Monthly Archive: August 2021
ಕೃದಂತಗಳು ನಮ್ಮ ಮಾತುಗಳಲ್ಲಿ ಮಾಡಿದ, ಹೋಗುವ, ಬರೆಯುವ ಮುಂತಾದ ಪದಗಳನ್ನು ಬಳಸುತ್ತೇವೆ. ಇಲ್ಲಿ ಮಾಡಿದ ಎಂಬ ಪದವನ್ನು ಬಿಡಿಸಿದಾಗ ಮಾಡು+ದ+ಅ ಹಾಗೆಯೇ ‘ಹೋಗುವ’ ಪದದಲ್ಲಿ ಹೋಗು+ವ+ಅ,‘ಬರೆಯುವ’ ಪದದಲ್ಲಿ ಬರೆ+ಉವ+ಅ, ಎಂಬ ಭಾಗಗಳನ್ನು ನೋಡಬಹುದು. ಇಲ್ಲಿ ಮೊದಲನೆಯದು ‘ಧಾತು’ ಎಂತಲೂ ಎರಡನೆಯದು ಮೂರನೆಯದು ಪ್ರತ್ಯಯಗಳೆಂತಲೂ ಕರೆಯಲ್ಪಡುತ್ತವೆ. ಧಾತುಗಳಿಗೆ ಈ...
ಕನ್ನಡ ವರ್ಣಮಾಲೆಯಲ್ಲಿ ಹಿಂದೆ ಮೂರು ರೀತಿಯ ‘ಳ’ ಕಾರಗಳಿದ್ದುವು. ೞ ’ ಈ ‘ಳ’ ಕಾರವೇ ಱಳ. ಸೂೞ್ ಪದಕ್ಕೆ ಸರದಿ, ಪಾಳಿ ಎಂಬರ್ಥವಿದೆ. ‘ಳ’ ಅಕ್ಷರವೇ ಕುಳ. ಎಳ- ಚಿಕ್ಕ, ಸಣ್ಣ; ಕಳಿ- ಪಕ್ವವಾಗು, ಮಾಗು ಎಂಬ ಅರ್ಥವುಳ್ಳ ಪದಗಳಿವು. ಸಂಸ್ಕೃತದ ‘ಲ’ ಕಾರ ಕನ್ನಡಕ್ಕೆ ಬರುವಾಗ ‘ಳ ‘ ಕಾರ ರೂಪವನ್ನು ಹೊಂದುತ್ತದೆ. ಇದೇ ಕ್ಷಳ,
ತದ್ಧಿತಾಂತಗಳು ಈ ವಾಕ್ಯಗಳನ್ನು ಗಮನಿಸಿ. — ಮೋಸವನ್ನು ಮಾಡುವವನು ಇದ್ದಾನೆ. — ಕನ್ನಡವನ್ನು ಬಲ್ಲವನು ಬಂದನು. ಮೊದಲ ವಾಕ್ಯದಲ್ಲಿ ಇರುವ ಮೋಸವನ್ನು ಎಂಬ ಪದದ ಮುಂದೆ ಮಾಡುವವನು ಎಂಬ ಅರ್ಥದಲ್ಲಿ ‘ಗಾರ’ ಎಂಬ ಪ್ರತ್ಯಯವನ್ನು ಸೇರಿಸಿ ಮೋಸಗಾರ ಎಂಬ ಪದವನ್ನು ಮಾಡಬಹುದು. ಅಂದರೆ ಮೋಸವನ್ನು + (ಮಾಡುವವನು)...
ಷಟ್ಪದಿ 13ನೇ ಶತಮಾನದಲ್ಲಿ ಕಾವ್ಯ ಮಾಧ್ಯಮದ ಯುವರಾಣಿಯಾಗಿ ವಿಜೃಂಭಿಸಿದ ಷಟ್ಪದಿಯು, ಜನಪದ ಸಾಹಿತ್ಯದಲ್ಲಿ ತ್ರಿಪದಿಗೆ ದೊರೆತ ಸ್ಥಾನವನ್ನು ನಡುಗನ್ನಡದಲ್ಲಿ ಪಡೆಯಿತು. ಷಟ್ಪದಿಯ ಮೊದಲ ಕುರುಹು ದೊರೆಯುವುದು ನಾಗವರ್ಮನ ಛಂದೋಬುಧಿಯಲ್ಲಿ. ಅಂಶಗಣಾನ್ವಿತವಾಗಿದ್ದ ಷಟ್ಪದಿಯ ಲಕ್ಷಣವನ್ನು ಅಲ್ಲಿ ಹೀಗೆ ಹೇಳಲಾಗಿದೆ : ಮಂದರ ಧರಗಣ೦ ಬಂದಿರ್ಕಾರಂತ್ಯದೊಳ್ ಕುಂದದೆ ನೆಲಸುಗೆ ಮದನಹರಂ...
‘ರಗಳೆ’ ಎಂಬುದು ‘ರಘಟಾ’ ಎಂಬ ಸಂಸ್ಕೃತ ಪದದ ತದ್ಭವರೂಪ. ಕನ್ನಡದಲ್ಲಿ ಸಾಮಾನ್ಯವಾಗಿ ಮೂರು ವಿಧದ ರಗಳೆಗಳು ಪ್ರಸಿದ್ಧವಾಗಿವೆ.
ಉತ್ಸಾಹ ರಗಳೆ, ಮಂದಾನಿಲ ರಗಳೆ ಮತ್ತು, ಲಲಿತ ರಗಳೆ
ಕಾಲಗಳು : ನಮೂದಿತ ವಾಕ್ಯಗಳನ್ನು ಗಮನಿಸಿ: ಅವನು ಶಾಲೆಗೆ ಹೋಗುತ್ತಾನೆ. ಅವನು ಶಾಲೆಗೆ ಹೋದನು. ಅವನು ಶಾಲೆಗೆ ಹೋಗುವನು. ಮೂರೂ ವಾಕ್ಯಗಳಲ್ಲಿ ಹೋಗು ಎಂಬ ಪದ ಧಾತುವಾಗಿದ್ದು ಇದರ ಜತೆಗೆ ಮೊದಲ ವಾಕ್ಯದಲ್ಲಿ -ಉತ್ತ ಎರಡನೆಯ ವಾಕ್ಯದಲ್ಲಿ -ದ ಹಾಗೂ ಮೂರನೆಯ ವಾಕ್ಯದಲ್ಲಿ -ವ ಎಂಬ ಪ್ರತ್ಯಯ...
—ತಾಯಿಯು ಅಡುಗೆಯನ್ನು ಮಾಡುತ್ತಾಳೆ.
—ತಂದೆಯು ಕೆಲಸವನ್ನು ಮಾಡಿದನು.
—ಅವನು ಊಟವನ್ನು ಮಾಡುವನು.
—ದೇವರು ಒಳ್ಳೆಯದನ್ನು ಮಾಡಲಿ.
ಈ ವಾಕ್ಯಗಳಲ್ಲಿ ಅಡಿಗೆರೆ ಎಳೆದಿರುವ ಪದಗಳು ಕ್ರಿಯೆ ಪೂರ್ಣಗೊಂಡಿರುವುದನ್ನು ಸೂಚಿಸುತ್ತವೆ.
ಹೀಗೆ ಕ್ರಿಯೆ ಪೂರ್ಣಗೊಂಡಿದೆ ಎಂಬ ಅರ್ಥವನ್ನು ಸೂಚಿಸಬಲ್ಲ ಪದವೇ ಕ್ರಿಯಾಪದ.
ಒಂದಾನೊಂದು ಕಾಲದಲ್ಲಿ, ಒಂದು ಊರಲ್ಲಿ ಕೌಶಿಕ ಅಂತ ಒಬ್ಬ ಇದ್ದ . ಅವನು ವೇದ ಮತ್ತು ಶಾಸ್ತ್ರಗಳಲ್ಲಿ ವಿದ್ವಾಂಸನಾಗಿದ್ದ . ಎಲ್ಲರಿಗಿಂತ ತಾನೇ ಹೆಚ್ಚು ಕಲಿಯಬೇಕೆಂದು ಅವನ ಇಷ್ಟ . ಆದ್ದರಿಂದ ಅವರು ತಮ್ಮ ಮನೆ, ಪರಿವಾರ ಎಲ್ಲವನ್ನು ಬಿಟ್ಟು ಹಿಚ್ಚಿನ ಅಧ್ಯಯನದತ್ತ ಗಮನಹರಿಸಲು ಕಾಡಿಗೆ ಹೋದನು .
ವಿಲೋ ಮರಕ್ಕೆ(ನೀರುಹಬ್ಬೆಗಿಡ) ಕಟ್ಟಿದ ಆ ಪುಟ್ಟ ದೋಣಿಯನು
ಅದರ ಮಾಮೂಲಿನ ಸ್ಥಳವಾದ ಆ ಬಂಡೆಯ ಗುಹೆಯೊಳಗೆ
ಸೀದಾ ಅದರ ಸರಪಳಿಯನ್ನು ಬಿಚ್ಚಿದ ನಾನು ಕಾಲಿಟ್ಟೆ ಅದರೊಳಗೆ
ತೀರದಿಂದ ತಳ್ಳಿದೆ. ಅದೊಂದು ರಹಸ್ಯದ ಕೃತ್ಯವಾಗಿತ್ತು
ಯುಗಯುಗಗಳಿಂದ ಮನುಷ್ಯನು ಮರಣವನ್ನು ಜಯಿಸಿ, ಅಮರತ್ವವ ಕಾಲ್ಪನಿಕ ಅಮೃತಕ್ಕಾಗಿ, ವ್ಯರ್ಥ ಪ್ರಯತ್ನಗಳನ್ನು ಮಾಡುತ್ತಿದ್ದಾನೆ. ಆದರೆ ನಿಜವಾದ ಜೀವನಾಮೃತವು ನಮ್ಮ ಕೈಗಳಿಗೆ ಎಟಕುವಂತೆಯೇ ಇದೆ, ಅದು ಅತಿ ಸಾಮಾನ್ಯವಾಗಿ ಸಿಗುವ ದ್ರವ, ನೀರು !