Monthly Archive: July 2022
ಕೃತಿ-ಕರ್ತೃ ವಿಚಾರ : ಕುವೆಂಪು (1904-1994) ಕುವೆಂಪು ಎಂಬ ಕಾವ್ಯನಾಮದಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಸಿದ್ಧಿ ಹೊಂದಿದವರು ಕುಪ್ಪಳಿ ವೆಂಕಟಪ್ಪನವರ ಮಗ ಪುಟ್ಟಪ್ಪ. ಇವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯವರು. ತಮ್ಮ ಪ್ರೌಢ ಶಾಲಾ ಮತ್ತು ಉನ್ನತ ಶಿಕ್ಷಣವನ್ನು ಮೈಸೂರಿನಲ್ಲಿ ಮುಗಿಸಿದರು. ಬಳಿಕ ಅಲ್ಲಿನ ಮಹಾರಾಜ...
ಪೀಠಿಕೆ: “ಕಾವ್ಯೇಷು ನಾಟಕಂ ರಮ್ಯಂ’ – ಎಂಬುದು ಭರತ ಖಂಡದಲ್ಲಿ ಗಾದೆಯಂತಿರುವ ಒಂದು ಸೂಕ್ತಿ. ಕಾವ್ಯಪ್ರಕಾರಗಳಲ್ಲಿ ನಾಟಕವೇ ಅತ್ಯಂತ ರಮ್ಯವಾದದ್ದು, ನಾಟಕದಲ್ಲಿ ಸಂಗೀತ, ಸಾಹಿತ್ಯ, ಅಭಿನಯಗಳ ಜೊತೆಗೆ ನರ್ತನವೂ ಅತ್ಯಂತ ಪ್ರಮುಖವಾದ ಸ್ಥಾನವನ್ನು ಪಡೆದಿದೆ. “ನಾಟಕ’ವೆ೦ಬ ಪದವೇ ““ನಟ್’ ಎ೦ಬ ಧಾತುವಿನಿಂದ ಬ೦ದುದೆಂದೂ “ನಟ್’ ಎಂಬುದು ನೃತ್ಯ...
ಕವಿ-ಕಾವ್ಯ ಪರಿಚಯ : ಸು. ರಂ. ಎಕ್ಕುಂಡಿಯವರ ಪೂರ್ಣ ಹೆಸರು ಸುಬ್ಬಣ್ಣ ರಂಗನಾಥ ಎಕ್ಕುಂಡಿ. ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ 1927ರಲ್ಲಿ ಜನಿಸಿದರು. ಅಧ್ಯಾಪಕರಾಗಿ ಸೇವೆಯನ್ನು ಸಲ್ಲಿಸಿದರು. ಇವರ ಕೃತಿಗಳು ‘ಹಾವಾಡಿಗರು’, ‘ಕಥನ ಕವನಗಳು’, ‘ಬಕುಲದ ಹೂಗಳು’, ‘ಮತ್ಸ್ಯಗಂಧಿ’, ‘ಸ೦ತಾನ’, ‘ನೆರಳು’, ‘ಬೆಳ್ಳಕ್ಕಿಗಳು’ ಮುಂತಾದವು. ಕಥನ ಕವನ ಬರೆಯುವುದರಲ್ಲಿ...
ಒಂದು ವಸ್ತುವನ್ನು ತೆಗೆದುಕೊಂಡು, ಆ ವಸ್ತುವಿನ ಕಥೆಯನ್ನು ಕವನ ರೂಪದಲ್ಲಿ ಸುಂದರವಾಗಿ ಮೂಡಿಸುವುದೇ ‘ಕಥನ ಕವನ’. ಈ ಕವನದಲ್ಲಿ ಕಥೆಯು ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. ಈ ರೀತಿಯ ಕವನಗಳಲ್ಲಿ ಛಂದಸ್ಸಿಗಿ೦ತ ಕಥೆಗೇ ಹೆಚ್ಚು ಮಹತ್ವ. ಕಥೆಯ ವಸ್ತುವಿಗೆ ಅನುಗುಣವಾಗಿ ಅರ್ಥ ಪರಿಣಾಮದ ಕಡೆಗೆ ಗಮನವಿಟ್ಟು ಛಂದಸ್ಸು ರೂಪಿತವಾಗುತ್ತದೆ. ಜನಪದ...
ಕವಿ-ಕಾವ್ಯ ಪರಿಚಯ: ಚಿಕ್ಕದೇವರಾಜ ಒಡೆಯರ (1672-1704) ಆಸ್ಥಾನದಲ್ಲಿ ಸಂಚಿಯ ಹೊನ್ನಮ್ಮ, ಶೃಂಗಾರಮ್ಮ ಎಂಬ ಕವಯಿತ್ರಿಯರಿದ್ದರು. ಸಂಚಿಯ ಹೊನ್ನಮ್ಮ ಹದಿನೇಳನೆಯ ಶತಮಾನದ ಪ್ರಮುಖ ಕಮಯಿತ್ರಿ. ಈಕೆ ಚಿಕ್ಕದೇವರಾಯನ ರಾಣಿವಾಸದಲ್ಲಿದ್ದ ಒಬ್ಬ ಸಾಮಾನ್ಯ ಊಳಿಗದ ಹೆಣ್ಣುಮಗಳು. ಮೂಲತಃ ಚಾಮರಾಜನಗರ ಜಿಲ್ಲೆಯ ಯಳಂದೂರಿನವಳು. ಮೈಸೂರಿನ ಚಿಕ್ಕ ದೇವರಾಯನ ಪಟ್ಟಮಹಿಷಿಯಾದ ದೇವರಾಜಮ್ಮಣ್ಣಿಯ ಪ್ರೀತಿಗೆ...
ಚಂಪೂ, ತ್ರಿಪದಿ, ರಗಳೆ, ಷಟ್ಟದಿ ಈ ಮೊದಲಾದ ಛಂದೋರೂಪಗಳ ನ೦ತರ ಬಂದ ಸಾಂಗತ್ಯ ಪ್ರಕಾರವು ಐದು ಶತಮಾನಗಳ ಸುದೀರ್ಫವಾದ ಇತಿಹಾಸವನ್ನು ಹೊಂದಿದೆ. ಈ ದೇಶಿಯ ಕಾವ್ಯ ಪ್ರಕಾರದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಕೃತಿಗಳು ರಚಿತಗೊಂಡಿವೆ. ಆಧುನಿಕ ಕಾಲದಲ್ಲೂ ಈ ಪ್ರಕಾರ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಏಳೆ, ತ್ರಿಪದಿ, ಅಕ್ಕರ...
ಕವಿ ಪರಿಚಯ : ಸರ್ವಜ್ಞನು ಕ್ರಿ.ಶ. ಸುಮಾರು ಹದಿನೇಳನೆಯ ಶತಮಾನದ ಕವಿ. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಅಬಲೂರು ಇವನ ಜನ್ಮಸ್ಥಳ. ವಿಸ್ತಾರವಾದ ಲೋಕಾನುಭವ, ವಿಶಾಲವಾದ ಜೀವನ ದೃಷ್ಟಿಯನ್ನು ಪಡೆದ ಇವನು “ಸರ್ವಜ್ಞ” ಎಂಬ ಅಂಕಿತದಿಂದ ಮುಕ್ತಾಯವಾಗುವ ತ್ರಿಪದಿಗಳನ್ನು ರಚಿಸಿದ್ದಾನೆ. ಯಾರ ಹಂಗಿಗೂ ಒಳಗಾಗದೆ ಸ್ವತಂತ್ರವಾಗಿ ಬದುಕಿದ...
ತ್ರಿಪದಿ ಒಂದು ದೇಸಿ ಛಂದೋಪ್ರಕಾರ. “ಜನವಾಣಿ ಮಳೆ; ಕವಿವಾಣಿ ಹೊಳೆ’ ಎಂಬ ಡಾ. ಬೆಟಗೇರಿ ಕೃಷ್ಣಶರ್ಮರ ಮಾತಿನಂತೆ ಕನ್ನಡ ಸಾಹಿತ್ಯಕ್ಕೆ ಜನಪದ ಕವಿಗಳು ನೀಡಿದ ಅಪೂರ್ವ ಕೊಡುಗೆ. ಶಿಷ್ಟ ಕವಿಗಳ ಆದರಕ್ಕೂ ಒಳಗಾಗಿರುವ ಈ ಕಾವ್ಯ ಪ್ರಕಾರದ ಮೂಲವನ್ನು ಜನಪದರ “ಗರತಿಯ ಹಾಡು’ಗಳಲ್ಲಿ ಕಾಣಬಹುದಾಗಿದೆ. ಏಳನೆಯ ಶತಮಾನದ...
ಕವಿ-ಕಾವ್ಯ ಪರಿಚಯ : ಚಿಕ್ಕುಪಾಧ್ಯಾಯ ಕ್ರಿ, ಶ. ಸುಮಾರು 1677ರಲ್ಲಿ ತೆರಕಣಾಂಬಿಯಲ್ಲಿ ಜನಿಸಿದನು. ತಂದೆ ರಂಗಾರ್ಯ ಪಂಡಿತ, ತಾಯಿ ನಾಚ್ಚಾರಮ್ಯ. ಕವಿಯ ಮೊದಲಿನ ಹೆಸರು ಲಕ್ಷ್ಮೀಪತಿ ಎಂಬುದಾಗಿತ್ತು. ಈತ ಮೈಸೂರು ಅರಸ ಚಿಕ್ಕದೇವರಾಜರಲ್ಲಿ ಮಂತ್ರಿಯಾಗಿದ್ದನು. ಈತನು ಚ೦ಪೂ, ಸಾ೦ಗತ್ಯ, ಗದ್ಯ ಹಾಡು ಮುಂತಾದ ಛಂದೋ ಪ್ರಭೇದಗಳಲ್ಲೆಲ್ಲಾ ಕಾವ್ಯಗಳನ್ನು...
ಸಾಹಿತ್ಯದ ಪ್ರಕಾರಗಳಲ್ಲಿ ಶತಕ ಸಾಹಿತ್ಯವೂ ಒಂದು. ಇದಕ್ಕೆ ಪ್ರಾಚೀನ ಹಿನ್ನೆಲೆಯಿದೆ ಮತ್ತು ಆಧುನಿಕ ಯುಗದವರೆಗೆ ಅದರ ಮುನ್ನೋಟವಿದೆ. ಇದೊಂದು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿರುವ ಸಾಹಿತ್ಯ ಪ್ರಕಾರ. ಶತಕವೆಂದರೆ ನೂರು ಪದ್ಯಗಳ ಚಿಕ್ಕ ಕಾವ್ಯ. ನೂರು ಪದ್ಯಗಳ ಗುಚ್ಚಕ್ಕೆ ಶತಕವೆಂದು ಕರೆದಿದ್ದರೂ ನೂರೇ ಎಂಬ ನಿರ್ದಿಷ್ಟತೆ ಇದ್ದಂತಿಲ್ಲ. ೧೦೦...