ತ್ರಿಪದಿ ಸಾಹಿತ್ಯ ಪ್ರಕಾರ
ತ್ರಿಪದಿ ಒಂದು ದೇಸಿ ಛಂದೋಪ್ರಕಾರ. “ಜನವಾಣಿ ಮಳೆ; ಕವಿವಾಣಿ ಹೊಳೆ’ ಎಂಬ ಡಾ. ಬೆಟಗೇರಿ ಕೃಷ್ಣಶರ್ಮರ ಮಾತಿನಂತೆ ಕನ್ನಡ ಸಾಹಿತ್ಯಕ್ಕೆ ಜನಪದ ಕವಿಗಳು ನೀಡಿದ ಅಪೂರ್ವ ಕೊಡುಗೆ. ಶಿಷ್ಟ ಕವಿಗಳ ಆದರಕ್ಕೂ ಒಳಗಾಗಿರುವ ಈ ಕಾವ್ಯ ಪ್ರಕಾರದ ಮೂಲವನ್ನು ಜನಪದರ “ಗರತಿಯ ಹಾಡು’ಗಳಲ್ಲಿ ಕಾಣಬಹುದಾಗಿದೆ. ಏಳನೆಯ ಶತಮಾನದ...