Monthly Archive: August 2021

ಮಾಸ್ತಿ ವೆಂಕಟೇಶ ಅಯ್ಯಂಗಾರ್

‘ಮಾಸ್ತಿ ಕನ್ನಡದ ಆಸ್ತಿ’ ಎಂದು ಪ್ರಸಿದ್ಧರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಕೋಲಾರ ಜಿಲ್ಲೆಯ ಮಾಸ್ತಿ ಎಂಬ ಊರಿನಲ್ಲಿ ೦೬.೦೬.೧೮೯೧ರಲ್ಲಿ ಜನಿಸಿದರು. ಕನ್ನಡ ಸಣ್ಣಕತೆಗಳ ಜನಕ ಎನಿಸಿದ ಇವರು ಕತೆ, ಕಾದಂಬರಿ, ಕಾವ್ಯ ವಿಮರ್ಶೆ ಹೀಗೆ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ‘ಚೆನ್ನಬಸವನಾಯಕ’ ‘ಚಿಕವೀರರಾಜೇಂದ್ರ` ‘ಭಾವ’ ಮುಂತಾದವು...

ಬೆಳಗೆರೆ ಕೃಷ್ಣಶಾಸ್ತ್ರಿಗಳು

ಬೆಳಗೆರೆ ಕೃಷ್ಣಶಾಸ್ತ್ರಿಗಳು ೨೨ನೇ ಮೇ ೧೯೧೬ರಲ್ಲಿ ಜನಿಸಿದರು. ಇವರು ವೃತ್ತಿಯಲ್ಲಿ ಉಪಾಧ್ಯಾಯರಾಗಿದ್ದರು. ವಿನೋಬಾಭಾವೆಯೊಂದಿಗೆ ಭೂದಾನ ಚಳುವಳಿಯಲ್ಲಿ ಭಾಗವಹಿಸಿದ್ದರು. ‘ತುಂಬಿ’ ಎಂಬುದು ಇವರ ಕಥಾಸಂಕಲನ. ‘ಹಳ್ಳಿಮೇಷ್ಟ್ರು’ ಮತ್ತು ‘ಹಳ್ಳಿಚಿತ್ರ’ ‘ಆಕಸ್ಮಿಕ’, ‘ಯೇಗ್ದಾಗೆಲ್ಲಾ ಐತೆ’, ಇವರು ರಚಿಸಿದ ಕೆಲವು ಪ್ರಮುಖ ಕೃತಿಗಳು. ಶಾಸ್ತ್ರಿಗಳು ದಿನಾಂಕ ೨೨-೩-೨೦೧೩ರಂದು ನಿಧನರಾದರು.

ಕನ್ನಡ ವ್ಯಾಕರಣ – ವಚನಗಳು

ವಚನ ಎಂದರೆ ಸಂಖ್ಯೆ ವಚನಗಳು ವ್ಯಾಕರಣ ಪರಿಭಾಷೆಯಲ್ಲಿ ‘ವಚನ’ ಎಂದರೆ ಸಂಖ್ಯೆ. ಕನ್ನಡ ಭಾಷೆಯಲ್ಲಿ ಏಕವಚನ ಮತ್ತು ಬಹುವಚನ ಎಂಬುದಾಗಿ ಎರಡು ವಿಧಗಳಿವೆ. ಏಕವಚನ : ಒಂದು ವಸ್ತುವನ್ನು ಸೂಚಿಸುವ ಪದಗಳೆಲ್ಲ ಏಕವಚನದವು. ಉದಾ : ಹುಡುಗ, ಹುಡುಗಿ, ಅರಸು, ಮರ, ಅಣ್ಣ, ನೀನು, ಅವನು, ಅವಳು....

ಕನ್ನಡ ವ್ಯಾಕರಣ – ಲಿಂಗಗಳು

ಲಿಂಗಗಳು ಈ ಪ್ರಪಂಚದಲ್ಲಿ ಮನುಷ್ಯ ಜಾತಿ ಹಾಗೂ ಮನುಷ್ಯ ಜಾತಿಯನ್ನು ಹೊರತು ಪಡಿಸಿದ ಜೀವ ಜಗತ್ತು ಇದೆ. ಮನುಷ್ಯ ಜಾತಿಯಲ್ಲಿ ಗಂಡು ಹೆಣ್ಣು ಎನ್ನವ ಭೇದವಿದೆ. ಆದರೆ ಮಾನವೇತರ ಜೀವ ಜಗತ್ತಿನಲ್ಲಿ ಅದು ಸ್ಪಷ್ಟವಾಗಿಲ್ಲ. ಹೀಗಾಗಿ ನಾವು ಬಳಸುವ ಶಬ್ದಗಳಲ್ಲಿ ಅದು ಮಾನವ ಸಂಬಂಧಿ ಆಗಿದ್ದರೆ, ಗಂಡು...

ಕನ್ನಡ ವ್ಯಾಕರಣ – ವಿಭಕ್ತಿ ಪ್ರತ್ಯಯಗಳು

ನಾಮಪ್ರಕೃತಿಗಳ ಮುಂದೆ ಸೇರಿ, ಬೇರೆಬೇರೆ ಅರ್ಥವನ್ನುಂಟು ಮಾಡುವ ಉ, ಅನ್ನು, ಇಂದ ಗೆ, ಕೆ ದೆಸೆಯಿಂದ, ಅ, ಅಲ್ಲಿ, ಇತ್ಯಾದಿಗಳಿಗೆ ವಿಭಕ್ತಿ ಪ್ರತ್ಯಯಗಳು ಎನ್ನುವರು. ನಾಮಪ್ರಕೃತಿಗಳ ಮುಂದೆ ಸೇರಿ, ಬೇರೆಬೇರೆ ಅರ್ಥವನ್ನುಂಟು ಮಾಡುವ ಉ, ಅನ್ನು, ಇಂದ ಗೆ, ಕೆ ದೆಸೆಯಿಂದ, ಅ, ಅಲ್ಲಿ, ಇತ್ಯಾದಿಗಳಿಗೆ ವಿಭಕ್ತಿ...

ಕನ್ನಡ ವ್ಯಾಕರಣ – ಅಲಂಕಾರ

ಅಲಂಕಾರ ಮನುಷ್ಯ ತನ್ನ ದೇಹದ ಸೌಂರ‍್ಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ವೈವಿಧ್ಯಪೂರ್ಣ ಬಟ್ಟೆ, ಆಭರಣ ಇತ್ಯಾದಿ ಸೌಂದರ್ಯ ಸಾಧನಗಳನ್ನು ಬಳಸುತ್ತಾನೆ. ಹೀಗೆ ಅಲಂಕಾರ ಮಾಡಿಕೊಂಡ ವ್ಯಕ್ತಿ ಇತರರಿಂದ ಆಕರ್ಷಿಸಲ್ಪಡುತ್ತಾನೆ. ದೇಹದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಅಲಂಕಾರ ಮಾಡಿಕೊಂಡಂತೆ ಮನುಷ್ಯ ತನ್ನ ಮಾತೂ ಇತರರಿಗೆ ಇಂಪಾಗಿ ಕೇಳುವಂತೆ ಮಾಡುವ ಸಲುವಾಗಿ ಚಮತ್ಕಾರದಿಂದ...

ರಾಷ್ತ್ರಕವಿ ಡಾ|| ಜಿ.ಎಸ್. ಶಿವರುದ್ರಪ್ಪ

ರಾಷ್ತ್ರಕವಿ ಡಾ|| ಜಿ.ಎಸ್. ಶಿವರುದ್ರಪ್ಪನವರು ೧೯೨೬ ನೇ ಇಸವಿ ಫೆಬ್ರವರಿ ೭ನೇ ತಾರೀಖು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಈಸೂರಿನಲ್ಲಿ ಜನಿಸಿದರು. ಇವರು ಮೈಸೂರು, ಬೆಂಗಳೂರು ಮತ್ತು ಉಸ್ಮಾನಿಯ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರಾಗಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿರುತ್ತಾರೆ. ‘ಸಾಮಗಾನ’, ‘ಪ್ರೀತಿ...

ಕನ್ನಡ ವ್ಯಾಕರಣ – ಲೇಖನ ಚಿಹ್ನೆಗಳು

ಲೇಖನ ಚಿಹ್ನೆಗಳು ಬರವಣಿಗೆಯಲ್ಲಿ ಲೇಖನ ಚಿಹ್ನೆಗಳ ಪಾತ್ರ ಅತ್ಯಂತ ಪ್ರಮುಖವಾದುದು. ಲೇಖನ ಚಿಹ್ನೆಗಳಿಲ್ಲದ ಬರವಣಿಗೆಯು ಸ್ಪಷ್ಟಾರ್ಥವನ್ನು ಕೊಡದೆ ಅನೇಕ ತೊಡಕುಗಳಿಗೆ ಕಾರಣವಾಗುತ್ತದೆ. ಆದುದರಿಂದ ಲೇಖನ ಚಿಹ್ನೆಗಳ ಕಡೆಗೆ ಗಮನಕೊಡುವುದು ಆವಶ್ಯಕ. ಬರವಣಿಗೆಯಲ್ಲಿ ಲೇಖನ ಚಿಹ್ನೆಗಳನ್ನು ಉಪಯೋಗಿಸುವುದರಿಂದ ಬರವಣಿಗೆಗೊಂಡು ಬೆಲೆ ಬರುತ್ತದೆ. ೧. ಪೂರ್ಣವಿರಾಮ-(.) ಒಂದು ಪೂರ್ಣಕ್ರಿಯೆಯಿಂದ ಕೂಡಿದ...

ಕೋಟ ಶಿವರಾಮ ಕಾರಂತರು

ಕೋಟ ಶಿವರಾಮ ಕಾರಂತರು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೋಟ ಎಂಬಲ್ಲಿ ಅಕ್ಟೋಬರ್ ೧೦, ೧೯೦೨ ರಲ್ಲಿ ಜನಿಸಿದರು. ‘ಮರಳಿ ಮಣ್ಣಿಗೆ’, ‘ಅಳಿದ ಮೇಲೆ’, ‘ಬೆಟ್ಟದ ಜೀವ’ ‘ಸರಸಮ್ಮನ ಸಮಾಧಿ’, ‘ನಾವು ಕಟ್ಟಿದ ಸ್ವರ್ಗ’, ‘ಚಿಗುರಿದ ಕನಸು’, ‘ಅಭುವಿನಿಂದ ಬರಾಮಕ್ಕೆ’, ‘ಹುಚ್ಚು ಮನಸಿನ ಹತ್ತು ಮುಖಗಳು’, ‘ಮೈಮನಗಳ...

ಕನ್ನಡ ವ್ಯಾಕರಣ – ಛಂದಸ್ಸು

ಕನ್ನಡ ವ್ಯಾಕರಣ – ಛಂದಸ್ಸು

ಛಂದಸ್ಸು ಶುದ್ಧ ಹಾಗೂ ಅರ್ಥಪೂರ್ಣವಾಗಿ ಮಾತನಾಡಲು, ಬರೆಯಲು ವ್ಯಾಕರಣ ಶಾಸ್ತ್ರವು ಹೇಗೆ ಅಗತ್ಯವೋ ಹಾಗೆಯೇ ಪದ್ಯರಚನೆ ಮಾಡಲೂ ಕೆಲವು ನಿಯಮಗಳಿರುತ್ತವೆ. ಇಂತಹ ಪದ್ಯರಚನಾ ನಿಯಮವನ್ನು ಛಂದಸ್ಸು ಎಂದು ಕರೆಯಲಾಗಿದೆ. ಸುಮಾರು ಕ್ರಿ.ಶ. ೯೯೦ರಲ್ಲಿ ಇದ್ದ ಒಂದನೆಯ ನಾಗವರ್ಮ ಎಂಬವನು ಛಂದೋಂಬುಧಿ ಎಂಬ ಗ್ರಂಥದ ಮೂಲಕ ಈ ಶಾಸ್ತ್ರವನ್ನು...