ಕಂಪ್ಯೂಟರ್, ಒಂದು ಪರಿಚಯ
ಕಂಪ್ಯೂಟರ್ ಎನ್ನುವುದು ಒಂದು ಮಷೀನ್, ಎಲೆಕ್ಟ್ರಾನಿಕ್ ಸಾಧನ. ನಾವು ಕೊಟ್ಟ ಡಾಟಾವನ್ನು ಸ್ಟೋರ್ ಮಾಡಿ ಇಡುತ್ತದೆ. ಮತ್ತು ಪ್ರೋಗ್ರಾಮ್ಗಳ ಮೂಲಕ ನಾವು ಕೊಡುವ ಸೂಚನೆಗಳನ್ನು ಲಾಜಿಕ್ ಗಳು ಮತ್ತು ಅಂಕಕಾಣಿತದ ಪ್ರಕ್ರಿಯೆಗಳನ್ನು ಬಳಸಿ ಡೇಟಾವನ್ನು ಸಂಸ್ಕರಿಸಿ (processs), ಫಲಿತಾಂಶಗಳನ್ನು (results) ಕೊಡುತ್ತದೆ.
ಕಂಪ್ಯೂಟರ್ ಒಂದು ಡಿಜಿಟಲ್ ಮಶಿನ್ . ಈಗ ಡಿಜಿಟಲ್ ಅಂದರೆ ಏನು?
ನೀವು ಕೈಗೆ ಕಟ್ಟುವ ವಾಚುಗಳನ್ನು ನೋಡಿದ್ದೀರಾ ಅಲ್ಲವೇ? ಅದರಲ್ಲಿ ಪ್ರಮುಖವಾಗಿ ಎರಡು ರೀತಿಯ ವಾಚುಗಳು ಇವೆ. anaolg ಮತ್ತು digital .
ಎರಡೂ ಮೂರೋ ಮುಳ್ಳುಗಳು ಇದ್ದು ಸುತ್ತಿ ಸುತ್ತಿ ಸಮಯ ತೋರಿಸು ವಾಚು ಒಂದು anaolog ಮಶಿನ್ . ಅಂದರೆ ಎಲ್ಲಿಯೂ ತಡೆಯಿಲ್ಲದೆ ಸತತವಾಗಿ ಯಾವುದೇ ಒಂದು ಅಳತೆಯನ್ನು ತೋರಿಸುವ ಮಷಿನುಗಳು.
ನಂಬರ್ ಗಳ ಮೂಲಕ ಸಮಯ ತೋರಿಸುವ ವಾಚುಗಳು ಡಿಜಿಟಲ್ ಮಷಿನುಗಳು ಎನ್ನಬಹುದು.
ಅವು ನಿಮಗೆ ಒಂದು, ಎರಡು ಮೂರು ಎನ್ನುವ ಅಳತೆಯನ್ನು ತೋರಿಸುತ್ತವೆಯೇ ಹೊರತು analog ವಾಚುಗಳಂತೆ, ನಿರಂತರವಾಗಿ (continuously) ಮಾಹಿತಿಯನ್ನು ಕೊಡುವುದಿಲ್ಲ.
ಹಾಗೆಯೆ ಕಂಪ್ಯೂಟರ್ಗಳು ಕೂಡ ಡಿಜಿಟಲ್ ರೂಪದಲ್ಲಿ ಡಾಟಾವನ್ನು ನಿರ್ವಹಿಸುತ್ತವೆ . ಆದರೆ ಇಲ್ಲಿ ಒಂದು ಭಿನ್ನತೆಯಿದೆ. ನೀವು ಕೊಡುವ ಯಾವುದೇ ಡೇಟಾ, ಅಕ್ಷರ, ಚಿತ್ರಗಳು, ವಿಡಿಯೋಗಳು ಅಥವಾ ಹಾಡುಗಳು ಎಲ್ಲವು ಕೂಡ ಕಂಪ್ಯೂಟರಿನ ಪ್ರಪಂಚದಲ್ಲಿ ೦ ಮತ್ತು 1ರ ರೂಪದಲ್ಲಿಯೇ ಇರುತ್ತವೆ. ಅದನ್ನು ಬೈನರಿ ನಂಬರ್ ಗಳು ಎನ್ನಲಾಗುತ್ತದೆ.
ಈಗ ಸಧ್ಯಕ್ಕೆ ಕಣ್ಣಿಗೆ ಕಾಣುವ ಕಂಪ್ಯೂಟರಿನ ಭಾಗಗಳ ಪರಿಚಯ ಮಾಡಿಕೊಳ್ಳೋಣ.
ಒಂದು ಕಂಪ್ಯೂಟರ್ ಅಂದ ಕೂಡಲೇ ನಿಮ್ಮ ಕಣ್ಣ ಮುಂದೆ ಏನು ಚಿತ್ರ ಬರುತ್ತದೆ?
ನೀವು ಡಾಟಾವನ್ನು ಎಂಟರ್ ಮಾಡಲು ಬಳಸುವ ಕೀಬೋರ್ಡ್ , ಮೌಸ್, ಡಾಟಾವನ್ನು ತೋರಿಸುವ ಮಾನಿಟರ್, ಇನ್ನು ಬೇಕೆಂದರೆ ಸ್ಪೀಕರ್, ಪ್ರಿಂಟರ್, ಸ್ಕ್ಯಾನರ್ ಮುಂತಾದುವು.
ಇಲ್ಲಿ ಡಾಟಾವನ್ನು ಎಂಟರ್ ಮಾಡಲು ಬಳಸುವ ಸಾಧನಗಳನ್ನು ಇನ್ಪುಟ್ ಡಿವೈಸ್ ಗಳು ಎನ್ನುತೇವೆ. ಉದಾಹರಣೆಗೆ ಕೀಬೋರ್ಡ್ , ಮೌಸ್, ಕ್ಯಾಮೆರಾ, ಮೈಕ್ ಮುಂತಾದುವು.
ಡಾಟಾವನ್ನು ನಮ್ಮ ಅವಶ್ಯಕತೆ ತಕ್ಕಂತೆ ಕೊಡುವ ಸಾಧನಗಳು ಔಟ್ಪುಟ್ ಡಿವೈಸ್ ಗಳು.
ಉದಾಹರೆಣೆಗೆ ಮಾನಿಟರ್, ಸ್ಪೀಕರ್, ಪ್ರಿಂಟರ್, ಸ್ಕ್ಯಾನರ್ ಮುಂತಾದುವು.
ಆದರೆ ಇಲ್ಲಿ ಕಂಪ್ಯೂಟರಿನ ಪ್ರಮುಖವಾದ ಇನ್ನೊಂದು ಭಾಗವಿದೆ. ಪ್ರೊಸೆಸರ್. ನಾವು ಎಂಟರ್ ಮಾಡುವ ಡಾಟಾವನ್ನು ತೆಗೆದುಕೊಂಡು, ಕಂಪ್ಯೂಟರಿಗೆ ಅರ್ಥವಾಗುವ ಬೈನರಿ ಡಿಜಿಟಲ್ ಫಾರ್ಮಾಟಿಗೆ ಬದಲಾಯಿಸಿ ಸ್ಟೋರ್ ಮಾಡುತ್ತದೆ. ಅನಂತರ ನಾವು ಕೊಡುವ ಸೂಚನೆಗಳಿಗೆ ತಕ್ಕಂತೆ ಡಾಟದ ಮೇಲೆ ಗಣಿತ ಹಾಗೂ ಕೆಲ ಲಾಜಿಕ್ಕುಗಳನ್ನು ಅಪ್ಲೈ ಮಾಡಿ ನಮಗೆ ಬೇಕಾದ ರಿಸಲ್ಟ್ ಗಳನ್ನು ತೋರಿಸುತ್ತದೆ.
ಇದನ್ನು CPU ಸೆಂಟ್ರಲ್ ಪ್ರೊಸೆಸಿಂಗ್ ಯೂನಿಟ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಮೂರೂ ಭಾಗಗಳಿವೆ. ಅರಿತೆಮೆಟಿಕ್ ಯೂನಿಟ್ ಮತ್ತು ಲಾಜಿಕಲ್ ಯೂನಿಟ್, ಮೆಮೊರಿ ಯೂನಿಟ್ ಹಾಗು ಕಂಟ್ರೋಲ್ ಯೂನಿಟ್ . ಇಲ್ಲಿ ಕಂಟ್ರೋಲ್ ಯೂನಿಟ್ ಅಗತ್ಯವಿರುವ ಡಾಟಾವನ್ನು ಮೆಮೊರಿಯಿಂದ ತಂದು ಅರಿತೆಮೆಟಿಕ್ ಮತ್ತು ಲಾಜಿಕಲ್ ಯೂನಿಟ್ ಗಳಲ್ಲಿ ಸಂಸ್ಕರಿಸಿ ಔಟ್ಪುಟ್ ಅಂದರೆ ಫಲಿತಾಂಶವನ್ನು ನಮಗೆ ಅರ್ಥವಾಗುವ ರೀತಿಯಲ್ಲಿ ಡಿಸ್ಪ್ಲೇ(display) ಮಾಡುತ್ತದೆ.
ಸಾರಾಂಶ (summary) ಏನೆಂದರೆ , ಇನ್ಪುಟ್, ಔಟ್ಪುಟ್, ಮೆಮೊರಿ, ಹಾಗು ಪ್ರೊಸೆಸರ್ ಗಳನ್ನು ಹೊಂದಿರುವ ಡಿಜಿಟಲ್ ಇಲೆಕ್ಟ್ರಾನಿಕ್ ಸಾಧನಗಳನ್ನು ಕಂಪ್ಯೂಟರ್ ಎನ್ನಬಹುದು.
ಅಂತೆಯೇ ನಮ್ಮ ಸ್ಮಾರ್ಟ್ ಫೋನುಗಳು, ಮೈಕ್ರೋವವುಗಳೂ(microwave) ಕೂಡ ಒಂದು ರೀತಿಯಲ್ಲಿ ಕಂಪ್ಯೂಟರುಗಳೇ. ಆದರೆ ಅವುಗಳ ಸಾಮರ್ಥ್ಯ ಬೇರೆ ಬೇರೆ ಅಷ್ಟೇ.
ಇದನ್ನೂ ಓದಿರಿ
ಕಂಪ್ಯೂಟರ್ ಗಳ ಇತಿಹಾಸ ಮತ್ತು ವರ್ಗೀಕರಣ
ಮೊಬೈಲ್ ಫೋನ್ / ಸ್ಮಾರ್ಟ್ ಫೋನಿನ್ನಲ್ಲಿ ಇರಲೇಬೇಕಾದ ಅಪ್ಲಿಕೇಶನ್ನುಗಳು (mobile apps)