆ ಹೇಳು, ನಾನು ಏನು ಮಾಡಬೇಕು ಅಂತ?

JEAN : It’s all quite simple. Go up and knock at the door and say, “Please, Madam, M. Gaultier has sent me for the eel pie.” She won’t give it to you till you have kissed her hand. That’s important.
ಜೀನ್ : ಇದೆಲ್ಲ ತುಂಬಾ ಸರಳವಾಗಿದೆ. ಅಲ್ಲಿ ಹೋಗಿ ಬಾಗಿಲು ಬಡಿದು, “ದಯವಿಟ್ಟು, ಮೇಡಂ, ಶ್ರೀಮಾನ್. ಗೌಲ್ಟಿಯರ್ ಅವರು ನನ್ನನ್ನು ಈಲ್ ಪೈಗಾಗಿ ಕಳುಹಿಸಿದ್ದಾರೆ” ಎಂದು ಹೇಳು. ನೀನು ಅವಳ ಕೈಗೆ ಮುತ್ತಿಡುವವರೆಗೂ ಅವಳು ಅದನ್ನು ನಿನ ಗೆ ಕೊಡುವುದಿಲ್ಲ. ಅದು ಬಹಳ ಮುಖ್ಯ.

PIERRE : But suppose the husband comes to the door?
ಪಿಯರ್ : ಆದರೆ ಒಂದು ವೇಳೆ ಬಾಗಿಲಿಗೆ ಅವಳ ಗಂಡ ಬಂದುಬಿಟ್ಟರೆ?

JEAN : He won’t. He’s out. I happen to know it. Never mind how, but I do. Now, I’m going round the corner. I shall be back in five minutes, and don’t you start dinner till I come!
(Exit JEAN, R. PIERRE knocks on the door. MARION answers it.)
ಜೀನ್ : ಅವನು ಬರಲ್ಲ. ಅವನು ಹೊರಗೆ ಹೋಗಿದ್ದಾನೆ. ನಂಗೆ ಹೇಗೋ ತಿಳಿದಿದೆ. ಅದು ಹೇಗೆ ಅಂತ ಯೋಚಿಸಬೇಡ, ಆದರೆ ನನಗೆ ಗೊತ್ತು ಅಷ್ಟೇ, ಈಗ ನಾನು ಆ ತಿರುವಿನ ಬಳಿ ಹೋಗುತ್ತೇನೆ, ಐದು ನಿಮಿಷದಲ್ಲಿ ನಾನು ತಿರುಗಿ ಬರುವೆ, ಮತ್ತೆ ನಾನು ಬರುವ ತನಕ ಊಟ ಶುರು ಮಾಡಿಬಿಡಬೇಡ.

PIERRE : Good morning, lady. I have come from M. Pie, who sends me to fetch the Gaultier – I should say I have come from M. Gaultier, who sends me to fetch the pie – the eel pie.
ಪಿಯರ್ : ಶುಭ ದಿನ, ಶ್ರೀಮತಿಯವರೇ. ನಾನು ಶ್ರೀ. ಪೈಗಳ ಕಡೆಯಿಂದ ಬಂದಿದ್ದೇನೆ, ಗೌಲ್ಟಿಯರ್ ಅನ್ನು ತರಲು ಅವರು ನನ್ನನ್ನು ಕಳಿಸಿದ್ದಾರೆ – ಇಲ್ಲ ನಾನು ಹೀಗೆ ಹೇಳಬೇಕು, ನಾನು ಶ್ರೀ.ಗೌಲ್ಟಿಯರ್ ಅವರ ಕಡೆಯಿಂದ ಬಂದಿದ್ದೇನೆ, ಪೈಯನ್ನು ತರಲು ಅವರು ನನ್ನನ್ನು ಕಳಿಸಿದ್ದಾರೆ – ಒಂದು ಈಲ್ ಪೈ.

MARION: And how am I to know you are his messenger?
ಮರಿಯನ್ : ಮತ್ತೆ ನೀನು ಅವರದೇ ಸಂದೇಶವಾಹಕ ಎಂದು ನನಗೆ ಹೇಗೆ ಗೊತ್ತಾಗಬೇಕು?

PIERRE : Ah! (Coyly.) Allow me, lady, to kiss your hand.
(He attempts to seize her hand, but MARION snatches it away.)
ಪಿಯರ್ : ಅಹ್! ( ಸೋಂಕೋಚದಿಂದ) ಅನುಮತಿ ಕೊಡಿ, ಶ್ರೀಮತಿಯವರೇ, ನಿಮ್ಮ ಕೈಯನ್ನು ಚುಂಬಿಸಲು.
(ಅವನು ಅವಳ ಕೈಯನ್ನು ಹಿಡಿಯಲು ಮುಂದಾಗುತ್ತಾನೆ, ಆದರೆ ಮರಿಯಾನ್ ಕೈಯನ್ನು ಹಿಂದಕ್ಕೆ ಕಿತ್ತುಕೊಳ್ಳುತ್ತಾಳೆ .)

MARION: All right. That will do. Wait there and I will get it. (Exit and reappears with pie.) Here it is. Take care how you carry it. It’s a very good pie.
ಮರಿಯನ್ : ಸರಿ ಸರಿ. ಅಷ್ಟು ಸಾಕು. ಇಲ್ಲಿಯೇ ಕಾಯುತ್ತಿರು, ನಾನದನ್ನು ತರುವೆ. (ನಿರ್ಗಮಿಸಿ ಮತ್ತೆ ಪೈನ ಜೊತೆಗೆ ಬರುತ್ತಾಳೆ .) ಇಲ್ಲಿದೆ. ಹುಷಾರಾಗಿ ತೆಗೆದುಕೊಂಡು ಹೋಗು. ಇದು ತುಂಬಾ ಒಳ್ಳೆಯ ಪೈ.

PIERRE : Rest assured, lady, I shall take the greatest care of it. As a carrier of eel pies I claim to be second to none in all Paris. It shall travel thus, close to my bosom. As a mother with her bantlings, as a shepherd with his ewes, as St. Ursula with her maidens, so will I play the guardian angel with this pie. It shall…….
ಪಿಯರ್ : ನೆಮ್ಮದಿಯಿಂದ ಇರಿ, ಶ್ರೀಮತಿಯವರೇ, ನಾನು ಇದರ ಬಗ್ಗೆ ಬಹಳ ಕಾಳಜಿ ವಹಿಸುತ್ತೇನೆ. ಈಲ್ ಪೈಗಳನ್ನು ಸಾಗಿಸುವವರಲ್ಲಿ ಇಡೀ ಪ್ಯಾರಿಸ್ ನಲ್ಲಿಯೇ ನನಗಿಂತ ಉತ್ತಮರಿಲ್ಲ. ನಾನಿದನ್ನು ನನ್ನ ಎದೆಗೆ ಹತ್ತಿರವಾಗಿ ಇಟ್ಟುಕೊಂಡು ಒಯ್ಯುವೆ. ತಾಯಿ ಮಗುವನ್ನು ಒಯ್ಯುವ ಹಾಗೆ, ಕುರುಬನು ತನ್ನ ಕುರಿಮರಿಗಳನ್ನು ಸಾಗಿಸುವ ಹಾಗೆ, ಸಂತ ಅರ್ಸುಲಾ ತನ್ನ ಕುಮಾರಿಯರನ್ನು ನೋಡಿಕೊಳ್ಳುವ ಹಾಗೆ, ಹಾಗಾಗಿ ನಾನು ರಕ್ಷಕ ದೇವತೆಯಂತೆ ಈ ಪೈಯನ್ನು ಕಾಯುತ್ತೇನೆ. ಅದು ಏನ್…..

MARION: Be off, then. And don’t waste time in getting there.
(She closes the door. After she had gone PIERRE stands holding the pie as if stupefied. He then places it carefully on the bench and sits beside it. He gazes at it lovingly, prodding it now and then with his fingers.)
ಮರಿಯನ್ : ಹೊರಡು, ಮತ್ತೆ. ಮತ್ತು ಅಲ್ಲಿಗೆ ಹೋಗುವಾಗ ಸಮಯ ವ್ಯರ್ಥ ಮಾಡಬೇಡ.
(ಅವಳು ಬಾಗಿಲು ಮುಚ್ಚುತ್ತಾಳೆ. ಅವಳು ಹೋದ ನಂತರ ಪಿಯರ್ ದಿಗ್ಬ್ರಾಂತನಾಗಿ ಪೈ ಅನ್ನು ಹಿಡಿದು ನಿಲ್ಲುತ್ತಾನೆ. ನಂತರ ಅವನು ಅದನ್ನು ಎಚ್ಚರಿಕೆಯಿಂದ ಬೆಂಚ್ ಮೇಲೆ ಇರಿಸಿ ಅದರ ಪಕ್ಕದಲ್ಲಿ ಕುಳಿತುಕೊಳ್ಳುತ್ತಾನೆ. ಅವನು ಅದನ್ನು ಪ್ರೀತಿಯಿಂದ ನೋಡುತ್ತಾನೆ, ಆಗೊಮ್ಮೆ ಈಗೊಮ್ಮೆ ತನ್ನ ಬೆರಳುಗಳಿಂದ ಅದನ್ನುಮೆಲ್ಲಗೆ ತಳ್ಳುತ್ತಾನೆ.)

PIERRE : This must be a dream; and presently I shall wake. One of those dreams that are too good to last. I know, because I’ve had them once or twice before. (Picking up the pie tenderly and sniffing it.) Good dream, last a little longer. Just now I haven’t the very least desire to wake up.
(Enter JEAN.)
ಪಿಯರ್ : ಇದು ಕನಸೇ ಇರಬೇಕು; ಹಾಗು ನಾನೀಗ ಎಚ್ಚರಗೊಳ್ಳಲೇ ಬೇಕು. ಇದು ನಿಜವಾಗಲು ಸಾಧ್ಯವಿಲ್ಲದಂತ ಬಹಳ ಒಳ್ಳೆಯ ಕನಸು. ಮುಂಚೆ ನನಗೆ ಈ ತರಹದ ಒಂದೆರಡು ಕನಸುಗಳು ಬಂದಿವೆ, ಅದಕ್ಕೆ ನನಗೆ ಗೊತ್ತು. ( ಮೃದುವಾಗಿ ಪೈಯನ್ನು ಎತ್ತಿಕೊಳ್ಳುತ್ತ ಹಾಗು ಸುವಾಸನೆಯನ್ನು ಅಘ್ರಾಣಿಸುತ್ತಾನೆ.) ಒಳ್ಳೆಯ ಕನಸು, ಇನ್ನು ಮುಂದುವರಿಯುತ್ತಿದೆ. ಈಗ ಮಾತ್ರ ನನಗೆ ಎಚ್ಚರಗೊಳ್ಳುವ ಒಂದು ಚೂರು ಆಸೆಯೂ ಇಲ್ಲ.
(ಜೀನ್ ಬರುತ್ತಾನೆ.)

JEAN : Well, what did I tell you?
ಜೀನ್ : ಸರೀ , ನಿನಗೆ ನಾನು ಏನು ಹೇಳಿದೆ?

PIERRE : (Putting his fingers to his lips): Sh ! Don’t speak too loud. You might wake me up.
ಪಿಯರ್ : (ಬಾಯಿಯ ಮೇಲೆ ಬೆರಳಿಡುತ್ತಾ ): ಶ್! ಜೋರಾಗಿ ಮಾತನಾಡಬೇಡ. ನನ್ನನ್ನು ನೀನು ಎಚ್ಚರಗೊಳಿಸಿಬಿಡುತ್ತೀಯ.

JEAN : (laughing and clapping him on the back): Wake up, then. It’s dinner time. (Picking up the pie.) We won’t wait for the nectarines and the champagne. This will do to start with.
(He goes out, carrying the pie in front of him. JEAN follows as if in a trance, nose in the air, sniffing. After a pause, enter GAULTIER. He is obviously angry and rather out of breath. He knocks on the door. MARION opens it.)
ಜೀನ್ : (ನಗುತ್ತ ಹಾಗು ಅವನ ಬೆನ್ನ ಮೇಲೆ ತಟ್ಟುತ್ತ ): ಎದ್ದೇಳು, ಮತ್ತೆ. ಇದು ಊಟದ ಸಮಯ. (ಪೈಯನ್ನು ಎತ್ತಿಕೊಳ್ಳುತ್ತ) ನಾವು ರಸಭರಿತ ಹಣ್ಣುಗಳಿಗೂ, ಷಾಂಪೇನಿಗೂ ಕಾಯುವುದು ಬೇಡ. ಶುರು ಮಾಡಲು ಇದೇ ಬೇಕಾದಷ್ಟು ಆಯಿತು.
(ಅವನು ಪೈಯನ್ನು ಎತ್ತಿಕೊಂಡು ಹೊರಗೆ ಹೋಗುತ್ತಾನೆ. ಜೀನ್ ಮೈಮರೆತವನಂತೆ ಅವನನ್ನು ಹಿಂಬಾಲಿಸುತ್ತಾನೆ, ಮೂಗನ್ನೆತ್ತಿ ಗಾಳಿಯನ್ನು ಮೂಸುತ್ತಾ. ಕೊಂಚ ಸಮಯದ ನಂತರ, ಗೌಲ್ಟಿಯರ್ ಪ್ರವೇಶಿಸುತ್ತಾನೆ. ಸಹಜವಾಗಿಯೇ ಅವನು ಕೋಪಗೊಂಡಿದ್ದು ಉಸಿರು ಬಿಡುತ್ತಿದ್ದಾನೆ. ಅವನು ಬಾಗಿಲನ್ನು ತಟ್ಟುತ್ತಾನೆ. ಮರಿಯಾನ್ ಅದನ್ನು ತೆರೆಯುತ್ತಾಳೆ.)

MARION: What, back already?
ಮರಿಯನ್ : ಏನು, ಇಷ್ಟು ಬೇಗ ತಿರುಗಿ ಬಂದಿರ?

GAULTIER : The mayor was out. Nice way to treat a guest, eh? Asks him to dinner and then goes out and forgets all about it. I’ll get even with him for it one day, mark my words. Gaspard Gaultier is not the man to be treated like that. Oh, no!
ಗೌಲ್ಟಿಯರ್ : ಆ ಮೇಯರ್ ಹೊರಗೆ ಹೋಗಿದ್ದರು. ಅತಿಥಿಯನ್ನು ಸತ್ಕರಿಸುವ ಒಳ್ಳೆಯ ರೀತಿ, ಇಹ್ ? ಊಟಕ್ಕೆ ಕರೆಯುವುದು ಮತ್ತು ಹೊರಗೆ ಹೋಗಿಬಿಡುವುದು ಮತ್ತು ಅದೆಲ್ಲವನ್ನು ಮರೆತು ಬಿಡುವುದು. ಒಂದು ದಿನ ನಾನು ಅವನಿಗೆ ಸರಿಯಾಗಿ ಮುಯ್ಯಿ ತೀರಿಸಿ ಸಮ ಮಾಡುತ್ತೇನೆ, ನೆನಪಿಟ್ಟುಕೋ ನನ್ನ ಮಾತುಗಳನ್ನು. ಈ ತರಹ ನಡೆಸಿಕೊಳ್ಳುವಂತ ಮನುಷ್ಯನಲ್ಲ ಈ ಗಾಸ್ಪರ್ಡ್ ಗೌಲ್ಟಿಯರ್. ಒಹ್, ಇಲ್ಲ!

MARION: But what will you do for dinner?
ಮರಿಯನ್ : ಆದರೆ ಈಗ ನೀವು ರಾತ್ರಿ ಊಟಕ್ಕೆ ಏನು ಮಾಡುತ್ತೀರಿ?

GAULTIER :Dine at home, of course. Where else?
ಗೌಲ್ಟಿಯರ್ : ಮನೆಯಲ್ಲೇ ಊಟ ಮಾಡುವೆ, ಅಲ್ಲವೇ, ಇನ್ನೆಲ್ಲಿ?

MARION: But there’s nothing in the house to eat.
ಮರಿಯನ್ : ಆದರೆ ಮನೆಯಲ್ಲಿ ತಿನ್ನಲು ಏನೂ ಇಲ್ಲ.

GAULTIER :Nothing to eat? What are you talking about? There’s the eel pie, isn’t there?
ಗೌಲ್ಟಿಯರ್ : ತಿನ್ನಲು ಏನೂ ಇಲ್ಲ? ಏನು ಹೇಳುತ್ತಾ ಇದ್ದೀಯ ನೀನು? ಒಂದು ಈಲ್ ಪೈ ಇದೆ, ಇದೆ ಅಲ್ಲವಾ?

MARION: But…. you sent for it. I gave it to your messenger not a quarter of an hour ago.
ಮರಿಯನ್ : ಆದರೆ… ನೀನೇ ಅದನ್ನು ತರಲು ಕಳಿಸಿದ್ದೆ. ನಾನದನ್ನು ನಿನ್ನ ಸಂದೇಶವಾಹಕನಿಗೆ ಕೊಟ್ಟುಬಿಟ್ಟೆ, ಇನ್ನು ಕಾಲು ಘಂಟೆಯೂ ಆಗಿಲ್ಲ ಕೊಟ್ಟು.

GAULTIER (Picking up his ears): Eh! What’s that?
ಗೌಲ್ಟಿಯರ್ : (ಎಚ್ಚರಿಕೆಯಿಂದ ಕೇಳಿಸಿಕೊಳ್ಳುತ್ತಾ) ಎಹ್ ! ಏನದು?

MARION: I gave the pie to the man who came for it. Just as you told me to. He kissed my hand, as you said he would, and I told him to hurry. Didn’t you meet him on the road?
ಮರಿಯನ್ : ಪೈಯನ್ನು ಕೇಳಿಕೊಂಡು ಬಂದ ವ್ಯಕ್ತಿಗೆ ನಾನದನ್ನು ಕೊಟ್ಟುಬಿಟ್ಟೆ. ನೀನು ನನಗೆ ಹೇಳಿದಂತೆಯೇ. ಅವನು ನನ್ನ ಕೈಗೆ ಮುತ್ತಿಟ್ಟ, ನೀನು ಹೇಳಿದ ಹಾಗೆಯೆ, ಮತ್ತೆ ನಾನು ಅವನಿಗೆ ಬೇಗ ಹೋಗುವಂತೆ ಹೇಳಿದೆ. ನೀನು ಅವನನ್ನು ದಾರಿಯಲ್ಲಿ ಭೇಟಿ ಮಾಡಲಿಲ್ಲವೇ?

GAULTIER : I sent no messenger.
ಗೌಲ್ಟಿಯರ್ : ನಾನು ಯಾವ ಸಂದೇಶವಾಹಕನನ್ನು ಕಳಿಸಿಲ್ಲ.

MARION: But…….
ಮರಿಯನ್ : ಆದರೆ…..

GAULTIER : I say I sent no messenger. (Suddenly threateningly.) What have you done with the pie? I believe you’ve eaten it!
ಗೌಲ್ಟಿಯರ್ : ನಾನು ಯಾರನ್ನೂ ಕಳಿಸಿಲ್ಲ ಅಂತ ಹೇಳಿದೆನಲ್ಲ. (ಇದ್ದಕಿದ್ದಂತೆ ಬೆದರಿಸುತ್ತಾ.) ಪೈಯನ್ನು ನೀನು ಏನು ಮಾಡಿದೆ? ನನಗೆ ಗೊತ್ತು ನೀನೇ ಅದನ್ನು ತಿಂದಿದ್ದಿಯ!

MARION: Now don’t be absurd, Gaspard. Of course I haven’t eaten it. I tell you the messenger came, as you arranged, and I gave him the pie. You must be crazy. If you didn’t send him, who else did?
ಮರಿಯನ್ : ಅಸಂಬದ್ಧವಾಗಿ ಓದಬೇಡ ಈಗ, ಗಾಸ್ಪರ್ಡ್. ನಿಜವಾಗಿಯೂ ನಾನದನ್ನು ತಿನ್ನಲಿಲ್ಲ. ಹೇಳ್ತ ಇದ್ದೀನಲ್ಲ, ನಿನ್ನ ಸಂದೇಶವಾಹಕ ಬಂದಿದ್ದ, ನೀನು ವ್ಯವಸ್ಥೆ ಮಾಡಿದಂತೆಯೇ, ಮತ್ತು ನಾನು ಆ ಪೈಯನ್ನು ಅವನಿಗೇ ಕೊಟ್ಟೆ. ನಿನಗೆ ತಲೆ ಕೆಟ್ಟಿದೆ. ನೀನು ಅವನನ್ನು ಕಳಿಸಿಲ್ಲ ಎಂದರೆ, ಇನ್ಯಾರು ಕಳಿಸಿದರು.

GAULTIER : If this is a joke, woman, let me tell you that it’s in very bad taste. I’ll soon see for myself if the pie is there or not. And if it isn’t, you’ll have to find a good explanation.
(He strides into the shop, followed by MARION. After a considerable pause re-enter JEAN and PIERRE. They sit, arms round each other’s shoulders, at one end of the bench.)
ಗೌಲ್ಟಿಯರ್ : ಇದನ್ನು ನೀನು ತಮಾಷೆ ಅಂದುಕೊಂಡರೆ, ಹೆಂಗಸೇ, ನಾನು ಹೇಳ್ತ ಇದ್ದೀನಿ ನಿನಗೆ, ಇದು ಒಂದು ಕೆಟ್ಟ ಅಭಿರುಚಿಯ ತಮಾಷೆ. ನಾನೆ ಇಗಲೇ ಖುದ್ದಾಗಿ ನೋಡುತ್ತೇನೆ, ಪೈ ಇದೆಯೋ ಇಲ್ಲವೋ ಎಂದು. ಹಾಗು ಅದು ಇಲ್ಲವಾದರೆ ನೀನು ಅದಕ್ಕೆ ತಕ್ಕ ಸಮಜಾಯಿಷಿಯನ್ನು ಕೊಡಬೇಕಾಗುತ್ತದೆ.
(ಅವನು ಅಂಗಡಿಯೊಳಗೆ ನುಗ್ಗುತ್ತಾನೆ, ಮರಿಯನ್ ಹಿಂಬಾಲಿಸುತ್ತಾಳೆ. ಸಾಕಷ್ಟು ವಿರಾಮದ ನಂತರ ಜೀನ್ ಮತ್ತು ಪಿಯರ್ ಮರು ಪ್ರವೇಶಿಸುತ್ತಾರೆ. ಅವರುಗಳು ಬೆಂಚಿನ ಒಂದು ತುದಿಯಲ್ಲಿ, ಒಬ್ಬರು ಮತ್ತೊಬ್ಬರ ಹೆಗಲ ಮೇಲೆ ಕೈ ಹಾಕಿ ಕುಳಿತುಕೊಳ್ಳುತ್ತಾರೆ.)

PIERRE : Jean, my stomach being, as it were, now composed, my brain is beginning to function. I have an idea.
ಪಿಯರ್ : ಜೀನ್, ನನ್ನ ಹೊಟ್ಟೆ ಈಗ ಸಮಾಧಾನವಾದಂತೆ, ನನ್ನ ಮಿದುಳು ಕೆಲಸ ಮಾಡಲು ಶುರುಮಾಡುತ್ತಿದೆ. ನನಗೆ ಒಂದು ಯೋಜನೆ ಹೊಳೆದಿದೆ.

JEAN : Slowly, my friend, slowly. My doctor warned me that after a meal the brain must not be overworked. It is in the interest of digestion.
ಜೀನ್ : ನಿಧಾನಿಸು, ನನ್ನ ಗೆಳೆಯ, ನಿಧಾನಿಸು. ಊಟ ಆದ ಕೂಡಲೇ ಮೆದುಳಿಗೆ ಜಾಸ್ತಿ ಕೆಲಸ ಕೊಡಬಾರದು. ಅದು ಜೀರ್ಣಕ್ರಿಯೆಗೆ ಸಂಬಂದಿಸಿದ ವಿಷಯ.

PIERRE : Agreed. We will approach the problem cautiously. In the matter of the pie which we have just eaten, you will agree that it was a masterpiece.
ಪಿಯರ್ : ಒಪ್ಪುತೀನಿ. ನಾವು ಸಮಸ್ಯೆಯ ಬಗ್ಗೆ ಎಚ್ಚರಿಕೆಯಿಂದ ವಿಚಾರ ಮಾಡಬೇಕು. ನಾವು ಈಗ ತಾನೇ ತಿಂದ ಪೈನ ವಿಷಯವಾಗಿ ಹೇಳುವುದಾದರೆ ಅದು ಅದ್ಭುತವಾದ ಸೃಷ್ಟಿ ಎಂದು ನೀನು ಕೂಡ ಒಪ್ಪುತ್ತೀಯ.

JEAN : It was the work of an artist.
ಜೀನ್ : ಅದೊಂದು ಕಲಾಕಾರರ ಕೆಲಸವಾಗಿತ್ತು.

PIERRE : The composition was faultless – the flavour, just so. And then the crust. Was ever such a crust? (Picking his teeth with his fingers.) The memory of it still abides with me.
ಪಿಯರ್ : ಅದರ ಸಂಯೋಜನೆಯು ದೋಷರಹಿತವಾಗಿತ್ತು – ಆ ಪರಿಮಳ ,ಒಂದೆಡೆ. ಮತ್ತು ಗರಿಗರಿಯಾದ ಹೊರಪದರ. ಅಂತಹ ಗರಿಯಾದ ಹೊರಪದರ ಎಂದಾದರೂ ಇದ್ದಿತ್ತೆ? (ಬೆರಳಿಂದ ಹಲ್ಲುಗಳನ್ನು ಹೆಕ್ಕುತ್ತಾ.) ಅದರ ನೆನಪು ಇನ್ನು ನನ್ನೊಳಗೆ ಉಳಿದುಬಿಟ್ಟಿದೆ.

JEAN : And what eels! The tenderness, the plasticity! I wonder where he catches them.
ಜೀನ್ : ಮತ್ತು ಏನು ಈಲ್ ಮೀನುಗಳು! ಆ ಮೃದು, ಕರಗುವಂತಹದ್ದು! ಅವನು ಅವುಗಳನ್ನು ಎಲ್ಲಿಂದ ಹಿಡಿಯುತ್ತಾನೆ ಅನ್ನುವುದೇ ನನಗೆ ಆಶ್ಚರ್ಯ.

PIERRE : He does not catch them. They give themselves up. No eel could resist the blandishments of such an artist as M. Gaultier. To my mind the pie had but one fault.
ಪಿಯರ್ : ಅವನು ಅವುಗಳನ್ನು ಹಿಡಿಯುವುದಿಲ್ಲ. ಅವು ತಮ್ಮನ್ನು ತಾವೇ ಒಪ್ಪಿಸಿಕೊಳ್ಳುತ್ತವೆ. ಶ್ರೀಮಾನ್.ಗೌಲ್ಟಿಯರ್ ನಂತಹ ಕಲಾವಿದನ ಚಾಕ್ಯತೆಗೆ ಯಾವ ಈಲ್ ಮೀನು ಕೂಡ ತಡೆದುಕೊಳ್ಳಲಾರದು. ನನ್ನ ಮನಸ್ಸಿಗೆ ಅನಿಸಿದಂತೆ ಪೈಗೆ ಒಂದೇ ಒಂದು ದೋಷವಿತ್ತು.

JEAN : And that?
ಜೀನ್ : ಮತ್ತೆ ಅದು?

PIERRE : Its singularity. There should have been two. Listen, my Jean. When I was waiting at M. Gaultier’s door, I saw a tart. It was on a shelf just outside the kitchen. I think it was a cranberry tart. I was allowed one glimpse of it and the vision faded. But it was a tart to dream about: succulent, spiced, sugared, white as a maid’s bosom: the very tart to sit affably on a foundation of eel pie. I see no reason
why the tart should not be ours. Would not you like to go and fetch it?
ಪಿಯರ್ : ಅದು ಒಂದೇ ಇತ್ತು. ಅವು ಎರಡು ಇರಬೇಕಿತ್ತು. ಕೇಳು, ನನ್ನ ಜೀನ್. ನಾನು ಶ್ರೀಮಾನ್.ಗೌಲ್ಟಿಯರ್ ರವರ ಬಾಗಿಲಲ್ಲಿ ಕಾಯುತ್ತಿರುವಾಗ, ನಾನು ಒಂದು ಟಾರ್ಟ್ ನ್ನು ನೋಡಿದೆ. ಅದು ಅಡುಗೆಮನೆಯ ಹೊರಭಾಗದ ಒಂದು ಶೆಲ್ಫಿನ ಮೇಲೆ ಇತ್ತು. ಅದು ಕ್ರ್ಯಾನ್ಬೆರಿ ಟಾರ್ಟ್ ಇರಬಹುದೆಂದು ನನಗನ್ನಿಸುತ್ತೆ. ನನಗೆ ಒಮ್ಮೆಯಷ್ಟೇ ಅದನ್ನು ನೋಡಲು ಸಾಧ್ಯವಾಯಿತು ಮತ್ತು ದೃಷ್ಟಿ ಮಂದವಾಗಿಬಿಟ್ಟಿತು. ಆದರೆ ಅದು ಕನಸು ಕಾಣುವಂತಹ ಒಂದು ಟಾರ್ಟ್: ರಸವತ್ತಾದ, ಮಸಾಲೆಯುಕ್ತ, ಸಕ್ಕರೆ ಹಾಕಿದ, ಹುಡುಗಿಯ ಎದೆಭಾಗದಷ್ಟು ಬೆಳ್ಳಗೆ: ಈಲ್ ಪೈನ ಅಡಿಪಾಯದ ಮೇಲೆ ಪ್ರೀತಿಯಿಂದ ಇರಿಸಬಹುದಾದ ಟಾರ್ಟ್. ಆ ಟಾರ್ಟ್ ನಮ್ಮದಾಗಿಸಿಕೊಳ್ಳದೆ ಬಿಡಲು ನನಗೆ ಯಾವ ಕಾರಣವೂ ಕಾಣಿಸುತ್ತಿಲ್ಲ. ನೀನು ಹೋಗಿ ಅದನ್ನು ತರಲು ಇಷ್ಟಪಡುವುದಿಲ್ಲವೇ?

JEAN : But how?
ಜೀನ್ : ಆದರೆ ಹೇಗೆ?

PIERRE : You know the formula, “M. Gaultier sends me”, etc., and the hand of Madame Gaultier is both small and white. Believe me, you will enjoy the experience.
ಪಿಯರ್ : ನಿನಗೆ ಸೂತ್ರ ತಿಳಿದೇ ಇದೆಯಲ್ಲ , “ಶ್ರೀಮಾನ್. ಗೌಲ್ಟಿಯರ್ ನನ್ನನ್ನು ಕಳುಹಿಸಿದ್ದಾರೆ ”, ಇತ್ಯಾದಿ, ಮತ್ತು ಮೇಡಮ್ ಗೌಲ್ಟಿಯರ್ ಅವರ ಕೈ ಸಣ್ಣಗೂ ಮತ್ತು ಬೆಳ್ಳಗೂ ಇದೆ. ನನ್ನನ್ನು ನಂಬು, ನೀನು ಆ ಅನುಭವವನ್ನು ಆನಂದಿಸುವೆ.

JEAN : (getting up from the bench): I’ll do it. But she mustn’t see you.
ಜೀನ್ : (ಬೆಂಚಿನ ಮೇಲಿಂದ ಎದ್ದೇಳುತ್ತಾ ): ನಾನು ಇದನ್ನು ಮಾಡುತ್ತೇನೆ. ಆದರೆ ಆಕೆ ನಿನ್ನನು ನೋಡಕೂಡದು.

PIERRE : All right. I’ll be round the corner. To it, then, and goodluck. (Exit PIERRE,L.)
ಪಿಯರ್ : ಸರಿ ಸರಿ. ನಾನು ಆ ತಿರುವಿನ ಬಳಿಯಲ್ಲಿ ಇರುವೆ. ಹಾಗು ಈ ಕಾರ್ಯಕ್ಕೆ ಒಳ್ಳೆಯದಾಗಲಿ ( ಪಿಯರ್ ಎಡಬದಿಯಿಂದ ನಿರ್ಗಮಿಸುತ್ತಾನೆ)

JEAN (KNOCKING AT THE DOOR) : Hullo, there!
(MARION comes to the door)
ಜೀನ್ : ಹಲೋ, ಯಾರಿದ್ದೀರಾ ಅಲ್ಲಿ!
(ಮರಿಯನ್ ಬಾಗಿಲಿಗೆ ಬರುತ್ತಾಳೆ )

MARION: And what do you want ?
ಮರಿಯನ್ : ಮತ್ತೆ ನಿನಗೆ ಏನು ಬೇಕಾಗಿದೆ?

JEAN : M. GAULTIER has sent me, lady. He finds that the eel pie is not large enough to go round. He wants the cranberry tart which he says is on the kitchen shelf. And, oh, yes, I am to kiss your hand. Then you’ll know it’s me.
ಜೀನ್ : ಶ್ರೀಮಾನ್. ಗೌಲ್ಟಿಯರ್ ನನ್ನನ್ನು ಕಳುಹಿಸಿದ್ದಾರೆ, ಮೇಡಂ. ಈಲ್ ಪೈ ಎಲ್ಲರಿಗೂ ಸಾಕಾಗುವಷ್ಟು ದೊಡ್ಡದಿರಲಿಲ್ಲ ಅಂದು ಅವರಿಗೆ ಅನಿಸಿತು. ಅವರು ಅಡುಗೆಮನೆಯ ಶೆಲ್ಫಿನಲ್ಲಿರುವ ಕ್ರ್ಯಾನ್ಬೆರಿ ಟಾರ್ಟ್ ಬೇಕೆಂದು ಹೇಳಿದರು. ಒಹ್, ಮತ್ತು, ಹೂಂ, ನಾನು ನಿಮ್ಮ ಕೈಗೆ ಮುತ್ತಿಡಬೇಕಿದೆ. ಆವಾಗಲೇ ನಿಮಗೆ ನನ್ನ ಗುರುತು ಸಿಗುವುದು.

MARION: (giving away nothing by voice or expression): He wants the cranberry tart, does he? Very well, if you’ll wait there I will get it. (Goes back into the shop.)
ಮರಿಯನ್ : ( ಮಾತಿನಲ್ಲೂ ಅಥವಾ ಭಾವನೆಯಲ್ಲೂ ಏನನ್ನೂ ತೋರೊಗೊಡದೆ): ಅವರಿಗೆ ಕ್ರ್ಯಾನ್ಬೆರಿ ಟಾರ್ಟ್ ಬೇಕಾಗಿದೆ, ಅಲ್ಲವೇ? ಬಹಳ ಒಳ್ಳೆಯದು, ನೀನು ಇಲ್ಲೇ ಕಾಯುತ್ತಿದ್ದಾರೆ ನಾನು ಹೋಗಿ ತರುವೆನು. ( ಅಂಗಡಿಯ ಒಳಗೆ ಹೋಗುತ್ತಾಳೆ)

JEAN : If life was always as easy as this! And to think that only an hour ago I was in danger of starving to death. Well, for what we are about to receive….
(Before he can finish the sentence M. GAULTIER runs out from the shop and begins to cudgel him)
ಜೀನ್ : ಜೀವನವು ಯಾವಾಗಲೂ ಹೀಗೆಯೇ ಸುಲಭವಾಗಿದ್ದರೆ! ಮತ್ತು ಕೇವಲ ಒಂದು ಗಂಟೆಯ ಹಿಂದೆ ನಾನು ಹಸಿವಿನಿಂದ ಸಾವನ್ನಪ್ಪುವ ಅಪಾಯದಲ್ಲಿದ್ದೆ ಎಂದು ಯೋಚಿಸಿದರೆ. ಇರಲಿ, ನಾವು ಪಡೆದುಕೊಳ್ಳಲು ಹೊರಟಿರುವ ….
(ಅವನು ವಾಕ್ಯವನ್ನು ಮುಗಿಸುವ ಮೊದಲು ಶ್ರೀ. ಗೌಲ್ಟಿಯರ್ ಅಂಗಡಿಯಿಂದ ಓಡಿಹೋಗಿ ಅವನ ಮೇಲೆ ದಾಳಿ ಮಾಡುಲು ಶುರುವಿಡುತ್ತಾನೆ.)

GAULTIER: Thief, dog, cut-purse, reptile, rapscallion, slubberdegullion! What have you done with my pie?
ಗೌಲ್ಟಿಯರ್ : ಕಳ್ಳ, ನಾಯಿ, ಗಂಟುಗಳ್ಳ, ಸರೀಸೃಪ, ದುಷ್ಟ, ಕೊಳಕ! ನನ್ನ ಪೈಯನ್ನು ಏನು ಮಾಡಿದೆ ನೀನು?

JEAN : Stop beating me! Stop beating me, and I’ll tell you.
ಜೀನ್ : ನನ್ನನ್ನು ಹೊಡೆಯುವುದನ್ನು ನಿಲ್ಲಿಸಿ! ನನ್ನನ್ನು ಹೊಡೆಯುವುದನ್ನು ನಿಲ್ಲಿಸಿ, ಮತ್ತೆ ನಾನು ನಿಮಗೆ ಹೇಳುತ್ತೇನೆ.

GAULTIER : (Still beating him): No lies, now! Where is it? What have you done with it?
ಗೌಲ್ಟಿಯರ್ : (ಇನ್ನೂ ಅವನನ್ನು ಹೊಡೆಯುತ್ತಲೇ): ಸುಳ್ಳು ಹೇಳಕೂಡದು, ಈಗ! ಅದು ಎಲ್ಲಿದೆ? ನೀನು ಅದನ್ನು ಏನು ಮಾಡಿದೆ?

JEAN : I can’t tell you till you stop beating me.
ಜೀನ್ : ನೀವು ನನ್ನನ್ನು ಹೊಡೆಯುವುದನ್ನು ನಿಲ್ಲಿಸುವವರೆಗೂ ನಾನು ನಿಮಗೆ ಹೇಳಲು ಆಗುವುದಿಲ್ಲ.

GAULTIER : (Dropping the cudgel) Well?
ಗೌಲ್ಟಿಯರ್ : (ದಾಳಿಯನ್ನು ನಿಲ್ಲಿಸಿ) ಸರೀ?

JEAN : It was no fault of mine, sir. It was my friend. About ten minutes ago, when you were talking to your wife, he overheard you say that you were sending someone back for the pie. And so he came and he took the pie. He did it with the best intention in the world. If he’d known there was going to be all this fuss about it he would never have done it.
ಜೀನ್ : ಇದು ನನ್ನ ತಪ್ಪಲ್ಲ, ಸರ್. ಅದು ನನ್ನ ಸ್ನೇಹಿತ. ಸುಮಾರು ಹತ್ತು ನಿಮಿಷಗಳ ಹಿಂದೆ, ನೀವು ನಿಮ್ಮ ಹೆಂಡತಿಯೊಂದಿಗೆ ಮಾತನಾಡುವಾಗ, ನೀವು ಪೈಗಾಗಿ ಯಾರನ್ನಾದರೂ ವಾಪಸ್ ಕಳುಹಿಸುತ್ತಿದ್ದೀರಿ ಎಂಬುದನ್ನು ಅವನು ಕೇಳಿಸಿಕೊಂಡ. ಆದ್ದರಿಂದ ಅವನು ಬಂದು ಪೈಯನ್ನು ತೆಗೆದುಕೊಂಡು ಹೋದನು. ಅವರು ಅದನ್ನು ವಿಶ್ವದ ಅತ್ಯುತ್ತಮ ಉದ್ದೇಶದಿಂದ ಮಾಡಿದರು. ಇದರ ಬಗ್ಗೆ ಈ ಎಲ್ಲಾ ಗಡಿಬಿಡಿಗಳು ಉಂಟಾಗುತ್ತವೆ ಎಂದು ಅವನಿಗೆ ತಿಳಿದಿದ್ದರೆ, ಅವನು ಹಾಗೆ ಎಂದಿಗೂ ಮಾಡುತ್ತಿರಲಿಲ್ಲ.

GAULTIER : And where is he now?
ಗೌಲ್ಟಿಯರ್ : ಮತ್ತು ಈಗ ಅವನು ಎಲ್ಲಿದ್ದಾನೆ?

JEAN : Not far away. I’ll go and get him.
ಜೀನ್ : ತುಂಬಾ ದೂರವೇನಲ್ಲ. ನಾನು ಹೋಗಿ ಅವನನ್ನು ಕರೆದುಕೊಂಡು ಬರುತ್ತೇನೆ.

GAULTIER : You’d better. And see here. If you’re not back with the pie, I’ll have you both hanged for thieving. I’ll give you five minutes. Not a minute more. (GAULTIER goes back into the shop. JEAN stands downstage, rubbing his bruises. Presently enter PIERRE, L.)
ಗೌಲ್ಟಿಯರ್ : ನೀನು ಹಾಗೆ ಮಾಡಿದರೆ ನಿನಗೆ ಒಳ್ಳೆಯದು.. ಮತ್ತು ಇಲ್ಲಿ ನೋಡು. ನೀನು ಪೈನ ಜೊತೆ ಹಿಂತಿರುಗದಿದ್ದರೆ, ಕಳ್ಳತನ ಮಾಡಿದಕ್ಕಾಗಿ ನಾನು ನಿಮ್ಮಿಬ್ಬರನ್ನೂ ಗಲ್ಲಿಗೇರಿಸುತ್ತೇನೆ. ನಾನು ನಿಮಗೆ ಐದು ನಿಮಿಷಗಳನ್ನು ನೀಡುತ್ತೇನೆ. ಒಂದು ನಿಮಿಷವೂ ಹೆಚ್ಚಿಗೆ ಇಲ್ಲ. (ಗೌಲ್ಟಿಯರ್ ಮತ್ತೆ ಅಂಗಡಿಗೆ ಹೋಗುತ್ತಾನೆ. ಜೀನ್ ಕೆಳಗಡೆ ನಿಂತು, ಅವನ ಏಟುಗಳಿಂದ ಎಡಿಎ ಬಾವುಗಳನ್ನು ಸವರಿಕೊಳ್ಳುತ್ತಾನೆ. ಪ್ರಸ್ತುತ ಪಿಯರ್ ಎಡಬದಿಯಲ್ಲಿ ಕಾಣಿಸಿಕೊಳ್ಳುತ್ತಾನೆ.)

PIERRE : Any luck?
ಪಿಯರ್ : ಏನಾದರು ಅದೃಷ್ಟ ಖುಲಾಯಿಸಿತೇ?

JEAN : Not at all. She says she can’t give the tart to just anyone. It must be the same messenger who came for the pie, or none at all. I kissed her hand till it was all sticky, but she wouldn’t budge an inch.
ಜೀನ್ : ಎಂತದೂ ಇಲ್ಲ. ಅವಳು ಹಾಗೆಯೇ ಯಾರು ಯಾರಿಗೂ ಟಾರ್ಟ್ ನೀಡಲು ಸಾಧ್ಯವಿಲ್ಲ ಅಂತ ಹೇಳಿದಳು. ಪೈಗಾಗಿ ಬಂದ ಅದೇ ಸಂದೇಶವಾಹಕ ಆಗಿರಬೇಕು, ಇಲ್ಲಾಂದರೆ ಬೇರೆ ಯಾರಿಗೂ ಇಲ್ಲ ಎಂದಳು. ನಾನು ಅವಳ ಕೈಗೆ ಮುತ್ತಿಟ್ಟೆ, ಅದು ಎಲ್ಲ ಅಂಟಂಟು ಆಗಿತ್ತು, ಆದರೆ ಅವಳು ಒಂದು ಸ್ವಲ್ಪವೂ ಒಪ್ಪಲಿಲ್ಲ.

PIERRE : Well, that’s easy. I must go myself. You get out of sight. I’ll soon show you how these things are managed.
(Exit JEAN, R., PIERRE knocks at the door. GAULTIER opens it.)
ಪಿಯರ್ :ಇರಲಿ, ಅದು ಸುಲಭ. ನಾನೇ ಹೋಗಬೇಕು. ನೀವು ಕಾಣಿಸಿಕೊಳ್ಳಬೇಡ. ಈ ವಿಷಯಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ನಾನು ಶೀಘ್ರದಲ್ಲೇ ನಿನಗೆ ತೋರಿಸುತ್ತೇನೆ.
(ಜೀನ್ ಬಲಬದಿಯಿಂದ ನಿರ್ಗಮಿಸುತ್ತಾನೆ, ಪಿಯರ್ ಬಾಗಿಲನ್ನು ಬಡಿಯುತ್ತಾನೆ. ಗೌಲ್ಟಿಯರ್ ಅದನ್ನು ತೆರೆಯುತ್ತಾನೆ..)

GAULTIER : (seizing him by the collar): Are you the dog who took away my pie? (Shaking him.) Answer. What have you done with it? No lies, or I’ll have the law on you!
ಗೌಲ್ಟಿಯರ್ : (ಅವನನ್ನು ಕಾಲರ್‌ನಿಂದ ಹಿಡಿದುಕೊಂಡು): ನೀನಾ ನನ್ನ ಪೈ ತೆಗೆದುಕೊಂಡು ಹೋದ ನಾಯಿ? (ಅವನನ್ನು ಅಲುಗಾಡಿಸುತ್ತ.)ಉತ್ತರ ಕೊಡು . ನೀನು ಅದನ್ನು ಏನು ಮಾಡಿದೆ? ಸುಳ್ಳಾಡಬೇಡ, ಇಲ್ಲಾಂದರೆ ನಾನು ನಿನ್ನ ಮೇಲೆ ಕಾನೂನುಕ್ರಮ ಜರುಗಿಸುತ್ತೇನೆ!

PIERRE : Leave go of me and I’ll explain. (GAULTIER releases him.) You see, sir, it was this way. I overheard you telling your wife that you wanted a messenger. So I presented myself to madame. She gave me the pie and I carried it straight to the Mayor’s house.
ಪಿಯರ್ : ನನ್ನನ್ನು ಬಿಟ್ಟುಬಿಡಿ, ನಾನು ವಿವರಿಸುತ್ತೇನೆ. (ಗೌಲ್ಟಿಯರ್ ಅವನನ್ನು ಬಿಡುಗಡೆ ಮಾಡುತ್ತಾನೆ.) ನೋಡಿ ಸರ್, ವಿಷಯ ಹೀಗೆ ಇದೆ. ನಿಮಗೆ ಸಂದೇಶವಾಹಕನು ಬೇಕು ಎಂದು ನೀವು ನಿಮ್ಮ ಹೆಂಡತಿಗೆ ಹೇಳುವುದನ್ನು ನಾನುಕೇಳಿಸಿಕೊಂಡೆ. ಹಾಗಾಗಿ ನಾನು ಶ್ರೀಮತಿಯವರ ಬಳಿ ಬಂದೆ. ಅವರು ನನಗೆ ಪೈ ಕೊಟ್ಟರು ಮತ್ತು ನಾನು ಅದನ್ನು ನೇರವಾಗಿ ಮೇಯರ್ ಮನೆಗೆ ಕೊಂಡೊಯ್ದೆ.

GAULTIER : I see. And I suppose he was delighted to see you?
ಗೌಲ್ಟಿಯರ್ : ಒಹ್ ಹಾಗಾ. ಮತ್ತು ಅವರು ನಿನ್ನನ್ನು ನೋಡಿ ಬಹಳ ಸಂತೋಷಪಟ್ಟಿರಬೇಕಲ್ಲವೇ?

PIERRE : He couldn’t find words enough to thank me.
ಪಿಯರ್ : ನನಗೆ ಹೇಗೆ ಧನ್ಯವಾದ ಹೇಳಿವುದೆಂದೇ ಅವರಿಗೆ ಹೊಳೆಯಲಿಲ್ಲ.

GAULTIER : You are a liar! The Mayor is out.
ಗೌಲ್ಟಿಯರ್ : ನೀನು ಒಬ್ಬ ಸುಳ್ಳುಗಾರ! ಮೇಯರ್ ಹೊರಗೆ ಹೋಗಿದ್ದಾರೆ.

PIERRE : Ah, sir. That’s where you’re wrong. He was out; but he’s home again. He returned just after you left. He was most grateful for the pie, and he’s expecting your honour for dinner. He said he hoped you wouldn’t keep him waiting.
ಪಿಯರ್ : ಆಹ್, ಸರ್. ಅಲ್ಲಿಯೇ ನೀವು ತಪ್ಪು ತಿಳಿದಿರುವುದು. ಅವರು ಹೊರಗೆ ಹೋಗಿದ್ದರು; ಆದರೆ ಮರಳಿ ಮನೆಗೆ ಬಂದಿದ್ದಾನೆ. ನೀವು ಹೋದ ಸ್ವಲ್ಪ ಸಮಯದಲ್ಲೆ ಅವನು ಹಿಂತಿರುಗಿದನು. ಅವರು ಪೈಗೆ ಹೆಚ್ಚು ಕೃತಜ್ಞರಾಗಿದ್ದಾರೆ, ಮತ್ತು ಅವರು ಭೋಜನಕ್ಕೆ ನಿಮ್ಮ ಆಗಮನವನ್ನು ನಿರೀಕ್ಷಿಸುತ್ತಿದ್ದಾರೆ. ನೀವು ಅವರನ್ನು ಕಾಯಿಸುವುದಿಲ್ಲ ಎಂದೇ ಅವರು ಭಾವಿಸಿದ್ದಾರೆ ಎಂದು ಅವರು ಹೇಳಿದರು.

GAULTIER : Well, well! So that was it. And I thought he’d forgotten all about it. See here now. Run back to his Worship and say I shall be with him in five minutes. I’ll give something for your trouble. Hurry, or he’ll think I’m not coming.
ಗೌಲ್ಟಿಯರ್ : ಸರಿ,ಸರಿ! ವಿಷಯ ಹೀಗೆ ಆಗಿದೆ. ಮತ್ತು ನಾನು ಅಂದುಕೊಂಡೆ ಅವರು ಇದರ ಬಗ್ಗೆ ಮರೆತುಬಿಟ್ಟಿದಾರೆ ಅಂತ. ಇಲ್ಲಿ ನೋಡು ಈಗ. ಅವರ ಸನ್ನಿಧಿಗೆ ಬೇಗನೆ ಹಿಂತಿರುಗು ಮತ್ತು ಐದು ನಿಮಿಷಗಳಲ್ಲಿ ನಾನು ಅವರಲ್ಲಿಗೆ ಬರುವೆ ಎಂದು ಹೇಳು. ನಿನ್ನ ಕೆಲಸಕ್ಕೆ ನಿನಗೆ ನಾನು ಏನಾದರು ನೀಡುವೆ. ತ್ವರೆ ಮಾಡು , ಇಲ್ಲವಾದರೆ ನಾನು ಬರುತ್ತಿಲ್ಲ ಎಂದು ಅವರು ಭಾವಿಸುತ್ತಾರೆ.

PIERRE : Very good, sir…. and the tart?
ಪಿಯರ್ : ಬಹಳ ಒಳ್ಳೆಯದು ಸರ್,… ಮತ್ತೆ ಆ ಟಾರ್ಟ್?

GAULTIER : Eh? Oh, yes. The tart. I’ll get it. (He goes in and returns with the tart.) There you are. Carry it carefully. Tell the Mayor I shan’t be many minutes. You can wait for me at his gate.
(GAULTIER goes back into the shop calling “MARION!” Presently enter Jean,L. He sees Pierre holding aloft the tart.)
ಗೌಲ್ಟಿಯರ್ : ಅಹ್? ಹೌದು ಓಹ್. ಟಾರ್ಟ್. ನಾನು ಅದನ್ನುತರುವೆ. (ಅವನು ಒಳಗೆ ಹೋಗಿ ಟಾರ್ಟ್ ಜೊತೆ ಹಿಂದಿರುಗುತ್ತಾನೆ.) ಅಲ್ಲಿದ್ದಿಯ ನೀನು. ಇದನ್ನು ಎಚ್ಚರಿಕೆಯಿಂದ ಒಯ್ಯಿರಿ. ಮೇಯರ್‌ಗೆ ಹೇಳು ನಾನು ಬಹಳ ತಡವೇನು ಮಾಡುವುದಿಲ್ಲ ಎಂದು. ನೀನು ಅವನ ಗೇಟ್‌ನಲ್ಲಿ ನನಗಾಗಿ ಕಾಯಬಹುದು.
(ಗೌಲ್ಟಿಯರ್ “ಮರಿಯನ್!” ಎಂದು ಕರೆಯುತ್ತ ಅಂಗಡಿಗೆ ಹಿಂತಿರುಗುತ್ತಾನೆ. ಇತ್ತ ಜೀನ್, ಬಲಬದಿಯಿಂದ ಪ್ರವೇಶಿಸುತ್ತಾನೆ. ಪಿಯರ್ ಟಾರ್ಟ್ ನ್ನು ಹಿಡಿದಿರುವುದನ್ನು ಅವನು ನೋಡುತ್ತಾನೆ.)


JEAN : Criminy! But you’ve got it!
ಜೀನ್ : ಭಲೇ ಚತುರ! ನೀನು ಅದನ್ನು ಪಡೆದುಕೊಂಡುಬಿಟ್ಟೆ!

PIERRE : (presenting his disengaged hand to be kissed) : Sir, M.Gaultier presents you with this cranberry tart and bids you kiss my hand. (Jean advances slowly and makes a show of taking Pierre’s hand as if to kiss it. But instead, he snatches away the tart and runs out, closely pursued by PIERRE.)
ಪಿಯರ್ : (ತನ್ನ ಖಾಲಿಯಿರುವ ಕೈಯನ್ನು ಮುತ್ತಿಡಲು ಅನುವಾಗುವಂತೆ ಮುಂದಿಡುತ್ತಾ ): ಸ್ವಾಮಿ, ಶ್ರೀಮಾನ್.ಗೌಲ್ಟಿಯರ್ ಅವರು ನಿಮ್ಮ ಮುಂದೆ ಈ ಕ್ರ್ಯಾನ್ಬೆರಿ ಟಾರ್ಟ್ ಅನ್ನು ಪ್ರಸ್ತುತಪಡಿಸುತ್ತಿದ್ದಾರೆ ಮತ್ತು ನೀವು ಈ ಕೈಯನ್ನು ಚುಂಬಿಸಬೇಕೆಂದು ಬಯಸುತ್ತಾರೆ. ( ಜೀನ್ ಸಾವಕಾಶವಾಗಿ ಮುಂದೆ ಬರುತ್ತಾ ಪಿಯರ್ ನ ಕೈಯನ್ನು ಚುಂಬಿಸಲು ಬರುತ್ತಿರುವವನಂತೆ ಮಾಡುತ್ತಾನೆ. ಆದರೆ ಅವನು ಟಾರ್ಟ್ ಅನ್ನು ಕಿತ್ತುಕೊಂಡ ಹೊರಗೆ ಓದುತ್ತಾನೆ, ಪಿಯರ್ ಅವನನ್ನು ಹಿಂಬಾಲಿಸುತ್ತಾನೆ.)

Spread the Knowledge

You may also like...

Leave a Reply

Your email address will not be published. Required fields are marked *