ಮೊಬೈಲ್ ಫೋನ್ / ಸ್ಮಾರ್ಟ್ ಫೋನಿನ್ನಲ್ಲಿ ಇರಲೇಬೇಕಾದ ಅಪ್ಲಿಕೇಶನ್ನುಗಳು (mobile apps)

ನಿಮ್ಮ ಆಂಡ್ರಾಯ್ಡ್ ಮೊಬೈಲಿನ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕೆಂದರೆ ಮಟ್ಟಮೊದಲು ನೀವು ಬಳಸಬೇಕಾದ ಆಪ್ ‘GOOGLE’

ಗೂಗಲ್ ಅಕೌಂಟ್ ನಿಮಗೆ ಒಂದು ಹೆಬಾಗಿಲಿನಂತೆ. ಅದರ ಮೂಲಕ ನೀವು ಮೊಬೈಲಿನಲ್ಲಿ ಈಗಾಗಲೇ ಮಾಡಿರುವ ಸೆಟ್ಟಿಂಗ್ಸ್ , ಅದರಲ್ಲಿ ಇರುವ ವಿಷಯಗಳನ್ನು ಸುರಕ್ಷಿತವಾಗಿ ಸೇವ್ ಮಾಡಿ ಇಡಬಹುದು . ಉದಾಹರೆಣೆಗೆ ನಿಮ್ಮ ಮೊಬೈಲಿನಲ್ಲಿ ಇರುವ ಕಾಂಟ್ಯಾಕ್ಟ್ಸ್, ಚಿತ್ರಗಳು ,ಡಾಕ್ಯುಮೆಂಟಗಳು ಮುಂತಾದುವು .

ನಿಮ್ಮ ಮೊಬೈಲ್ ಬದಲಾಯಿಸಿದಗಲು ಸಹ, ಗೂಗಲ್ಲಿನ ಅಕೌಂಟಿಗೆ ಲಾಗಿನ್ ಆದ ಕೂಡಲೇ ನಿಮ್ಮ ಹಳೆಯ ಮೊಬೈಲಿನ ಸೆಟಿಂಗ್ಸ್ ಹಾಗು ಡೇಟಾ ಸುಲಭವಾಗಿ ಮರು ಸ್ಥಾಪಿತವಾಗಿ ಬಳಕೆಗೆ ಸಿದ್ಧವಾಗಿರುವುದು .

ಯಾವುದೇ ಹೊಸ ಆಂಡ್ರಾಯ್ಡ್ ಮೊಬೈಲನ್ನು ಕೊಂಡಾಗ ಅದು ನಿಮಗೆ ಗೂಗ್ಲ್ ಅಕೌಂಟನ್ನು ಕ್ರಿಯೇಟ್/ಓಪನ್ ಮಾಡಲು ಅವಕಾಶ ಮಾಡಿಕೊಡುವುದು .ಅನಂತರವೂ ನಿಮಗೆ ಬೇಕೆಂದಾಗಹ್ ಹೊಸ ಗೂಗಲ್ ಅಕೌಂಟ್ ಓಪನ್ ಮಾಡಬಹುದು . ಒಂದಕ್ಕಿಂತ ಹೆಚ್ಚು ಅಕೌಂಟ್ಗಳನ್ನು ರಚಿಸಲು ಸಹ ಅವಕಾಶವಿದೆ .

ಗೂಗಲ್ ಅಕೌಂಟನ್ನು ಕ್ರಿಯೇಟ್ ಮಾಡಲು ಸೆಟ್ಟಿಂಗ್ಸ್ನಲ್ಲಿ ಗೂಗಲ್ ಸೆಟ್ಟಿಂಗ್ಸ್ ಒಪ್ಶನ್ ಗೆ ಹೋಗಿ ‘add new account’ ಕ್ಲಿಕ್ ಮಾಡಿರಿ .

Google account create ಮಾಡಿ ಆಯ್ತು , ಮುಂದೆ?

ಗೂಗಲ್ ಪ್ಲೇ ಸ್ಟೋರ್ (Google Play store) ಗೂಗಲ್ ಪ್ಲೇ ಸ್ಟೋರ್ ಮೊಬೈಲ್ ಅಪ್ಪ್ಲಿಕೇಷನ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಸುಲಭ ಹಾಗು ಸುರಕ್ಷ್ಟಿತವಾದ ಸ್ಥಳ . ಈ ಆಪ್ ನಿಮ್ಮ ಮೊಬೈಲಿನಲ್ಲಿ ಮೊದಲೇ ಇನ್ಸ್ಟಾಲ್ ಆಗಿರುತ್ತದೆ . ಅದನ್ನು ಓಪನ್ ಮಾಡಿ, ನಿಮಗೆ ಬೇಕಾದ ಆಪುಗಳನ್ನು ಡೌನ್ಲೋಡ್ ಮಾಡಿಕೊಳ್ಳಿ

ಯಾವ ಆಪನ್ನು ಡೌನ್ಲೋಡ್ ಮಾಡಬೇಕು?

ಪ್ಲೇ ಸ್ಟೋರಿನಲ್ಲಿ ಸಾವಿರ ಲಕ್ಷಗಟ್ಟಲೆ ಅಪ್ಪ್ಲಿಕೇಷನ್ನುಗಳಿವೆ . ನಿಮ್ಮ ಅಗತ್ಯಗಳಿಗೆ ತಕ್ಕಂತೆ ಯಾವುದು ಬೇಕೋ ಅದನ್ನು ಡೌನ್ಲೋಡ್ ಮಾಡಿಕೊಳ್ಳಿ . ಪ್ಲೇಸ್ಟೋರಿನಲ್ಲಿ ಸರ್ಚ್ ಬಾಕ್ಸಿನಲ್ಲಿ ನಿಮಗೆ ಬೇಕಾದ ವಿಷಯದ ಕುರಿತು ಒನ್ದರೆದು ಪದಗಳನ್ನು ಟೈಪ್ ಮಾಡಿ. ಒಂದು ದೊಡ್ಡ ಪಟ್ಟಿಯೇ ನಿಮ್ಮ ಮುಂದೆ ಬರುತ್ತದೆ, ಅಲ್ಲಿ ಸಿಗುವ ಅಪುಗಳ ಪಟ್ಟಿ. ಆ ಆಪಿನ ಬಗ್ಗೆ ಡೀಟೇಲ್ಸ್, ಸ್ಕ್ರೀನ್ಶಾಟ್ಸ್ ಅಲ್ಲಿ ಕಾಣಸಿಗುತ್ತದೆ, ಓದಿರಿ. ಇಳಗಾಗಲೇ ಅದನ್ನು ಬಳಸುತ್ತಿರುವ ಜನರು ಬರದಿರುವ ರೀವಿವಸ್ ಓದಿ. ಇನ್ಸ್ಟಾಲ್ ಬಟನ್ ಕ್ಲಿಕ್ ಮಾಡಿ, ಅಷ್ಟೇ.

ಆದರೆ ನೀವು ಮನಸಿನಿಂದ ಯಾವಾಗಲೂ ವಿಧ್ಯಾರ್ಥಿಯಾಗಿದ್ದರೆ ಈ ಮುಂದಿನ ಅಪುಗಳನ್ನು ಖಂಡಿತವಾಗಿ ಬಳಸಬೇಕು . ಎಲ್ಲವನ್ನು ಅಲ್ಲವಾದರೂ ನಿಮಗೆ ಆಸಕ್ತಿ ಇರುವ ಕೆಲವನಾದರೂ ಒಮ್ಮೆ ಪರೀಕ್ಷಿ ಸಿ ನೋಡಿ .

ಇಮೇಲ್ Gmail

ಗೂಗಲ್ಲಿನ ಅಕೌಂಟ್ ಎಂದರೆ ಒಂದು gmail ಐಡಿ (ID) ಕ್ರಿಯೇಟ್ ಮಾಡುವುದು . ಆ IDಯ ಮೂಲಕ ಇನ್ನಿತರ ಗೂಗಲ್ ಸೌಲಭ್ಯಗಳನ್ನು ಬಳಸಲುಸುಲಭವಾಗುತ್ತದೆ. ಒಂದು gmail IDಯಾ ಜೊತೆಗೆ ನಮಗೆ 15 GB ಕ್ಲೌಡ್ ಸ್ಟೋರೇಜ್ ಉಚಿತವಾಗಿ ದೊರೆಯುತ್ತದೆ . ಅಂದರೆ ಮೊಬೈಲ್, ಕಂಪ್ಯೂಟರ್ ಅಥವಾ ಟ್ಯಾಬ್ ಮುಂತಾದ ಡಿವೈಸ್ ಗಳಲ್ಲಿ ನೀವು ನಿಮ್ಮಗೂಗಲ್ ಅಕೌಂಟಿನೊಂದಿಗೆ ಜೋಡಿಸಿದ ಡಾಟಾವನ್ನು ನೋಡಲು, ತಿದ್ದುಪಡಿ ಮಾಡಲು ಸಿಗುತ್ತದೆ. ಉದಾಹರೆಣೆಗೆ ನಿಮ್ಮ ಇಮೇಲ್ ಗಳು , ಫೋಟೋಗಳು , ಮ್ಯೂಸಿಕ್ ಹಾಗು ಇನ್ನಿತರ ಫೈಲುಗಳು/ಡಾಕ್ಯುಮೆಂಟುಗಳು .

ಗೂಗಲ್ ಮ್ಯಾಪ್ಸ್ (Google Maps) 

 ಗೊತ್ತಿರುವ ಹಾಗೂ ಗೊತ್ತಿಲ್ಲದ ಸ್ಥಳದಲ್ಲಿ ದಾರಿ ತಪ್ಪದೆ ಗುರಿ ತಲುಪಲು ಗೂಗಲ್ ಮ್ಯಾಪ್ಸ್ ಬಳಸಿರಿ. 

ಕಾರು, ಬಸ್ಸು,ಟ್ರೈನು ಹಾಗು ನಡೆದುಕೊಂಡು ಹೋಗಲು ಸಹ ದಾರಿ ತೋರಿಸುತ್ತೇವೆ. ಅಷ್ಟೇ ಅಲ್ಲ , ತಲುಪಲು ಬೇಕಾಗುವ ಸಮಯ, ಹಾದಿಯಲ್ಲಿನ ಟ್ರಾಫಿಕ್ , ಬಸ್ಸು ಟ್ರೈನಿನ ಟೈಮಿಂಗ್ಸ್ ಸಹ ತೋರಿಸುತ್ತದೆ. 

ಪ್ರಯಾಣದ ಹಾದಿಯಲ್ಲಿ ಸಿಗಬಹುದಾದ ಪ್ರೆಕ್ಷಣೀಯ್ಯ ಸ್ಥಳಗಳು, ಊಟ ಉಪಚಾರದ ಲಭ್ಯತೆ, ಕಾರಿಗೆ, ಬೈಕಿಗೆ ಬೇಕಾಗುವ ಪೆಟ್ರೋಲ್ ಪಂಪ್ಗಳ ಸ್ಥಳಗಳನ್ನು ಸಹ ತೋರಿಸುತ್ತದೆ. 

ನಿಮ್ಮ ಮೊಬೈಲಿನಲ್ಲಿ ಈ ಆಪ್ ಇದೆಯೆಂದರೆ ಒಬ್ಬ ಅನುಭವಿ ಗೈಡ್ ಜೊತೆಯಲ್ಲಿ ಇದ್ದಂತೆ .

ಗೂಗಲ್ ಡ್ರೈವ್ (Google Drive) 

ನಿಮ್ಮಎಲ್ಲಾ ತರಹದ ಫೈಲುಗಳನ್ನುಒಂದು ಕಡೆ ಸುರಕ್ಷಿತವಾಗಿ ಇಟ್ಟು, ಮತ್ತೆ ಬೇಕಾದಾಗ ಅದನ್ನು ಓಪನ್ ಮಾಡಿ ಎಡಿಟ್ ಮಾಡಲು, ಶೇರ್ ಹಾಗು ಪ್ರಿಂಟ್ ಮಾಡಲು ಗೂಗಲ್ ಡ್ರೈವ್ ಬಹಳ ಉಪಯೋಗಕಾರಿ.

ಅಷ್ಟೇ ಅಲ್ಲ, ನಿಮ್ಮ ಫೈಲುಗಳ್ಳನ್ನು ಬೇರೆ ಡಿವೈಸ್ ಗಳಲ್ಲಿ ಕೊಡ ಆಕ್ಸೆಸ್ ಮಾಡಬಹುದು.  ನಿಮ್ಮ ಗೂಗಲ್ ಅಕೌಂಟಿಗೆ ಲಾಗಿನ್ ಆದರೆ ಆಯಿತು, ಅಷ್ಟೇ.

ಗೂಗಲ್ ಕೀಪ್ (Google Keep)

ಇಂಟರ್ನೆಟ್ಟಿನಲ್ಲಿ ಏನಾದರು ಓದುವಾಗ, ಇಲ್ಲವೇ ಟಕ್ಕಂತ  ಏನೋ ನೆನಪಾಗಿ ಮರೆಯುವ ಮುನ್ನ ಎಲ್ಲಾದರೂ ಬರೆದು ಇಡಬೇಕು ಎಂದರೆ ಬೇಕಾಗುವ ಆಪ್ ಗೂಗಲ್ ಕೀಪ್ . 

ಕ್ಯಾಮೆರಾ ಇಂದ ಡೈರೆಕ್ಟ್ ಆಗಿ ಫೋಟೋ ಕ್ಲಿಕ್ ಮಾಡಿ ಇಡಬಹುದು,

ಏನಾದರು ಟೈಪ್ ಮಾಡಿ ಇಡಬಹುದು 

ಚೆಕ್ ಲಿಸ್ಟ್ ಮಾಡಿ ಅಲಾರಾಂ ಸೆಟ್ ಮಾಡಬಹುದು 

ವಿಷಯಗಳ ಆಧಾರದ ಮೇಲೆ ಗ್ರೂಪ್ ಮಾಡಬಹುದು 

ವೆಬ್ ಪೇಜ್ ಗಳಲ್ಲಿ ಓದುವಾಗ, ಮುಂದೆ ಬೇಕು ಎನಿಸಿವೆ ಲಿಂಕ್ ಡೈರೆಕ್ಟ್ ಆಗಿ google keep ನಲ್ಲಿ ಸೇವ್ ಮಾಡಬಹುದು. 

ಎಲ್ಲ ಗೂಗಲ್ ಸೇವೆಗಳಲ್ಲಿ ಇರುವಂತೆ ಇದನ್ನು ಸಹ ಬೇರೆ ಬೇರೆ ಡಿವೈಸ್ ಗಳಿಂದ ಆಕ್ಸೆಸ್ ಮಾಡಬಹುದು

ಗೂಗಲ್ ಮೀಟ್ (Google Meet)

ವಿಡಿಯೋ ಕಾಲ್ ಅಥವಾ ವಿಡಿಯೋ ಮೀಟಿಂಗ್ಸ್ಗಾಗಿ google meet . ಸುರಕ್ಷಿತ,ಹಾಗು ಬಳಸಲು ಸುಲಭ 

ಒಮ್ಮೆಗೆ 250 ಜನರೊಂದಿಗೆ ಮೀಟಿಂಗ್ ಕನೆಕ್ಟ್ ಮಾಡಬಹುದು

ಪ್ರೆಸೆಂಟೇಷನ್  ಮಾಡಲು ನಿಮ್ಮ ಸ್ಕ್ರೀನ್ ಶೇರ್ ಮಾಡಬಹುದು 

ಗೂಗಲ್ ID ಯ ಮೂಲಕ ಕಂಪ್ಯೂಟರ್ , ಮೊಬೈಲ್ ಹಾಗು ಟ್ಯಾಬ್ಗಳನ್ನು ಸಹ ಬಳಸಬಹುದು 

ಗೂಗಲ್ ನವರ speech -to -text ಒಪ್ಶನ್ ಬಳಸಿ ಮಾತಿನ ಮೂಲಕವೇ ಟೈಪ್ ಮಾಡಬಹುದು

ಗೂಗಲ್ ಫೋಟೋಸ್ (Google Photos) 

ನಿಮ್ಮ ಡಿವೈಸ್ ನಲ್ಲಿ ಇರುವ ಫೋಟೋಗಳು ಸುಲಭವಾಗಿ ಕಳೆದುಹೋಗಬಹುದು. ಆಕಸ್ಮಿಕವಾಗಿ ಡಿಲೀಟ್ ಆಗಬಹುದು, ಡಿವೈಸ್ ಹಾಳಾದಾಗ, ಫೋಟೋಗಳು ಸಹ ಮಿಸ್ ಆಗಬಹುದು. ಡಿವೈಸ್ ಬದಲಾಯಿಸಿದಾಗಲೂ ಕೂಡ ಫೋಟೋಗಳು ಮಿಸ್ ಆಗುವ ಸಾಧ್ಯತೆ ಇರುತ್ತದೆ. 

ಅಂತಹ ಸಮಸ್ಯೆಗಳಿಗೆ ಪರಿಹಾರ ಗೂಗಲ್ ಫೋಟೋಸ್ . 

ನಿಮ್ಮ ಮರೆಯಲಾಗದ ಸುಂದರ ಕ್ಷಣಗಳ್ಳನ್ನು ಫೋಟೋಗಳ ರೂಪದಲ್ಲೇನೋ ಸೆರೆಹಿಡಿದು ಇಟ್ಟಿದಿರಿ.ಸುರಕ್ಷಿತವಾಗಿಯೂ ಇಡಲು ಗೂಗಲ್ ಫೋಟೋಸ್ ಬಳಸಬಹುದು

ಗೂಗಲ್ ಅದನ್ನು ದಿನಾಂಕದ ಅಥವಾ  ಸಾಂಧರ್ಭಿಕವಾದ ಆಲ್ಬಮ್ಸ್ ರೂಪದಲ್ಲಿ ಆಟೋಮ್ಯಾಟಿಕ್ ಆಗಿ ಸೇವ್ ಮಾಡಿ ಇಡುತ್ತದೆ. 

ಫೋಟೋಗಳನ್ನು ಎಡಿಟ್ ಮಾಡಬಹೌದು 

 ಫೋಟೋಗಳನ್ನು, ಅಲ್ಬಮ್ಮುಗಳನ್ನು ಬೇಕಾದವರೊಂದಿಗೆ  ಲಿಂಕ್ ಮೂಲಕ ಶೇರ್ ಮಾಡಬಹುದು .

ಗೂಗಲ್ ಟ್ರಾನ್ಸ್ಲಟ್ (Google Translate – Free App for Android )

ನಿಮಗೆ ಇಂಗ್ಲಿಷ್ ಆದ್ರೂ ಹೋಗ್ತಾ ಇದ್ದಾಗ ಕೆಲಸದ ವಿಷಯಗಳು ಅರ್ಥವಾಗದೆ ಇರಬಹುದು. ಅಂಥ ಸಮಯದಲ್ಲಿ  ಡಿಕ್ಷನರಿ  ಹುಡುಕೋದು ಹಳೆ ಕಾಲದ ಮಾತಾಯಿತು.

ಇವಾಗ ಗೂಗಲ್ ಟ್ರಾನ್ಸ್ಲೇಟ್

ಆಪ್  ಇನ್ಸ್ಟಾಲ್ ಮಾಡಿಕೊಳ್ಳಿ

 ಇಂಗ್ಲೀಷ್ ಅಥವಾ ಬೇರೆ ಭಾಷೆಯಲ್ಲಿ ಓದುವಾಗ ಅರ್ಥವಾಗಿಲ್ಲ ಅಂದರೆ ಶೇರ್ ಆಪ್ಷನ್ ಗೆ ಹೋಗಿ ಗೂಗಲ್ ಟ್ರಾನ್ಸ್ಲೇಟ್ ಸೆಲೆಕ್ಟ್ ಮಾಡಿಕೊಳ್ಳಿ

ಅಲ್ಲಿ ನಿಮಗೆ ಬೇಕಾಗಿರುವ ಭಾಷೆ ಈಗ ಕನ್ನಡ ಸೆಲೆಕ್ಟ್ ಮಾಡಿ

   ಇಡೀ ಪೇಜ್  ಕನ್ನಡ ಭಾಷೆಯಲ್ಲಿ ಅನುವಾದ ಆಗಿ ನಿಮಗೆ ಓದಲು ಸಿಗುತ್ತದೆ

ಗೂಗಲ್ ಟ್ರಾನ್ಸ್ಲೇಟ್ ಯಾವುದೇ  ಚಿತ್ರದಲ್ಲಿರುವ ಅಕ್ಷರಗಳನ್ನು ಕೂಡ ನಿಮ್ಮ ಭಾಷೆಗೆ  ಅನುವಾದಿಸಿ ತೋರಿಸುತ್ತದೆ

ದಾರಿಯಲ್ಲಿ ಹೋಗುವಾಗ ಯಾವುದೇ ಬೋರ್ಡ್ ನಿಮಗೆ ಅರ್ಥವಾಗದ ಭಾಷೆಯಲ್ಲಿ ಇದ್ದಾರೆ ಗೂಗಲ್ ಸೆಟ್ ಅನ್ನು ಆನ್ ಮಾಡಿ ಅಲ್ಲಿ ಕ್ಯಾಮೆರಾ ಆಪ್ಷನ್ ಅನ್ನು ಕ್ಲಿಕ್ ಮಾಡಿ .  ಬೋರ್ಡಿನಲ್ಲಿ  ಬರೆದಿರುವ ವಿಷಯ ಕನ್ನಡಕ್ಕೆ ಅನುವಾದವಾಗಿ ತೋರಿಸುತ್ತದೆ. ಸುಲಭ ಅಲ್ಲವೇ

ಇನ್ನಿತರ ಗೂಗ್ಲೆಲಿನ ಉಪಯುಕ್ತ ಅಪ್ಪ್ಲಿಕೇಷನ್ನುಗಳು (Apps)

  • Google Indic Keyboard 
  • Google Docs 
  • Google Sheets 
  • Google PDF Viewer 
  • Google Slides 
  • Google Find My Device – Free App for Android 

ಹಾಗೆಯೇ ನಿಮ್ಮ ಮೊಬೈಲಿನಲ್ಲಿ ಕನ್ನಡ  ಭಾಷೆಯಲ್ಲಿ ಟೈಪ್ ಮಾಡಲು ಗೂಗಲ್ ಇಂಡಿಕ್ ಕೀಬೋರ್ಡ್  ಬಳಸಬಹುದು

ಗೂಗಲ್ ಡಾಗ್ಸ್ ಗೂಗಲ್ ಸೀಟ್ ಗೂಗಲ್ ಪಿಡಿಎಫ್ ದೆವರ್ ಗೂಗಲ್ ಫ್ಲೈಟ್ ಇವೆಲ್ಲವನ್ನು ನಿಮ್ಮ ವರ್ಡ್ ಡಾಕ್ಯೂಮೆಂಟ್ ಅಥವಾ ಸ್ಪ್ರೆಡ್ಶೀಟ್ ಪ್ರಜಾ ಪವರ್ಪಾಯಿಂಟ್ ಪ್ರೆಸೆಂಟೇಶನ್ ತರದ ಕೆಲಸಗಳಿಗೆ ಬಳಸಿಕೊಳ್ಳಬಹುದು

 ಗೂಗಲ್ ಫೈಂಡ್ ಮೈ ಡಿವೈಸ್   ಆಪ್ ನಿಮ್ಮ ಮೊಬೈಲ್ ಎಲ್ಲಾದರೂ ಇಟ್ಟು ಮರೆತು ಹೋಗಿದ್ದಾರೆ ಅಥವಾ ಕಳೆದುಹೋಗಿದ್ದಾರೆ ಹುಡುಕಲು ಬಹಳ  ಉಪಯೋಗಕಾರಿ

 ಈ ಆಪ್ ಮೂಲಕ ಕಂಪ್ಯೂಟರ್ನಿಂದ ಅಥವಾ ಇನ್ನೊಂದು ಮೊಬೈಲ್ನಿಂದ  ನೀವು ಹುಡುಕುತ್ತಿರುವ ಮೊಬೈಲ್ಗೆ ರಿಂಗ್ ಮಾಡಬಹುದು.  ಒಂದು ವೇಳೆ ನಿಮ್ಮ ಮೊಬೈಲ್ ಕಳೆದು ಹೋಗಿದ್ದಾರೆ,  ನಿಮ್ಮ ಮೊಬೈಲ್ ಅನ್ನು ಆಫ್ ಮಾಡಿ ಅಥವಾ ಡೇಟಾವನ್ನು ಸಂಪೂರ್ಣವಾಗಿ ಅಳಿಸಿ ಹಾಕಬಹುದು.

ಹುಡುಕುತ್ತಿರುವ ಮೊಬೈಲ್ ಅಪ್ನ ಮೂಲಕ ಹುಡುಕಬೇಕಂದರೆ ಅದು  ಆನ್ಆಗಿರಬೇಕು,  ಹಾಗೂ ಲೊಕೇಶನ್ ಆಪ್ಷನ್ ಏನಾಗಿರಬೇಕು.


ಇದನ್ನೂ ಓದಿರಿ

ಕಂಪ್ಯೂಟರ್ ಗಳ ಇತಿಹಾಸ ಮತ್ತು ವರ್ಗೀಕರಣ

ಮೊಬೈಲ್ ಫೋನ್ / ಸ್ಮಾರ್ಟ್ ಫೋನಿನ್ನಲ್ಲಿ ಇರಲೇಬೇಕಾದ ಅಪ್ಲಿಕೇಶನ್ನುಗಳು (mobile apps)

Spread the Knowledge

You may also like...

Leave a Reply

Your email address will not be published. Required fields are marked *