Knowledge has no beginning, Learning has no end ...
—ತಾಯಿಯು ಅಡುಗೆಯನ್ನು ಮಾಡುತ್ತಾಳೆ.
—ತಂದೆಯು ಕೆಲಸವನ್ನು ಮಾಡಿದನು.
—ಅವನು ಊಟವನ್ನು ಮಾಡುವನು.
—ದೇವರು ಒಳ್ಳೆಯದನ್ನು ಮಾಡಲಿ.
ಈ ವಾಕ್ಯಗಳಲ್ಲಿ ಅಡಿಗೆರೆ ಎಳೆದಿರುವ ಪದಗಳು ಕ್ರಿಯೆ ಪೂರ್ಣಗೊಂಡಿರುವುದನ್ನು ಸೂಚಿಸುತ್ತವೆ.
ಹೀಗೆ ಕ್ರಿಯೆ ಪೂರ್ಣಗೊಂಡಿದೆ ಎಂಬ ಅರ್ಥವನ್ನು ಸೂಚಿಸಬಲ್ಲ ಪದವೇ ಕ್ರಿಯಾಪದ.
ಒಂದಾನೊಂದು ಕಾಲದಲ್ಲಿ, ಒಂದು ಊರಲ್ಲಿ ಕೌಶಿಕ ಅಂತ ಒಬ್ಬ ಇದ್ದ . ಅವನು ವೇದ ಮತ್ತು ಶಾಸ್ತ್ರಗಳಲ್ಲಿ ವಿದ್ವಾಂಸನಾಗಿದ್ದ . ಎಲ್ಲರಿಗಿಂತ ತಾನೇ ಹೆಚ್ಚು ಕಲಿಯಬೇಕೆಂದು ಅವನ ಇಷ್ಟ . ಆದ್ದರಿಂದ ಅವರು ತಮ್ಮ ಮನೆ, ಪರಿವಾರ ಎಲ್ಲವನ್ನು ಬಿಟ್ಟು ಹಿಚ್ಚಿನ ಅಧ್ಯಯನದತ್ತ ಗಮನಹರಿಸಲು ಕಾಡಿಗೆ ಹೋದನು .
ವಿಲೋ ಮರಕ್ಕೆ(ನೀರುಹಬ್ಬೆಗಿಡ) ಕಟ್ಟಿದ ಆ ಪುಟ್ಟ ದೋಣಿಯನು
ಅದರ ಮಾಮೂಲಿನ ಸ್ಥಳವಾದ ಆ ಬಂಡೆಯ ಗುಹೆಯೊಳಗೆ
ಸೀದಾ ಅದರ ಸರಪಳಿಯನ್ನು ಬಿಚ್ಚಿದ ನಾನು ಕಾಲಿಟ್ಟೆ ಅದರೊಳಗೆ
ತೀರದಿಂದ ತಳ್ಳಿದೆ. ಅದೊಂದು ರಹಸ್ಯದ ಕೃತ್ಯವಾಗಿತ್ತು
ಯುಗಯುಗಗಳಿಂದ ಮನುಷ್ಯನು ಮರಣವನ್ನು ಜಯಿಸಿ, ಅಮರತ್ವವ ಕಾಲ್ಪನಿಕ ಅಮೃತಕ್ಕಾಗಿ, ವ್ಯರ್ಥ ಪ್ರಯತ್ನಗಳನ್ನು ಮಾಡುತ್ತಿದ್ದಾನೆ. ಆದರೆ ನಿಜವಾದ ಜೀವನಾಮೃತವು ನಮ್ಮ ಕೈಗಳಿಗೆ ಎಟಕುವಂತೆಯೇ ಇದೆ, ಅದು ಅತಿ ಸಾಮಾನ್ಯವಾಗಿ ಸಿಗುವ ದ್ರವ, ನೀರು !
ಒಂದು ದಿನ ಬೆಳಿಗ್ಗೆ, ಬಾಂಬೆಯ ಒಂದು ಸಣ್ಣ ಅಪಾರ್ಟ್‌ಮೆಂಟ್‌ನಲ್ಲಿ, ಸುಮಾರು ಹದಿನಾರು ವರ್ಷದ ಹುಡುಗಿ ವೃತ್ತಪತ್ರಿಕೆಯಿಂದ ನೋಡುತ್ತಾ, ‘ನಾಳೆ ಷಣ್ಮುಖಾನಂದ ಸಭಾಂಗಣದಲ್ಲಿ ಪಂಡಿತ್ ರವಿಶಂಕರ್ ಅವರು ಕಚೇರಿ ನಡೆಸುತ್ತಿದ್ದಾರೆ.’ ಎಂದು ಉತ್ಸಾಹದಿಂದ ಹೇಳಿದಳು.
ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಗಳು ಅರ್ಥಕ್ಕನುಸಾರ ಒಟ್ಟು ಸೇರಿ ಪೂರ್ವ ಪದದ ಅಂತ್ಯದಲ್ಲಿ ವಿಭಕ್ತಿ ಪ್ರತ್ಯಯವಿದ್ದರೆ ಅದು ಲೋಪವಾಗಿ ಒಂದೇ ಪದವಾಗುವುದೇ ಸಮಾಸ.
ಈ ರೀತಿ ಸಮಾಸವಾಗುವಾಗ ಸಂಸ್ಕೃತ ಪದದೊಂದಿಗೆ ಸಂಸ್ಕೃತ ಪದವೇ ಸೇರಬೇಕು.
ಕನ್ನಡ ಪದದೊಂದಿಗೆ ಕನ್ನಡ ಪದವೇ ಸೇರಬೇಕು. ಸಂಸ್ಕೃತ ಪದಕ್ಕೆ ಕನ್ನಡ, ಕನ್ನಡ ಪದಕ್ಕೆ ಸಂಸ್ಕೃತ ಪದಗಳನ್ನು ಸೇರಿಸಿ ಸಮಾಸ ಮಾಡಬಾರದು.
ದ್ವಿರುಕ್ತಿ – ಜೋಡುನುಡಿ – ನುಡಿಗಟ್ಟು (ಪಡೆನುಡಿ) ವಾಕ್ಯದಲ್ಲಿ ಪದವನ್ನು ಜೋಡಿಸುವ ಜಾಣ್ಮೆಯೇ ಶೈಲಿ. ಪದಗಳ ಆಯ್ಕೆ ಮತ್ತು ಜೋಡಣೆಯಲ್ಲಿ ಕೌಶಲ ಇದ್ದಾಗ ಶೈಲಿ ಸುಂದರವಾಗುತ್ತದೆ. ಭಾಷೆಯಲ್ಲಿ ಸಹಜ-ಸ್ವಾಭಾವಿಕ ಪದಗಳೊಂದಿಗೆ ವಿಶಿಷ್ಟ ಅರ್ಥಬರುವಂತೆ ಕೆಲವು ಪದಗಳನ್ನು ಜೋಡಿಸಿ ಬಳಸುವುದುಂಟು. ಅಂತಹ ಪದಗಳ ಜೋಡಣೆಯಲ್ಲಿ ದ್ವಿರುಕ್ತಿ, ಜೋಡುನುಡಿ, ನುಡಿಗಟ್ಟು...
ಪದಗಳು ಅಕ್ಷರಗಳನ್ನು ಅರ್ಥವತ್ತಾಗಿ ಜೋಡಿಸಿದಾಗ ಪದರಚನೆಯಾಗುತ್ತದೆ. ಕೆಲವೊಮ್ಮೆ ಒಂದೇ ಅಕ್ಷರವೂ ಪದವೆಂದು ಕರೆಯಲ್ಪಡುತ್ತದೆ. ಉದಾ : ಆ ಮನೆ, ಈ ತೋಟ ಇಲ್ಲಿರುವ ಆ, ಈ ಎಂಬ ಅಕ್ಷರಗಳು ಪದಗಳೇ ಆಗಿರುತ್ತವೆ. ಮಾತು ಪದಗಳಿಂದ ಆರಂಭವಾಗುತ್ತದೆ. ಆದರೆ ಅದು ವಿಕಾಸಗೊಳ್ಳುವುದು ವಾಕ್ಯಗಳ ಮೂಲಕ. ಹಾಗಾಗಿ ಪದಗಳ ಅರ್ಥಪೂರ್ಣ...
ಪದಗಳು ಅಕ್ಷರಗಳನ್ನು ಅರ್ಥವತ್ತಾಗಿ ಜೋಡಿಸಿದಾಗ ಪದರಚನೆಯಾಗುತ್ತದೆ. ಕೆಲವೊಮ್ಮೆ ಒಂದೇ ಅಕ್ಷರವೂ ಪದವೆಂದು ಕರೆಯಲ್ಪಡುತ್ತದೆ. ಉದಾ : ಆ ಮನೆ, ಈ ತೋಟ ಇಲ್ಲಿರುವ ಆ, ಈ ಎಂಬ ಅಕ್ಷರಗಳು ಪದಗಳೇ ಆಗಿರುತ್ತವೆ. ಭಾಷೆಯೆಂಬುದು ನಿಂತ ನೀರಲ್ಲ. ಅದು ತನ್ನ ಸಂಪರ್ಕಕ್ಕೆ ಸಿಕ್ಕುವ ಬೇರೆ ಭಾಷೆಗಳಿಂದಲೂ ಪದಗಳನ್ನು ಸ್ವೀಕರಿಸಿ...
ಸಂಧಿ ಪರಿಚಯಾತ್ಮಕ ವಿವರ ಮಾತನಾಡುವಾಗ ಕೆಲವು ಪದಗಳನ್ನು ಬಿಡಿಬಿಡಿಯಾಗಿ ಹೇಳದೆ ಕೂಡಿಸಿ ಹೇಳುತ್ತೇವೆ. ಉದಾ: ಅಲ್ಲಿಅಲ್ಲಿ ಎಂಬ ಎರಡು ಪದಗಳನ್ನು ‘ಅಲ್ಲಲ್ಲಿ’ ಎಂದು ಒಂದೇ ಪದವಾಗಿ ಹೇಳುತ್ತೇವೆ. ಇಲ್ಲಿ ಎರಡು ಪದಗಳ ನಾಲ್ಕು ಅಕ್ಷರಗಳು ಒಟ್ಟು ಸೇರಿ ಮೂರು ಅಕ್ಷರಗಳ ಒಂದು ಪದವಾಗಿದೆ. ಹೀಗೆ – ಪದ...