ದಕ್ಷಿಣ ಭಾರತ ಇತಿಹಾಸ – ಕಾಲಾನುಕ್ರಮ
ವಿಂಧ್ಯ ಪರ್ವತಗಳು ಉತ್ತರ ಮತ್ತು ದಕ್ಷಿಣ ಭಾರತವನ್ನು ಪ್ರತ್ಯೇಕಿಸುತ್ತವೆ. ವಿಂಧ್ಯ ಪರ್ವತದ ದಕ್ಷಿಣ ಭಾಗದಿಂದ ಕನ್ಯಾಕುಮಾರಿಯವರೆಗಿನ ದೇಶವನ್ನು ದಕ್ಷಿಣ ಭಾರತ ಅಥವಾ ದಖನ್ ಪ್ರಾಂತ್ಯ ಎಂದು ಕರೆಯಲಾಗಿದೆ. ಶಾತವಾಹನರು, ಕದಂಬರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ಪಲ್ಲವರು ಈ ಪ್ರದೇಶವನ್ನು ಆಳಿದವರಲ್ಲಿ ಪ್ರಮುಖರು.

