ವಿಜ್ಞಾನವೂ ವಿಜ್ಞಾನಿಗಳೂ
ಎನ್. ಕೆ. ನರಸಿಂಹಮೂರ್ತಿಯವರ ‘ವಿಜ್ಞಾನಿಗಳ ಕಥೆಗಳು (1938) ‘ ಪುಸ್ತಕದಿಂದ ಆರಿಸಿದ ಲೇಖನ ವಿಜ್ಞಾನಮೇಕಂ ನಿಜಕರ್ಮ ಭೇದ!ವಿಭಿನ್ನ ಚಿತ್ತೈರ್ಬಹುಧಾಭ್ಯುಪೇತಂ ॥ ವಿಜ್ಞಾನಿಗಳ ಕಥೆಗಳನ್ನು ಓದುವ ಮೊದಲು ವಿಜ್ಞಾನವೆಂದರೇನು, ಎಂಬುದನ್ನು ತಿಳಿದುಕೊಳ್ಳುವುದು ಆವಶ್ಯಕವಾಗಿದೆ. “ವಿಜ್ಞಾನ” ಎಂಬ ಶಬ್ದಕ್ಕೆ ವಿಶೇಷ ಜ್ಞಾನ ಅಧವಾ ಅಸಾಮಾನ್ಯವಾದ ತಿಳುವಳಿಕೆ ಎಂದು ಅರ್ಥವಾಗುವುದು. ನಮ್ಮ...