ವಂದನೆ – ಕವಿ ಎಲ್.ಕೆ.ಕಂಬಾರ
ನವಮಾಸ ಹೊತ್ತು
ನನ್ನನು ಹೆತ್ತು
ಸಾಕಿದ ತಾಯಿಗೆ ವಂದನೆ
ಮೈಮುರಿ ದುಡಿದು
ನನ್ನನು ಸಲುಹಿ
ಬೆಳೆಸಿದ ತಂದೆಗೆ ವಂದನೆ
ವಿದ್ಯಾ ಬುದ್ಧಿ
ಬಾಲ್ಯದಿ ಕಲಿಸಿ
ಹರಸಿದ ಗುರುವಿಗೆ ವಂದನೆ
ಬಗೆ ಬಗೆ ರೋಗವ
ವಾಸಿ ಮಾಡುವ
ವೈದ್ಯೆಗೆ ಮಾಡುವೆ ವಂದನೆ
ನಿತ್ಯದಿ ದುಡಿದು
ಅನ್ನವ ನೀಡುವ
ರೈತಗೆ ಮಾಡುವೆ ವಂದನೆ
ನಾಡಿನ ರಕ್ಷಣೆ
ನಿತ್ಯದಿ ಮಾಡುವ
ಯೋಧಗೆ ಮಾಡುವೆ ವಂದನೆ
ಎಲ್.ಕೆ.ಕಂಬಾರ