ಚಂಪೂ ಸಾಹಿತ್ಯ ಪ್ರಕಾರ
“ಚಂಪೂ’ ಇದೊಂದು ಬರೆಯುವ ಶೈಲಿಗೆ ಸಂಬಂಧಿಸಿದ ಪರಿಭಾಷೆ. ಭಾರತೀಯ ಭಾಷೆಗಳಲ್ಲಿ ಪ್ರಾಚೀನವಾದ, ಪ್ರಸಿದ್ಧವಾದ ಹಾಗೂ ವಿಶಿಷ್ಟವಾದ ಒಂದು ಕಾವ್ಯ ಪ್ರಕಾರ. ಕನ್ನಡದ ಆರಂಭದ ಬಹುತೇಕ ಕವಿಗಳು ಇದನ್ನು ಯಶಸ್ವಿಯಾಗಿ ಬಳಸಿದ್ದಾರೆ. ಚಂಪೂ ಪ್ರಧಾನವಾಗಿ ಪದ್ಯ-ಗದ್ಯಗಳಿ೦ದ ಕೂಡಿರುತ್ತದೆ. “ಚಂಪೂ’ ಎನ್ನುವುದಕ್ಕೆ ಸುಂದರವಾದದ್ದು, ಮನೋಹರವಾದದ್ದು ಎ೦ಬ ಅರ್ಥವಿದೆ. ಕನ್ನಡದಲ್ಲಿ ಚಂಪೂ...