Monthly Archive: August 2021

Pandit Ravi Shankar and Ustad Allah Rakha

The Concert – Shanta Rameshwar Rao – Kannada Summary

ಒಂದು ದಿನ ಬೆಳಿಗ್ಗೆ, ಬಾಂಬೆಯ ಒಂದು ಸಣ್ಣ ಅಪಾರ್ಟ್‌ಮೆಂಟ್‌ನಲ್ಲಿ, ಸುಮಾರು ಹದಿನಾರು ವರ್ಷದ ಹುಡುಗಿ ವೃತ್ತಪತ್ರಿಕೆಯಿಂದ ನೋಡುತ್ತಾ, ‘ನಾಳೆ ಷಣ್ಮುಖಾನಂದ ಸಭಾಂಗಣದಲ್ಲಿ ಪಂಡಿತ್ ರವಿಶಂಕರ್ ಅವರು ಕಚೇರಿ ನಡೆಸುತ್ತಿದ್ದಾರೆ.’ ಎಂದು ಉತ್ಸಾಹದಿಂದ ಹೇಳಿದಳು.

ಸಮಾಸಗಳು

ಕನ್ನಡ ವ್ಯಾಕರಣ – ಸಮಾಸ

ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಗಳು ಅರ್ಥಕ್ಕನುಸಾರ ಒಟ್ಟು ಸೇರಿ ಪೂರ್ವ ಪದದ ಅಂತ್ಯದಲ್ಲಿ ವಿಭಕ್ತಿ ಪ್ರತ್ಯಯವಿದ್ದರೆ ಅದು ಲೋಪವಾಗಿ ಒಂದೇ ಪದವಾಗುವುದೇ ಸಮಾಸ.

ಈ ರೀತಿ ಸಮಾಸವಾಗುವಾಗ ಸಂಸ್ಕೃತ ಪದದೊಂದಿಗೆ ಸಂಸ್ಕೃತ ಪದವೇ ಸೇರಬೇಕು.

ಕನ್ನಡ ಪದದೊಂದಿಗೆ ಕನ್ನಡ ಪದವೇ ಸೇರಬೇಕು. ಸಂಸ್ಕೃತ ಪದಕ್ಕೆ ಕನ್ನಡ, ಕನ್ನಡ ಪದಕ್ಕೆ ಸಂಸ್ಕೃತ ಪದಗಳನ್ನು ಸೇರಿಸಿ ಸಮಾಸ ಮಾಡಬಾರದು.

ದ್ವಿರುಕ್ತಿ - ಜೋಡುನುಡಿ - ನುಡಿಗಟ್ಟು

ಕನ್ನಡ ವ್ಯಾಕರಣ – ದ್ವಿರುಕ್ತಿ – ಜೋಡುನುಡಿ – ನುಡಿಗಟ್ಟು

ದ್ವಿರುಕ್ತಿ – ಜೋಡುನುಡಿ – ನುಡಿಗಟ್ಟು (ಪಡೆನುಡಿ) ವಾಕ್ಯದಲ್ಲಿ ಪದವನ್ನು ಜೋಡಿಸುವ ಜಾಣ್ಮೆಯೇ ಶೈಲಿ. ಪದಗಳ ಆಯ್ಕೆ ಮತ್ತು ಜೋಡಣೆಯಲ್ಲಿ ಕೌಶಲ ಇದ್ದಾಗ ಶೈಲಿ ಸುಂದರವಾಗುತ್ತದೆ. ಭಾಷೆಯಲ್ಲಿ ಸಹಜ-ಸ್ವಾಭಾವಿಕ ಪದಗಳೊಂದಿಗೆ ವಿಶಿಷ್ಟ ಅರ್ಥಬರುವಂತೆ ಕೆಲವು ಪದಗಳನ್ನು ಜೋಡಿಸಿ ಬಳಸುವುದುಂಟು. ಅಂತಹ ಪದಗಳ ಜೋಡಣೆಯಲ್ಲಿ ದ್ವಿರುಕ್ತಿ, ಜೋಡುನುಡಿ, ನುಡಿಗಟ್ಟು...

ವಾಕ್ಯ ರಚನೆ

ಕನ್ನಡ ವ್ಯಾಕರಣ – ವಾಕ್ಯ ರಚನೆ ಮತ್ತು ವಾಕ್ಯಪ್ರಭೇದಗಳು

ಪದಗಳು ಅಕ್ಷರಗಳನ್ನು ಅರ್ಥವತ್ತಾಗಿ ಜೋಡಿಸಿದಾಗ ಪದರಚನೆಯಾಗುತ್ತದೆ. ಕೆಲವೊಮ್ಮೆ ಒಂದೇ ಅಕ್ಷರವೂ ಪದವೆಂದು ಕರೆಯಲ್ಪಡುತ್ತದೆ. ಉದಾ : ಆ ಮನೆ, ಈ ತೋಟ ಇಲ್ಲಿರುವ ಆ, ಈ ಎಂಬ ಅಕ್ಷರಗಳು ಪದಗಳೇ ಆಗಿರುತ್ತವೆ. ಮಾತು ಪದಗಳಿಂದ ಆರಂಭವಾಗುತ್ತದೆ. ಆದರೆ ಅದು ವಿಕಾಸಗೊಳ್ಳುವುದು ವಾಕ್ಯಗಳ ಮೂಲಕ. ಹಾಗಾಗಿ ಪದಗಳ ಅರ್ಥಪೂರ್ಣ...

ತತ್ಸಮ - ತದ್ಭವಗಳು

ತತ್ಸಮ – ತದ್ಭವಗಳು

ಪದಗಳು ಅಕ್ಷರಗಳನ್ನು ಅರ್ಥವತ್ತಾಗಿ ಜೋಡಿಸಿದಾಗ ಪದರಚನೆಯಾಗುತ್ತದೆ. ಕೆಲವೊಮ್ಮೆ ಒಂದೇ ಅಕ್ಷರವೂ ಪದವೆಂದು ಕರೆಯಲ್ಪಡುತ್ತದೆ. ಉದಾ : ಆ ಮನೆ, ಈ ತೋಟ ಇಲ್ಲಿರುವ ಆ, ಈ ಎಂಬ ಅಕ್ಷರಗಳು ಪದಗಳೇ ಆಗಿರುತ್ತವೆ. ಭಾಷೆಯೆಂಬುದು ನಿಂತ ನೀರಲ್ಲ. ಅದು ತನ್ನ ಸಂಪರ್ಕಕ್ಕೆ ಸಿಕ್ಕುವ ಬೇರೆ ಭಾಷೆಗಳಿಂದಲೂ ಪದಗಳನ್ನು ಸ್ವೀಕರಿಸಿ...

ಸಂಧಿಗಳು

ಕನ್ನಡ ವ್ಯಾಕರಣ – ಸಂಧಿಗಳು

ಸಂಧಿ ಪರಿಚಯಾತ್ಮಕ ವಿವರ ಮಾತನಾಡುವಾಗ ಕೆಲವು ಪದಗಳನ್ನು ಬಿಡಿಬಿಡಿಯಾಗಿ ಹೇಳದೆ ಕೂಡಿಸಿ ಹೇಳುತ್ತೇವೆ. ಉದಾ: ಅಲ್ಲಿಅಲ್ಲಿ ಎಂಬ ಎರಡು ಪದಗಳನ್ನು ‘ಅಲ್ಲಲ್ಲಿ’ ಎಂದು ಒಂದೇ ಪದವಾಗಿ ಹೇಳುತ್ತೇವೆ. ಇಲ್ಲಿ ಎರಡು ಪದಗಳ ನಾಲ್ಕು ಅಕ್ಷರಗಳು ಒಟ್ಟು ಸೇರಿ ಮೂರು ಅಕ್ಷರಗಳ ಒಂದು ಪದವಾಗಿದೆ. ಹೀಗೆ – ಪದ...

ಅವ್ಯಯಗಳು

ಕನ್ನಡ ವ್ಯಾಕರಣ – ಅವ್ಯಯಗಳು

ಅವ್ಯಯಗಳು ಈ ವಾಕ್ಯಗಳನ್ನು ಗಮನಿಸಿ : — ಅವನು ಸುತ್ತಲೂ ನೋಡಿದನು. — ಅವಳು ಸುತ್ತಲೂ ನೋಡಿದಳು. — ಅವರು ಸುತ್ತಲೂ ನೋಡಿದರು. — ಅದು ಸುತ್ತಲೂ ನೋಡಿತು. ಈ ನಾಲ್ಕು ವಾಕ್ಯಗಳಲ್ಲಿ ಬಂದಿರುವ ‘ಸುತ್ತಲೂ’ ಎಂಬ ಪದವನ್ನು ಗಮನಿಸಿದಾಗ ಅದು ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗಗಳಲ್ಲೂ ಏಕವಚನ,...

ಕನ್ನಡ ವ್ಯಾಕರಣ – ನಾಮಪದ

ಕನ್ನಡ ವ್ಯಾಕರಣ – ನಾಮಪದ

ಕ್ರಿಯೆಯ ಅರ್ಥವನ್ನು ಕೊಡದೆ ಇರುವ ಎಲ್ಲಾ ನಾಮವಾಚಕಪದಗಳನ್ನು ನಾಮಪದಗಳೆನ್ನವರು. ನಾಮಪದ ಪರಿಚಯಾತ್ಮಕ ವಿವರ — ಭೀಮನು ಚೆನ್ನಾಗಿ ಹಾಡಿದನು. — ರಾಗಿಣಿಯು ನೃತ್ಯ ಸ್ಪರ್ಧೆಯಲ್ಲಿ ಪ್ರಥಮಸ್ಥಾನವನ್ನು ಪಡೆದಳು. ಈ ಎರಡು ವಾಕ್ಯಗಳನ್ನು ಗಮನಿಸಿದಾಗ ಬೇರೆ ಬೇರೆ ಬಗೆಯ ಪದಗಳು ಬಳಕೆಯಾಗಿರುವುದನ್ನು ಕಾಣಬಹುದು. ವ್ಯಾಕರಣದ ಪ್ರಕಾರ ಇಂತಹ ಪದಗಳನ್ನು...

ಕಾಲ ಸೂಚಕ ಕ್ರಿಯಾಪದ

ಕನ್ನಡ ವ್ಯಾಕರಣ – ಕಾಲ ಸೂಚಕ ಕ್ರಿಯಾಪದ

ಇದನ್ನ ಓದಿರಿ : ಕ್ರಿಯಾಪದ ಕಾಲ ಸೂಚಕ ಕ್ರಿಯಾಪದ ಕ್ರಿಯೆಯ ಅರ್ಥವನ್ನು ಕೊಡುವ ಪದಗಳೆಲ್ಲವೂ ಕ್ರಿಯಾಪದಗಳು. ಕ್ರಿಯಾಪದದ ಮೂಲರೂಪವೇ ಕ್ರಿಯಾಪ್ರಕೃತಿ. ಕ್ರಿಯಾಪ್ರಕೃತಿಯನ್ನು ಧಾತು ಎನ್ನುವರು. ಧಾತುವಿಗೆ ಆಖ್ಯಾತ ಪ್ರತ್ಯಯಗಳು ಸೇರಿ ಕ್ರಿಯಾಪದಗಳಾಗುತ್ತವೆ. ಈ ಎರಡರ ನಡುವೆ ಕ್ರಮವಾಗಿ ಉತ್ತ, ದ, ವ, ಎಂಬ ಕಾಲಸೂಚಕ ಪ್ರತ್ಯಯಗಳು ಸೇರಿ...

ಕನ್ನಡ ವ್ಯಾಕರಣ

ಭಾಷೆ ಮತ್ತು ವ್ಯಾಕರಣ ಮಾನವ ಮನಸ್ಸಿನ ಭಾವನೆಗಳನ್ನು ಮಾತಿನ ಮೂಲಕ ವ್ಯಕ್ತಪಡಿಸುತ್ತಾನೆ. ನಮ್ಮ ಭಾವನೆಗಳನ್ನು ಮತ್ತು ಅಭಿಪ್ರಾಯಗಳನ್ನು ಇತರರಿಗೆ ವ್ಯಕ್ತಪಡಿಸುವುದಕ್ಕೆ ಮತ್ತು ಅವರ ಅಭಿಪ್ರಾಯಗಳನ್ನು ಮತ್ತು ಭಾವನೆಗಳನ್ನು ನಾವು ತಿಳಿಯುವ ಮಾಧ್ಯಮಕ್ಕೆ ಭಾಷೆ ಎಂದು ಹೆಸರು. ಆಡಿದ, ಆಡಬೇಕಾದ ಮಾತುಗಳನ್ನು ನಿರ್ದಿಷ್ಟ ಲಿಪಿಯ (ಲಿಖಿತ) ರೂಪಕ್ಕಿಳಿಸುವುದೇ ಬರೆವಣಿಗೆ....