A Hero – R.K. Narayan, Kannada summary

1. For Swami, events took an unexpected turn. Father looked over the newspaper he was reading under the hall lamp and said, “Swami, listen to this: News has been received about the bravery of a village lad who, while returning home by the jungle path, came face to face with a tiger……..”
ಸ್ವಾಮಿಯ ವಿಷಯದಲ್ಲಿ ಘಟನೆಗಳು ಅನಿರೀಕ್ಷಿತ ತಿರುವು ಪಡೆದುಕೊಂಡವು. ಅವನ ತಂದೆ ಹಾಲ್ ನಲ್ಲಿ ಲ್ಯಾಂಪ್ ಕೆಳಗೆ ಪತ್ರಿಕೆಯನ್ನು ಓದುತ್ತಾ ಇರುವಾಗ ಹೇಳಿದರು,, “ಸ್ವಾಮಿ, ಇಲ್ಲಿ ಕೇಳು; ಒಂದು ಸುದ್ದಿ ಇದೆ, ಕಾಡಿನ ದಾರಿಯಲ್ಲಿ ಮನೆಗೆ ಹಿಂದಿರುಗುವಾಗ, ಹುಲಿಯೊಂದಿಗೆ ಮುಖಾಮುಖಿಯಾಗಿ ಬಂದ ಹಳ್ಳಿ ಹುಡುಗನ ಧೈರ್ಯದ ಬಗ್ಗೆ …… .. ”

The paragraph described the fight the boy had with the tiger and his flight up the tree where he stayed half a day till some people came that way and killed the tiger.
ಆ ಪ್ಯಾರಾಗ್ರಾಫ್ ನಲ್ಲಿ ಹುಡುಗನು ಹುಲಿಯೊಂದಿಗೆ ನಡೆಸಿದ ಹೋರಾಟವನ್ನು ಮತ್ತು ಅನಂತರ ಅರ್ಧ ದಿನ ಕಾಲ ಅವನು ಮರದ ಮೇಲೆ ಹತ್ತಿ ಕುಳಿತು ಕೆಲ ಜನರು ಆ ಮಾರ್ಗವಾಗಿ ಬಂದು ಹುಲಿಯನ್ನು ಕೊಲ್ಲುವ ತನಕ ಎದುರಿಸಿದ ಕಷ್ಟವನ್ನು ವಿವರಿಸಲಾಗಿತ್ತು.

2. After reading it through, father looked at Swami fixedly and asked, “What do you say to that?”
ಅದನ್ನು ಓದಿದ ನಂತರ, ತಂದೆ ಸ್ವಾಮಿಯನ್ನು ದಿಟ್ಟಿಸಿ ನೋಡಿ, “ನೀನು ಏನು ಹೇಳುತ್ತೀಯ ಇದರ ಬಗ್ಗೆ?” ಎಂದರು.

Swami said, “I think he must have been a very strong and grown-up person, not a boy at all.” “How could a boy fight a tiger?”
ಸ್ವಾಮಿ ಹೇಳಿದ, “ಅವನು ತುಂಬಾ ಬಲಶಾಲಿ ಮತ್ತು ದೊಡ್ಡವನೇ ಇರಬೇಕು, ಹುಡುಗನಂತೂ ಅಲ್ಲವೇ ಅಲ್ಲ.” “ಹುಡುಗ ಹುಲಿಯೊಂದಿಗೆ ಹೇಗೆ ಹೋರಾಡುತ್ತಾನೆ?”

“You think you are wiser than the newspaper?” father sneered. “A man may have the strength of an elephant and yet be a coward: where as another may have the strength of a straw, but if he has courage, he can do anything. Courage is everything, strength and age are not important”.
“ಪತ್ರಿಕೆಗಿಂತ ನೀನೇ ಬುದ್ಧಿವಂತ ಅಂತ ಅಂದುಕೊಡಿದ್ದೀಯ ನೀನು?” ತಂದೆ ಮೂದಲಿಸಿದರು. “ಒಬ್ಬ ಮನುಷ್ಯನು ಆನೆಯ ಬಲವನ್ನುಹೊಂದಿದ್ದರೂ ಕೂಡ ಹೇಡಿಯಾಗಿರಬಹುದು: ಹಾಗೆಯೆ ಇನ್ನೊಬ್ಬನಿಗೆ ಒಣಹುಲ್ಲಿನ ಬಲವಿರಬಹುದು, ಆದರೆ ಅವನಿಗೆ ಧೈರ್ಯವಿದ್ದರೆ, ಅವನು ಏನು ಬೇಕಾದರೂ ಮಾಡಬಹುದು. ಧೈರ್ಯವೇ ಎಲ್ಲಕ್ಕಿಂತ ಮುಖ್ಯ , ಶಕ್ತಿ ಮತ್ತು ವಯಸ್ಸುಅಲ್ಲ.

Swami disputed the theory. “How can it be, Father? Suppose I have all the courage what could I do if a tiger should attack me?”
ಸ್ವಾಮಿ ಆ ಅಭಿಪ್ರಾಯವನ್ನು ಒಪ್ಪಲಿಲ್ಲ. “ಅದು ಹೇಗೆ ಸಾಧ್ಯ, ಅಪ್ಪ ? ನನಗೆ ಎಷ್ಟೇ ಧೈರ್ಯವಿದ್ದರೂ ,ಹುಲಿ ನನ್ನ ಮೇಲೆ ದಾಳಿ ಮಾಡಿದರೆ ನಾನು ಏನು ಮಾಡಬಲ್ಲೆ?

“Leave alone strength, can you prove you have courage? Let me see if you can sleep alone tonight in my office room.”
“ಶಕ್ತಿಯ ವಿಷಯ ಬಿಡು, ನಿನಗೆ ಧೈರ್ಯವಿದೆ ಎಂದು ತೋರಿಸು ಸಾಕು. ಆಗುವುದೇ? ನನ್ನ ಕಚೇರಿಯ ಕೋಣೆಯಲ್ಲಿ ನೀನು ಇವತ್ತು ರಾತ್ರಿ ಒಬ್ಬನೇ ಮಲಗು ನೋಡೋಣ.

3. A frightful proposition, Swami thought. He had always slept beside his granny in the passage, and any change in this arrangement kept him trembling and awake all night. He hoped at first that father was only joking. He mumbled weakly, “Yes,” and tried to change the subject: he said very loudly and with a great deal of enthusiasm, “We are going to admit even elders in our cricket club hereafter. We are buying brand-new bats and balls. Our captain has asked me to tell you…”
ಇದು ಒಂದು ಭಯಾನಕ ವಿಚಾರ ಎಂದು ಸ್ವಾಮಿ ಯೋಚಿಸಿದ. ಅವನು ಯಾವಾಗಲೂ ತನ್ನ ಅಜ್ಜಿಯ ಜೊತೆಯಲ್ಲಿಯೇ ಮಲಗುತ್ತಿದ್ದ, ಮತ್ತು ಈ ವ್ಯವಸ್ಥೆಯಲ್ಲಿನ ಯಾವುದೇ ಬದಲಾವಣೆಯು ಅವನನ್ನು ರಾತ್ರಿಯಿಡೀ ನಡುಗಿಸಿ ಎಚ್ಚರಿಸಿಬಿಡುತ್ತಿತ್ತು. ಮೊದಲಿಗೆ ಅವನು ತಂದೆ ಕೇವಲ ತಮಾಷೆ ಮಾಡುತ್ತಿರಬಹುದು ಎಂದು ಊಹಿಸಿದ . ಸಣ್ಣನೆ ದನಿಯಲ್ಲಿ “ಆಗಲಿ”, ಎಂದು ಗೊಣಗಿ ವಿಷಯವನ್ನು ಬದಲಾಯಿಸಲು ಪ್ರಯತ್ನಿಸಿದ: ಅವನು ತುಂಬಾ ಜೋರಾಗಿ ಮತ್ತು ಹೆಚ್ಚಿನ ಉತ್ಸಾಹದಿಂದ ಹೇಳಲು ಶುರು ಮಾಡಿದ , “ನಾವು ಇನ್ನು ಮುಂದೆ ನಮ್ಮ ಕ್ರಿಕೆಟ್ ಕ್ಲಬ್‌ನಲ್ಲಿ ದೊಡ್ಡವರನ್ನು ಕೂಡ ಸೇರಿಸಿಕೊಳ್ಳಲಿದ್ದೇವೆ. ನಾವು ಹೊಚ್ಚ ಹೊಸ ಬ್ಯಾಟುಗಳು ಮತ್ತು ಚೆಂಡುಗಳನ್ನು ಖರೀದಿಸುತ್ತಿದ್ದೇವೆ. ನಿಮಗೆ ಹೇಳಲು ನಮ್ಮ ನಾಯಕ ನನ್ನನ್ನು ಕೇಳಿದ್ದಾನೆ … “

4. “We’ll see about that later,” father cut in. “You must sleep alone hereafter.” Swami realized that the matter had gone beyond his control: from a challenge it had become a command; he knew his father’s tenacity at such moments.
“ಅದರ ಬಗ್ಗೆ ನಾವು ನಂತರ ನೋಡೋಣ” ಎಂದು ತಂದೆ ಹೇಳಿದರು. “ನೀನು ಇನ್ನು ಮುಂದೆ ಒಬ್ಬನೇ ಮಲಗಬೇಕು.” ಈ ವಿಷಯವು ತನ್ನ ಕೈ ಮೀರಿತು ಎಂದು ಸ್ವಾಮಿ ಅರಿತುಕೊಂಡನು: ಒಂದು ಸವಾಲಿನಿಂದ ಅದು ಆಜ್ಞೆಯಾಗಿಬದ್ಲಗಿ ಹೋಯಿತು; ಅಂತಹ ಕ್ಷಣಗಳಲ್ಲಿ ತನ್ನ ತಂದೆಯ ಧೃಡತೆಯನ್ನು ಅವನು ತಿಳಿದಿದ್ದನು.

5. “From the first of next month, I’ll sleep alone, Father.”
“ಮುಂದಿನ ತಿಂಗಳ ಮೊದಲನೇ ತಾರೀಕಿನಿಂದ, ನಾನು ಒಬ್ಬನೇ ಮಲಗುತ್ತೇನೆ,ಅಪ್ಪ.”

“No, you must do it now. It is disgraceful sleeping beside granny or mother like a baby. You are in the second form and I don’t like the way you are being brought up,” he said and looked at his wife, who was rocking the cradle. “Why do you look at me while you say it?” she asked. “I hardly know anything about the boy.”
“ಇಲ್ಲ, ನೀನು ಈಗಿನಿಂದನೆ ಹಾಗೆ ಮಾಡಬೇಕು. ಇನ್ನೂ ಕೂಡ ಸಣ್ಣ ಮಗುವಿನಂತೆ ಅಜ್ಜಿ ಅಥವಾ ತಾಯಿಯ ಪಕ್ಕದಲ್ಲಿ ಮಲಗುವುದು ನಾಚಿಕೆಗೇಡಿನ ಸಂಗತಿ. ನೀನು ಎರಡನೇ ತರಗತಿಯಲ್ಲಿ ಇದ್ದೀಯ ಮತ್ತು ನಿನ್ನನ್ನು ಈ ರೀತಿ ಬೆಳೆಸುವುದು ನನಗೆ ಇಷ್ಟವಿಲ್ಲ, ”ಎಂದು ಹೇಳಿದ ಅವರು ತೊಟ್ಟಿಲನ್ನು ತೂಗುತ್ತಿದ್ದ ಪತ್ನಿಯನ್ನು ನೋಡಿದರು. “ಹಾಗೆ ಹೇಳುತ್ತಿರುವಾಗ ನೀವು ನನ್ನನ್ನು ಏಕೆ ನೋಡುತ್ತೀರಿ?” ಅವಳು ಕೇಳಿದಳು. “ನನಗೆ ಇವನ ಬಗ್ಗೆ ಏನೂ ಗೊತ್ತಿಲ್ಲ.”

“No, no, I don’t mean you,” said father.
“ಇಲ್ಲ, ಇಲ್ಲ, ನಾನು ನಿನ್ನ ಬಗ್ಗೆ ಹೇಳಲಿಲ್ಲ” ಎಂದು ತಂದೆ ಹೇಳಿದರು.

“If you mean your mother is spoiling him, tell her so; and don’t look at me,” she said and turned away.
“ನಿಮ್ಮ ತಾಯಿ ಅವನನ್ನು ಹಾಳು ಮಾಡುತ್ತಿದ್ದಾರೆ ಎಂದು ನೀವು ಭಾವಿಸಿದರೆ, ಅವರಿಗೇ ಹೇಳಿ; ನನ್ನ ಕಡೆ ಗುರಾಯಿಸಬೇಡಿ, “ಅವಳು ಹೇಳಿ ಆಕಡೆತಿರುಗಿಕೊಂಡಳು.

6. Swami’s father sat gloomily gazing at the newspaper on his lap. Swami rose silently and tiptoed to his bed in the passage; granny was sitting up in her bed, and remarked, “Boy, are you already feeling sleepy? Don’t you want to hear a story?” Swami made wild gesticulations to silence his granny, but that good lady saw nothing. So Swami threw himself on his bed and pulled the blanket over his face.
ಸ್ವಾಮಿಯ ತಂದೆ ಉದಾಸೀನರಾಗಿ ಮಡಿಲಲ್ಲಿ ಇದ್ದ ವೃತ್ತಪತ್ರಿಕೆಯನ್ನು ನೋಡುತ್ತಾ ಕುಳಿತರು. ಸ್ವಾಮಿ ಮೌನವಾಗಿ ಎದ್ದು ಸದ್ದಿಲ್ಲದಂತೆ ಹಜಾರದಲ್ಲಿ ಇದ್ದ ತನ್ನ ಹಾಸಿಗೆಯ ಕಡೆಗೆ ಹೆಜ್ಜೆ ಹಾಕಿದನು; ಅಜ್ಜಿ ತನ್ನ ಹಾಸಿಗೆಯ ಮೇಲೆ ಕುಳಿತಿದ್ದಳು, “ಮಗಾ, ನಿನಗೆ ಈಗಾಗಲೇ ನಿದ್ರೆ ಬರುತ್ತಿದೆಯೇ? ಕಥೆ ಕೇಳಲು ಇಷ್ಟವಿಲ್ಲವೇ? ” ಸ್ವಾಮಿ ತನ್ನ ಅಜ್ಜಿಯನ್ನು ‘ಸುಮ್ಮನಿರು ‘ಎಂದು ಅವಸರದಿಂದ ಸನ್ನೆ ಮಾಡಿದನು, ಆದರೆ ಆ ಮುಗ್ಧ ಮಹಿಳೆಗೆ ಏನೊಂದು ಗೊತ್ತಾಗಲಿಲ್ಲ. ಆದ್ದರಿಂದ ಸ್ವಾಮಿ ತನ್ನ ಹಾಸಿಗೆಯ ಮೇಲೆ ಬಿದ್ದುಕೊಂಡು ಕಂಬಳಿಯನ್ನು ಮುಖದ ಮೇಲೆ ಎಳೆದುಕೊಂಡನು.

7. Granny said, “Don’t cover your face. Are you really very sleepy?” Swami leant over and whispered, “Please, please, shut up granny. Don’t talk to me, and don’t let anyone call me even if the house is on fire. If I don’t sleep at once, perhaps I shall die.” He turned over and curled, and snored under the blanket till he found his blanket pulled away.
ಅಜ್ಜಿ ಹೇಳಿದರು, ” ಮುಖವನ್ನು ಹಾಗೆ ಮುಚ್ಚಿಕೊಳ್ಳಬೇಡ. ನಿನಗೆ ನಿಜವಾಗಿಯೂ ಬಹಳ ನಿದ್ದೆ ಬರುತ್ತಿದೆಯೇ? ” ಸ್ವಾಮಿ ಒರಗಿಕೊಂಡು ಪಿಸುಗುಟ್ಟಿದನು, “ದಯವಿಟ್ಟು, ಸುಮ್ಮನಿರು ಅಜ್ಜಿ. ನನ್ನನ್ನು ಮಾತನಾಡಿಸಬೇಡ, ಮನೆಗೆ ಬೆಂಕಿ ಹೊತ್ತಿಕೊಂಡರೂ ಯಾರೂ ನನ್ನನ್ನು ಕರೆಯಲು ಬಿಡಬೇಡಿ. ನಾನು ಈಗಲೇ ಮಲಗದಿದ್ದರೆ, ಬಹುಶಃ ನಾನು ಸತ್ತು ಹೋಗಿಬಿಡುವೆ. ” ಅವನು ಆ ಪಕ್ಕ ತಿರುಗಿ ಮುದುರಿಕೊಂಡು ಕಂಬಳಿಯ ಒಳಗೆ ಗೊರಕೆ ಹೊಡೆಯಲು ಶುರು ಮಡಿದ, ಯಾರೋ ತನ್ನ ಕಂಬಳಿಯನ್ನು ಎಳೆದು ಹಾಕುತ್ತಿರುವುದು ಗೊತ್ತಾಗುವ ತನಕ.

8. Presently his father came and stood over him. “Swami, get up,” he said. He looked like an apparition in the semi-darkness of the passage, which was lit by a cone of light from the hall. Swami stirred and groaned as if in sleep. Father said, “Get up, Swami.” Granny pleaded, “Why do you disturb him?”
ನೋಡಿದರೆ ಅವನ ತಂದೆ ಬಂದು ಅವನ ಹತ್ತಿರವೇ ನಿಂತಿದ್ದರು. “ಸ್ವಾಮಿ, ಎದ್ದೇಳು,” ಅಂತ ಅವರು ಹೇಳಿದರು. ಹಾಲಿನಲ್ಲಿ ಹಚ್ಚಿದ ದೀಪದ ಅರೆ ಬೆಳಕಿನಲ್ಲಿ ಅವರು ಮಸುಕಾಗಿ ಯಾವುದೊ ನೆರಳಿನಂತೆ ಕಾಣುತ್ತಿದ್ದರು. ಸ್ವಾಮಿ ಗಾಢ ನಿದ್ರೆಯಲ್ಲಿ ಇರುವವನಂತೆ ಅಲುಗಿ ಗೊಣಗಿದನು . ತಂದೆ ಹೇಳಿದರು, “ಸ್ವಾಮಿ, ಎದ್ದೇಳು.” ಅಜ್ಜಿ ಕೇಳಿದಳು, “ನೀನು ಯಾಕೆ ಅವನಿಗೆ ತೊಂದರೆ ಮಾಡುತ್ತ ಇದ್ದೀಯ ?” ಅಂತ.

9. “Get up, Swami,” said father for the third time and Swami got up.
“ಸ್ವಾಮಿ, ಎದ್ದೇಳು” ಎಂದು ತಂದೆ ಮೂರನೇ ಬಾರಿಗೆ ಹೇಳಿದರು ಮತ್ತು ಸ್ವಾಮಿ ಎದ್ದು ಬಿಟ್ಟನು.

Father rolled up his bed, took it under his arm and said, “Come with me.” Swami looked at granny, hesitated for a moment, and followed his father into the office room. On the way he threw a look of appeal at his mother and she said, “Why do you take him to the office room? He can sleep in the hall, I think.”
ತಂದೆಯವರು ಅವನ ಹಾಸಿಗೆಯನ್ನು ಸುತ್ತಿ, ತನ್ನ ತೋಳಿನ ಕೆಳಗೆ ತೆಗೆದುಕೊಂಡು, “ನನ್ನೊಂದಿಗೆ ಬಾ” ಎಂದು ಹೇಳಿದರು. ಸ್ವಾಮಿ ಅಜ್ಜಿಯನ್ನು ನೋಡಿ, ಒಂದು ಕ್ಷಣ ಹಿಂಜರಿಯುತ್ತ ತನ್ನ ತಂದೆಯನ್ನು ಹಿಂಬಾಲಿಸಿ ಕಚೇರಿಯ ಕೋಣೆಗೆ ನಡೆದನು. ದಾರಿಯಲ್ಲಿ ಅವನು ತನ್ನ ತಾಯಿಯ ಕಡೆಗೆ ಒಂದು ನೋಟವನ್ನು ಎಸೆದ ಮತ್ತು ಅವಳು, “ನೀವು ಯಾಕೆ ಅವನನ್ನು ಆಫೀಸ್ ರೂಮಿಗೆ ಕರೆದುಕೊಂಡು ಹೋಗುತ್ತಿದ್ದೀರ? ಅವನು ಹಜಾರದಲ್ಲಿಯೇ ಮಲಗಬಹುದು, ಅಂತ ನನಗನಿಸುತ್ತದೆ. ” ಎಂದು ಕೇಳಿದಳು.

“I don’t think so,” father said, and Swami slunk behind him with bowed head.
“ನನಗೆ ಹಾಗೆ ಅನಿಸುತ್ತಿಲ್ಲ” ಎಂದು ತಂದೆ ಹೇಳಿದರು, ಸ್ವಾಮಿ ಅವರ ಹಿಂದೆ ತಲೆ ತಗ್ಗಿಸಿ ಕುಳಿತುಕೊಂಡನು.

“Let me sleep in the hall, Father,” Swami pleaded. “Your office room is very dusty and there may be scorpions behind your law books.”
“ನನಗೆ ಹಜಾರದಲ್ಲಿಯೇ ಮಲಗಲು ಬಿಡಿ ಅಪ್ಪ,” ಸ್ವಾಮಿ ಮನವಿ ಮಾಡಿದ. “ನಿಮ್ಮ ಕಚೇರಿ ಕೊಠಡಿಯಲ್ಲಿ ತುಂಬಾ ಧೂಳು ಇದೆ, ನಿಮ್ಮ ಕಾನೂನು ಪುಸ್ತಕಗಳ ಹಿಂದೆ ಚೇಳುಗಳು ಕೂಡ ಇರಬಹುದು.”

“There are no scorpions, little fellow. Sleep on the bench if you like.”
“ಇಲ್ಲಿ ಚೇಳುಗಳಿಲ್ಲ, ಪುಟ್ಟ . ನಿನಗೆ ಇಷ್ಟವಾದರೆ ಬೆಂಚ್ ಮೇಲೆ ಮಲಗಿಕೊ. “

“Can I have a lamp burning in the room?”
“ನಾನು ಕೋಣೆಯಲ್ಲಿ ದೀಪ ಉರಿಯುತ್ತಿರಲು ಬಿಡಬಹುದೇ?”

“No. You must learn not to be afraid of darkness. It is only a question of habit. You must cultivate good habits.”
“ಇಲ್ಲ. ಕತ್ತಲೆಗೆ ಹೆದರದಿರಲು ನೀನು ಕಲಿಯಬೇಕು. ಇದು ಅಭ್ಯಾಸದ ಪ್ರಶ್ನೆ ಮಾತ್ರ. ನೀನು ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ”

“Will you at least leave the door open?” “All right. But promise you won’t roll up your bed and go to your granny’s side at night. If you do it, I’ll make you the laughing stock of your school.”
“ನೀವು ಕನಿಷ್ಟ ಪಕ್ಷ ಬಾಗಿಲು ತೆರೆದು ಇಡುತ್ತೀರಾ?” “ಸರಿ. ಆದರೆ ನೀನು ನಿನ್ನ ಹಾಸಿಗೆಯನ್ನು ಸುತ್ತಿಕೊಂಡು ರಾತ್ರಿಯಲ್ಲಿ ನಿನ್ನ ಅಜ್ಜಿಯ ಪಕ್ಕಕ್ಕೆ ಹೋಗುವುದಿಲ್ಲ ಎಂದು ಮಾತು ಕೊಡು. ನೀನು ಏನಾದರು ಹಾಗೆ ಮಾಡಿದರೆ, ನಿನ್ನನ್ನು ನಿನ್ನ ಶಾಲೆಯಲ್ಲಿ ತಮಾಷೆ ಮಾಡಿಬಿಡುವೆ ನೋಡು. “

10. Swami felt cut off from humanity. He was pained and angry. He did not like the strain of cruelty he saw in his father’s nature. He hated the newspaper for printing the tiger’s story. He wished that the tiger had not spared the boy, who didn’t appear to be a boy after all, but a monster……
ಸ್ವಾಮಿಗೆ ಎಲ್ಲ ಮನುಷ್ಯರಿಂದ ದೂರ ಇಟ್ಟು ಅವನನ್ನು ಒಂಟಿ ಮಾಡಿದಂತೆ ಅನಿಸಿತು. ಅವನಿಗೆ ಬೇಸರವಾಗಿ ಕೋಪ ಬಂದಿತು. ತನ್ನ ತಂದೆಯ ಸ್ವಭಾವದಲ್ಲಿ ಕಾಣಿಸಿದ ಕ್ರೌರ್ಯದ ಎಳೆಯನ್ನು ಅವನು ಇಷ್ಟಪಡಲಿಲ್ಲ. ಹುಲಿಯ ಕಥೆಯನ್ನು ಮುದ್ರಿಸಿದ್ದಕ್ಕಾಗಿ ಅವನು ಪತ್ರಿಕೆಯನ್ನು ದ್ವೇಷಿಸಿದನು . ಹುಲಿಯು ಹುಡುಗನನ್ನು ಬಿಡಬಾರದಿತ್ತು, ಅವನು ಹುಡುಗನಲ್ಲ, ಒಬ್ಬ ರಾಕ್ಷಸ… ಎಂದುಕೊಂಡನು ಅವನು.

11. As the night advanced and the silence in the house deepened, his heart beat faster. He remembered all the stories of devils and ghosts he had heard in his life. How often his chum Mani had seen the devil in the banyan tree at his street end. And what about poor Munisami’s father, who spat out blood because the devil near the river’s edge slapped his cheek when he was returning home late one night. And so on and on his thoughts continued. He was faint with fear. A ray of light from the street lamp strayed in and cast shadows on the wall. Through the stillness all kinds of noises reached his ears-the ticking of the clock, rustle of trees, snoring sounds, and some vague night insects humming. He covered himself so completely that he could hardly breathe. Every moment he expected the devils to come up to carry him away; there was the instance of his old friend in the fourth class who suddenly disappeared and was said to have been carried off by a ghost to Siam or Nepal…..
ರಾತ್ರಿ ಮುಂದುವರಿದಂತೆ ಮತ್ತು ಮನೆಯಲ್ಲಿ ಮೌನ ಆಳವಾದಾಗ, ಅವನ ಹೃದಯವು ವೇಗವಾಗಿ ಬಡಿದುಕೊಂಡಿತು. ತನ್ನ ಜೀವನದಲ್ಲಿ ಕೇಳಿದ ದೆವ್ವಗಳು ಮತ್ತು ಪಿಶಾಚಿಗಳ ಕಥೆಗಳನ್ನು ನೆನಪಿಸಿಕೊಂಡನು. ತನ್ನ ಗೆಳೆಯ ಮಣಿ ಬೀದಿಯ ತುದಿಯಲ್ಲಿರುವ ಆಲದ ಮರದಲ್ಲಿ ಎಷ್ಟೋ ಬರಿ ದೆವ್ವವನ್ನು ನೋಡಿದ್ದನು. ಒಂದು ದಿನ ತಡರಾತ್ರಿ ಮನೆಗೆ ಮರಳುತ್ತಿದ್ದಾಗ ನದಿಯ ಅಂಚಿನಲ್ಲಿರುವ ದೆವ್ವವು ಕೆನ್ನೆಗೆ ಹೊಡೆದ ಕಾರಣ ರಕ್ತವನ್ನು ಉಗುಳಿದ ಬಡ ಮುನಿಸಾಮಿಯ ತಂದೆಯ ಬಗ್ಗೆ ನೆನಪಾಯಿತು. ಹೀಗೆ ಅವನ ಆಲೋಚನೆಗಳು ಮುಂದುವರೆದವು. ಆತ ಭಯದಿಂದ ಮಂಕಾಗಿಬಿಟ್ಟ. ಬೀದಿ ದೀಪದಿಂದ ಬೆಳಕಿನ ಕಿರಣವು ಅಡ್ಡಾದಿಡ್ಡಿಯಾಗಿ ಗೋಡೆಯ ಮೇಲೆ ನೆರಳುಗಳನ್ನು ಬೀರಿತು. ನಿಶ್ಚಲತೆಯ ಮೂಲಕ ಎಲ್ಲಾ ರೀತಿಯ ಶಬ್ದಗಳು ಅವನ ಕಿವಿಗಳನ್ನು ತಲುಪಿದವು-ಗಡಿಯಾರದ ಟಿಕ್, ಮರಗಳ ಗದ್ದಲ, ಗೊರಕೆ ಶಬ್ದಗಳು ಮತ್ತು ಕೆಲವು ಅಸ್ಪಷ್ಟ ರಾತ್ರಿ ಕೀಟಗಳು ಗುನುಗುತ್ತಿರುವುದು, ಎಲ್ಲವು. ಅವನು ಉಸಿರಾಡಲು ಕಷ್ಟವಾದರೂ ತನ್ನನ್ನು ಸಂಪೂರ್ಣವಾಗಿ ಕಂಬಳಿಯಿಂದ ಮುಚ್ಚಿಕೊಂಡನು. ಪ್ರತಿ ಕ್ಷಣವೂ ದೆವ್ವಗಳು ತನ್ನನ್ನು ಕರೆದುಕೊಂಡು ಹೋಗಲು ಬರಬಹುದೆಂದು ಅವನು ಕಾಯ್ದನು; ನಾಲ್ಕನೇ ತರಗತಿಯಲ್ಲಿದ್ದ ಆತನ ಹಳೆಯ ಸ್ನೇಹಿತ ಇದ್ದಕ್ಕಿದ್ದಂತೆ ಕಣ್ಮರೆಯಾದ ಉದಾಹರಣೆ ಇತ್ತು , ಭೂತ ಅವನನ್ನು ಸಿಯಾಮ್ ಅಥವಾ ನೇಪಾಳಕ್ಕೆ ಹೊತ್ತೊಯ್ದಿದೆ ಎಂದು ಹೇಳಲಾಗುತಿತ್ತು.

12. Swami hurriedly got up and spread his bed under the bench and crouched there. It seemed to be a much safer place, more compact and reassuring. He shut his eyes tight and encased himself in his blanket once again and unknown to himself fell asleep, and in sleep was racked with nightmares. A tiger was chasing him. His feet stuck to the ground. He desperately tried to escape but his feet would not move; the tiger was at his back, and he could hear its claws scratch the ground…. scratch, scratch, and then a loud thud…… Swami tried to open his eyes but his eyelids would not open and the nightmare continued. It threatened to continue forever. Swami groaned in despair.
ಸ್ವಾಮಿ ಅವಸರದಿಂದ ಎದ್ದು ತನ್ನ ಹಾಸಿಗೆಯನ್ನು ಬೆಂಚಿನ ಕೆಳಗೆ ಹರಡಿಕೊಂಡು ಅಲ್ಲೇ ಮುದುರಿಕೊಂಡು ಕುಳಿತನು. ಇದು ಹೆಚ್ಚು ಸುರಕ್ಷಿತ ಸ್ಥಳ, ಪುಟ್ಟದಾಗಿ ಧೈರ್ಯ ತುಂಬುವಂತ್ತಿತ್ತು. ಅವನು ತನ್ನ ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿಕೊಂಡು ಮತ್ತೊಮ್ಮೆ ತನ್ನ ಕಂಬಳಿಯಲ್ಲಿ ಸುತ್ತಿಕೊಂಡನು ತನಗೇ ತಿಳಿಯದೆ ನಿದ್ರಿಸಿಬಿಟ್ಟನು. ನಿದ್ರೆಯಲ್ಲಿ ಕೆಟ್ಟ ಕನಸುಗಳಿಂದ ಹೆದರಿಕೆಯಾಯಿತು. ಒಂದು ಹುಲಿ ಅವನನ್ನು ಹಿಂಬಾಲಿಸುತ್ತಿತ್ತು. ಅವನ ಪಾದಗಳು ನೆಲಕ್ಕೆ ಅಂಟಿಕೊಂಡುಬಿಟ್ಟಿವೆ. ಅವನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಸಹ ಅವನ ಪಾದಗಳು ಚಲಿಸಲಿಲ್ಲ; ಹುಲಿ ಅವನ ಹಿಂದೆಯೇ ಇದೆ, ಅದರ ಉಗುರುಗಳು ನೆಲವನ್ನು ಪರಚುವುದನ್ನು ಅವನಿಗೆ ಕೇಳಿಸುತ್ತಿದೆ…. ಸ್ಕ್ರಾಚ್, ಸ್ಕ್ರಾಚ್, ಮತ್ತು ನಂತರ ಜೋರಾಗಿ ಥಡ್ ….. ಸ್ವಾಮಿ ಕಣ್ಣು ತೆರೆಯಲು ಪ್ರಯತ್ನಿಸಿದರೂ ಕಣ್ಣು ರೆಪ್ಪೆಗಳು ತೆರೆಯಲಿಲ್ಲ ಮತ್ತು ದುಃಸ್ವಪ್ನ ಹಾಗೆಯೇ ಮುಂದುವರಿಯಿತು. ಇದು ಮುಗಿಯುವುದೇ ಇಲ್ಲವೇನೋ ಎಂದೆನಿಸಿತು. ಸ್ವಾಮಿ ಹತಾಶೆಯಿಂದ ನರಳಿದನು.

13. With a desperate effort he opened his eyes. He put his hand out to feel his granny’s presence at his side as was his habit, but he only touched the wooden leg of the bench. And his lonely state came back to him. He sweated with fright. And now what was this rustling? He moved to the edge of the bench and stared into the darkness. Something was moving down. He lay gazing at it in horror. His end had come. He realized that the devil would presently pull him out and tear him, and so why should he wait? As it came nearer he crawled out from under the bench, hugged it with all his might, and used his teeth on it like a mortal weapon….
ಭಾರಿ ಪ್ರಯತ್ನದಿಂದ ಅವನು ಕಣ್ಣು ತೆರೆದನು. ಅಭ್ಯಾಸದಂತೆ ತನ್ನ ಪಕ್ಕದಲ್ಲಿ ತನ್ನ ಅಜ್ಜಿಯ ಇರುವಳೋ ಎಂದು ನೋಡಲು ತನ್ನ ಕೈಯನ್ನು ಚಾಚಿದನು, ಆದರೆ ಮರದ ಬೆಂಚಿನ ಕಾಲಿಗೆ ಅವನ ಕೈ ತಾಗಿತು.ತಾನು ಒಂಟಿಯಾಗಿರುವ ಅರಿವು ಮರಳಿಬಂದಿತು. ಭಯದಿಂದ ಅವನಿಗೆ ಬೆವರಲು ಶುರುವಾಯಿತು . ಇದೇನು ಶಬ್ದ? ಅವನು ಬೆಂಚಿನ ಕೊನೆಗೆ ತೆರಳಿ ಕತ್ತಲಲ್ಲೇ ದಿಟ್ಟಿಸಿದನು. ಕೆಳಗೆ ಏನೋ ಚಲಿಸುತ್ತಿತ್ತು. ಅದನ್ನು ಅವನು ಗಾಬರಿಯಿಂದ ನೋಡುತ್ತಿದ್ದನು. ತನ್ನ ಅಂತ್ಯವು ಬಂದಿತು. ದೆವ್ವವು ಈಗ ತನ್ನನ್ನು ಹೊರಗೆ ಎಳೆದು ಹರಿದು ಹಾಕುತ್ತದೆ ಎಂದು ಅವನು ಅಂದುಕೊಂಡನು, ತಾನೇ ಏಕೆ ಕಾಯಬೇಕು? ಅವನು ತಾನೇ ಬೆಂಚಿನ ಕೆಳಗೆ ತೆವಳುತ್ತಾ ಅದು ಹತ್ತಿರ ಬರುತ್ತಿದ್ದಂತೆ , ತನ್ನ ಸಂಪೂರ್ಣ ಶಕ್ತಿಯಿಂದ ಅದನ್ನು ಅಪ್ಪಿಕೊಂಡು, ಅದರ ಮೇಲೆ ಹಲ್ಲುಗಳನ್ನು ಮಾರಣಾಂತಿಕ ಆಯುಧದಂತೆ ಬಳಸಿದನು.

14. “Aiyo! Something has bitten me,” went forth an agonized, thundering cry and was followed by a heavy tumbling and falling amidst furniture. In a moment father, cook, and a servant came in, carrying light.
“ಅಯ್ಯೋ! ಏನೋ ನನ್ನನ್ನು ಕಚ್ಚಿತು, ” ಸಿಡಿಲಿನಂತೆ ನೋವಿನಿಂದ ಕೂಡಿದ ಒಂದು ಚೀತ್ಕಾರ ಕೇಳಿಸಿತು, ನಂತರ ಭಾರವಾದ ಏನೋ ಉರುಳಿ ಪೀಠೋಪಕರಣಗಳ ನಡುವೆ ಬಿದ್ದಿತು. ಸ್ವಲ್ಪ ಹೊತ್ತಿನಲ್ಲಿನಲ್ಲಿಯೇ ತಂದೆ, ಅಡುಗೆಯವರು ಮತ್ತು ಸೇವಕರು ಬೆಳಕನ್ನು ಹಿಡಿದು ಅಲ್ಲಿಗೆ ಬಂದರು.

And all three of them fell on the burglar who lay amidst the furniture with a bleeding ankle.
ಆ ಮೂವರೂ ಸಹ ಪೀಠೋಪಕರಣಗಳ ನಡುವೆ ಕಣಕಾಲಿನಲ್ಲಿ ರಕ್ತ ಸುರಿಸಿಕೊಂಡು ಮಲಗಿದ್ದ ಕಳ್ಳನ ಮೇಲೆಯೇ ಬಿದ್ದರು.

15. Congratulations were showered on Swami next day. His classmates looked at him with respect, and his teacher patted his back. The headmaster said that he was a true scout. Swami had bitten into the flesh of one of the most notorious house-breakers of the district and the police were grateful to him for it.
ಮರುದಿನ ಸ್ವಾಮಿಯ ಮೇಲೆ ಅಭಿನಂದನೆಗಳ ಸುರಿಮಳೆಯಾಯಿತು. ಅವನ ಸಹಪಾಠಿಗಳು ಅವನನ್ನು ಗೌರವದಿಂದ ನೋಡಿದರು, ಅವನ ಶಿಕ್ಷಕರು ಅವನ ಬೆನ್ನು ತಟ್ಟಿದರು. ಮುಖ್ಯ ಶಿಕ್ಷಕರು ಅವರು ನಿಜವಾದ ಸ್ಕೌಟ್ ಎಂದು ಹೇಳಿದರು. ಜಿಲ್ಲೆಯ ಅತ್ಯಂತ ಕುಖ್ಯಾತರಾದ ಮನೆ ಕಳ್ಳರ ಗುಂಪಿನಲ್ಲಿ ಒಬ್ಬನನ್ನು ಸ್ವಾಮಿ ಹಿಡಿದಿದ್ದ ಮತ್ತು ಪೊಲೀಸರು ಆತನಿಗೆ ಕೃತಜ್ಞರಾಗಿದ್ದರು.

16. The inspector said, “Why don’t you join the police when you are grown up?”
“ದೊಡ್ಡವನಾದ ಮೇಲೆ ಯಾಕೆ ನೀನು ಪೊಲೀಸರಿಗೆ ಸೇರಬಾರದು?”, ಎಂದು ಇನ್ಸ್‌ಪೆಕ್ಟರ್ ಹೇಳಿದರು.

Swami said for the sake of politeness, “Certainly, yes,” though he had quite made up his mind to be an engine driver, a railway guard, or a bus conductor later in life.
ಸ್ವಾಮಿ ಸಭ್ಯತೆಗಾಗಿ, “ಖಂಡಿತವಾಗಿಯೂ,” ಎಂದು ಹೇಳಿದ, ಆದರೂ ಅವನು ಮುಂದೆ ಜೀವನದಲ್ಲಿ ಇಂಜಿನ್ ಚಾಲಕನೋ, ರೈಲ್ವೆ ಸಿಬ್ಬಂದಿಯೋ ಅಥವಾ ಬಸ್ ಕಂಡಕ್ಟರ್ ಆಗಲು ಮನಸ್ಸು ಮಾಡಿದ್ದನು.

17. When he returned home from the club that night, father asked, “Where is the boy?”
ಆ ರಾತ್ರಿ ಕ್ಲಬ್ ನಿಂದ ಮನೆಗೆ ಹಿಂದಿರುಗಿದ ಅವನ ತಂದೆ, “ಮಗ ಎಲ್ಲಿ?” ಅಂತ ಕೇಳಿದರು.

“He is asleep.”
“ಅವನು ಮಲಗಿದ್ದಾನೆ.”

“Already!”
“ಇಷ್ಟು ಬೇಗ!”

“He didn’t have a wink of sleep the whole of last night,” said his mother.
“ನಿನ್ನೆ ರಾತ್ರಿಯಿಡೀ ಅವನಿಗೆ ನಿದ್ರೆ ಇಲ್ಲ” ಎಂದು ಅವನ ತಾಯಿ ಹೇಳಿದರು.

“Where is he sleeping?” “In his usual place,” mother said casually. “He went to bed at seven-thirty.”
“ಎಲ್ಲಿ ಮಲಗಿದ್ದಾನೆ ಅವನು?” “ಅವನ ಮಾಮೂಲಿ ಸ್ಥಳದಲ್ಲಿ,” ತಾಯಿ ಉದಾಸೀನರಾಗಿ ಹೇಳಿದರು. “ಏಳೂವರೆ ಗಂಟೆಗೆಲ್ಲಾ ಅವನು ಮಲಗಲು ಹೋದನು.”

“Sleeping beside his granny again!” father said. “No wonder he wanted to be asleep before I could return home. Clever boy!”
“ಮತ್ತೆ ಅವನ ಅಜ್ಜಿಯ ಪಕ್ಕದಲ್ಲಿಯೇ ಮಲಗಿದಾನೆ!” ತಂದೆ ಹೇಳಿದರು. “ನಾನು ಮನೆಗೆ ಹಿಂದಿರುಗುವ ಮೊದಲು ಅವನು ಮಲಗಿ ಬಿಟ್ಟಿದ್ದರಲ್ಲಿ ಆಶ್ಚರ್ಯವಿಲ್ಲ. ಚುರುಕು ಹುಡುಗ!”

Mother lost her temper. “You let him sleep where he likes. You needn’t risk his life again.” Father mumbled as he went in to change, “All right, molly-coddle and spoil him as much as you like. Only don’t blame me afterwards.”
ತಾಯಿ ತಾಳ್ಮೆ ಕಳೆದುಕೊಂಡರು. “ನೀವು ಅವನಿಗೆ ಇಷ್ಟವಾದ ಸ್ಥಳದಲ್ಲಿ ಮಲಗಲು ಬಿಡಿ. ನೀವು ಅವನ ಜೀವವನ್ನು ಮತ್ತೆ ಅಪಾಯಕ್ಕೆ ತಳ್ಳುವ ಅಗತ್ಯವಿಲ್ಲ. ” ಬಟ್ಟೆ ಬದಲಾಯಿಸಲು ಹೋಗುತ್ತಾ ತಂದೆ ಗೊಣಗಿಕೊಂಡರು, “ಸರಿ, ಮುದ್ದು ಮಾಡಿ ಮಾಡಿ ನಿಮಗೆ ಎಷ್ಟು ಬೇಕೋ ಅಷ್ಟು ಅವನನ್ನು ಹಾಳು ಮಾಡಿ. ನಂತರ ಮಾತ್ರ ನನ್ನನ್ನು ದೂಷಿಸಬೇಡಿ. “

Swami, following the whole conversation from under the blanket, felt tremendously relieved to hear that his father was giving him up.
ಸ್ವಾಮಿ, ಕಂಬಳಿಯ ಕೆಳಗೆ ಇಡೀ ಸಂಭಾಷಣೆಯನ್ನು ಕೇಳಿಸಿಕೊಂಡನು, ತನ್ನ ತಂದೆ ತನ್ನನ್ನು ತನ್ನ ಪಾಡಿಗೆ ಬಿಟ್ಟು ಬಿಡುತ್ತಿದ್ದಾರೆ ಎಂದು ಕೇಳಿ ಅವನಿಗೆ ತುಂಬಾ ಸಮಾಧಾನವಾಯಿತು.

ಈ ಪಠ್ಯವನ್ನು ಆರ್ . ಕೆ. ನಾರಾಯಣ್ ರವರ ಮಾಲ್ಗುಡಿ ಡೇಸ್ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ. ಕನ್ನಡಡಾ ಒಬ್ಬ ಶ್ರೇಷ್ಠ ನಟರೂ ನಿರ್ದೇಶಕರೂ ಆಗಿದ್ದ ಶಂಕರ ನಾಗ್ ರವರು ಈ ಕಥಾಮಾಲಿಕೆಯನ್ನು ಮಾಲ್ಗುಡಿ ಡೇಸ್ ಎಂಬ ಹಿಂದಿ ಟಿವಿ ಸೀರಿಯಲ್ ಆಗಿ ಮಾಡಿದ್ದಾರೆ. ಈ ಕತೆಯನ್ನು ಈ ಕೆಳಗೆ ಕೊಟ್ಟಿರುವ ವಿಡಿಯೋ ಲಿಂಕ್ ಮೂಲಕ ನೋಡಬಹುದು.

https://www.youtube.com/watch?v=7A3WXBxUuUg

Spread the Knowledge

You may also like...

Leave a Reply

Your email address will not be published. Required fields are marked *