ದಕ್ಷಿಣ ಭಾರತ ಇತಿಹಾಸ – ಕಾಲಾನುಕ್ರಮ

ವಿಂಧ್ಯ ಪರ್ವತಗಳು ಉತ್ತರ ಮತ್ತು ದಕ್ಷಿಣ ಭಾರತವನ್ನು ಪ್ರತ್ಯೇಕಿಸುತ್ತವೆ. ವಿಂಧ್ಯ ಪರ್ವತದ ದಕ್ಷಿಣ ಭಾಗದಿಂದ ಕನ್ಯಾಕುಮಾರಿಯವರೆಗಿನ ದೇಶವನ್ನು ದಕ್ಷಿಣ ಭಾರತ ಅಥವಾ ದಖನ್ ಪ್ರಾಂತ್ಯ ಎಂದು ಕರೆಯಲಾಗಿದೆ. ಶಾತವಾಹನರು, ಕದಂಬರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ಪಲ್ಲವರು ಈ ಪ್ರದೇಶವನ್ನು ಆಳಿದವರಲ್ಲಿ ಪ್ರಮುಖರು.

ದಕ್ಷಿಣ ಭಾರತ ಇತಿಹಾಸ – ಕಾಲಾನುಕ್ರಮ

ಸಾ.ಶ.ಪೂ. 230 – ಸಾ.ಶ. 220ಶಾತವಾಹನರು

ಶಾತವಾಹನರು

ಶಾತವಾಹನ ವಂಶವು ದಖನ್‍ನಲ್ಲಿ ಸ್ಥಾಪನೆಗೊಂಡ ಮೊದಲ ರಾಜವಂಶವಾಗಿದೆ. ಚಂದ್ರಗುಪ್ತಮೌರ್ಯನ ಕಾಲದಲ್ಲಿ ಗೋದಾವರಿ, ಕೃಷ್ಣಾ ನದಿಗಳ ಮಧ್ಯೆ ನೆಲೆಸಿದ್ದು, ಸಾಮಂತರಾಗಿ ಕಪ್ಪಕಾಣಿಕೆಯನ್ನು ಸಲ್ಲಿಸುತ್ತಾ, ಸಾ.ಶ.ಪೂ. 220ರ ವೇಳೆಗೆ ಸಿಮುಖನು ಸ್ವತಂತ್ರನಾಗಿ ಶ್ರೀಕಾಕುಲಂನ್ನು ರಾಜಧಾನಿಯನ್ನಾಗಿ ಮಾಡಿಕೊಂಡನು. ಗೌತಮಿಪುತ್ರ ಶಾತಕರ್ಣಿ  ಈ ವಂಶದ ಪ್ರಮುಖ ದೊರೆ ಗೌತಮಿಪುತ್ರ ಶಾತಕರ್ಣಿ. ಸಾಮ್ರಾಜ್ಯಕ್ಕೆ ಕಂಠಕರಾಗಿದ್ದ...

ಸಾ.ಶ. 325 ರಿಂದ ಸಾ.ಶ. 540ಕದಂಬರು

ಕದಂಬರು

ಕರ್ನಾಟಕದಲ್ಲಿ ಸ್ಥಾಪನೆಗೊಂಡ ಮೊದಲ ಸ್ಥಳೀಯ ರಾಜವಂಶ ಇದಾಗಿದೆ.   ಕದಂಬರ ರಾಜಧಾನಿ ಬನವಾಸಿ, ಈಗಿನ ಉತ್ತರ ಕನ್ನಡ ಜಿಲ್ಲೆಯಲ್ಲಿದೆ.   ಮಯೂರವರ್ಮನು ಈ ಸಂತತಿಯ ಸ್ಥಾಪಕ ಮತ್ತು ಶ್ರೇಷ್ಠನಾದ ರಾಜನು. ಪಲ್ಲವರಾಜ ಶಿವಸ್ಕಂದವರ್ಮನಿಂದ ಅಪಮಾನಗೊಂಡಾಗ ಮಯೂರಶರ್ಮ ತನ್ನ ವರ್ಣವನ್ನು ತ್ಯಜಿಸಿ ಕ್ಷತ್ರಿಯ ವರ್ಣ ಸ್ವೀಕರಿಸಿ ಮಯೂರವರ್ಮನಾದನು. ಪಲ್ಲವರನ್ನು...

ಸಾ.ಶ. 350 - ಸಾ.ಶ. 1004ಗಂಗರು

ಗಂಗರು

ಗಂಗರಾಜ ವಂಶದ ಉನ್ನತಿ ಮತ್ತು ಅವನತಿ ಕರ್ನಾಟಕದ ಇತಿಹಾಸದ ಆದಿಭಾಗದ ಒಂದು ಮುಖ್ಯ ಅಧ್ಯಾಯವಾಗಿದೆ. ಗಂಗವಂಶದ ಸಂಸ್ಥಾಪಕರು ತಮ್ಮನ್ನು ಇಕ್ಷ್ವಾಕು ವಂಶದವರೆಂದು ಹೇಳಿಕೊಂಡರು. ಕುವಲಾಲ, ತಲಕಾಡು ಹಾಗೂ ಮಾನ್ಯಪುರ (ಈಗಿನ ಮಣ್ಣೆ, ನೆಲಮಂಗಲ, ಬೆಂಗಳೂರು ಗ್ರಾಮಾಂತರ ಜಿಲ್ಲೆ) ಗಳಿಂದ ರಾಜ್ಯವಾಳಿದರು.   ದಡಿಗನಿಂದ ಪ್ರಾರಂಭವಾದ ಗಂಗವಾಡಿ ರಾಜ್ಯವು...

ಸಾಶ. 540 - 753ಬಾದಾಮಿಯ ಚಾಳುಕ್ಯರು

ಬಾದಾಮಿಯ ಚಾಳುಕ್ಯರು (ಸಾಶ. 540 – 753)

  ಸಾ.ಶ. 6ನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ಮಹಾನ್ ಶಕ್ತಿಶಾಲಿ ರಾಜರುಗಳು ಆಳಿದರು. ಅವರೇ ಬಾದಾಮಿಯ ಚಾಳುಕ್ಯರು.   ಕರ್ನಾಟಕದಲ್ಲಿ ತಮ್ಮ ಸಾರ್ವಭೌಮಾಧಿಕಾರವನ್ನು ಸ್ಥಾಪಿಸಿ ಸುಮಾರು ಎರಡು ಶತಮಾನಗಳ ಕಾಲ ಅವಿಚ್ಛಿನ್ನವಾಗಿ, ಅಪಾರ ವೈಭವದಿಂದ ರಾಜ್ಯಭಾರ ಮಾಡಿದರು. ದಕ್ಷಿಣ ಭಾರತದ ಇತಿಹಾಸದಲ್ಲಿ ಪ್ರಮುಖ ಪಾತ್ರವಹಿಸಿದ ಚಾಳುಕ್ಯ ರಾಜ ಮನೆತನವು...

ಸಾ.ಶ. 350 - 895ಕಂಚಿಯ ಪಲ್ಲವರು

ಕಂಚಿಯ ಪಲ್ಲವರು (ಸಾ.ಶ. 350 – 895)

ದಕ್ಷಿಣ ಭಾರತ : ಸಾ.ಶ. 600 ಚಿತ್ರ ಕೃಪೆ : Thomas Lessman    ದಕ್ಷಿಣ ಭಾರತ ಇತಿಹಾಸ – ಕಾಲಾನುಕ್ರಮ ಪಲ್ಲವರು ತಮಿಳುನಾಡಿನ ಪ್ರಪ್ರಥಮ ರಾಜರುಗಳು.   ದಕ್ಷಿಣ ಭಾರತವನ್ನು ಆಳಿದ ವಂಶಗಳಲ್ಲಿ ಇವರಿಗೆ ವಿಶೇಷ ಸ್ಥಾನವಿದೆ. ಸಾ.ಶ. 4ನೇ ಶತಮಾನದಿಂದ ಸಾ.ಶ. 9ನೇ ಶತಮಾನದವರೆಗೆ...

ಸಾ.ಶ. 753 - 973ರಾಷ್ಟ್ರಕೂಟರು

ರಾಷ್ಟ್ರಕೂಟರು (ಸಾ.ಶ. 753 – 973)

   ರಾಷ್ಟ್ರಕೂಟರು ಕನ್ನಡಿಗರು.   ಪ್ರಾರಂಭದಲ್ಲಿ ಚಾಲುಕ್ಯರ ಸಾಮಂತರಾಗಿದ್ದವರು. ಅನಂತರ ಸ್ವತಂತ್ರರಾಗಿ ದಕ್ಷಿಣದಲ್ಲಿ ವಿಸ್ತಾರವಾದ ಸಾಮ್ರಾಜ್ಯದ ಒಡೆಯರಾಗಿ ಪ್ರಸಿದ್ಧರಾದವರು. ಕನ್ನಡನಾಡಿನ ಇತಿಹಾಸದಲ್ಲಿ ರಾಷ್ಟ್ರಕೂಟರ ಯುಗವು ಪ್ರಮುಖವಾದುದು. ಕರ್ನಾಟಕ ಸಾಮ್ರಾಜ್ಯದ ವೈಭವವನ್ನು ಪರಾಕಾಷ್ಠತೆಗೆತ್ತಿದ್ದ ಕೀರ್ತಿಯು ಇವರಿಗೆ ಸಲ್ಲುತ್ತದೆ.   ಉತ್ತರದ ನರ್ಮದಾ ನದಿಯಿಂದ ದಕ್ಷಿಣದ ಕಾವೇರಿ ನದಿಯವರೆಗೆ ಹರಡಿದ...

ಸಾ.ಶ. 973 - ಸಾ.ಶ. 1189ಕಲ್ಯಾಣದ ಚಾಳುಕ್ಯರು

ಕಲ್ಯಾಣದ ಚಾಳುಕ್ಯರು (ಸಾ.ಶ. 973 – ಸಾ.ಶ. 1189)

ಕಲ್ಯಾಣದ ಚಾಳುಕ್ಯರ ಕಾಲವು ಭಾರತದ ಚರಿತ್ರೆಯಲ್ಲಿಯೇ ಗೌರವಯುತವಾದ ಸ್ಥಾನವನ್ನು ಪಡೆದಿದೆ. ಇವರು ಕಲೆ, ಸಾಹಿತ್ಯ, ಶಿಕ್ಷಣಗಳಿಗೆ ವಿಶೇಷ ಪ್ರೋತ್ಸಾಹ ನೀಡಿದರು. ಕನ್ನಡ ಮತ್ತು ಸಂಸ್ಕೃತ ಭಾಷೆಗಳ ಬೆಳವಣಿಗೆಗೆ ವಿಶೇಷ ಪ್ರೋತ್ಸಾಹ ನೀಡಿ ಅವಕಾಶಗಳನ್ನು ಕಲ್ಪಿಸಿಕೊಟ್ಟರು. ಪ್ರಸಿದ್ಧ ಕನ್ನಡ ಕವಿಗಳಾದ ದುರ್ಗಸಿಂಹ, ರನ್ನ, ನಾಗಚಂದ್ರ, ಮುಂತಾದವರಿಗೆ ಆಶ್ರಯ ನೀಡಿದರು....

ಸಾ.ಶ. 850 - 1279ಚೋಳರು

ಚೋಳರು (ಸಾ.ಶ. 850 – 1279)

ಇವರು ತಮಿಳುನಾಡಿನ ಪಲ್ಲವರ ನಂತರ ದಕ್ಷಿಣದಲ್ಲಿ 9ನೇ ಶತಮಾನದಿಂದ 13ನೆಯ ಶತಮಾನದವರೆಗೆ ತಮಿಳುನಾಡು, ಆಂಧ್ರ ಮತ್ತು ಕರ್ನಾಟಕದ ಅನೇಕ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿ, ಭಾರತೀಯ ಸಂಸ್ಕøತಿಯು ವಿದೇಶಗಳಲ್ಲಿ ಹರಡಲು ಕಾರಣವಾದರು. ಭವ್ಯ ದೇವಾಲಯಗಳನ್ನು ನಿರ್ಮಿಸಿದರು. ‘ಬೃಹದೀಶ್ವರ’ ದೇವಾಲಯ ಇವರ ಕೊಡುಗೆ. ತಮಿಳು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿ...

ಸಾ.ಶ. 984 - ಸಾ.ಶ. 1346ದ್ವಾರಸಮುದ್ರದ ಹೊಯ್ಸಳರು

ದ್ವಾರಸಮುದ್ರದ ಹೊಯ್ಸಳರು (ಸಾ.ಶ. 984 – ಸಾ.ಶ. 1346)

ಚಾಲುಕ್ಯರು ಕ್ಷೀಣಿಸಿದ ನಂತರ ಕರ್ನಾಟಕದಲ್ಲಿ ತಲೆ ಎತ್ತಿದವರು ಹೊಯ್ಸಳರು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಸೊಸೆವೂರು (ಈಗಿನ ಅಂಗಡಿ) ಹಳ್ಳಿಯ ಬಳಿ ಈ ಮನೆತನದ ಮೂಲ ಪುರುಷ ಸಳನು ಜೈನಮುನಿಯಾದ ಸುದತ್ತ ಮುನಿಯ ಆದೇಶದಂತೆ ಹುಲಿಯೊಡನೆ ಕಾದಾಡಿ ಅದನ್ನು ಕೊಂದು ‘ಹೊಯ್‍ಸಳ’ ಎನಿಸಿಕೊಂಡು ಈ ವಂಶದ ಸ್ಥಾಪಕನಾದನು....

Spread the Knowledge

You may also like...

Leave a Reply

Your email address will not be published. Required fields are marked *