ಕನ್ನಡ ವ್ಯಾಕರಣ – ಛಂದಸ್ಸು
ಛಂದಸ್ಸು ಶುದ್ಧ ಹಾಗೂ ಅರ್ಥಪೂರ್ಣವಾಗಿ ಮಾತನಾಡಲು, ಬರೆಯಲು ವ್ಯಾಕರಣ ಶಾಸ್ತ್ರವು ಹೇಗೆ ಅಗತ್ಯವೋ ಹಾಗೆಯೇ ಪದ್ಯರಚನೆ ಮಾಡಲೂ ಕೆಲವು ನಿಯಮಗಳಿರುತ್ತವೆ. ಇಂತಹ ಪದ್ಯರಚನಾ ನಿಯಮವನ್ನು ಛಂದಸ್ಸು ಎಂದು ಕರೆಯಲಾಗಿದೆ. ಸುಮಾರು ಕ್ರಿ.ಶ. ೯೯೦ರಲ್ಲಿ ಇದ್ದ ಒಂದನೆಯ ನಾಗವರ್ಮ ಎಂಬವನು ಛಂದೋಂಬುಧಿ ಎಂಬ ಗ್ರಂಥದ ಮೂಲಕ ಈ ಶಾಸ್ತ್ರವನ್ನು...