ಭಾರತ ಅಥವಾ ಹಿಂದೂಸ್ಥಾನ
ಭಾರತದ ಇತಿಹಾಸವು ಆಧುನಿಕ ಮಾನವನ (ಹೋಮೋ ಸೇಪಿಯನ್ಸ್) ಪುರಾತತ್ವ ಪಳೆಯುಳಿಕೆಗಳ ಕಾಲದಿಂದ, ಎಂದರೆ ಸುಮಾರು ೩೪೦೦೦ ವರ್ಷಗಳಿಂದ, ಆರಂಭವಾಗುತ್ತದೆ. ಭಾರತದ ಕಂಚಿನ ಯುಗದ ಸಂಸ್ಕೃತಿಗಳು ಪ್ರಾಚೀನ ಮಧ್ಯ ಏಷ್ಯಾದ ಸಂಸ್ಕೃತಿಗಳಿಗೆ ಸಮಕಾಲೀನವಾದವು. ಭಾರತದ ಇತಿಹಾಸವೆನ್ನುವುದು ಸಂಪೂರ್ಣ ಭಾರತ ಉಪಖಂಡದ, ಎಂದರೆ ಇಂದಿನ ಭಾರತ, ಪಾಕಿಸ್ತಾನ, ಬಾಂಗ್ಲದೇಶ, ಶ್ರೀಲಂಕಾ, ನೇಪಾಳ, ಹಾಗೂ ಭೂತಾನ ದೇಶಗಳ ಇತಿಹಾಸಗಳನ್ನು ಒಳಗೊಂಡಿದೆ. (wikipedia )