ತತ್ಸಮ – ತದ್ಭವಗಳು
ಪದಗಳು ಅಕ್ಷರಗಳನ್ನು ಅರ್ಥವತ್ತಾಗಿ ಜೋಡಿಸಿದಾಗ ಪದರಚನೆಯಾಗುತ್ತದೆ. ಕೆಲವೊಮ್ಮೆ ಒಂದೇ ಅಕ್ಷರವೂ ಪದವೆಂದು ಕರೆಯಲ್ಪಡುತ್ತದೆ. ಉದಾ : ಆ ಮನೆ, ಈ ತೋಟ ಇಲ್ಲಿರುವ ಆ, ಈ ಎಂಬ ಅಕ್ಷರಗಳು ಪದಗಳೇ ಆಗಿರುತ್ತವೆ. ಭಾಷೆಯೆಂಬುದು ನಿಂತ ನೀರಲ್ಲ. ಅದು ತನ್ನ ಸಂಪರ್ಕಕ್ಕೆ ಸಿಕ್ಕುವ ಬೇರೆ ಭಾಷೆಗಳಿಂದಲೂ ಪದಗಳನ್ನು ಸ್ವೀಕರಿಸಿ...